ಹಿಂದೂ ಪಂಚಾಗದ ಪ್ರಕಾರ ಮಾಘ ಶುದ್ಧ ಪಂಚಮಿ ಅನ್ನು ವಸಂತ ಪಂಚಮಿ (Vasant Panchami) ಎಂದು ಕರೆಯಲಾಗುತ್ತದೆ. ಈ ದಿನ ವಿದ್ಯಾರಂಭ ಮಾಡಲು ಶುಭದಿನವಾಗಿದೆ. ಕಾರಣ ಈ ದಿನದಂದು ಸರಸ್ವತಿ (Goddess Saraswati) ಹುಟ್ಟಿದ ದಿನ ಎಂದು ನಂಬಲಾಗಿದೆ. ಈ ದಿನದಂದು ಮಕ್ಕಳ ವಿದ್ಯಾರಂಭ ಪ್ರಾರಂಭಿಸಿದರೆ, ಸರಸ್ವತಿ ಆಶೀರ್ವಾದ ಸಿಗಲಿದೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ ಈ ವಸಂತ ಪಂಚಮಿಗೆ ವಿಶೇಷ ಮಾನ್ಯತೆ ಇದೆ
ಹಿಂದೂ ಕ್ಯಾಲೆಂಡರ್ ಪ್ರಕಾರ, ವಸಂತ ಪಂಚಮಿ ಹಬ್ಬವು ಮಾಘ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಬರುತ್ತದೆ. ಈ ದಿನದಂದುಸರಸ್ವತಿ ದೇವಿಯ ಆರಾಧನೆ ಮಾಡಲಾಗುವುದು. ಜೊತೆಗೆ ಇದೇ ಸಮಯದಲ್ಲಿ, ಈ ದಿನದಿಂದ ಭಾರತದಲ್ಲಿ ವಸಂತ ಋತುವು ಪ್ರಾರಂಭವಾಗುತ್ತದೆ.
ಸರಸ್ವತಿ ಜನಿಸಿದ ದಿನ
ಪೌರಾಣಿಕ ಮಾಹಿತಿ ಪ್ರಕಾರ ಬ್ರಹ್ಮನ ಮನಸ್ಸಿನಿಂದ ಸರಸ್ವತಿ ಉದ್ಬವಿಸಿದಳು ಎಂದು ಹೇಳಲಾಗುತ್ತದೆ. ಸರಸ್ವತಿ ಮೂಡಿದ ನಂತರ ಬ್ರಹ್ಮ ತಪಸ್ಸನ್ನಾಚರಿಸಲು ಪ್ರಾರಂಭಿಸಿ ಆಧ್ಯಾತ್ಮಿಕ ಜ್ಞಾನ ಪಡೆದ ಎಂದೂ ಹೇಳಲಾಗುತ್ತದೆ. ಒಟ್ಟಾರೆ ಈ ದಿನದಂದು ಸರಸ್ವತಿ ಪೂಜೆ ಆಚರಿಸುವ ಪದ್ಧತಿ ಸಾವಿರಾರು ವರ್ಷಗಳಿಂದ ನಡೆದುಬಂದಿದೆ.
ಶುಭ ಮುಹೂರ್ತ
ಈ ವರ್ಷ 2022ರ ವಸಂತ ಪಂಚಮಿ ಹಬ್ಬ ಫೆಬ್ರವರಿ 5 ರಂದು ಬಂದಿದೆ. ಈ ಬೆಳಿಗ್ಗೆ 07:07:21 ರಿಂದ ಸಂಜೆ 05:42 ರವರೆಗೆ ವಸಂತ ಪಂಚಮಿಯ ಆಚರಣೆಗೆ ಶುಭಚಿನವಾಗಿದೆ. ವಿಶೇಷಷ ಎಂದರೆ ಈ ದಿನದಂದು ಒಂದು ನಿಮಿಷಕ್ಕೆ ಸಿದ್ಧಯೋಗವೂ ರೂಪುಗೊಳ್ಳುತ್ತಿದೆ, ನಂತರ ಸಧ್ಯ ಯೋಗವು ಪ್ರಾರಂಭವಾಗುತ್ತದೆ. ವಸಂತ ಪಂಚಮಿಯ ದಿನದಂದು ರವಿಯೋಗವು ಸಹ ಇದ್ದು ಇದು ಸಂಜೆ 04:09 ರಿಂದ ಮರುದಿನ ಬೆಳಿಗ್ಗೆ 07:06 ರವರೆಗೆ ಇರುತ್ತದೆ
ಇದನ್ನು ಓದಿ: ಮನೆಯ ಈ ಮೂಲೆಯಲ್ಲಿ ಕನ್ನಡಿ ಇದ್ರೆ ಒಳ್ಳೆಯದಂತೆ...
ಸರಸ್ವತಿಯ ಈ ಮಂತ್ರ ಪಠಿಸಿ
ಈ ದಿನದಂದು, ವ್ಯಕ್ತಿಯು ತನ್ನ ರಾಶಿಚಕ್ರ ಚಿಹ್ನೆಯನ್ನು ಪೂಜಿಸುವುದರಿಂದ ವಿಶೇಷ ಫಲಿತಾಂಶಗಳನ್ನು ಪಡೆಯಬಹುದು ಎಂದು ನಂಬಲಾಗಿದೆ. ರಾಶಿಚಕ್ರದ ಬಗ್ಗೆ ಗೊಂದಲ ಇರುವವರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ 'ಓಂ ಸರಸ್ವತ್ಯೈ ನಮಃ' ಎಂದು ಜಪಿಸಿದ ನಂತರ ಚಿಕ್ಕ ಹೆಣ್ಣು ಮಕ್ಕಳಿಗೆ ಹಾಲಿನಿಂದ ಮಾಡಿದ ಪ್ರಸಾದ ನೀಡಿದರೆ ಶುಭ ಎಂದು ಜ್ಯೋತಿಷಿಗಳು ತಿಳಿಸುತ್ತಾರೆ
ವಸಂತ ಪಂಚಮಿಯಂದು ಸರಸ್ವತಿ ದೇವಿಯನ್ನು ಪೂಜಿಸಬೇಕು. ಸರಸ್ವತಿಯ ಕಠಿಣ ಮಂತ್ರವನ್ನು ಜಪಿಸಲಾಗದವರು ಮಾ ಸರಸ್ವತಿಯ ಸರಳ ಮಂತ್ರವನ್ನು ಜಪಿಸಬೇಕು. ವಸಂತ ಪಂಚಮಿಯಂದು ಈ ಮಂತ್ರವನ್ನು ಪಠಿಸುವುದರಿಂದ ಕಲಿಕೆ ಮತ್ತು ಬುದ್ಧಿವಂತಿಕೆ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.
ಇದನ್ನು ಓದಿ: ಬೆಳ್ಳಿ ಉಂಗುರ ಧರಿಸುವುದರಿಂದ ಎಷ್ಟೆಲ್ಲಾ ಪ್ರಯೋಜನ ಗೊತ್ತಾ?
ಓಂ ವಾಗ್ದೈವ್ಯೈ ಚ ವಿದ್ಮಹೇ ಕಾಮರಾಜಾಯ ಧೀಮ್ಹಿ. ತನ್ನೋ ದೇವಿ ಪ್ರಚೋದಯಾತ್ ಈ ಮಂತ್ರವನನು ಈ ದಿನ ಐದು ಬಾರಿ ಪಠಿಸಬೇಕು ಇದರಿಂದ ಸರಸ್ವತಿ ದೇವಿಯು ಪ್ರಸನ್ನಳಾಗುತ್ತಾಳೆ ಎಂದು ನಂಬಲಾಗಿದೆ.
ಮಕ್ಕಳ ವಿದ್ಯಾರಂಭಕ್ಕೂ ಮುನ್ನ ಸರಸ್ವತಿ ಪೂಜೆ
ಹಿಂದೂ ಧರ್ಮದಲ್ಲಿ ಯಾವುದೇ ಕಾರ್ಯ ಮಾಡುವ ಮುನ್ನ ಅದಕ್ಕೆ ಶಾಸ್ತ್ರೋಕ್ತವಾದ ಪೂಜೆ ಮೂಲಕ ಆರಂಭಿಸುವುದು ಪ್ರತೀತಿ. ಅದರಲ್ಲೂ ಮಗುವು ಕಲಿಕೆ ಆರಂಭಿಸಲು ಮುಂದಾದಾಗ ಅದಕ್ಕೆ ಸರಸ್ವತಿ, ಗಣೇಶನ ಪೂಜೆ ನಡೆಸಿ ವಿದ್ಯಾರಂಭ ಯಶಸ್ವಿಯಾಗಿ ಆಗುವಂತೆ ಬೇಡಿ ಕೊಳ್ಳುತ್ತೇವೆ. ಈ ಹಿಂದೆಲ್ಲಾ ಮಕ್ಕಳಿಗೆ ಐದು ವರ್ಷದ ಸಮಯದಲ್ಲಿ ಈ ಕಲಿಕೆ ಪ್ರಾರಂಭ ಮಾಡುತ್ತಿದ್ದರು. ಆದರೆ, ಈಗ ಮಕ್ಕಳಿಗೆ ಮೂರು ವರ್ಷದಿಂದಲೇ ಕೆಲವರು ಕಲಿಕೆ ಆರಂಭಿಸಲು ಶುರು ಮಾಡುತ್ತಾರೆ. ಬೇಬಿ ಸಿಟ್ಟಿಂಗ್, ನರ್ಸರಿಗೆ ಕಳುಹಿಸುವ ಮುನ್ನ ನಡೆಸುವ ಈ ಕಾರ್ಯ ಹೆಚ್ಚು ಪ್ರಾಶಸ್ತ್ಯ. ಈ ಕಾರ್ಯ ಆರಂಭಿಸಲು ಈ ವಸಂತ ಪಂಚಮಿ ಶುಭ ದಿನ ಆಗಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ