Dream: ಸತ್ತಂತೆ ಕನಸು ಬಿದ್ದರೆ ಏನು ಅರ್ಥ ಗೊತ್ತಾ..?

Death Dream: ಕನಸಿನಲ್ಲಿ ನಿಮಗೆ ಅಪಘಾತವಾದಂತೆ ಕಂಡರೆ, ಅದು ಮುಂಬರುವ ಸಮಸ್ಯೆಗಳ ಸಂಕೇತವಾಗಿದೆ. ಇಂಥ ಕನಸು ಕಂಡರೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕನಸುಗಳಿಲ್ಲದ (Dream) ನಿದ್ರೆ (Sleep) ಅಪೂರ್ಣ ಎಂದು ಹೇಳುತ್ತಾರೆ. ರಾತ್ರಿ ಹೊತ್ತು ಕನಸು ಬೀಳುವುದು ಒಂದು ನೈಸರ್ಗಿಕ ಕ್ರಿಯೆ, ಆದರೆ ಜ್ಯೋತಿಷ್ಯವು (Astrology) ಕನಸನ್ನು ಬೇರೆ ರೀತಿಯಲ್ಲೇ ಅರ್ಥೈಸುತ್ತದೆ. ಜ್ಯೋತಿಷ್ಯದ ಪುಸ್ತಕಗಳ ಪ್ರಕಾರ ರಾತ್ರಿ ನಿದ್ರಿಸುವಾಗ ಬೀಳುವ ಕನಸುಗಳು ಭವಿಷ್ಯದ (Future) ಘಟನೆಗಳನ್ನ ಸೂಚಿಸುತ್ತವೆ. ಈ ಮತ್ಸ್ಯ ಪುರಾಣದಲ್ಲಿ ಕನಸುಗಳ ಬಗ್ಗೆ ಕೆಲವೊಂದು ಉಲ್ಲೇಖಗಳಿವೆ. ಕನಸುಗಳನ್ನು ಜೀವನದಲ್ಲಿ(Life) ಅಳವಡಿಸಿಕೊಳ್ಳುವ ಮೂಲಕ ಆ ಕನಸನ್ನು ನಿಜವಾಗಿಸಿಕೊಳ್ಳಬಹುದಂತೆ. ಆದರೆ ಕನಸುಗಳನ್ನು ನನಸಾಗಿಸಿಕೊಳ್ಳಲು ಈ ನಿಯಮಗಳನ್ನು ಪಾಲಿಸಬೇಕು. ಇನ್ನು ಜ್ಯೋತಿಷ್ಯಶಾಸ್ತ್ರದಲ್ಲಿ ಸ್ವಪ್ನಫಲ ಶಾಸ್ತ್ರವೂ (Swapna Shastra) ಒಂದು ಭಾಗವಾಗಿದೆ.

  ಸ್ವಪ್ನಫಲವು ನಮಗೆ ಮುಂದೆ ಸಂಭವಿಸಬಹುದಾದ ಸುಖ ದುಃಖಗಳನ್ನು ಖಂಡಿತ ತಿಳಿಸುತ್ತವೆ ಎಂಬುದು ಅನುಭವಿಗಳ ಅಭಿಪ್ರಾಯ. ಎಚ್ಚರದಲ್ಲಿ ಕಂಡದ್ದನ್ನು, ಕೇಳಿದ್ದನ್ನು, ಅನುಭವಿಸಿದ್ದನ್ನು ಬಯಸಿ ಪಡೆಯದ್ದನ್ನು, ಮನಸ್ಸಿನ ಕಲ್ಪನೆಗಳನ್ನು ಕಾಣುವುದು ಸ್ವಪ್ನವೆನಿಸುವುದು. ಮುಂದಾಗುವುದನ್ನು ಮುಂಚಿತವಾಗಿ ಕನಸಿನಲ್ಲಿ ಕಾಣುವುದು, ಫಲ ಕೊಡುವಂತಹುದು. ಹೀಗಾಗಿ ಕನಸು ನಮ್ಮ ಮುಂದಿನ ಜೀವನದ ಸೂಚನೆಯನ್ನ ಕೊಡುತ್ತದೆ. ಅದ್ರಲ್ಲೂ ಕನಸಿನಲ್ಲಿ ಸಾಯುವಂತೆ ಬಿದ್ದರೆ ಏನಾಗುತ್ತದೆ ಎಂಬುದು ಬಹುತೇಕ ಜನರಿಗೆ ತಿಳಿದಿರುವುದಿಲ್ಲ.. ಹೀಗಾಗಿ ನಿಮ್ಮ ಸ್ವಪ್ನದಲ್ಲಿ ಸಾಯುವಂತೆ ಬಿದ್ದರೆ ಏನು ಅರ್ಥ ಎಂಬ ಮಾಹಿತಿ ಇಲ್ಲಿದೆ.

  ಕನಸಿನಲ್ಲಿ ಸಾಯುವಂತೆ ಬಿದ್ದರೆ ಏನು ಅರ್ಥ..?

  *ಮಲಗಿದ್ದಾಗ ನೀವು ಕನಸಿನಲ್ಲಿ ರಾತ್ರಿ ವೇಳೆ ಆಕಾಶದಲ್ಲಿ ಮಳೆಬಿಲ್ಲನ್ನು ಕಂಡರೆ ಅಥವಾ ಕನಸಿನಲ್ಲಿ ಹಗಲಿನ ವೇಳೆ ನಕ್ಷತ್ರಗಳನ್ನು ಕಂಡರೆ, ಯಾರ ಮುಖ ಇದ್ದಕ್ಕಿದ್ದಂತೆ ಕೆಂಪು ಬಣ್ಣಕ್ಕೆ ತಿರುಗಿದಂತೆ ಮತ್ತು ನಾಲಿಗೆ ಬಿಳಿಯಾದಂತೆ ಕನಸು ಬಿದ್ದರೆ ಆ ವ್ಯಕ್ತಿಯು ಸದ್ಯದಲ್ಲೇ ಸಾವನ್ನಪ್ಪುತ್ತಾನೆ. ಆತನು ಇನ್ನು ಹೆಚ್ಚು ದಿನ ಬದುಕಲಾರನೆಂದು ಅರ್ಥೈಸಿಕೊಳ್ಳಬೇಕು.

  ಇದನ್ನೂ ಓದಿ: ಕನಸಿನಲ್ಲಿ ಹಾಲು ಕಂಡರೆ ಸಂಪತ್ತು ಎಂದಿಗೂ ನಿಮ್ಮ ಬಳಿಯೇ ಇರುತ್ತದಂತೆ, ಇನ್ನು ಯಾವ್ಯಾವ ಕನಸಿಗೆ ಏನು ಅರ್ಥ? ಪೂರ್ತಿ ವಿವರ ಇಲ್ಲಿದೆ

  *ನೀವು ಸತ್ತಂತೆ ಕನಸು ಬಿದ್ದರೆ: ನಿಮಗೆ ತಿಳಿದಿರದ ವ್ಯಕ್ತಿಯು ಒಂದು ಕನಸಿನಲ್ಲಿ ಮರಣಿಸಿದರೆ, ಹೊಸ ಎತ್ತರ ಅಥವಾ ಗುರಿಗಳನ್ನು ತಲುಪಲು ಇದು ಒಳ್ಳೆಯ ಸಮಯ ಎಂದು ಪರಿಗಣಿಸಲಾಗುತ್ತದೆ. ಅಂತಹ ಕನಸುಗಳ ನಂತರ ಜೀವನಕ್ಕೆ ಧೋರಣೆಯನ್ನು ಅಥವಾ ಜೀವನದ ಮಾರ್ಗವನ್ನು ಮರುಪರಿಶೀಲಿಸುವಂತೆ ಸೂಚಿಸಲಾಗುತ್ತದೆ. ಸದ್ಯದಲ್ಲಿಯೇ, ನೀವು ಭೀತಿಗೊಳಗಾದ ಘಟನೆಗಳು ನಾಶವಾಗುತ್ತವೆ, ಮತ್ತು ಹಲವಾರು ಉತ್ತಮ ಆಲೋಚನೆಗಳು ಅವುಗಳನ್ನು ಬದಲಿಸುತ್ತವೆ.

  *ಆತ್ಮಹತ್ಯೆಮಾಡಿಕೊಂಡರೆ: ಕನಸಿನಲ್ಲಿ ನೀವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಅಥವಾ ನೇಣು ಹಾಕಿಕೊಳ್ಳುತ್ತಿರುವಂತೆ ಕಂಡರೆ ಅದು ಕೆಟ್ಟ ಸಂಕೇತವಾಗಿದೆ. ಮನಸ್ಸನ್ನು ಧನಾತ್ಮಕವಾಗಿಸಲು ತಕ್ಷಣ ಕೆಲ ಕ್ರಮ ಕೈಗೊಳ್ಳಬೇಕಾಗುತ್ತದೆ

  *ಪ್ರೀತಿಪಾತ್ರರು ಸತ್ತರೆ: ಪ್ರೀತಿಪಾತ್ರರು ಕನಸಿನಲ್ಲಿ ಮರಣಿಸಿದರೆ, ಹೆಚ್ಚಿನ ಸಂದರ್ಭಗಳಲ್ಲಿ ಇದು ಸಂಬಂಧದ ನವೀಕರಣೆಯಾಗಿ ಕನಸಿನ ಸಂಬಂಧವೆಂದು ತಿಳಿಯುತ್ತದೆ. ಸಂದಿಗ್ಧತೆ ಅಥವಾ ತಪ್ಪುಗ್ರಹಿಕೆಯಿಲ್ಲದಿದ್ದರೆ, ಭವಿಷ್ಯದಲ್ಲಿ ಎಲ್ಲವನ್ನೂ ಹಿಂತಿರುಗಿಸುತ್ತದೆ ಮತ್ತು ವೈಯಕ್ತಿಕ ಸಂಬಂಧಗಳನ್ನು ನಿರ್ಮಿಸಲು ಹೊಸ ಬಾಗಿಲುಗಳು ನಿಮ್ಮ ಮುಂದೆ ತೆರೆಯುತ್ತದೆ.

  *ಅನಾರೋಗ್ಯದಿಂದ ಮೃತಪಟ್ಟರೆ: ವ್ಯಕ್ತಿಯು ಒಂದು ಕನಸಿನಲ್ಲಿ ಮರಣಿಸಿದರೆ, ಗಂಭೀರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದರೆ, ಇದನ್ನು ರೋಗವಾಗಿ ಕನಸಿನ ಚಿಕಿತ್ಸೆ ಎಂದು ಅರ್ಥೈಸಲಾಗುತ್ತದೆ.

  *ಅಪಘಾತದ ಕನಸು ಬಿದ್ದರೆ: ಕನಸಿನಲ್ಲಿ ನಿಮಗೆ ಅಪಘಾತವಾದಂತೆ ಕಂಡರೆ, ಅದು ಮುಂಬರುವ ಸಮಸ್ಯೆಗಳ ಸಂಕೇತವಾಗಿದೆ. ಇಂಥ ಕನಸು ಕಂಡರೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಬೇಕು.

  ಇದನ್ನೂ ಓದಿ: ಕನಸಿನಲ್ಲಿ ಈ ವಸ್ತು ಕಂಡರೆ ಅದೃಷ್ಟವಂತೆ!

  *ನೀವೆ ಸತ್ತಂತೆ ಕನಸು ಬಿದ್ದರೆ: ನಿಮ್ಮ ಮರಣವನ್ನು ಕನಸಿನಲ್ಲಿ ನೋಡುವುದು ಎಂದರೆ ನೀವು ದೀರ್ಘಾಯುಶಿಗಳಾಗುತ್ತೀರಿ ಎಂದು.  ಮತ್ತು ನಿಮ್ಮ ದೀರ್ಘಕಾಲದ ತೊಂದರೆಗಳು ಕೊನೆಗೊಳ್ಳುವ ಲಕ್ಷಣವನ್ನು ಇದು ತೋರಿಸುತ್ತದೆ. ಕನಸಿನಲ್ಲಿ ಸಾವನ್ನು ಕಾಣುವುದು ಎಂದರೆ ಜೀವನದಲ್ಲಿ ಹೊಸ ಅಧ್ಯಾಯದ ಆರಂಭ ಎಂದರ್ಥ.
  Published by:ranjumbkgowda1 ranjumbkgowda1
  First published: