Behave Like Children: ಈ ರಾಶಿಯವರು ಸಂಬಂಧದ ವಿಷಯಕ್ಕೆ ಬಂದ್ರೆ ಮಕ್ಕಳಂತೆ ವರ್ತಿಸ್ತಾರಂತೆ!

ಯಾವ ಯಾವ ರಾಶಿಯ ಜನರು ಮಕ್ಕಳಂತೆ ಆಡ್ತಾರೆ ಅಂತ ತಿಳಿದುಕೊಳ್ಳಲು ನಿಮಗೆ ತುಂಬಾನೇ ಕುತೂಹಲ ಇರಬೇಕಲ್ಲವೇ? ಕರ್ಕಾಟಕ ರಾಶಿಯಿಂದ ವೃಷಭ ರಾಶಿಯವರೆಗೆ, ಈ ರಾಶಿಯ ಜನರು ತಾವು ಪ್ರೀತಿಯಲ್ಲಿದ್ದಾಗ ಅಥವಾ ಸಂಬಂಧಗಳಲ್ಲಿ ಚಿಕ್ಕ ಮಕ್ಕಳಂತೆ ವರ್ತಿಸುವ ರಾಶಿಚಕ್ರ ಚಿಹ್ನೆಗಳನ್ನು ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
‘ಮದುವೆಯಾಗಿ ಎರಡು ಮಕ್ಕಳಿವೆ (Children), ಆದರೂ ಗಂಡ ಹೆಂಡತಿ ಇಬ್ಬರೂ ಸಂಬಂಧಗಳಲ್ಲಿ ಒಳ್ಳೆ ಚಿಕ್ಕ ಮಕ್ಕಳಂತೆ ಜಗಳವಾಡ್ತಾರೆ ಮತ್ತು ವರ್ತಿಸುತ್ತಾರೆ’ ಅಂತ ಹಿರಿಯರು ಆಗಾಗ್ಗೆ ಮನೆಯಲ್ಲಿರುವ (Home) ಕೆಲವರ ಬಗ್ಗೆ ಹೀಗೆ ಹೇಳುವುದನ್ನು ನಾವು ಅನೇಕ ಬಾರಿ ಕೇಳಿರುತ್ತೇವೆ ಅಲ್ಲವೇ? ಇದು ಕೇವಲ ಮದುವೆಯಾದವರಿಗೆ (Marriage) ಸಂಬಂಧಪಟ್ಟ ವಿಷಯವಲ್ಲ. ಇದು ಪ್ರೀತಿ (Love), ಪ್ರೇಮ ಸಂಬಂಧ ಸಹ ಆಗಿರಬಹುದು. ಹೌದು.. ಕೆಲವರು ಎಷ್ಟೇ ದೊಡ್ಡವರಾದರೂ ಸಹ ಚಿಕ್ಕ ಮಕ್ಕಳಂತೆ ವರ್ತನೆ ಇರುತ್ತದೆ, ಅದೇ ಇನ್ನೂ ಕೆಲವರು ಚಿಕ್ಕವರಾಗಿದ್ದರೂ ಸಹ ತುಂಬಾನೇ ಪ್ರಬುದ್ಧರಾಗಿ ವರ್ತಿಸುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಈ ರಾಶಿಚಕ್ರ ಚಿಹ್ನೆಯ ಜನರು ಈ ಸಂಬಂಧಗಳಲ್ಲಿ ಮಕ್ಕಳಂತೆ ವರ್ತಿಸುತ್ತಾರಂತೆ
ಅದರಲ್ಲೂ ಈ ಗಂಡ ಹೆಂಡತಿಯ ವೈವಾಹಿಕ ಸಂಬಂಧದಲ್ಲಿ ಅಥವಾ ಯಾರನ್ನಾದರೂ ಇವರು ಪ್ರೀತಿ ಮಾಡುತ್ತಿರಲಿ, ಕೆಲವರು ಇನ್ನೊಬ್ಬರ ಮೇಲೆ ಪ್ರಾಬಲ್ಯ ಸಾಧಿಸಲು ಮತ್ತು ಎಲ್ಲವೂ ತಾನು ಅಂದುಕೊಂಡಂತೆ ನಡೆಯಬೇಕು ಅಂತ ಹಠ ಹಿಡಿದಾಗ ಮಕ್ಕಳಂತೆ ವರ್ತಿಸುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಹೇಳಬಹುದು. ಇವರು ಏಕೆ ಹೀಗೆ ಮಕ್ಕಳಂತೆ ಆಡ್ತಾರೆ ಅಂತ ನೀವು ಅನೇಕ ಸಾರಿ ತಲೆ ಕೆಡೆಸಿಕೊಂಡಿರುವುದು ಇರುತ್ತದೆ.

ಯಾವ ಯಾವ ರಾಶಿಯ ಜನರು ಮಕ್ಕಳಂತೆ ಆಡ್ತಾರೆ ಅಂತ ತಿಳಿದುಕೊಳ್ಳಲು ನಿಮಗೆ ತುಂಬಾನೇ ಕುತೂಹಲ ಇರಬೇಕಲ್ಲವೇ? ಕರ್ಕಾಟಕ ರಾಶಿಯಿಂದ ವೃಷಭ ರಾಶಿಯವರೆಗೆ, ಈ ರಾಶಿಯ ಜನರು ತಾವು ಪ್ರೀತಿಯಲ್ಲಿದ್ದಾಗ ಅಥವಾ ಸಂಬಂಧಗಳಲ್ಲಿ ಚಿಕ್ಕ ಮಕ್ಕಳಂತೆ ವರ್ತಿಸುವ ರಾಶಿಚಕ್ರ ಚಿಹ್ನೆಗಳನ್ನು ನೋಡಿ.

ಕರ್ಕಾಟಕ ರಾಶಿ
ಈ ರಾಶಿಯವರು ತಮ್ಮ ಪ್ರಿಯತಮೆಯ ಗಮನವನ್ನು ತನ್ನೆಡೆಗೆ ಸೆಳೆದುಕೊಳ್ಳಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಕರ್ಕಾಟಕ ರಾಶಿಯ ಜನರು ಮಕ್ಕಳಂತಹ ಪ್ರವೃತ್ತಿಗಳನ್ನು ಹೊಂದಿರುತ್ತಾರೆ. ಈ ರಾಶಿಚಕ್ರ ಚಿಹ್ನೆಯು ಪ್ರಪಂಚದ ಮುಂದೆ ತಮ್ಮನ್ನು ತಾವು ತೆರೆದುಕೊಳ್ಳಲು ಹಿಂಜರಿಯುತ್ತಾರೆ, ಇದು ಅವರು ವಯಸ್ಕರಾಗಿದ್ದರೂ ಸಹ ತಮ್ಮ ಮಗುವಿನಂತಹ ಮುಗ್ಧತೆಯನ್ನು ಮುಂದುವರಿಸುವುದನ್ನು ಪರಿಗಣಿಸಿದರೆ ಅರ್ಥಮಾಡಿಕೊಳ್ಳಬಹುದು.

ಇದನ್ನೂ ಓದಿ: Zodiac Signs: ಈ 3 ರಾಶಿಯವರು, ಜನರನ್ನು ತುಂಬಾ ಹಚ್ಕೊಂಡು ನೋವು ಅನುಭವಿಸ್ತಾರಂತೆ

ತುಲಾ ರಾಶಿ
ತುಲಾ ರಾಶಿಯವರು ಆಗಾಗ್ಗೆ ತಮ್ಮ ಬಾಲ್ಯವನ್ನು ತಮ್ಮ ಜೀವನದ ಅತ್ಯಂತ ಸ್ಮರಣೀಯ ಮತ್ತು ಅತ್ಯುತ್ತಮ ಭಾಗವಾಗಿ ನೋಡುತ್ತಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಅದು ಬಹುಶಃ ಈ ರಾಶಿಚಕ್ರ ಚಿಹ್ನೆಯ ಜನರು ಹೆಚ್ಚು ಮಕ್ಕಳಂತೆ ಇರುವುದನ್ನು ನಾವು ನೋಡಬಹುದು. ಅವರು ತಮ್ಮನ್ನು ಬೇರೆಯವರು ಕಾಳಜಿ ವಹಿಸುವುದನ್ನು ಇಷ್ಟಪಡುತ್ತಾರೆ, ಆದರೆ ವಯಸ್ಕ ತುಲಾ ರಾಶಿಯವರು ತುಂಬಾ ಅಸಹನೆ ಮತ್ತು ಶ್ರಮಜೀವಿಗಳು, ಅವರು ವಿಶ್ರಾಂತಿ ಪಡೆಯುವಾಗ ಇತರರು ಕಠಿಣ ಪರಿಶ್ರಮವನ್ನು ಪಡಲು ಬಿಡುವುದಿಲ್ಲ.

ಅದೇನೇ ಇದ್ದರೂ, ಅವರು ಸಂಬಂಧದಲ್ಲಿ ನಾಚಿಕೆ ಸ್ವಭಾವದ ಮಕ್ಕಳಂತೆ ವರ್ತಿಸುತ್ತಾರೆ, ಆದ್ದರಿಂದಲೇ ತಾವು ಪ್ರೀತಿಯಲ್ಲಿರುವಾಗ ತಮ್ಮ ಪ್ರೇಮಿಗೆ ಎಲ್ಲವನ್ನೂ ಹೇಳಿಕೊಳ್ಳಲು ನಾಚಿಕೆ ಪಟ್ಟುಕೊಳ್ಳುತ್ತಾರೆ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಈ ಭೌತಿಕ ವಸ್ತುಗಳ ಮೇಲೆ ತುಂಬಾನೇ ಪ್ರೀತಿ ಇರುತ್ತದೆ ಮತ್ತು ಒಳ್ಳೆ ಚಿಕ್ಕ ಮಗುವಿನಂತೆ ಆ ವಸ್ತುಗಳನ್ನು ಸಂತೋಷದಿಂದ ಬಳಸಲು ಮತ್ತು ಗ್ಯಾಜೆಟ್ ಗಳನ್ನು ಸಂಗ್ರಹಿಸಲು ಇಷ್ಟಪಡುತ್ತಾರೆ. ಅವರು ತಮ್ಮ ಸಂಪತ್ತನ್ನು ಉಗ್ರವಾಗಿ ಹೊಂದಿರುವವರಾಗಿದ್ದರೂ, ಅವುಗಳನ್ನು ವಿಶೇಷವಾದ ಯಾರೊಂದಿಗಾದರೂ ಹಂಚಿಕೊಳ್ಳಲು ಅವರು ಹಿಂಜರಿಯುವುದಿಲ್ಲ. ಅವರಿಗೆ ಕೋಪವು ಮಗುವಿನಂತೆ ಬರುತ್ತದೆ ಮತ್ತು ಹೆಚ್ಚು ಬೇಸರಗೊಂಡ ನಂತರ ಕೆಲವು ಗಂಟೆಗಳಲ್ಲಿ ಅವರೇ ಶಾಂತರಾಗುತ್ತಾರೆ.

ಇದನ್ನೂ ಓದಿ:  Vastu Tips: ಮನೆಯಲ್ಲಿ ಈ ಪ್ರಾಣಿಗಳನ್ನು ಸಾಕಿದ್ರೆ ಸಂಪತ್ತಿನ ಅಭಿವೃದ್ಧಿ ಅಂತೆ

ಅವರನ್ನು ಮೆಚ್ಚಿಸುವುದು ಸುಲಭದ ಕೆಲಸ, ಅವರ ಸಂಗಾತಿಯು ಅವರಿಗೆ ಅವರ ತಾಯಿ ಮಾಡಿ ಕೊಡುವಂತಹ ಇಷ್ಟವಾಗುವ ಆಹಾರ ಪದಾರ್ಥಗಳನ್ನು ಅವರಿಗೆ ಮಾಡಿಕೊಟ್ಟರೆ ಸಾಕು ಅವರು ನಿಮ್ಮನ್ನು ತುಂಬಾನೇ ಮೆಚ್ಚಿಕೊಳ್ಳುತ್ತಾರೆ.
Published by:Ashwini Prabhu
First published: