ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology Tips) ಪ್ರತಿಯೊಂದು ರಾಶಿ ಹಾಗೂ ಗ್ರಹಗಳಿಗೆ ಅದರದ್ದೇ ಆದ ಸ್ಥಾನವಿದೆ ಹಾಗೂ ಮಹತ್ವವಿದೆ. ಈ ರಾಶಿಗಳಿಗೆ ಪ್ರತ್ಯೇಕ ಗುಣಗಳಿದ್ದು ಅವುಗಳ ಗ್ರಹಾಧಿಪತಿಗಳು ರಾಶಿಗಳ ಮೇಲೆ ನಿಯಂತ್ರಣ ಸ್ಥಾಪಿಸುತ್ತಾರೆ. ಒಂದೊಂದು ರಾಶಿಯವರದು ಪ್ರತ್ಯೇಕ ಸ್ವಭಾವವಾಗಿರುತ್ತದೆ. ಈ ಸಮಯದಲ್ಲಿ ಜ್ಯೋತಿಷ್ಯ ಶಾಸ್ತ್ರವು ನಮ್ಮ ಬದುಕಿನ ಸಿದ್ಧಾಂತಗಳನ್ನು ಮೌಲ್ಯೀಕರಿಸುತ್ತದೆ ಹಾಗೂ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾರ್ಗದರ್ಶನ ನೀಡುತ್ತದೆ. ಜ್ಯೋತಿಷ್ಯದ ಕೆಲವೊಂದು ಅಂಶಗಳು ಗ್ರಹಗಳು ಮತ್ತು ನಕ್ಷತ್ರಗಳ (Star) ಸ್ಥಾನಗಳ ಸುತ್ತ ಸುತ್ತುತ್ತದೆ ಹಾಗೂ ನಮ್ಮ ದೈನಂದಿನ ಜೀವನದಲ್ಲಿ ಪರಿಣಾಮ ಬೀರುವಂತಹ ಕೆಲವೊಂದು ಅಂಶಗಳನ್ನು ರೂಪಿಸುತ್ತದೆ. ಪ್ರತಿಯೊಂದು ರಾಶಿಯು ಚಂದ್ರನ ಚಿಹ್ನೆಯನ್ನು ಒಳಗೊಂಡಿರುತ್ತದೆ. ನಿಮ್ಮ ಜನನದ ನಿಖರವಾದ ಸಮಯದಲ್ಲಿ ರಾಶಿಚಕ್ರದಲ್ಲಿ ಚಂದ್ರನ ಸ್ಥಾನ - ನಿಮ್ಮ ಭಾವನಾತ್ಮಕ ಜೀವನ, ಭಾವನೆಗಳು, ಆಸೆಗಳು, ಕೆಲವೊಂದು ಅಂಶಗಳನ್ನು ವಿವರಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.
ನಿಮ್ಮ ಆಂತರಿಕ ಪ್ರಪಂಚದ ಕಾರ್ಯಚಟುವಟಿಕೆಗಳಿಗೆ ಚಂದ್ರನ ಚಿಹ್ನೆ ಸ್ಪಷ್ಟ ಸೂಚಕವಾಗಿದೆ. ಚಂದ್ರನು ರಾತ್ರಿಯನ್ನು ಬೆಳಗಿಸುತ್ತಾನೆ ಮತ್ತು ಕತ್ತಲೆಯಲ್ಲಿ ನಿಮ್ಮನ್ನು ಮಾರ್ಗದರ್ಶಿಸುತ್ತಾನೆ ಎಂಬುದು ಜ್ಯೋತಿಷ್ಯದಲ್ಲಿ ಇರುವ ನಂಬಿಕೆಯಾಗಿದೆ.
ಭಾವನೆಗಳನ್ನು ನಿಯಂತ್ರಿಸಲು ಚಂದ್ರನ ಚಿಹ್ನೆ ಸಹಕಾರಿ
ಚಂದ್ರನ ಚಿಹ್ನೆಯನ್ನು ನಮ್ಮ ರಾಶಿಗಳಿಗೆ ಅನುಗುಣವಾಗಿರುವ ಅದೃಷ್ಟ ಹರಳುಗಳೊಂದಿಗೆ ಸಂಯೋಜಿಸುವುದು ನಮ್ಮ ವ್ಯಕ್ತಿತ್ವ ಹಾಗೂ ಭಾವನೆಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಚಂದ್ರನ ಚಿಹ್ನೆಯು ಜನಿಸಿದ ಸಮಯದಲ್ಲಿ ಚಂದ್ರನ ಸ್ಥಾನವನ್ನು ಪ್ರತಿನಿಧಿಸುತ್ತದೆ. ಚಂದ್ರನ ಚಿಹ್ನೆಯ ಹೊಂದಾಣಿಕೆಯು ನಿರ್ಣಾಯಕವಾಗಿದೆ ಏಕೆಂದರೆ ಅದು ನಮ್ಮ ಸಂಬಂಧಗಳು ಮತ್ತು ಅನುಬಂಧಗಳ ಮೇಲೆ ಪರಿಣಾಮ ಬೀರುತ್ತದೆ.
ನಮ್ಮ ವ್ಯಕ್ತಿತ್ವದ ಮಹತ್ವದ ಅಂಶಗಳನ್ನು ಪ್ರತಿಬಿಂಬಿಸುವಲ್ಲಿ ಚಂದ್ರನ ಪಾತ್ರ ಹಿರಿದಾದುದು. ಚಂದ್ರನ ಚಿಹ್ನೆಯ ಪ್ರಕಾರ ರಾಶಿಗೆ ಅನುಗುಣವಾಗಿ ಅದೃಷ್ಟ ಹರಳುಗಳ ಶಕ್ತಿಯನ್ನು ಹೇಗೆ ಬಳಸಿಕೊಳ್ಳಬೇಕೆಂದನ್ನು ತಿಳಿದುಕೊಳ್ಳೋಣ
ನಿಮ್ಮ ಚಂದ್ರನ ಚಿಹ್ನೆಯ ಪ್ರಕಾರ ಅದೃಷ್ಟ ಹರಳುಗಳು ಮತ್ತು ಅವುಗಳ ಪ್ರಯೋಜನಗಳು
ಮೇಷ ರಾಶಿ
ಗ್ರಹಾಧಿಪತಿ: ಮಂಗಳ
ಅದೃಷ್ಟದ ರತ್ನ: ಕೆಂಪು ಹವಳ
ಮೇಷ ರಾಶಿಯವರು ಉತ್ಸಾಹಣದ ಗಣಿಗಳು ಎಂದೇ ಕರೆಯಿಸಿಕೊಳ್ಳುವವರು. ಎಷ್ಟು ಉತ್ಸಾಹದಿಂದಿರುತ್ತಾರೋ ಅಷ್ಟೇ ವೇಗವಾಗಿ ಮಂಕಾಗುತ್ತಾರೆ. ಎಷ್ಟೇ ಆತ್ಮವಿಶ್ವಾಸ ಹಾಗೂ ಧೈರ್ಯ ಅವರಲ್ಲಿದ್ದರೂ ಒಮ್ಮೊಮ್ಮೆ ಅದು ಸಹಾಯಕ್ಕೆ ಬರುವುದಿಲ್ಲ.
ಇದನ್ನೂ ಓದಿ: ಶಿವಲಿಂಗವನ್ನು ಈ ರೀತಿ ಪೂಜೆ ಮಾಡಿ, ಬೇಡಿದ್ದೆಲ್ಲಾ ಕರುಣಿಸುತ್ತಾನೆ ಮಹಾದೇವ
ಕೆಂಪು ಹವಳವು ಅವರಿಗೆ ಶಕ್ತಿ ತುಂಬಲು ಸಹಕಾರಿಯಾಗಿದೆ. ಅವರಲ್ಲಿ ನಾಯಕತ್ವದ ಗುಣಗಳನ್ನು ಹೆಚ್ಚಿಸುತ್ತದೆ.
ವೃಷಭ ರಾಶಿ
ಗ್ರಹಾಧಿಪತಿ: ಶುಕ್ರ
ಅದೃಷ್ಟದ ರತ್ನ: ವಜ್ರ
ಈ ರಾಶಿಯವರು ಬುದ್ಧಿವಂತರು ಹಾಗೂ ಕುಶಾಗ್ರಮತಿಗಳಾಗಿದ್ದರೂ ಹಠ ಹಾಗೂ ಮೊಂಡು ಪ್ರವೃತ್ತಿ ಇವರದ್ದಾಗಿದೆ. ಇವರಿಗೆ ಶೀಘ್ರ ಕೋಪ ಬರುತ್ತದೆ ಇದರಿಂದ ಅನಾಹುತಗಳೇ ಹೆಚ್ಚು ಸಂಭವಿಸುತ್ತದೆ.
ವೃಷಭ ರಾಶಿಯವರಿಗೆ, ವಜ್ರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಏಕೆಂದರೆ ಅದು ಧರಿಸಿದವರ ವ್ಯಕ್ತಿತ್ವ ಮತ್ತು ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಪ್ರೀತಿ, ಸಂಪತ್ತು ಮತ್ತು ಖ್ಯಾತಿಯನ್ನು ತರುತ್ತದೆ.
ಮಿಥುನ ರಾಶಿ
ಗ್ರಹಾಧಿಪತಿ: ಬುಧ
ಅದೃಷ್ಟದ ರತ್ನ: ಹಸಿರು ಪಚ್ಚೆ
ಮಿಥುನ ರಾಶಿಯವರು ಪ್ರವಾಸ ಪ್ರಿಯರು. ಬುದ್ಧಿವಂತಿಕೆಯಿಂದ ಇತರರಿಗೆ ಮೋಡಿ ಮಾಡುವ ಗುಣವುಳ್ಳವರು. ಆದರೂ ಒಮ್ಮೊಮ್ಮೆ ಇವರು ನೀರಸ ಕ್ಷಣವನ್ನು ಎದುರಿಸಬಹುದು ಹಾಗೂ ಅವರಲ್ಲಿದ್ದ ಉತ್ಸಾಹ ಬತ್ತಬಹುದು.
ಹಸಿರು ಪಚ್ಚೆ ಹರಳು ಅವರ ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಆಲೋಚನಾ ಸಾಮರ್ಥ್ಯವನ್ನು ಸುಧಾರಿಸುತ್ತದೆ.
ಕರ್ಕಾಟಕ ರಾಶಿ
ಗ್ರಹಾಧಿಪತಿ: ಚಂದ್ರ
ಅದೃಷ್ಟದ ರತ್ನ: ಮುತ್ತು
ಕರ್ಕಾಟಕ ರಾಶಿಯ ಅಧಿಪತಿ ಚಂದ್ರನಾಗಿದ್ದಾನೆ ಇವರು ಭಾವನಾತ್ಮಕ ಸ್ವಭಾವದವರು ಹಾಗೂ ಈ ರಾಶಿಯವರಿಗೆ ಇನ್ನೊಬ್ಬರ ಮೇಲೆ ಕಾಳಜಿ ಹೆಚ್ಚು. ಹಾಗಾಗಿ ಇದು ಎಲ್ಲಾ ರಾಶಿಗಳ ತಾಯಿ ಎಂದೇ ಜನಜನಿತವಾಗಿದೆ.
ಭಾವನಾತ್ಮಕ ಪ್ರಕ್ಷುಬ್ಧತೆಯನ್ನು ಸಮತೋಲನಗೊಳಿಸುವುದು ಮುತ್ತಿನ ಹರಳಾಗಿದೆ. ಭಾವನೆಗಳನ್ನು ಮತ್ತು ಮನಸ್ಥಿತಿಯನ್ನು ನಿಯಂತ್ರಿಸಲು ಮತ್ತು ಶಾಂತಗೊಳಿಸಲು ಸಹಾಯ ಮಾಡುತ್ತದೆ ಹಾಗೂ ಅವರ ವ್ಯಕ್ತಿತ್ವವನ್ನು ಹೆಚ್ಚಿಸುತ್ತದೆ. ಖಿನ್ನತೆ ಮತ್ತು ಮಾನಸಿಕ ಅಸ್ವಸ್ಥತೆಗಳನ್ನು ಗುಣಪಡಿಸುವಲ್ಲಿ ಮತ್ತು ಬುದ್ಧಿವಂತಿಕೆಯ ಅಂಶವನ್ನು ಹೆಚ್ಚಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಸಿಂಹ ರಾಶಿ
ಗ್ರಹಾಧಿಪತಿ: ಸೂರ್ಯ
ಅದೃಷ್ಟ ಹರಳು: ಮಾಣಿಕ್ಯ
ಸಿಂಹ ರಾಶಿಯವರು ಅದೃಷ್ಟದ ಕೇಂದ್ರಬಿಂದುಗಳು. ಇದ್ದುದನ್ನು ಇದ್ದ ಹಾಗೆಯೇ ಹೇಳುವ ಸ್ವಭಾವ ನೇರ ನಡೆ ನುಡಿಯವರು. ಪ್ರೀತಿಪಾತ್ರರಿಗೆ ನಿಷ್ಟಾವಂತರು ಜೊತೆಗೆ ಉದಾರಿಗಳು.
ಈ ರಾಶಿಯವರು ಮಾಣಿಕ್ಯವನ್ನು ಧರಿಸುವುದು ಹೆಚ್ಚು ಗಮನಹರಿಸುವಂತೆ ಹಾಗೂ ಜಾಗೃತಗೊಳ್ಳುವಂತೆ ಮಾಡುತ್ತದೆ. ಹರಳುಗಳನ್ನು ಚಿನ್ನ ಅಥವಾ ತಾಮ್ರದ ತಳದಲ್ಲಿ ಬಳಸುವುದರಿಂದ ಲಾಭದಾಯಕ ಉದ್ಯೋಗಾವಕಾಶಗಳು ಮತ್ತು ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ.
ಕನ್ಯಾ ರಾಶಿ
ಗ್ರಹಾಧಿಪತಿ: ಬುಧ
ಅದೃಷ್ಟ ರತ್ನ: ಹಸಿರು ಪಚ್ಚೆ
ಕನ್ಯಾ ರಾಶಿಯವರು ತಮ್ಮ ವ್ಯವಹಾರಗಳಲ್ಲಿ ಬಹಳ ಪ್ರಾಯೋಗಿಕ ಮತ್ತು ಶ್ರದ್ಧೆಯುಳ್ಳವರು. ಈ ರಾಶಿಯವರು ವಿಮರ್ಶಾತ್ಮಕರಾಗಿದ್ದು ಇತರರ ಮೇಲೆ ಕಠಿಣತೆಯನ್ನು ತೋರ್ಪಡಿಸುವವರು.
ಪಚ್ಚೆ ಹರಳನ್ನು ಈ ರಾಶಿಯವರು ಧರಿಸುವುದರಿಂದ ಅವರ ಬೌದ್ಧಿಕ ಸಾಮರ್ಥ್ಯ ಹೆಚ್ಚುತ್ತದೆ ಅಂತೆಯೇ ಅವರಿಗೆ ವೃತ್ತಿಪರ ಹಾಗೂ ಸೃಜನಶೀಲ ಕ್ಷೇತ್ರಗಳಲ್ಲಿ ನೆರವನ್ನು ನೀಡುತ್ತದೆ ಅಂತೆಯೇ ಈ ರಾಶಿಯವರನ್ನು ಉತ್ತಮ ಸಂಭಾಷಣಾವಾದಿಯನ್ನಾಗಿ ಮಾಡುತ್ತದೆ.
ತುಲಾ ರಾಶಿ
ಗ್ರಹಾಧಿಪತಿ: ಶುಕ್ರ
ಅದೃಷ್ಟದ ರತ್ನ: ವಜ್ರ
ತುಲಾರಾಶಿಯವರು ಸಮತೋಲನ ಹಾಗೂ ಸಾಮರಸ್ಯ ಕಾಪಾಡಿಕೊಳ್ಳುವಲ್ಲಿ ಸಿದ್ಧಹಸ್ತರು ಅಂತೆಯೇ ಸೌಂದರ್ಯ ಪ್ರಿಯರು. ಆದರೂ ಇತರರೊಂದಿಗೆ ಸಾಮರಸ್ಯ ಸಾಧಿಸುವುದು ಅವರಿಗೆ ಕಠಿಣವಾಗಬಹುದು
ಈ ಸಮಯದಲ್ಲಿ ಸೂಚಿಸಿರುವ ಅದೃಷ್ಟ ಹರಳು ವಜ್ರವು ಸಹಾಯಕವಾಗಿ ಬೆಂಬಲವಾಗಿ ನಿಲ್ಲುತ್ತದೆ. ಅವರ ಕೈ ಬಿಡದೇ ಅದೃಷ್ಟವಂತರಾಗಿರಲು ವಜ್ರ ಸಹಾಯ ಮಾಡುತ್ತದೆ.
ವೃಶ್ಚಿಕ ರಾಶಿ
ಗ್ರಹಾಧಿಪತಿ: ಮಂಗಳ
ಅದೃಷ್ಟದ ರತ್ನ: ಕೆಂಪು ಹವಳ
ಈ ರಾಶಿಯವರನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಿದೆ ಏಕೆಂದರೆ ವೈಯಕ್ತಿಕವಾಗಿ ಒಂಟಿಯಾಗಿರಲು ಹೆಚ್ಚು ಬಯಸುತ್ತಾರೆ ಆದರೂ ಒಮ್ಮೆಮ್ಮೆ ಭಾವೋದ್ರಿಕ್ತರಾಗುತ್ತಾರೆ.
ಅವರ ಅದೃಷ್ಟದ ಹರಳು ಕೆಂಪು ಹವಳವು ಅಧಿಕಾರ ಸ್ಥಾಪನೆ ಹಾಗೂ ನಾಯಕತ್ವದ ಗುಣದಲ್ಲಿ ಯಶಸ್ಸು ಸಾಧಿಸಲು ಸಹಕಾರಿಯಾಗಿದೆ. ಪ್ರೀತಿ, ಪ್ರಣಯ ಹಾಗೂ ಅದೃಷ್ಟಕ್ಕೆ ಸೂಕ್ತವಾಗಿದೆ. ತ್ವಚೆ ಸಂಬಂಧಿತ ಸಮಸ್ಯೆಗಳನ್ನು ಈ ಹರಳು ನಿವಾರಿಸುತ್ತದೆ.
ಧನು ರಾಶಿ
ಗ್ರಹಾಧಿಪತಿ: ಗುರು
ಅದೃಷ್ಟ ರತ್ನ: ಹಳದಿ ನೀಲಮಣಿ
ಬುದ್ಧಿವಂತ, ಧಾರ್ಮಿಕ, ಸೌಹಾರ್ದಯುತ, ಮಹತ್ವಾಕಾಂಕ್ಷೆಯ ಮತ್ತು ಮುಕ್ತ ಮನೋಭಾವವು ಧನು ರಾಶಿಯವರನ್ನು ಮೇಲ್ದರ್ಜೆಗೆ ಏರಿಸುತ್ತದೆ. ಅದಾಗ್ಯೂ ಒಮ್ಮೊಮ್ಮೆ ಅತೃಪ್ತತೆ ಅಶಾಂತಿ ಅವರನ್ನು ಕಾಡುತ್ತದೆ.
ಹಳದಿ ನೀಲಮಣಿ ಅವರಿಗೆ ಜೀವನದಲ್ಲಿ ಶಿಸ್ತು ಹಾಗೂ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ ಅಂತೆಯೇ ಅವರನ್ನು ಆಧ್ಯಾತ್ಮಿಕತೆಗೆ ಸೆಳೆಯುತ್ತದೆ. ಈ ಮಣಿ ವೈವಾಹಿಕ ಸಂತೋಷವನ್ನು ತರುತ್ತದೆ ಹಾಗೂ ಮಹತ್ವಾಕಾಂಕ್ಷೆಗಳೊಂದಿಗೆ ವ್ಯವಹರಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಮಕರ ರಾಶಿ
ಗ್ರಹಾಧಿಪತಿ: ಶನಿ
ಅದೃಷ್ಟ ರತ್ನ: ನೀಲ ನೀಲಮಣಿ
ಮಕರ ರಾಶಿಯವರು ಹೆಚ್ಚು ಮಹತ್ವಾಕಾಂಕ್ಷಿಗಳು ಹಾಗೂ ಅವರ ಸಾಮಾಜಿಕ ಸ್ಥಾನಮಾನವನ್ನು ಹೆಚ್ಚಿಸುವ ಭೌತಿಕ ವಿಷಯಗಳ ನಡುವೆ ಹೆಚ್ಚು ಖುಷಿಯಾಗಿರುತ್ತಾರೆ. ಈ ಚಿಹ್ನೆಯು ಹೆಚ್ಚು ಸ್ಥಿರವಾದ ಗುಣವನ್ನು ಹೊಂದಿದೆ ಹಾಗೂ ದೀರ್ಘಾವಧಿಯ ಸಹಭಾಗಿತ್ವವನ್ನು ಬಯಸುತ್ತದೆ. ಹೆಚ್ಚು ಶ್ರಮಜೀವಿಗಳಾಗಿರುವ ಈ ರಾಶಿಯವರು ಹೆಚ್ಚು ಗಮ್ಯಸ್ಥಾನವನ್ನು ತಲುಪುವಲ್ಲಿ ಉತ್ಸಾಹಿಗಳಾಗಿರುತ್ತಾರೆ.
ಅಮೂಲ್ಯವಾದ ರತ್ನವಾಗಿರುವ ನೀಲಿ ನೀಲಮಣಿ ಈ ರಾಶಿಯವರಿಗೆ ಅಮೂಲ್ಯವಾದ ಶಕ್ತಿ ಸಾಮರ್ಥ್ಯವನ್ನು ನೀಡುತ್ತದೆ. ಇದು ವೇಗವಾಗಿ ತನ್ನ ಪರಿಣಾಮವನ್ನು ಬೀರುತ್ತದೆ. ಚಿನ್ನ ಹಾಗೂ ಬೆಳ್ಳಿಯಲ್ಲಿ ಈ ರತ್ನವನ್ನು ಅಳವಡಿಸುವುದು ಶೀಘ್ರ ಯಶಸ್ಸಿಗೆ ಕಾರಣವಾಗಿದೆ.
ಕುಂಭ ರಾಶಿ
ಗ್ರಹಾಧಿಪತಿ: ಶನಿ
ಅದೃಷ್ಟದ ರತ್ನ: ನೀಲಿ ನೀಲಮಣಿ
ಮಕರ ರಾಶಿಯಂತೆ ಈ ಚಿಹ್ನೆಯ ಅಧಿಪತಿ ಶನಿ. ನೀಲಿ ನೀಲಮಣಿ ಈ ರಾಶಿಯ ಅದೃಷ್ಟ ಹರಳಾಗಿದೆ. ಈ ರಾಶಿಯವರು ಮಾನವೀಯ ಗುಣವುಳ್ಳವರು ಹಾಗೂ ಸ್ವಾವಲಂಬಿಗಳು. ನೀಲಿ ನೀಲಮಣಿ ಕಲ್ಲು ಈ ಚಿಹ್ನೆಗೆ ಅತೀಂದ್ರಿಯ ಶಕ್ತಿಯನ್ನು ನೀಡುತ್ತದೆ ಹಾಗೂ ಈ ರಾಶಿಯವರು ಇದನ್ನು ಧರಿಸಿದಾಗ ಅವರಿಗೆ ಧನಾತ್ಮಕ ಶಕ್ತಿ ತುಂಬುತ್ತದೆ. ಭಾವನಾತ್ಮಕ ಶಕ್ತಿಯನ್ನು ಉತ್ತೇಜಿಸುತ್ತದೆ ಮತ್ತು ಯಶಸ್ಸು ಮತ್ತು ಖ್ಯಾತಿಯನ್ನು ತರುತ್ತದೆ.
ಮೀನ ರಾಶಿ
ಗ್ರಹಾಧಿಪತಿ: ಗುರು
ಅದೃಷ್ಟದ ರತ್ನ: ಹಳದಿ ನೀಲಮಣಿ
ಮೀನ ರಾಶಿಯವರ ಅತ್ಯಂತ ಗಮನಾರ್ಹ ಗುಣವೆಂದರೆ ಅವರ ಅರ್ಥಗರ್ಭಿತ ಸ್ವಭಾವ ಮತ್ತು ಅವರಲ್ಲಿ ಆಧ್ಯಾತ್ಮಿಕತೆ ಅಥವಾ ಅತೀಂದ್ರಿಯತೆಯ ಪ್ರಜ್ಞೆಯಾಗಿದೆ. ಪ್ರೀತಿ ಹಾಗೂ ಅನುರಾಗದ ಭಾವನೆಯುಳ್ಳವರು. ಸೃಜನಶೀಲತೆಯುಳ್ಳವರು. ಆದರೂ ಒಮ್ಮೊಮ್ಮೆ ತೀವ್ರ ಆಲೋಚನೆ ಅವರನ್ನು ಕಂಗೆಡಿಸುತ್ತದೆ ಹಾಗೂ ನಕಾರಾತ್ಮಕ ಚಿಂತನೆಯಲ್ಲಿ ತೊಡಗುತ್ತಾರೆ.
ಹಳದಿ ನೀಲಮಣಿಯನ್ನು ಧರಿಸುವುದು ಈ ರಾಶಿಯವರನ್ನು ಧರ್ಮನಿಷ್ಠ, ಬುದ್ಧಿವಂತ ಮತ್ತು ದಾನಶೀಲರನ್ನಾಗಿ ಮಾಡುತ್ತದೆ. ಈ ಹರಳು ಮೀನ ರಾಶಿಯವರಿಗೆ ಸಮೃದ್ಧಿ, ಕ್ಷೇಮ ಮತ್ತು ಅದೃಷ್ಟವನ್ನು ತರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ