• Home
  • »
  • News
  • »
  • astrology
  • »
  • Sabarimale Temple: ಶಬರಿಮಲೆ ದೇವಸ್ಥಾನದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿನ ರೋಚಕ ಕಥೆ ಹೀಗಿದೆ

Sabarimale Temple: ಶಬರಿಮಲೆ ದೇವಸ್ಥಾನದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿನ ರೋಚಕ ಕಥೆ ಹೀಗಿದೆ

ಶಬರಿಮಲೆ ಅಯ್ಯಪ್ಪ ದೇವಸ್ಥಾನ

ಶಬರಿಮಲೆ ಅಯ್ಯಪ್ಪ ದೇವಸ್ಥಾನ

Ayyappa Swami God: ಶಬರಿ ಮಲೆ ಎಂದು ಹೇಳಿದ ಕೂಡಲೇ ಅಯ್ಯಪ್ಪ ಸ್ವಾಮಿ ನೆನಪಾಗುತ್ತಾರೆ. ಹಲವಾರು ವರ್ಷಗಳ ಐತಿಹ್ಯ ಹೊಂದಿರುವ ಈ ದೇವಸ್ಥಾನದ ಬಗ್ಗೆ ತಿಳಿಯೋಣ.

  • News18 Kannada
  • Last Updated :
  • Kerala, India
  • Share this:

ಕೇರಳ (Kerala) ರಾಜ್ಯದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನವು ವಿಶ್ವ ವಿಖ್ಯಾತ ದೇವಸ್ಥಾನಗಳಲ್ಲಿ ಒಂದಾಗಿದೆ. ಈ ದೇವಸ್ಥಾನದ ಐತಿಹ್ಯಗಳೇ ಸಾಕು ನಮ್ಮನ್ನು ವಿಸ್ಮಯಗೊಳಿಸಲು. ಹಾಗಾದರೆ ಇಲ್ಲಿನ ರಹಸ್ಯ ಕಥೆಗಳೇನು ಎಂಬುದು ತಿಳಿಯೋಣ. ಹದಿನೆಂಟು ಮೆಟ್ಟಿಲುಗಳನ್ನು ಏರಿ ಮಲೆಯಲ್ಲಿ ನೆಲೆಯಾಗಿರುವ ಅಯ್ಯಪ್ಪ ಸ್ವಾಮಿಯನ್ನು (Ayyappa Swami) ಕಂಡೊಡನೆ ಜೀವನವೇ ಸಾರ್ಥಕ ಎಂಬುವಷ್ಟು ನೆಮ್ಮದಿಯಾಗುತ್ತಾರೆ. 'ಸ್ವಾಮಿಯೇ ಶರಣಂ ಅಯ್ಯಪ್ಪ' ಎಂದು ದೀನವಾಗಿ ಹೇಳುವ ಭಕ್ತರ ಕರೆಗೆ ಅಯ್ಯಪ್ಪ ಸ್ವಾಮಿ ಕಿವಿಗೊಡದೇ ಇರಲಾರರು ಎಂಬುವುದು ಭಕ್ತರ ನಂಬಿಕೆಯಾಗಿದೆ. ತಿಂಗಳುಗಳ (Month) ಕಾಲ ವ್ರತಾಧಾರಿಗಳಾಗಿ ಸ್ವಾಮಿಯ ಸೇವೆಯನ್ನು ಮಾಡಿದ್ದಕ್ಕೆ ಸಾರ್ಥಕವಾಯಿತು ಎಂಬ ತೃಪ್ತಿ ಮನದಲ್ಲಿ ಮೂಡುತ್ತದೆ.


ಶಬರಿಮಲೆ ಎಂದೊಡನೆ ಎಲ್ಲರಿಗೂ ಅಯ್ಯಪ್ಪ ಸ್ವಾಮಿಯ ಹೆಸರು ತಟ್ಟನೆ ಮನಸ್ಸಿಗೆ ಬರುವುದು ಖಂಡಿತ.ಪಶ್ಚಿಮ ಘಟ್ಟ ಪರ್ವತ ಶ್ರೇಣಿಗಳಲ್ಲಿ ನೆಲೆಗೊಂಡಿರುವ ಈ ಪವಿತ್ರ ಯಾತ್ರಾ ಸ್ಥಳವು ಕೇರಳ ರಾಜ್ಯದ ಪತನಂತಿಟ್ಟ ಜಿಲ್ಲೆಯ ಪೆರುನಾಡ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿದೆ.


ಧಾರ್ಮಿಕ ದಂತಕಥೆಯ ಪ್ರಕಾರ, ಸಾಗರ ಮಂಥನದ ಸಮಯದಲ್ಲಿ, ಭಗವಾನ್ ವಿಷ್ಣುವಿನ ಮೋಹಿನಿ ರೂಪದಿಂದ ಆಕರ್ಷಿತನಾಗುತ್ತಾರೆ ಮತ್ತು ಈ ಕಾರಣದಿಂದಾಗಿ, ಒಂದು ಮಗು ಜನಿಸಿತು. ಅದನ್ನು ಪಂಪಾ ನದಿಯ ತೀರದಲ್ಲಿ ಬಿಡಲಾಗುತ್ತದೆ . ಈ ಸಮಯದಲ್ಲಿ, ರಾಜ ರಾಜಶೇಖರ ಅವರನ್ನು 12 ವರ್ಷಗಳ ಕಾಲ ಬೆಳೆಸಿದರು. ಈ ಮಗುವನ್ನೇ ನಂತರ ಅಯ್ಯಪ್ಪ ಸ್ವಾಮಿ ಎಂದು ಕರೆಯಲಾಯಿತು.


ಇದನ್ನೂ ಓದಿ: ನಿಮ್ಮ ಕನಸಿನಲ್ಲಿ ಚಂದಮಾಮ ಕಾಣ್ತಾ ಇದ್ದಾನಾ? ಹಾಗಿದ್ರೆ ನೀವೇ ಅದೃಷ್ಟವಂತರು!


ಅಯ್ಯಪ್ಪ ಸ್ವಾಮಿ ಬ್ರಹ್ಮಚಾರಿ ಮತ್ತು ತಪಸ್ವಿಯಾಗಿದ್ದರು. ಅದಕ್ಕಾಗಿಯೇ 10 ರಿಂದ 50 ವರ್ಷ ವಯಸ್ಸಿನ ಹುಡುಗಿಯರು ಮತ್ತು ಮಹಿಳೆಯರು ಈ ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶವಿಲ್ಲ.


ಅಯ್ಯಪ್ಪ ದೇವರು ಬ್ರಹ್ಮಚಾರಿಯಾಗಿರುವ ಕಾರಣದಿಂದ ಮಹಿಳೆಯರಿಗೆ ಮಂದಿರಕ್ಕೆ ಪ್ರವೇಶಿಸಲು ಅವಕಾಶವಿಲ್ಲ. ಅಲ್ಲದೆ ಹಿಂದೂ ಧರ್ಮದ ಪ್ರಕಾರ ಋತುಮತಿಯಾಗುವ ವಯಸ್ಸಿನ ಹೆಣ್ಣು ಮಕ್ಕಳನ್ನು ದೇವಾಲಯದ ಒಳಗೆ ಬರಲು ಅವಕಾಶವಿಲ್ಲ ಎಂಬ ದಂತಕಥೆಯ ಸಲುವಾಗಿ ಈ ವಯಸ್ಸಿನ ಒಳಗಿನ ಹೆಂಗಸರನ್ನು ದೇವಾಲಯದೊಳಗೆ ಬಿಡುವುದಿಲ್ಲ. ಅಲ್ಲದೆ ಅಯ್ಯಪ್ಪ ಸ್ವತಃ ಬ್ರಹ್ಮಚಾರಿಯಾಗಿರುವುದರಿಂದಾಗಿ ಸಹ ಈ ಪದ್ಧತಿಯನ್ನು ಅನುಸರಿಸಲಾಗುತ್ತದೆ ಎಂಬುದು ನಡೆದುಕೊಂಡು ಬಂದಿದೆ.


ಮಕರ ಸಂಕ್ರಾಂತಿಯ ರಾತ್ರಿ ಅಯ್ಯಪ್ಪ ಸ್ವಾಮಿಯ ದೇವಸ್ಥಾನದ ಬಳಿ ಆಕಾಶದಲ್ಲಿ ಒಂದು ಬೆಳಕು ಅದ್ಭುತವಾಗಿ ಗೋಚರಿಸುತ್ತದೆ. ದಟ್ಟ ಕತ್ತಲೆಯಲ್ಲೂ ಬೆಳಕು ಪ್ರಕಾಶಮಾನವಾಗಿ ಬೆಳಗುತ್ತಿರುತ್ತದೆ. ಈ ಬೆಳಕನ್ನು ನೋಡಿದಾಗಲೆಲ್ಲಾ ಅದರ ಜೊತೆಯಲ್ಲಿ ಶಬ್ದವೂ ಕೇಳಿಸುತ್ತದೆ ಎಂದು ಹೇಳಲಾಗುತ್ತದೆ.


ಶಬರಿಮಲೆಯು ಎಲ್ಲಾ ರೀತಿಯ ಜನರನ್ನು ಆಕರ್ಷಿಸುವ ಹಿಂದೂ ದೇವಾಲಯವಾಗಿದೆ. ವಿಶೇಷವಾಗಿ ಎಲ್ಲ ವಯಸ್ಸಿನ ಗಂಡಸರು ಈ ಶಬರಿಮಲೆಗೆ ಭೇಟಿ ನೀಡಬಹುದು. ಕಪ್ಪು ಅಥವಾ ನೀಲಿ ಬಣ್ಣದ ವಸ್ತ್ರಗಳನ್ನು ಧರಿಸಿರುವ ಮಾಲಾಧಾರಿಗಳಾದ ಅಯ್ಯಪ್ಪ ಸ್ವಾಮಿಯ ಭಕ್ತರನ್ನು ನಾವು ಈ ಕಾಲದಲ್ಲಿ ಹೆಚ್ಚಾಗಿ ಕಾಣಬಹುದು.


Why girls are not allowed in Sabarimala, Is Lord Ayyappa married, What is the story of Shabarimale, Ayyappa swami temple Story, kannada News, Karnataka News, ಕನ್ನಡ ನ್ಯೂಸ್, ಕರ್ನಾಟಕ ನ್ಯೂಸ್, ಅಯ್ಯಪ್ಪ ದೇವಸ್ಥಾನದ ಬಗ್ಗೆ ನಿಮಗೆಷ್ಟು ಗೊತ್ತು, ಮಹಿಳೆಯರಿಗೆ ಯಾಕಾಗಿ ಶಬರಿ ಮಲೆಯಲ್ಲಿ ಪ್ರವೇಶವಿಲ್ಲ, ಶಬರಿ ಮಲೆಯ ರೋಚಕ ಕಥೆ ಹೀಗಿದೆ, ಅಯ್ಯಪ್ಪ ಸ್ವಾಮಿಯ ಕಥೆ, ದೇವರು ಕಾಣುತ್ತಾರೆ
ಶಬರಿಮಲೆಯ ಅಯ್ಯಪ್ಪ ದೇವಾಲಯ


ತಮ್ಮ ಹಣೆಗೆ ವಿಭೂತಿ ಅಥವಾ ಚಂದನವನ್ನು ಹಚ್ಚಿಕೊಂಡು, ಮುಖ ಕ್ಷೌರವನ್ನು ಮಾಡಿಸದೆ, ಬೆಳಗ್ಗೆ ಮತ್ತು ಸಂಜೆ ತಣ್ಣೀರಿನಲ್ಲಿ ಸ್ನಾನ ಮಾಡುತ್ತ ಅಯ್ಯಪ್ಪನ ಆರಾಧನೆ ಮಾಡುವ ಭಕ್ತರು ಸಂಕ್ರಾಂತಿ ಸಮಯದಲ್ಲಿ ಎಲ್ಲರೂ ತಂಡ ತಂಡವಾಗಿ ಗುರುಸ್ವಾಮಿ ಎಂದು ಕರೆಯುವ ನಾಯಕನ ನೇತೃತ್ವದಲ್ಲಿ ಶಬರಿಮಲೆಗೆ ಬಂದು ತಲುಪುತ್ತಾರೆ.


"ತಳಮೊನ್ ಮಡೊಮ್" ಎಂಬ ಸಾಂಪ್ರದಾಯಿಕ ಆರ್ಚಕ ಕುಟುಂಬವು ಈ ದೇವಾಲಯದ ಹಾಗು-ಹೋಗುಗಳನ್ನು ನೋಡಿಕೊಳ್ಳುತ್ತದೆ. ಈ ದೇವಾಲಯದಲ್ಲಿ ನಡೆಯುವ ಎಲ್ಲ ಕಾರ್ಯಗಳ ಕುರಿತಾಗಿ ನಿರ್ಧಾರವನ್ನು ಈ ಕುಟುಂಬದವರು ತೆಗೆದುಕೊಳ್ಳುತ್ತಾರೆ. ತಂತ್ರಿ ಎನ್ನುವವರು ಈ ದೇವಾಲಯದ ಪ್ರಧಾನ ಅರ್ಚಕರಾಗಿರುತ್ತಾರೆ. ಅಲ್ಲದೆ ಶಬರಿ ಮಲೆ ಯಾತ್ರ ಸ್ಥಳದ ರೀತಿ ರಿವಾಜುಗಳು ಮತ್ತು ಕಾರ್ಯಗಳನ್ನು ನಡೆಸುವ ಸಮಸ್ತ ಹೊಣೆಯನ್ನು ಈ ಕುಟುಂಬಕ್ಕೆ ನೀಡಿರುವುದು ನಿಜಕ್ಕೂ ಹೆಚ್ಚುಗಾರಿಕೆಯೆ, ಇದು ತಲೆ ತಲಾಂತರದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಈ ಬಾರಿ ಮಂಡಲ ಪೂಜೆ  ನವೆಂಬರ್​ 16 ರಿಂದ ಡಿಸೆಂಬರ್​ 27 ರ ತನಕ ನಡೆಯಲಿದೆ.

First published: