Mahashivaratri: ಶಿವರಾತ್ರಿ ಹಬ್ಬವನ್ನು ಈ ರೀತಿ ಆಚರಣೆ ಮಾಡಿದ್ರೆ ಒಳ್ಳೆಯದಂತೆ

ಶಿವ

ಶಿವ

Shivaratri 2023: ಜ್ಯೋತಿಷಿಗಳ ಪ್ರಕಾರ, ಮಹಾಶಿವರಾತ್ರಿಯಂದು ಮಾಡುವ ಪೂಜೆಯು ಆರಾಧಕರಿಗೆ ವಿವಿಧ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಈ ದಿನ, ಭಗವಾನ್ ಶಿವನ ಅಭಿಷೇಕದಿಂದ ಎಲ್ಲಾ ದುಃಖ ಮತ್ತು ನೋವುಗಳನ್ನು ಮತ್ತು ಎಲ್ಲಾ ರೀತಿಯ ಭಯ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.

  • Trending Desk
  • 2-MIN READ
  • Last Updated :
  • Share this:

ಹಿಂದೂ ಹಬ್ಬಗಳಲ್ಲಿ (Hindu Festival) ಶಿವರಾತ್ರಿಗೆ (Shivaratri) ಮಹತ್ವದ ಸ್ಥಾನವಿದೆ ಹಾಗೂ ಶಿವರಾತ್ರಿ ಆಚರಣೆಯು ತನ್ನದೇ ಆದ ಐತಿಹಾಸಿಕ (historical)  ಮಹತ್ವಗಳನ್ನು ಹೊಂದಿದೆ. ಹಿಂದೂ ಕ್ಯಾಲೆಂಡರ್‌ಗೆ (Calendar) ಅನುಗುಣವಾಗಿ ಪ್ರತಿ ತಿಂಗಳ 14 ರಂದು ಅಮಾವಾಸ್ಯೆಯ ಹಿಂದಿನ ದಿನ ಶಿವರಾತ್ರಿಯನ್ನು ಆಚರಿಸಲಾಗುತ್ತದೆ.


ಮಹಾಶಿವರಾತ್ರಿ ಆಚರಣೆ


ಈ ಬಾರಿಯ ಮಹಾ ಶಿವರಾತ್ರಿಯ ಹಬ್ಬವನ್ನು ಫೆಬ್ರವರಿ 18, 2023 ರಂದು ಆಚರಿಸಲಾಗುತ್ತದೆ. ಚತುರ್ದಶಿ ತಿಥಿಯು ಫೆಬ್ರವರಿ 18, 2023 ರಿಂದ 20:02 (ರಾತ್ರಿ 08:02) ರಿಂದ ಆರಂಭಗೊಂಡು ಫೆಬ್ರವರಿ 19, 2023 ರ 16:18 (ಸಂಜೆ 4:18) ರವರೆಗೆ ಇರಲಿದೆ.


ಶಿವರಾತ್ರಿ ಪೂಜಾ ವಿಧಿವಿಧಾನಗಳು


ಶಿವರಾತ್ರಿಯ ಮೊದಲ ದಿನ ಪ್ರಹಾರ ಪೂಜೆ ರಾತ್ರಿ ನಡೆಯಲಿದ್ದು ಫೆಬ್ರವರಿ 18 ರ ಸಂಜೆ 6:13 ಕ್ಕೆ ಆರಂಭವಾಗುತ್ತದೆ ಹಾಗೂ ರಾತ್ರಿ 9:24 ಕ್ಕೆ ಕೊನೆಗೊಳ್ಳುತ್ತದೆ. ಎರಡನೇ ರಾತ್ರಿ ಪೂಜೆ ಫೆಬ್ರವರಿ 18 ರಂದು ರಾತ್ರಿ 9:24 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಫೆಬ್ರವರಿ 19 ರಂದು ಮಧ್ಯರಾತ್ರಿ 12:35 ಕ್ಕೆ ಕೊನೆಗೊಳ್ಳುತ್ತದೆ. ಮೂರನೇ ರಾತ್ರಿ ಪ್ರಹಾರ ಪೂಜೆಯು ಫೆಬ್ರವರಿ 19 ರಂದು ಮಧ್ಯರಾತ್ರಿ 12:35 ಕ್ಕೆ ಪ್ರಾರಂಭವಾಗಿ ಫೆಬ್ರವರಿ 19 ರಂದು ಪ್ರಾತಃ ಕಾಲ 03:46 ಕ್ಕೆ ಕೊನೆಗೊಳ್ಳುತ್ತದೆ. ನಾಲ್ಕನೇ ರಾತ್ರಿ ಪ್ರಹಾರ ಪೂಜೆ ಫೆಬ್ರವರಿ 19 ರಂದು ಪ್ರಾತಃ ಕಾಲ 03:46 ಕ್ಕೆ ಪ್ರಾರಂಭವಾಗಿ ಫೆಬ್ರವರಿ 19 ರಂದು ಬೆಳಗ್ಗೆ 06:56 ಕ್ಕೆ ಕೊನೆಗೊಳ್ಳುತ್ತದೆ.


ಮಹಾ ಶಿವರಾತ್ರಿ ಪಾರಾಯಣೆ ಸಮಯ


ದೃಕ್ ಪಂಚಾಂಗದ ಪ್ರಕಾರ, ಮಹಾ ಶಿವರಾತ್ರಿ ಪಾರಾಯಣ ಸಮಯವು ಫೆಬ್ರವರಿ 19 ರಂದು ಬೆಳಗ್ಗೆ 06:56 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಫೆಬ್ರವರಿ 19 ರಂದು ಸಂಜೆ 3:24 ಕ್ಕೆ ಕೊನೆಗೊಳ್ಳುತ್ತದೆ.


ನಿಶಿತ ಕಾಲ ಪೂಜಾ ಮುಹೂರ್ತವು ಫೆಬ್ರವರಿ 19 ರಂದು ರಾತ್ರಿ 12:09 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಫೆಬ್ರವರಿ 19 ರಂದು ಮುಂಜಾನೆ 01:00 ಕ್ಕೆ ಕೊನೆಗೊಳ್ಳುತ್ತದೆ. ನಿಶಿತಾ ಕಾಲ ಪೂಜೆಯನ್ನು 51 ನಿಮಿಷಗಳಲ್ಲಿ ಮಾಡಬೇಕು. ಮಹಾ ಶಿವರಾತ್ರಿಯ ಪಾರಣ ಸಮಯವು ಮಹಾಶಿವರಾತ್ರಿಗಾಗಿ ಉಪವಾಸ ಮಾಡುವವರು ತಮ್ಮ ಉಪವಾಸವನ್ನು ಮುರಿಯಬೇಕಾದ ಮಂಗಳಕರ ಸಮಯವಾಗಿದೆ.


ಇದನ್ನೂ ಓದಿ: ಶಿವನ ಫೇವರೇಟ್​ ರಾಶಿಗಳಂತೆ ಇವು, ನಾಳೆಯಿಂದ ಇವರ ಗೆಲುವನ್ನು ತಡೆಯೋಕೆ ಆಗಲ್ಲ


ಮಹಾಶಿವರಾತ್ರಿ 2023: ಆಚರಣೆ


ಜ್ಯೋತಿಷಿಗಳ ಪ್ರಕಾರ, ಮಹಾಶಿವರಾತ್ರಿಯಂದು ಮಾಡುವ ಪೂಜೆಯು ಆರಾಧಕರಿಗೆ ವಿವಿಧ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಈ ದಿನ, ಭಗವಾನ್ ಶಿವನ ಅಭಿಷೇಕದಿಂದ ಎಲ್ಲಾ ದುಃಖ ಮತ್ತು ನೋವುಗಳನ್ನು ಮತ್ತು ಎಲ್ಲಾ ರೀತಿಯ ಭಯ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.
ಈ ದಿನದಂದು ಮೂಲ ಮಂತ್ರವಾದ 'ಓಂ ನಮಃ ಶಿವಾಯ'ವನ್ನು ಮಾತ್ರ ಪಠಿಸುವ ಭಕ್ತರ ಮೇಲೆ ಭೋಲೆನಾಥನ ಆಶೀರ್ವಾದ ಯಾವಾಗಲೂ ಇರುತ್ತದೆ ಎಂಬುದು ಶಿವಭಕ್ತರ ನಂಬಿಕೆಯಾಗಿದೆ.


ಶಿವ ತಾಂಡವ ಸ್ತೋತ್ರ ಹಾಗೂ ಚಾಲೀಸಾ ಪಠಣ


ಈ ಮಂಗಳಕರ ದಿನದಂದು, ಶಿವ ತಾಂಡವ ಸ್ತೋತ್ರ ಮತ್ತು ಶಿವ ಚಾಲೀಸಾವನ್ನು ಪಠಿಸುವುದು ಸಹ ಅತ್ಯಗತ್ಯವಾಗಿದೆ ಹಾಗೂ ಈ ಮಂತ್ರಗಳ ಪಠಣದಿಂದ ಶಿವನ ರಕ್ಷೆ ಯಾವಾಗಲೂ ಭಕ್ತರ ಮೇಲೆ ಇರುತ್ತದೆ ಎಂಬುದುದಾಗಿದೆ. ಮಹಾದೇವನು ಈ ಅದ್ಭುತ ಸ್ತೋತ್ರಗಳನ್ನು ಪಠಿಸುವ ಮೂಲಕ ತನ್ನ ಎಲ್ಲಾ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂಬುದು ಹಿಂದಿನಿಂದಲೂ ವಾಡಿಕೆಯಲ್ಲಿರುವ ಶಾಸ್ತ್ರವಾಗಿದೆ.


ಈ ವರ್ಷದ ಮಹಾಶಿವರಾತ್ರಿಯನ್ನು ಯಾವಾಗ ಆಚರಿಸಲಾಗುತ್ತದೆ?


ಫೆಬ್ರವರಿ 18 2023 ರಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ.


ಇದನ್ನೂ ಓದಿ: ಈ 4 ರಾಶಿಯನ್ನು ಬೆಂಬಿಡದ ಶನಿ, ಆದ್ರೆ ಲಾಭನೇ ಜಾಸ್ತಿಯಂತೆ


ಮಹಾಶಿವರಾತ್ರಿಯನ್ನು ಏಕೆ ಆಚರಿಸಲಾಗುತ್ತದೆ?


ಹಿಂದೂ ಹಬ್ಬವಾದ ಮಹಾ ಶಿವರಾತ್ರಿಯನ್ನು ಶಿವದೇವರನ್ನು ಸಂಪ್ರೀತಗೊಳಿಸಲು ಆಚರಿಸಲಾಗುತ್ತದೆ. ಶಿವರಾತ್ರಿಯಂದು ಶಿವ ದೇವರು ಸ್ವರ್ಗದ ನೃತ್ಯವಾದ ತಾಂಡವ ನೃತ್ಯವನ್ನು ಮಾಡುತ್ತಾರೆ ಎಂಬುದು ಜನಜನಿತವಾಗಿದೆ

Published by:Sandhya M
First published: