Temple: ದೇವರು ಎಲ್ಲೆಡೆಯೂ ಇದ್ದಾನೆಯಾದರೂ ದೇವಸ್ಥಾನಕ್ಕೆ ಏಕೆ ಹೋಗಬೇಕು ಗೊತ್ತಾ?

ದೇವಾಲಯವು ಮಾನವ ದೇಹದ ಭೌತಿಕ ರಚನೆಯನ್ನು ಪ್ರತಿನಿಧಿಸುತ್ತದೆ. ಇಡೀ ದೇವಾಲಯವು ಭೌತಿಕ ದೇಹವಾಗಿದ್ದರೆ ಗರ್ಭಗುಡಿಯು ದೇಹದ ಹೃದಯವನ್ನು ಪ್ರತಿನಿಧಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ದೇವರು (God) ಸರ್ವವ್ಯಾಪಿ ಆದರೂ ದೇವಸ್ಥಾನಕ್ಕೆ (Temple) ಹೋಗಿ ಬಂದರೆ ಒಂದು ರೀತಿಯ ನೆಮ್ಮದಿ ಮೂಡಿ, ಮನಸ್ಸು ಹಗುರಾಗುತ್ತದೆ. ಇದಕ್ಕೆ ಕಾರಣ ದೇವಾಲಯದ ಸಕಾರಾತ್ಮಕ ಅಂಶಗಳು. ದೇವರ ವಿಗ್ರಹವು (God Idol)  (ಪ್ರಾಣ ದೇವರು) ಆವಾಹನೆಗೆ ಒಳಗಾದ ಕಾರಣ ಇದು ಭಕ್ತರ ಮನಸ್ಸನ್ನು ಜಾಗೃತಗೊಳಿಸುವ. ಜೊತೆಗೆ  ಸದ್ಗುಣಗಳ ಬಗ್ಗೆ ಅರಿವು ಮೂಡಿಸುವ ಶಕ್ತಿಯನ್ನು ಹೊಂದಿದೆ. ದೇವಾಲಯಕ್ಕೆ ಹೋಗಿ ಬರುವುದರ ಹಿಂದೆ ಆಧ್ಯಾತ್ಮಿಕದ (Religious) ಜೊತೆ ವೈಜ್ಞಾನಿಕ ಲಾಭ ಕೂಡ ಇದೆ. ಇದೇ ಉದ್ಧೇಶಕ್ಕಾಗಿ ದೇವಾಲಯಕ್ಕೆ ಹೋಗಬೇಕು ಎನ್ನುತ್ತಾರೆ. ಇದರ ಹಿಂದಿನ ವೈಜ್ಞಾನಿಕ ಕಾರಣ ಏನು ಎಂಬ ಮಾಹಿತಿ ಇಲ್ಲಿದೆ.

  ದೇವಾಲಯದಲ್ಲಿ ಕಾಂತೀಯ ಶಕ್ತಿ ಹೆಚ್ಚು
  ಹಿಂದೂ ಧರ್ಮದಲ್ಲಿ ದೇವಸ್ಥಾನ ನಿರ್ಮಾಣ ಕೇವಲ ವಾಸ್ತು ಮಾತ್ರವಲ್ಲ. ವೈಜ್ಞಾನಿಕ ಅಂಶಗಳನ್ನು ಒಳಗೊಂಡಿದೆ. ದೇವಸ್ಥಾನದ ಮೂಲ ಗೃಹ ಅಂದರೆ ದೇವರ ಮೂರ್ತಿ ಹೊಂದಿರುವ ಗರ್ಭ ಗ್ರಹ ಪ್ರಮುಖ ಕೇಂದ್ರವಾಗಿದ್ದು, ಇದು ಅತಿ ಹೆಚ್ಚು ಸಕರಾತ್ಮಕ ಕಾಂತೀಯ ಅಲೆ ಹೊರ ಹಾಕುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ, ವೈದಿಕ ಲಿಪಿಗಳೊಂದಿಗೆ ಕೆಲವು ತಾಮ್ರ ಫಲಕಗಳನ್ನು ವಿಗ್ರಹದ ಕೆಳಗೆ ಹಾಕಿ ದೇವರ ಮೂರ್ತಿ ಪ್ರತಿಷ್ಠಾಪಿಸಲಾಗುವುದು. ಇದರ ಹಿಂದಿನ ವೈಜ್ಞಾನಿಕ ಕಾರಣ ಎಂದರೆ ತಾಮ್ರದ ಫಲಕಗಳು ಭೂಮಿಯಿಂದ ಕಾಂತೀಯ ಅಥವಾ ವಿದ್ಯುತ್ ತರಂಗಗಳನ್ನು ಹೀರಿಕೊಂಡು ಹೊರಸೂಸುವ ಸಾಮರ್ಥ್ಯವನ್ನು ಹೊಂದಿವೆ.

  ದೇವಾಲಯವು ಮಾನವ ದೇಹದ ಭೌತಿಕ ರಚನೆಯನ್ನು ಪ್ರತಿನಿಧಿಸುತ್ತದೆ. ಇಡೀ ದೇವಾಲಯವು ಭೌತಿಕ ದೇಹವಾಗಿದ್ದರೆ ಗರ್ಭಗುಡಿಯು ದೇಹದ ಹೃದಯವನ್ನು ಪ್ರತಿನಿಧಿಸುತ್ತದೆ. ದಕ್ಷಿಣ ಭಾರತದ ಸಂಪ್ರದಾಯದಂತೆ, ದೇವಾಲಯದ ಕಟ್ಟಡವು ದೊಡ್ಡದಾಗಿದ್ದರೂ, ಮುಖ್ಯ ವಿಗ್ರಹವನ್ನು ಯಾವಾಗಲೂ ಸಣ್ಣ ಕತ್ತಲೆಯ ಸ್ಥಳದಲ್ಲಿ ಸ್ಥಾಪಿಸಲಾಗುತ್ತದೆ.

  ಪ್ರದಕ್ಷಿಣೆ ಹಾಕುವ ಕಾರಣ
  ದೇವಸ್ಥಾನದಲ್ಲಿ ವಿಗ್ರಹದ ಪ್ರದಕ್ಷಿಣೆ ಹಾಕುವುದರಿಂದ, ದೇಹವು ಗರ್ಭಗುಡಿಯಿಂದ ಹೊರ ಸೂಸುವ ಕಿರಣದ ಕಾಂತೀಯ ಅಲೆಗಳನ್ನು ಹೀರಿಕೊಳ್ಳುತ್ತದೆ. ವಿಜ್ಞಾನದ ಆಧಾರದ ಮೇಲೆ, ಆರೋಗ್ಯಕರ ಜೀವನಕ್ಕೆ ಅಗತ್ಯವಿರುವ ಹೆಚ್ಚು ಹೆಚ್ಚು ಧನಾತ್ಮಕ ಕಾಂತೀಯ ಶಕ್ತಿಯನ್ನು ಹೀರಿಕೊಳ್ಳಲು ಈ ಪ್ರಕ್ರಿಯೆ ಅತ್ಯಂತ ಪರಿಣಾಮಕಾರಿಯಾಗಿದೆ. ಗರ್ಭಗುಡಿಯು ಮೂರು ಬದಿಗಳಲ್ಲಿ ಮುಚ್ಚಿದ ಕಾರಣ ಎಲ್ಲಾ ಶಕ್ತಿಗಳ ಪರಿಣಾಮವನ್ನು ಹೆಚ್ಚಿಸುತ್ತದೆ.

  ಇದನ್ನು ಓದಿ: ಕೈಯಲ್ಲಿನ ಈ ರೇಖೆಯ ಪರಿಣಾಮದಿಂದಾಗಿಯೇ ಕೆಲವರು ಸನ್ಯಾಸಿ ಜೀವನದತ್ತ ಆಕರ್ಷಿತರಾಗುವುದು!

  ಸ್ಥಿರ ಶಕ್ತಿ ವೃದ್ಧಿ
  ದೀಪ, ಗಂಟೆಗಳನ್ನು ಬಾರಿಸುವುದು, ಪ್ರಾರ್ಥನೆಯ ಪಠಣ, ನೈವೇದ್ಯಗಳು ಅಥವಾ ಪ್ರಸಾದ, ದೀಪ ಆಧ್ಯಾತ್ಮಿಕ ಭಾವನೆ ಹೆಚ್ಚಿಸುತ್ತದೆ. ಜೊತೆಗೆ ಹೂವುಗಳ ಸುಗಂಧ ಮತ್ತು ಸುಡುವ ಕರ್ಪೂರವು ಸುತ್ತಮುತ್ತಲಿನ ರಾಸಾಯನಿಕ ಶಕ್ತಿಯನ್ನು ಹರಡುತ್ತದೆ. ದೇವಾಲಯದ ಘಂಟೆಗಳು ಗರ್ಭಗುಡಿಯ ಒಂದು ಮೂಲೆಯಲ್ಲಿ ಶಕ್ತಿಯು ನಿಶ್ಚಲವಾಗುವುದನ್ನು ತಡೆಯಲು ಕಂಪನಗಳನ್ನು ಸೃಷ್ಟಿಸುತ್ತವೆ. ಧೂಪದ್ರವ್ಯ ಮತ್ತು ಆರತಿಗಳು ಪರಿಸರದಲ್ಲಿನ ಸ್ಥಿರ ಶಕ್ತಿಯನ್ನು ಸಕ್ರಿಯಗೊಳಿಸುವ ಶಕ್ತಿಯನ್ನು ಹೊಂದಿದೆ.

  ಇದನ್ನು ಓದಿ: ತುಳಸಿ ಗಿಡ ಒಣಗಿದರೆ ಮನೆಗೆ ಅಶುಭ; ತಕ್ಷಣಕ್ಕೆ ಈ ರೀತಿ ಮಾಡಿ

  ದೇವರು ನಮ್ಮ ಹೃದಯದಲ್ಲಿ ಕುಳಿತಿದ್ದಾನೆ, ಆದರೆ ನಮ್ಮ ಅಜ್ಞಾನದ ಕತ್ತಲೆಯಿಂದ ಆತನ ಕಾಣುವುದಿಲ್ಲ. ಕರ್ಪೂರದ ಬೆಳಕನ್ನು ಅರ್ಪಿಸುವ ಮೂಲಕ, ಕರ್ಪೂರವು ನಮ್ಮ ಮನಸ್ಸಿನಲ್ಲಿರುವ ಎಲ್ಲಾ ನಿರಾಶಾವಾದಿ ಪ್ರವೃತ್ತಿಗಳು ಮತ್ತು ಅನಿಸಿಕೆಗಳನ್ನು ಸುಡುವ ಶಕ್ತಿಯನ್ನು ಹೊಂದಿರುವಂತೆ ಭಗವಂತನನ್ನು ನೋಡಬಹುದು. ಕರ್ಪೂರದ ಬೆಳಕಿನಿಂದ, ನಮ್ಮ ಅಹಂಕಾರವು ಸುಟ್ಟುಹೋಗುತ್ತದೆ ಮತ್ತು ಜ್ಞಾನದ ಬೆಂಕಿ ಹೊತ್ತಿಕೊಳ್ಳುತ್ತದೆ ಎಂಬ ನಂಬಿಕೆ ಇದೆ.

  ತೀರ್ಥದ ಮಹತ್ವ
  ದೇವರ ಪ್ರಸಾದ ಎಂದು ಕೊಡುವ ತೀರ್ಥಅಥವಾ ಪವಿತ್ರ ನೀರು ಕೇವಲ ಸಾಮಾನ್ಯ ನೀರಲ್ಲ ಅದರಲ್ಲಿ ಕರ್ಪೂರ, ಲವಂಗ, ಕೇಸರಿ, ಏಲಕ್ಕಿ, ತುಳಸಿ ಸೇರಿದಂತೆ ವಿವಿಧ ಪದಾರ್ಥಗಳ ಸಂಯೋಜನೆ ಮಾಡಲಾಗಿದೆ. ಜೊತೆಗೆ ವಿಗ್ರಹವನ್ನು ತೊಳೆದ ನೀರನ್ನು ನೀಡುವುದರಿಂದ ಈ ನೀರು ಮ್ಯಾಗ್ನೆಟೋ ಥೆರಪಿಯ ಮೂಲವಾಗಿದೆ. ನೈಸರ್ಗಿಕ ರಕ್ತ ಶುದ್ಧೀಕರಣ ಸೇರಿದಂತೆ ಉತ್ತಮ ಔಷಧೀಯ ಮೌಲ್ಯವನ್ನು ಹೊಂದಿದ್ದು, ನೀರಿನಲ್ಲಿ ಕಾಂತೀಯ ವಿಕಿರಣವೂ ಇರುತ್ತದೆ.
  Published by:Seema R
  First published: