ಅಯ್ಯೋ ನನ್ನ ಟೈಮ್ (Time) ಸರಿಯಲ್ಲ, ಶನಿ ಬೆನ್ನು ಬಿದ್ದಿರಬೇಕು ಎಂದು ಹೇಳಿರುವುದನ್ನ ಕೇಳಿರುತ್ತೇವೆ. ಇಲ್ಲ ನೀವು ನಿಮ್ಮ ಸಮಸ್ಯೆ (Problem) ಹೇಳಿಕೊಂಡು ಜ್ಯೋತಿಷ್ಯಿಗಳ ಬಳಿ ಹೋದರೆ, ಜಾತಕ ತೋರಿಸಿದರೆ ಶನಿ (Shani) ಸಮಸ್ಯೆ ಇದೆ ಅಥವಾ ಸಾಡೇಸಾತಿ (Sade Sati) ನಡೆಯುತ್ತಿದೆ ಎಂದು ಹೇಳಿರುವುದನ್ನ ನೀವು ಕೇಳಿರಬಹುದು. ಈ ಸಾಡೇಸಾತಿ ಆರಂಭವಾದರೆ ಬಹಳ ಕಷ್ಟ, ಜೀವನದಲ್ಲಿ (Life) ಸಮಸ್ಯೆಗಳನ್ನು ಅನುಭವಿಸಬೇಕು ಎಂದು ಹೇಳಲಾಗುತ್ತದೆ. ಹಾಗಾದ್ರೆ ಈ ಸಾಡೇಸಾತಿ ಎಂದರೇನು? ಇದರಿಂದ ಏನೆಲ್ಲಾ ಸಮಸ್ಯೆ ಆಗುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಸಾಡೇಸಾತಿ ಎಂದರೇನು?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸಾಡೇಸಾತಿಯು ಎಲ್ಲರ ಜೀವನದಲ್ಲಿ ಬರುವ ಒಂದು ಹಂತವಾಗಿದೆ. ಇದು ಮನುಷ್ಯನ ಜೀವನದಲ್ಲಿ ಕಷ್ಟಗಳು ಎದುರಾಗುವ ಸಮಯ ಎನ್ನಬಹುದು. ಈ ಸಮಯದಲ್ಲಿ ಬಹಳ ಎಚ್ಚರಿಕೆ ಅಗತ್ಯ. ಸಾಡೇಸಾತಿಯ ಸಮಯದಲ್ಲಿ, ನಮ್ಮ ಹಿಂದಿನ ಕರ್ಮದ ಪರಿಣಾಮಗಳು ಹೆಚ್ಚು ಕಾಣಿಸುತ್ತದೆ. ಇದು 7.5 ವರ್ಷಗಳ ಅವಧಿಯಾಗಿದ್ದು, ಶನಿಯು ಚಂದ್ರನ ಮೊದಲು ಮನೆಯನ್ನು ಪ್ರವೇಶಿಸಿದಾಗ ಇದು ಪ್ರಾರಂಭವಾಗುತ್ತದೆ.
ಪ್ರತಿ ರಾಶಿಯಲ್ಲಿ ಶನಿಯು ಸುಮಾರು 2.5 ವರ್ಷಗಳವರೆಗೆ ಉಳಿಯುವ ಕಾರನ, ಶನಿಯು ಜನ್ಮಸ್ಥಳವಾದ ಚಂದ್ರನಿಂದ 12 ನೇ ಮನೆಯನ್ನು ತಲುಪಿದಾಗ ಸಾಡೇಸಾತಿ ಪ್ರಾರಂಭವಾಗುತ್ತದೆ ಮತ್ತು ಅದು ಮೂಲ ಚಂದ್ರನಿಂದ 2 ನೇ ಮನೆಯಿಂದ ಹೋಗುವಾಗ ಮುಕ್ತಾಯಗೊಳ್ಳುತ್ತದೆ. ಈ ಸಮಯದಲ್ಲಿ ಕಷ್ಟಗಳು ಬೆನ್ನು ಬೀಳುವುದರಿಂದ ಜನ ಸಾಡೇಸಾತಿಗೆ ಹೆದರುತ್ತಾರೆ.
ಶನಿಯನ್ನು ಕರ್ಮದ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಈ ಸಾಡೇಸಾತಿ ಸಾಮಾನ್ಯವಾಗಿ ನಕಾರಾತ್ಮಕ ಪರಿಣಾಮಗಳನ್ನು ಹೊಂದಿರುತ್ತದೆ. ಆದರೆ ಅದು 2 ನೇ, 7 ನೇ ಮತ್ತು 10 ನೇ ಮನೆಯಲ್ಲಿದ್ದಾಗ ಒಳ್ಳೆಯ ಪರಿಣಾಮಗಳನ್ನು ನೀಡುತ್ತದೆ. ಇದು ನಿಮ್ಮ ಮನೆ, ಮಕ್ಕಳು, ಸಂಪತ್ತು, ವೈವಾಹಿಕ ಜೀವನ ಮತ್ತು ಇತರ ಅಂಶಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ಅಂಗೈನಲ್ಲಿ ಮಾತ್ರ ಅಲ್ಲ ಈ ರೇಖೆಯಲ್ಲಿ ಕೂಡ ಅಡಗಿದೆ ನಿಮ್ಮ ಆಯಸ್ಸು
ಶನಿಯು 4, 5 ಮತ್ತು 8 ನೇ ಮನೆಗಳಲ್ಲಿ ಇದ್ದರೆ ಜನರು ಖಂಡಿತವಾಗಿಯೂ ತಮ್ಮ ಜೀವನದಲ್ಲಿ ಭಾರೀ ಸಮಸ್ಯೆ ಎದುರಿಸುತ್ತಾರೆ. ಶನಿಯ ಸ್ಥಾನವು ಕೇತು ಮತ್ತು ರಾಹು ಜೊತೆ ಘರ್ಷಣೆಯಾದಾಗ ಸಮಸ್ಯೆಗಳು ಜಾಸ್ತಿ. ಇದರ ಮೂರು ಹಂತಗಳಿದ್ದು, ಅದರ ಬಗ್ಗೆ ಮಾಹಿತಿ ಇಲ್ಲಿದೆ.
ಸಾಡೇಸಾತಿ ಮೊದಲ ಹಂತ:
ಸಾಡೇಸಾತಿಯ ಮೊದಲ ಹಂತದಲ್ಲಿ ಸಮಸ್ಯೆಗಳು ಜಾಸ್ತಿ. ಈ ಸಮಯದಲ್ಲಿ ನೀವು ತಂದೆ ಅಥವಾ ನಿಮ್ಮ ಆತ್ಮೀಯರೊಂದಿಗೆ ಜಗಳವಾಡಬಹುದು, ವಿಚ್ಛೇದನ ಸೇರಿದಂತೆ ಕೆಲವು ಸಂಬಂಧ ಸಮಸ್ಯೆಗಳು ಈ ಸಮಯದಲ್ಲಿ ನಿಮಗೆ ಕಾಡುತ್ತದೆ.
ಸಾಡೇಸಾತಿ ಎರಡನೇ ಹಂತ:
ಶನಿಯು ಹನ್ನೆರಡನೇ ಮನೆಯಿಂದ ಎರಡನೇ ಮನೆಗೆ ಹೋದಾಗ ಈ ಎರಡನೇ ಹಂತ ಆರಂಭವಾಗುತ್ತದೆ. ಶನಿ ದೇವನ ಈ ಬದಲಾವಣೆಯ ಸಮಯದಲ್ಲಿ, ಆರ್ಥಿಕ ಸಮಸ್ಯೆಗಳು ಜಾಸ್ತಿ. ಹಾಗೆಯೇ ಆರೋಗ್ಯ ಸಹ ಕೈ ಕೊಡುತ್ತದೆ. ಅನಗತ್ಯ ಖರ್ಚುಗಳಲ್ಲಿ ಹಠಾತ್ ಹೆಚ್ಚಳ ಸೇರಿದಂತೆ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಹೀಗೆ ಅನೇಕ ತೊಂದರೆಗಳು ಈ ಸಮಯದಲ್ಲಿ ಆಗುತ್ತದೆ
ಇದನ್ನೂ ಓದಿ: ತುಲಾ ರಾಶಿಯವರು ಹೊಸವರ್ಷದಲ್ಲಿ ಲೆಕ್ಕ ಹಾಕಿ ಖರ್ಚು ಮಾಡ್ಬೇಕು
ಸಾಡೇಸಾತಿ ಮೂರನೇ ಹಂತ:
ಶನಿಯು ಮೊದಲ ಮನೆಯಿಂದ ಎರಡನೇ ಮನೆಗೆ ಹೋದಾಗ ಮೂರನೇ ಹಂತ ಆರಂಭವಾಗುತ್ತದೆ. ಈ ಸಮಯದಲ್ಲಿ ಶನಿಯ ಪ್ರಭಾವ ಕಡಿಮೆ ಆಗುತ್ತದೆ. ಆದರೆ ಕೆಲವೊಮ್ಮೆ ಮಾತ್ರ ಈ ಸಮಯದಲ್ಲಿ ಸಹ ಸಮಸ್ಯೆಗಳು ಉಂಟಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ