Lunar Eclipse: ನಾಳೆ ಸಂಭವಿಸಲಿದೆ ಅತಿ ದೊಡ್ಡ ಚಂದ್ರಗ್ರಹಣ; ಏನಿದರ ವಿಶೇಷತೆ?

ನವೆಂಬರ್ 19 ರಂದು ಸಂಭವಿಸಲಿರುವ ಮುಂಬರುವ ಭಾಗಶಃ ಚಂದ್ರಗ್ರಹಣವು ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವಾಗಿದೆ.

ಚಂದ್ರಗ್ರಹಣ

ಚಂದ್ರಗ್ರಹಣ

  • Share this:
    ನವೆಂಬರ್ 19 ರಂದು ಸಂಭವಿಸಲಿರುವ ಭಾಗಶಃ ಚಂದ್ರಗ್ರಹಣವು (Lunar Eclipse) 15 ನೇ ಶತಮಾನದಲ್ಲಿ ಸಂಭವಿಸಿದ ನಂತರ ಅತ್ಯಂತ ದೀರ್ಘವಾಗಿರುತ್ತದೆ. ಅಲ್ಲದೇ, ಇದು 580 ವರ್ಷಗಳಲ್ಲಿ ಸಂಭವಿಸುವ ದೀರ್ಘವಾದ ಭಾಗಶಃ ಚಂದ್ರಗ್ರಹಣವಾಗಿದೆ (Partial lunar Eclipse) . ನ. 19ರಂದು ನಡೆಯಲಿರುವ ಈ ಚಂದ್ರಗ್ರಹಣ ಸುಮಾರು ಆರು ಗಂಟೆಗಳ ಕಾಲ ನಡೆಯಲುದೆ. ಆರು ಗಂಟೆಗಳ ಕಾಲ ನಡೆಯುತ್ತದೆ. ಬೆಳಗ್ಗೆ 11.32 ಕ್ಕೆ ಪ್ರಾರಂಭವಾಗಿ ಸಂಜೆ 5.33 ಕ್ಕೆ ಕೊನೆಗೊಳ್ಳುತ್ತದೆ. ಭಾರತದ ಕೆಲವು ಸ್ಥಳಗಳಲ್ಲಿ ಮಧ್ಯಾಹ್ನ 2.34ಕ್ಕೆ ಈ ಗ್ರಹಣ ಗೋಚರಿಸಲಿದೆ. ಭಾರತದಲ್ಲಿಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಹೊರತುಪಡಿಸಿ ದೇಶದ ಬಹುತೇಕ ಭಾಗಗಳಲ್ಲಿ ಭಾಗಶಃ ಚಂದ್ರಗ್ರಹಣ ಗೋಚರಿಸುವುದಿಲ್ಲ. ಯುಎಸ್, ಉತ್ತರ ಯುರೋಪ್, ಪೂರ್ವ ಏಷ್ಯಾ, ಆಸ್ಟ್ರೇಲಿಯಾ ಮತ್ತು ಪೆಸಿಫಿಕ್ ಸಾಗರ ಪ್ರದೇಶದ ಕೆಲವು ಭಾಗಗಳು ಇದು ಗೋಚರವಾಗಲಿದೆ.

    ಈ ವರ್ಷದ ಕೊನೆ ಚಂದ್ರಗ್ರಹಣ
    ಪುರಾಣಗಳ ಪ್ರಕಾರ, ಪಾಪಗ್ರಹ (ರಾಹು ಅಥವಾ ಕೇತು) ಚಂದ್ರನನ್ನು ಬಂಧಿಸಿದಾಗ ಮತ್ತು ಅದರ ಬೆಳಕನ್ನು ನಿರ್ಬಂಧಿಸಿದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಈ ವರ್ಷ ಮೇ 26 ರಂದು ಸೂಪರ್ ಫ್ಲವರ್ ಬ್ಲಡ್ ಮೂನ್  ಮೊದಲ ಚಂದ್ರಗ್ರಹಣವನ್ನು ಕಂಡಿತು. ನವೆಂಬರ್ 19 ರಂದು ಸಂಭವಿಸಲಿರುವ ಮುಂಬರುವ ಭಾಗಶಃ ಚಂದ್ರಗ್ರಹಣವು ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವಾಗಿದೆ.

    ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಚಲಿಸುವಾಗ ಭಾಗಶಃ ಚಂದ್ರಗ್ರಹಣ ಸಂಭವಿಸುತ್ತದೆ. ಈ ಖಗೋಳ ವಿದ್ಯಾಮಾನದಲ್ಲಿ ಮೂರು ಆಕಾಶಕಾಯಗಳು ಸಂಪೂರ್ಣವಾಗಿ ಜೋಡಿಸಲ್ಪಟ್ಟಿಲ್ಲ. ಆದ್ದರಿಂದ ಭೂಮಿಯು ಚಂದ್ರನ ಒಂದು ಭಾಗದ ನೆರಳನ್ನು ಹೊಂದುತ್ತದೆ.

    ಇದೇ ಕಾರಣಕ್ಕೆ ಇದು ದೀರ್ಘ ಚಂದ್ರಗ್ರಹಣ
    ಈ ಚಂದ್ರಗ್ರಹಣವು ತುಂಬಾ ದೀರ್ಘವಾಗಿರಲು ಕಾರಣವೆಂದರೆ ಚಂದ್ರನು ಭೂಮಿಯಿಂದ ಅತ್ಯಂತ ದೂರದಲ್ಲಿರುವ ಅಪೋಜಿಯನ್ನು ತಲುಪಿದ 41 ಗಂಟೆಗಳ ನಂತರ ಬರುತ್ತದೆ. ಚಂದ್ರ ಎಷ್ಟು ದೂರದಲ್ಲಿದ್ದಾನೆಯೋ ಅಷ್ಟು ದೂರ ಪ್ರಯಾಣಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದು ಭೂಮಿಯ ನೆರಳಿನಿಂದ ಹೊರಬರಲು ಹೆಚ್ಚಿನ ಸಮಯವನ್ನು ನೀಡುತ್ತದೆ

    ಇದನ್ನು ಓದಿ: ಮತ್ಸ ಅವತಾರ ತಾಳಿದ ವಿಷ್ಣುವಿನ ಕಥೆ ಇದು

    ನಾಳೆ ಸಂಭವಿಸಲಿರುವ ಚಂದ್ರಗ್ರಹಣವು ದಾಖಲೆಯ ಬರೆಯಲಿದೆ. ಈ ದಾಖಲೆ ಇನ್ನೂ 4,000 ವರ್ಷಗಳವರೆಗೆ ಇರಲಿದೆ. ಈ ರೀತಿಯ ದೊಡ್ಡ ಅಥವಾ ದೀರ್ಘಾವಧಿ ಚಂದ್ರಗ್ರಹಣ ಈ ಮೊದಲು ನವೆಂಬರ್ 9 2003 ರಂದು ಸಂಭವಿಸಿತು. ಇದೇ ರೀತಿಯ ಚಂದ್ರಗ್ರಹಣ ಮುಂದೆ ಅಂದರೆ ಭವಿಷ್ಯದಲ್ಲಿ 9 ಅಕ್ಟೋಬರ್ 2489 ರಂದು ಸಂಭವಿಸಲಿದೆ.

    ಇದನ್ನು ಓದಿ: ತ್ರಿಪುರಾರಿಯಾಗಿ ಶಿವ ತಾರಕಾಸುರನ ಮಕ್ಕಳನ್ನು ವಧೆ ಮಾಡಿದ್ದು ಇದೇ ಕಾರ್ತಿಕ ಪೌರ್ಣಿಮೆಯಂದು

    ಭಾಗಶಃ ಮತ್ತು ಪೂರ್ಣ ಚಂದ್ರಗ್ರಹಣ ಎಂದರೆ

    ಚಂದ್ರ ಮತ್ತು ಸೂರ್ಯ ಭೂಮಿಯ ವಿರುದ್ಧ ದಿಕ್ಕಿನಲ್ಲಿದ್ದಾಗ ಸಂಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ. ಮತ್ತೊಂದೆಡೆ, ಭೂಮಿಯ ನೆರಳಿನ ಭಾಗವು ಚಂದ್ರನನ್ನು ಆವರಿಸಿದಾಗ ಮಾತ್ರ ಭಾಗಶಃ ಚಂದ್ರಗ್ರಹಣ ಸಂಭವಿಸುತ್ತದೆ. ಈ ವಿದ್ಯಮಾನದ ಸಮಯದಲ್ಲಿ, ಚಂದ್ರನು ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಸೂರ್ಯನ ಬೆಳಕಿನ ಕೆಂಪು ಕಿರಣಗಳು ಭೂಮಿಯ ವಾತಾವರಣದ ಮೂಲಕ ಹಾದುಹೋಗುವುದರಿಂದ ಈ ಕೆಂಪು ಬಣ್ಣ ಬರುತ್ತದೆ.

    ಈ ಶತಮಾನವು ಒಟ್ಟು 228 ಚಂದ್ರಗ್ರಹಣಗಳು ನಡೆಯಲಿದೆ. ಅಂದರೆ ವರ್ಷಕ್ಕೆ ಗರಿಷ್ಠ ಮೂರು ಚಂದ್ರಗ್ರಹಣಗಳಿಗೆ ನಾವು ಸಾಕ್ಷಿಯಾಗಲಿದ್ದೇವೆ ಎಂದು ನಾಸಾ ತಿಳಿಸಿದೆ.  ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು. ದೂರದರ್ಶಕ, ಬೈನಾಕ್ಯುಲರ್ ಅಥವಾ ಗ್ಲಾಸ್‌ಗಳ ಮೂಲಕ ಅದನ್ನು ವೀಕ್ಷಿಸಬೇಕು. ಏಕೆಂದರೆ ಇದು ಕಣ್ಣುಗಳಿಗೆ ಹಾನಿಯಾಗುತ್ತದೆ ಎಂದು ಸಲಹೆ ನೀಡಿದೆ ನಾಸಾ.
    Published by:Seema R
    First published: