• Home
  • »
  • News
  • »
  • astrology
  • »
  • Deepavali 2022: ಲಕ್ಷ್ಮಿ ಪೂಜೆಯ ಸಮಯ, ಮುಹೂರ್ತ ಯಾವಾಗ? ದೋಷಗಳನ್ನು ಹೀಗೆ ಪರಿಹಾರ ಮಾಡಿಕೊಳ್ಳಿ

Deepavali 2022: ಲಕ್ಷ್ಮಿ ಪೂಜೆಯ ಸಮಯ, ಮುಹೂರ್ತ ಯಾವಾಗ? ದೋಷಗಳನ್ನು ಹೀಗೆ ಪರಿಹಾರ ಮಾಡಿಕೊಳ್ಳಿ

ದೀಪಾವಳಿ

ದೀಪಾವಳಿ

Pooja Muhurtha: ದೀಪಾವಳಿಯಲ್ಲಿ ಸಡಗರ - ಸಂಭ್ರಮ ಇದ್ದೇ ಇರುತ್ತದೆ. ಈ ಬಾರಿಯ ದೀಪಾವಳಿಯ ಮುಹೂರ್ತ ಯಾವಾಗ? ಯಾವ ವಸ್ತುಗಳನ್ನು ಬಳಸಬೇಕು ಎಂಬುದು ತಿಳಿಯೋಣ.

  • Share this:

"ದೀಪದಿಂದ ದೀಪವ ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಹಂಚಲು" ಈ ಹಾಡಿನ ಸಾಲನ್ನು ಕೇಳ್ತಾನೆ ಮನಸ್ಸಿಗೆ ಏನೋ ಒಂದು ನೆಮ್ಮದಿ ಸಿಗುತ್ತೆ. ಯಾಕೆಂದ್ರೆ ದೀಪಗಳ ಹಬ್ಬವು ಕತ್ತಲಿನಿಂದ ಬೆಳಕಿನೆಡೆಗೆ ನಡೆಸುತ್ತದೆ ಎಂಬ ನಂಬಿಕೆಯಿಂದ (Believe)  ಜನರು ಜೀವನವನ್ನು ನಡೆಸುತ್ತಾರೆ. ಹಾಗೆಯೇ ರಾಶಿಗಳ (zodiac) ಪ್ರಕಾರ ಜನರಿಗೆ ಲಾಭದಾಯಕವಾಗುತ್ತದೆ ಎಂಬುದು ಜ್ಯೋತಿಷ್ಯದ ಪ್ರಕಾರ ತಿಳಿಸಲಾಗಿದೆ. ಈ ಬಾರಿ ಸೂರ್ಯ ಗ್ರಹಣ ಇರುವ ಕಾರಣದಿಂದಾಗಿ ಒಂದಷ್ಟು ಜನರಿಗೆ ದೋಷಗಳು ಇದ್ದರೂ ಇವು ಸುಲಭವಾಗಿ ಪರಿಹಾರವಾಗುತ್ತದೆ. ವಿಶ್ವದಾದ್ಯಂತ ಹಿಂದೂಗಳು ಅತ್ಯಂತ ಸಡಗರ ಸಂಭ್ರಮದಿಂದ ಹಬ್ಬವಾಗಿರುವ ದೀಪಾವಳಿಯಂದು ಲಕ್ಷ್ಮಿ ಪೂಜೆಯನ್ನು ಏಕೆ ಮಾಡಲಾಗುತ್ತದೆ? ಲಕ್ಷ್ಮಿ ಪೂಜೆ 2022 ಯಾವಾಗ? ಲಕ್ಷ್ಮಿ ಪೂಜೆಯನ್ನು (Lakshmi Pooja) ಹೇಗೆ ಆಚರಿಸುವುದು? ಈ ಹಬ್ಬವನ್ನು ಆಚರಿಸುವವರಿಗೆ ಕೆಲ ವಿಚಾರಗಳು ಇಲ್ಲಿವೆ.


ಮುಖ್ಯವಾಗಿ ಇದು ಲಕ್ಷ್ಮಿ ದೇವಿಗೆ ಸಮರ್ಪಿತವಾದ ಆಚರಣೆಯಾಗಿದೆ. ಲಕ್ಷ್ಮಿ ಸಂಪತ್ತು ಮತ್ತು ಸಮೃದ್ಧಿಯಾಗುತ್ತೆ ಎಂಬುವುದು ಈ ಹಬ್ಬದ ವಿಶೇಷತೆಯಾಗಿದೆ. ತನ್ನ ಭಕ್ತರಿಗೆ ಸಮೃದ್ಧಿ ಮತ್ತು ಸಂಪತ್ತನ್ನು ಆಶೀರ್ವದಿಸುತ್ತಾಳೆ. ದೀಪಾವಳಿಯ ದಿನದಂದು ಲಕ್ಷ್ಮಿ ಪೂಜೆಯನ್ನು ಮಾಡುವ ಮೂಲಕ ಭಕ್ತರು ತಮ್ಮ ಕುಟುಂಬದ ಸಂತೋಷ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ.


ಲಕ್ಷ್ಮಿ ಪೂಜೆಯ ಸಮಯ ಯಾವುದು?


ಹಿಂದೂ ಪಂಚಾಂಗ 2022ರ ಪ್ರಕಾರ, ಲಕ್ಷ್ಮಿ ಪೂಜೆಯನ್ನು ದೀಪಾವಳಿ ಹಬ್ಬವನ್ನು ಕಾರ್ತಿಕ ಅಮಾವಾಸ್ಯೆಯಂದು ಮಾಡಲಾಗುತ್ತದೆ. ದೀಪಾವಳಿಯನ್ನು ಅಕ್ಟೋಬರ್ 24ರಿಂದ ಐದು ದಿನಗಳು ಆಚರಿಸಲಾಗುತ್ತದೆ. 1 ಧನ್ತೇರಸ್ ಅಥವಾ ಸಂಪತ್ತಿನ ಪೂಜೆ, 2 ನರಕ ಚತುರ್ದಶಿ , 3 ಲಕ್ಷ್ಮಿ ಪೂಜೆ, 4 ಅನ್ನಕೂಟ ಅಥವಾ ಇದನ್ನು ಬಲಿ ಪಾಡ್ಯಮಿ ಎಂದೂ ಕರೆಯಲಾಗುತ್ತದೆ. ಐದನೇ ಮತ್ತು ಕೊನೆಯ ದಿನ ಭಾಯಿ ದೂಜ್ ಎಂದು ಕರೆಯಲಾಗುತ್ತದೆ. ಈ ದಿನದಂದು ಸಹೋದರಿಯರು ತಮ್ಮ ಸಹೋದರರನ್ನು ಊಟಕ್ಕೆ ಆಹ್ವಾನಿಸುತ್ತಾರೆ ಮತ್ತು ಅದಕ್ಕೂ ಮೊದಲು ದೇವರಿಗೆ ಪೂಜೆ ಸಲ್ಲಿಸಿ ತಿಲಕವಿಡುತ್ತಾರೆ. ಸಹೋದರಿಯರು ತಮ್ಮ ಸಹೋದರನ ದೀರ್ಘ ಮತ್ತು ಸಂತೋಷದ ಜೀವನಕ್ಕಾಗಿ ಪ್ರಾರ್ಥಿಸುತ್ತಾರೆ, ಸಹೋದರರು ತಮ್ಮ ಸಹೋದರಿಯರಿಗೆ ಉಡುಗೊರೆಗಳನ್ನು ನೀಡುತ್ತಾರೆ.


ಇದನ್ನೂ ಓದಿ: ಐದು ದಿನಗಳ ದೀಪಾವಳಿ ಹಬ್ಬದ ಆಚರಣೆ, ಮಹತ್ವ


ಅಕ್ಟೋಬರ್‌ 24ರ ಚತುರ್ದಶೀಯಂದು ಲಕ್ಷ್ಮಿ ಪೂಜೆ ಮುಹೂರ್ತ - ಸಂಜೆ 07:26ರಿಂದ 08:39ರವರೆಗೆ ಪ್ರದೋಷ ಕಾಲ - ಸಂಜೆ 6:53 ರಿಂದ 8:16 ರವರೆಗೆ ವೃಷಭ ಕಾಲ - ಸಂಜೆ 07:26ರಿಂದ 09:26ರವರೆಗೆ ಅಮಾವಾಸ್ಯೆ ತಿಥಿ ಪ್ರಾರಂಭ - ಅಕ್ಟೋಬರ್ 24, 2022ರಂದು ಸಂಜೆ 05:27 ಅಮಾವಾಸ್ಯೆಯ ತಿಥಿ ಅಂತ್ಯ - ಅಕ್ಟೋಬರ್ 25, 2022ರಂದು ಸಂಜೆ 04:18ಕ್ಕೆ ದೃಕ್‌ ಪಂಚಾಂಗ ಪ್ರಕಾರ, ನಿಶ್ಚಿತ ಕಾಲ ಮುಹೂರ್ತ ಅಕ್ಟೋಬರ್‌ 24ರ ರಾತ್ರಿ 11.40ರಿಂದ ಅಕ್ಟೋಬರ್‌ 25ರ ತಡರಾತ್ರಿ 12.31 ಆಗಿರುತ್ತದೆ.


ಲಕ್ಷ್ಮಿ ಪೂಜೆಯು ಈ ವರ್ಷ ಅಮವಾಸ್ಯೆಯ ದಿನವಾಗಿರುವುದರಿಂದ ನಿಮ್ಮ ಪೂರ್ವಜರ ಆಶೀರ್ವಾದ ಪಡೆದು ಶ್ರಾದ್ಧವನ್ನು ಮಾಡಬೇಕಾಗುತ್ತದೆ. ಮನೆಯ ಪ್ರತಿಯೊಂದು ಮೂಲೆಯೂ ಸ್ವಚ್ಛಮಾಡಿ, ಮನೆಯ ಮುಂಬಾಗಕ್ಕೆ ಮತ್ತು ತುಳಸಿಯ ಕಟ್ಟೆಯ ಮುಂಬಾಗಕ್ಕೆ ರಂಗೋಲಿಯನ್ನು ಹಾಕಿ. ಅದರ ಮದ್ಯೆ ದೀಪವನ್ನು ಹಚ್ಚಬೇಕು. ಇದರ ನಂತರ, ಭಕ್ತರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸಲು ಪ್ರಾರಂಭಿಸುತ್ತಾರೆ ಮತ್ತು ನಂತರ ತಮ್ಮ ಮನೆಯ ಪ್ರತಿಯೊಂದು ಮೂಲೆಯನ್ನು ಅಲಂಕರಿಸುತ್ತಾರೆ. ಅಶೋಕ ಎಲೆಗಳು, ಚೆಂಡು ಹೂವುಗಳು, ಬಾಳೆ ಎಲೆಗಳು ಮತ್ತು ಮಾವಿನ ಎಲೆಗಳನ್ನು ಬಳಸಿ ಅಲಂಕಾರಗಳನ್ನು ಮಾಡಲಾಗುತ್ತದೆ. ಚೆಂಡು ಹೂಗಳ ನೀವೆ ನಿಮ್ಮ ಕೈಯಾರೆ ಹಾರವನ್ನು ತಯಾರಿಸಿ ಕರು, ಹಸುಗಳಿಗೆ ಹಾಕಿ ಜೊತೆಗೆ ದೋಸೆಯನ್ನೂ ಕೂಡ ತಿನ್ನಲು ನೀಡಿ.


ಇದನ್ನೂ ಓದಿ: ದೀಪಗಳ ಹಬ್ಬದ ಜೊತೆಯೇ ಬಂದ ಗ್ರಹಣ! ದೀಪಾವಳಿ ದಿನ ಪೂಜೆ, ವ್ರತಗಳನ್ನ ಮಾಡ್ಬಹುದಾ


ರಂಗೋಲಿ ಹಾಕಬೇಕು, ಅಕ್ಷತ (ಬೇಯಿಸದ ಹಸಿ ಧಾನ್ಯ), ಎಲೆ-ಅಡಿಕೆ, ಧೂಪ್ ಸ್ಟಿಕ್, ಗಣೇಶ ಮತ್ತು ಸರಸ್ವತಿ ದೇವಿಯ ಜೊತೆಗಿನ ಲಕ್ಷ್ಮಿ ದೇವಿಯ ಫೋಟೋ ಅಥವಾ ವಿಗ್ರಹ, ಕೆಂಪು ಬಟ್ಟೆ, ಹೂವಿನ ಹಾರ, , ಕೊತ್ತಂಬರಿ ಬೀಜಗಳು, ಹತ್ತಿ ಬೀಜಗಳು, ಕಮಲದ ಹೂ, ಅರಿಶಿನ, ಕುಂಕುಮ, ಬೆಳ್ಳಿ ನಾಣ್ಯ, ಸಿಹಿತಿಂಡಿಗಳು ಮತ್ತು ಹಣ(ನೋಟು ಅಥವಾ ನಾಣ್ಯ) ಇವುಗಳನ್ನು ಪೂಜಾ ವಿಧಾನಗಳಿಗೆ ಬಳಸಬೇಕು.


ದೀಪಾವಳಿ ದಿನಗಳ ಮುಖ್ಯವಾದ ಸಂಖ್ಯೆ ಯಾವುದು?
ಭಾರತೀಯ ಸಂಪ್ರದಾಯದಲ್ಲಿ, ಸಮ ಸಂಖ್ಯೆಗಳಿಗಿಂತ ಬೆಸ ಸಂಖ್ಯೆಗಳನ್ನು ಹೆಚ್ಚಾಗಿ ಬಳಸುತ್ತಾರೆ. ಯಾಕೆಂದರೆ ದೇವರಿಗೆ ಬೆಸ ಸಂಖ್ಯೆಯೇ ಹೆಚ್ಚು. ದೀಪಾವಳಿಯ ದಿನಗಳಿಗೂ ಇದು ನಿಜ. ದೀಪಾವಳಿ ದಿನಗಳಿಗೆ ವಾಸ್ತು ಸೂಚಿಸಿದ ಆದರ್ಶ ಸಂಖ್ಯೆಗಳು 9, 27, 108 ಅಥವಾ 1,008.

First published: