• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Vastu Tips: ನಿಮ್ಮ ಮನೆಯಲ್ಲಿ ನಲ್ಲಿಗಳು ಎಲ್ಲಿವೆ? ಸರಿಯಾದ ದಿಕ್ಕಲ್ಲಿ ಇರದಿದ್ದರೆ ದುರಾದೃಷ್ಟ ತರಬಹುದು!

Vastu Tips: ನಿಮ್ಮ ಮನೆಯಲ್ಲಿ ನಲ್ಲಿಗಳು ಎಲ್ಲಿವೆ? ಸರಿಯಾದ ದಿಕ್ಕಲ್ಲಿ ಇರದಿದ್ದರೆ ದುರಾದೃಷ್ಟ ತರಬಹುದು!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನಲ್ಲಿಗಳು ಸಹ ಸರಿಯಾದ ದಿಕ್ಕಿನಲ್ಲಿ ಇರಬೇಕೆ ಅಂತ ನೀವು ಮೂಗು ಮುರಿಯುವುದಾಗಲಿ ಅಥವಾ ಅಸಡ್ಡೆ ಮಾಡುವುದಾಗಲಿ ಮಾಡಬೇಡಿ. ಕೆಟ್ಟ ದಿಕ್ಕಿನಲ್ಲಿ ಸ್ಥಾಪಿಸುವ ನಲ್ಲಿಗಳು ಸಹ ಮನೆಗೆ ಅನೇಕ ಬಾರಿ ದುರಾದೃಷ್ಟವನ್ನು ತರಬಹುದು ಎನ್ನುತ್ತಾರೆ ವಾಸ್ತುಶಾಸ್ತ್ರ ಪರಿಣಿತರು.

  • Share this:

    ಭಾರತೀಯ ಸಂಸ್ಕೃತಿ (Indian Culture) ಮತ್ತು ಸಂಪ್ರದಾಯದಲ್ಲಿ ವಾಸ್ತುಶಾಸ್ತ್ರವು (Vastu Shastra) ತುಂಬಾನೇ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ನೀವು ಒಂದು ಸ್ಥಳದಲ್ಲಿ ಮನೆಯನ್ನು ಕಟ್ಟಿಸಿದರೆ, ಆ ಸ್ಥಳ ಯಾವ ದಿಕ್ಕಿನಲ್ಲಿದೆ ಮತ್ತು ಅಲ್ಲಿ ಕಟ್ಟುವ ಮನೆಯ ಮುಂಬಾಗಿಲು ಯಾವ ದಿಕ್ಕಿನೆಡೆಗೆ ಮುಖ ಮಾಡಿರುತ್ತದೆ ಮತ್ತು ಮನೆಯಲ್ಲಿರುವ ಕೋಣೆಗಳು (Home Rooms) ಯಾವ ಯಾವದಿಕ್ಕಿನಲ್ಲಿವೆ ಅಂತ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುತ್ತಾರೆ ಅಂತ ಹೇಳಬಹುದು. ಮನೆಯಲ್ಲಿರುವ ಕೋಣೆಗಳು ಸರಿಯಾದ ದಿಕ್ಕಿನಲ್ಲಿ ಇರುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾದುದ್ದು ಮನೆಯಲ್ಲಿ ನೆಡುವ ಗಿಡಗಳು ಮತ್ತು ಮನೆಯ ಸುತ್ತಮುತ್ತಲು ನೆಡುವಂತಹ ಗಿಡ ಮರಗಳು ಯಾವ ದಿಕ್ಕಿನಲ್ಲಿವೆ ಎಂಬುದಾಗಿದೆ ಅಂತ ಇತ್ತೀಚೆಗೆ ತಿಳಿದುಕೊಂಡೆವು.


    ಈಗ ಮನೆಯಲ್ಲಿ ನೀರು ಬರುವಂತಹ ನಲ್ಲಿ ಎಂದರೆ ನಳಗಳು ಯಾವ ದಿಕ್ಕಿನಲ್ಲಿದ್ದರೆ ಮನೆಗೆ ಒಳ್ಳೆಯದು ಅಂತ ತಿಳಿದುಕೊಳ್ಳೋಣ ಬನ್ನಿ.


    ಕೆಟ್ಟ ದಿಕ್ಕಿನಲ್ಲಿ ಸ್ಥಾಪಿಸುವ ನಲ್ಲಿಗಳು ಮನೆಗೆ ತರಬಹುದು ದುರಾದೃಷ್ಟ..


    ನಲ್ಲಿಗಳು ಸಹ ಸರಿಯಾದ ದಿಕ್ಕಿನಲ್ಲಿ ಇರಬೇಕೆ ಅಂತ ನೀವು ಮೂಗು ಮುರಿಯುವುದಾಗಲಿ ಅಥವಾ ಅಸಡ್ಡೆ ಮಾಡುವುದಾಗಲಿ ಮಾಡಬೇಡಿ. ಕೆಟ್ಟ ದಿಕ್ಕಿನಲ್ಲಿ ಸ್ಥಾಪಿಸುವ ನಲ್ಲಿಗಳು ಸಹ ಮನೆಗೆ ಅನೇಕ ಬಾರಿ ದುರಾದೃಷ್ಟವನ್ನು ತರಬಹುದು ಎನ್ನುತ್ತಾರೆ ವಾಸ್ತುಶಾಸ್ತ್ರ ಪರಿಣಿತರು. ನೀವು ನಿಮ್ಮ ಮನೆಯನ್ನು ನಿರ್ಮಿಸುವಾಗ, ನೀವು ವಿವಿಧ ವಾಸ್ತು ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯವಾಗುತ್ತದೆ. ಇದು ನಿಮ್ಮ ಮನೆಗೆ ಧನಾತ್ಮಕ ಶಕ್ತಿಯ ಹರಿವನ್ನು ಶಕ್ತಗೊಳಿಸುತ್ತದೆ.


    ಇದನ್ನೂ ಓದಿ: ನಿಮ್ಮ ಮನೆ ಗೋಡೆ ಗಡಿಯಾರ ಈ ದಿಕ್ಕಿಗೆ ಮುಖ ಮಾಡಿದ್ರೆ ನೀವು ತುಂಬಾ ಕಷ್ಟ ಅನುಭವಿಸಬೇಕಾಗುತ್ತದೆ!


    ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಇದ್ದಾಗ, ನೀವು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ವಾಸ್ತು ಶಾಸ್ತ್ರದಲ್ಲಿ ಹಲವಾರು ನಿಯಮಗಳನ್ನು ಉಲ್ಲೇಖಿಸಲಾಗಿದೆ.


    ಉದಾಹರಣೆಗೆ, ನಿಮ್ಮ ಅಡುಗೆಮನೆ ಯಾವ ದಿಕ್ಕಿನಲ್ಲಿರಬೇಕು ಮತ್ತು ನಿಮ್ಮ ಗ್ಯಾಸ್ ಸ್ಟೌವ್ ಅನ್ನು ಎಲ್ಲಿ ಇರಿಸಬೇಕು ಎಂಬುದನ್ನು ಸಹ ಇದು ಉಲ್ಲೇಖಿಸುತ್ತದೆ. ಅಂತೆಯೇ, ವಾಸ್ತು ಶಾಸ್ತ್ರವು ನಿಮ್ಮ ಮನೆಯಲ್ಲಿ ನಲ್ಲಿಗಳನ್ನು ಯಾವ ದಿಕ್ಕಿನಲ್ಲಿ ಇರಿಸಬೇಕು ಎಂಬುದನ್ನು ಸಹ ಉಲ್ಲೇಖಿಸುತ್ತದೆ ನೋಡಿ.


    ದಕ್ಷಿಣ, ಪಶ್ಚಿಮ ದಿಕ್ಕಿನಲ್ಲಿಡಬೇಡಿ


    ವಾಸ್ತು ಶಾಸ್ತ್ರದ ಪ್ರಕಾರ, ನೀರಿನ ನಲ್ಲಿಯನ್ನು ಎಂದಿಗೂ ಮನೆಯಲ್ಲಿ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಸ್ಥಾಪಿಸಬಾರದು. ಬದಲಾಗಿ ಈ ನಲ್ಲಿಗಳನ್ನು ಮನೆಯಲ್ಲಿ ಯಾವಾಗಲೂ ಉತ್ತರ ಮತ್ತು ಪೂರ್ವ ದಿಕ್ಕುಗಳಲ್ಲಿ ಸ್ಥಾಪಿಸಬೇಕು.


    ಸಾಂಕೇತಿಕ ಚಿತ್ರ


    ಕೈ ತೊಳೆಯುವ ಸಿಂಕ್ ಅನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಿಸಲಾಗಿದೆ ಎಂದು ನೀವು ಮೊದಲಿಗೆ ಖಚಿತಪಡಿಸಿಕೊಳ್ಳಬೇಕು. ನಿಮ್ಮ ಟ್ಯಾಪ್ ಗಳನ್ನು ಸ್ಥಾಪಿಸುವ ಮೊದಲು ಪರಿಶೀಲಿಸಿ ಇಲ್ಲದಿದ್ದರೆ ನೀವು ಆರ್ಥಿಕ ಅಥವಾ ಹಣ ಸಂಬಂಧಿತ ಸಮಸ್ಯೆಗಳನ್ನು ಅನುಭವಿಸಬಹುದು.


    ವಾಸ್ತು ಪ್ರಕಾರ ನಿಮ್ಮ ಅಡುಗೆಮನೆಯಲ್ಲಿ ನಲ್ಲಿಗಳು ಮತ್ತು ಸಿಂಕ್ ಗಳು ಯಾವ ದಿಕ್ಕಿನಲ್ಲಿರಬೇಕು?


    ನಿಮ್ಮ ಅಡುಗೆಮನೆ, ನಿಮ್ಮ ಮನೆಯ ಪ್ರಮುಖ ಭಾಗವಾಗಿದೆ, ಏಕೆಂದರೆ ಅಗ್ನಿ ದೇವರು ಮತ್ತು ಅನ್ನಪೂರ್ಣ ದೇವಿಯು ಅಡುಗೆಮನೆಯಲ್ಲಿ ವಾಸಿಸುತ್ತಾರೆ. ನಿಮ್ಮ ಅಡುಗೆಮನೆಯಲ್ಲಿನ ಸಿಂಕ್ ಮತ್ತು ನಲ್ಲಿಯನ್ನು ಉತ್ತರ ಮತ್ತು ಈಶಾನ್ಯ ದಿಕ್ಕಿನ ನಡುವೆ ಇರಿಸಬೇಕು.




    ಬೋರಿಂಗ್ ಪಂಪ್ ಗಳನ್ನು ಮನೆಯ ಯಾವ ಸ್ಥಳದಲ್ಲಿ ಇರಿಸಿದರೆ ಒಳ್ಳೆಯದು ನೋಡಿ


    ನಿಮ್ಮ ಮನೆಯ ಮುಖ್ಯ ದ್ವಾರದ ಮುಂದೆ ಎಂದಿಗೂ ಬೋರಿಂಗ್ ಪಂಪ್ ಗಳನ್ನು ಇಡಬೇಡಿ. ಅಲ್ಲದೆ, ಮನೆಯ ವಾಶ್ ರೂಮ್ ಅಥವಾ ಸೆಪ್ಟಿಕ್ ಟ್ಯಾಂಕ್ ಬಳಿ ಬೋರಿಂಗ್ ಪಂಪ್ ಗಳನ್ನು ಇರಿಸಿದರೆ ಅದನ್ನು ವಾಸ್ತು ಪ್ರಕಾರ ಅಶುಭವೆಂದು ಪರಿಗಣಿಸಲಾಗುತ್ತದೆ.


    ಬೋರಿಂಗ್ ಪಂಪ್ ಅನ್ನು ಇರಿಸಲು ಒಳ್ಳೆಯ ಜಾಗ ಎಂದರೆ ಅದು ಕುಟುಂಬದ ಸದಸ್ಯರು ತುಂಬಾನೇ ಕಡಿಮೆ ಓಡಾಡುವ ಸ್ಥಳವನ್ನು ನೀವು ಆಯ್ಕೆ ಮಾಡಿಕೊಂಡು, ಅಲ್ಲಿ ಅದನ್ನು ಇರಿಸಬೇಕು.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು