• Home
  • »
  • News
  • »
  • astrology
  • »
  • Mahashivratri ಮುನ್ನ ಆಚರಿಸಿ ಪ್ರದೋಷ ವ್ರತ; ಈ ವೇಳೆ ಅಪ್ಪಿತಪ್ಪಿ ಶಿವನಿಗೆ ಈ ವಸ್ತು ಅರ್ಪಿಸಬೇಡಿ

Mahashivratri ಮುನ್ನ ಆಚರಿಸಿ ಪ್ರದೋಷ ವ್ರತ; ಈ ವೇಳೆ ಅಪ್ಪಿತಪ್ಪಿ ಶಿವನಿಗೆ ಈ ವಸ್ತು ಅರ್ಪಿಸಬೇಡಿ

ಶಿವನು ಕೈಲಾಸ ಪರ್ವತವನ್ನು ತಲುಪಿದಾಗ, ಶನಿ ದೇವನು ಆಗಲೇ ಅಲ್ಲಿದ್ದನು. ಇದಾದ ಮೇಲೆ ಶಿವನು ಶನಿದೇವನನ್ನು ನೋಡಿ ನಿನ್ನ ವಕ್ರ ದೃಷ್ಟಿ ನನ್ನ ಮೇಲೆ ಪ್ರಭಾವ ಬೀರಿಲ್ಲ ಎಂದು ಹೇಳಿದನು

ಶಿವನು ಕೈಲಾಸ ಪರ್ವತವನ್ನು ತಲುಪಿದಾಗ, ಶನಿ ದೇವನು ಆಗಲೇ ಅಲ್ಲಿದ್ದನು. ಇದಾದ ಮೇಲೆ ಶಿವನು ಶನಿದೇವನನ್ನು ನೋಡಿ ನಿನ್ನ ವಕ್ರ ದೃಷ್ಟಿ ನನ್ನ ಮೇಲೆ ಪ್ರಭಾವ ಬೀರಿಲ್ಲ ಎಂದು ಹೇಳಿದನು

ಪ್ರದೋಷ ಉಪವಾಸ ಮಾಡುವವರು ಶಿವಪೂಜೆ ವೇಳೆ ಅಪ್ಪಿ ತಪ್ಪಿಯೂ ತುಳಸಿ ಎಲೆಗಳನ್ನು ಅರ್ಪಿಸಬಾರದು.

  • Share this:

    ಈ ಬಾರಿ ಮಹಾಶಿವರಾತ್ರಿ (Mahashivratri) ಮಾರ್ಚ್​ 1 ರಂದು ಮಂಗಳವಾರ ಬಂದಿದೆ. ಅದಕ್ಕೂ ಮುನ್ನ ದಿನ ಪ್ರದೋಷ ವ್ರತ (Pradosha Vrat) ಆಚರಣೆ ಮಾಡಲಾಗುವುದು. ಸೋಮವಾರವೇ ಈ ಬಾರಿ ಪ್ರದೋಷ ಬಂದಿದ್ದು, ಶಿವನ (Lord Shiva) ಅನುಗ್ರಹ ಹೆಚ್ಚಾಗಿ ಇರಲಿದೆ. ಈ ಸೋಮ ಪ್ರದೋಷ ಎಂದರೇನು. ಈ ದಿನ ಉಪವಾಸ ಯಾಕೆ ಇರಬೇಕು ಎಂಬ ಮಾಹಿತಿ ಇಲ್ಲಿದೆ.


    ಶಿವನ ಅನುಗ್ರಹ ಪಡೆಯಲು ಮಾಡಿ ಪ್ರದೋಷ ವ್ರತ
    ಶಿವನ ವಿಶೇಷ ಅನುಗ್ರಹ ಪಡೆಯುವ ಉದ್ದೇಶದಿಂದಾಗಿ ಈ ಪ್ರದೋಷ ವ್ರತಾಚರಣೆ ಮಾಡಲಾಗುವುದು. ತ್ರಯೋದಶಿ ಅನ್ನು ಪ್ರದೋಷ ವ್ರತ ಎಂದು ಕರೆಯಲಾಗುತ್ತದೆ. ಈ ದಿನ ಉಪವಾಸ ಇದ್ದು, ಪೂಜೆ ನಡೆಸುವುದರಿಂದ ಶಿವನ ವಿಶೇಷ ಅನುಗ್ರಹ ಸಿಗುತ್ತದೆ.
    ಈ ಬಾರಿ ಪ್ರದೋಷ ವ್ರತ ಫೆಬ್ರವರಿ 28, ಸೋಮವಾರ. ಇದು ಸೋಮ ಪ್ರದೋಷ ಉಪವಾಸ. ಫಾಲ್ಗುಣ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ಪ್ರದೋಷ ಉಪವಾಸ ಇದ್ದು, ಚತುರ್ದಶಿ ದಿನಾಂಕ ಮಹಾಶಿವರಾತ್ರಿ ಇದೆ.


    ಪ್ರತಿ ಮಾಸ ಬರುತ್ತದೆ ಈ ಪ್ರದೋಷ ವ್ರತ


    ಈ ಎರಡೂ ಆಚರಣೆಗಳು ಶಿವನ ಆಶೀರ್ವಾದ ಪಡೆಯಲು ದಿನಗಳಾಗಿದೆ.  ಪ್ರತಿ ಬಾರಿ ಕೃಷ್ಣ ಪಕ್ಷದಲ್ಲಿ ಪ್ರದೋಷ ಉಪವಾಸದ ನಂತರ ಮಾಸಿಕ ಶಿವರಾತ್ರಿ ಬರುತ್ತಿದ್ದು ಈ ಬಾರಿ ಮಹಾಶಿವರಾತ್ರಿ. ಇದರಿಂದಾಗಿ ಇದು ವಿಶೇಷವಾಗಿದೆ. ಪ್ರದೋಷ ವ್ರತದ ದಿನದಂದು ಶಿವಭಕ್ತರು ಶಿವನನ್ನು ನಿಯಮ ಬದ್ದವಾಗಿ ಪೂಜಿಸುತ್ತಾರೆ.


    ಉಪವಾಸ ಮಾಡಿ ಶಿವನ ಆರಾಧಿಸಿ
    ಈ ರೀತಿ ಉಪವಾಸ ಇದ್ದು, ಭಕ್ತಿಯಿಂದ ಶಿವ ಮತ್ತು ಪಾರ್ವತಿ ದೇವಿಯ ಆಚರಣೆ ಮಾಡುವುದರಿಂದ ಕುಟುಂಬದಲ್ಲಿ ಸುಖ ಸಂತೋಷ ನೆಲೆಸುತ್ತದೆ. ಜೊತೆಗೆ ಭಕ್ತರ ಕೂಗನ್ನು ಸದಾ ಆಲಿಸುವ ಈಶ್ವರ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾರೆ ಎಂಬ ನಂಬಿಕೆ ಇದೆ.


    ಇದನ್ನು ಓದಿ : ಮನೆಯಲ್ಲಿ ಪಂಚಮುಖಿ ಹನುಮಂತನ ಫೋಟೋ ಹಾಕುವ ಕಾರಣ ಇದು


    ಇನ್ನು ಈ ಪ್ರದೋಷ ವ್ರತ ಆಚರಣೆ ಹೇಗೆ ಅನುಸರಿಸಬೇಕು. ಇದರ ನಿಯಮ ಹೇಗೆ ಪೂಜೆ ಹೇಗೆ ಎಂಬುದನ್ನು ತಿಳಿಯುವುದು ಅವಶ್ಯವಾಗಿದೆ.
    ಪ್ರದೋಷ ಉಪವಾಸ ಮಾಡುವವರು ಶಿವಪೂಜೆ ವೇಳೆ ಅಪ್ಪಿ ತಪ್ಪಿಯೂ ತುಳಸಿ ಎಲೆಗಳನ್ನು ಅರ್ಪಿಸಬಾರದು.
    ಶಿವಪೂಜೆಯಲ್ಲಿ ಕೇತಕಿ ಹೂವನ್ನು ಎಂದೂ ಕೂಡ ಅರ್ಪಿಸಬಾರದು. ಕೇತಕಿ ಶಿವನ ಪೂಜೆಗೆ ಶಾಪಗ್ರಸ್ತವಾಗಿದೆ
    ಶಿವನಿಗೆ ಸಿಂಧೂರ ಅಥವಾ ಅರಿಶಿನವನ್ನು ಅರ್ಪಿಸಬಾರದು ತೆಂಗಿನ ನೀರು ಕೂಡ ಶಿವನಿಗೆ ಅರ್ಪಿಸುವುದಿಲ್ಲ. ತೆಂಗಿನಕಾಯಿ ಲಕ್ಷ್ಮಿ ದೇವಿಗೆ ಸಂಬಂಧಿಸಿದದು, ಆಕೆ ವಿಷ್ಣುವಿನ ಪತ್ನಿ ಈ ಹಿನ್ನಲೆ ತೆಂಗಿನ ನೀರು ಅರ್ಪಿಸಬಾರದು
    ಜೊತೆಗೆ ಶಂಖದ ನೀರಿನಿಂದ ಶಿವನನ್ನು ಎಂದಿಗೂ ಪ್ರತಿಷ್ಠಾಪಿಸಬಾರದು. ಶಿವ ಶಂಖಚೂಡ ಎಂಬ ರಾಕ್ಷಸನನ್ನು ಕೊಂದಿದ್ದನು, ಅವನ ಅವಶೇಷಗಳಿಂದ ಶಂಖವನ್ನು ತಯಾರಿಸಲಾಗುತ್ತದೆ. ಧಾರ್ಮಿಕ ನಂಬಿಕೆಯೇ ಇದೆ.


    ಇದನ್ನು ಓದಿ: ಈ ಜನ್ಮ ದಿನದಂದು ಹುಟ್ಟಿದವರ ಮೇಲೆ ಇರುತ್ತೆ ಶನಿ ಕೃಪೆ; 30ನೇ ವಯಸ್ಸಿನ ಬಳಿಕ ಇವರ ಜೀವನವೇ ಬದಲು


    ಪ್ರದೋಷದ ಸಮಯದಲ್ಲಿ ಕೈಲಾಸ ಪರ್ವತದಲ್ಲಿರುವ ರಜತ ಭವನದಲ್ಲಿ ಶಿವನು ನೃತ್ಯ ಮಾಡುತ್ತಾನೆ ಎನ್ನುವ ನಂಬಿಕೆಯಿದೆ. ಇದರಿಂದಾಗಿ ಜನರು ಶಿವನನ್ನು ಮೆಚ್ಚಿಸಲು ಈ ದಿನ ಪ್ರದೋಷ ವ್ರತವನ್ನು ಆಚರಿಸುತ್ತಾರೆ. ಈ ವ್ರತವನ್ನು ಆಚರಿಸುವುದರಿಂದ ಆ ವ್ಯಕ್ತಿಯ ತೊಂದರೆಗಳು ಮತ್ತು ದೋಷಗಳು ನಿವಾರಣೆಯಾಗುತ್ತವೆ


    ಪ್ರದೋಷ ಸಮಯವೂ ಸಂಜೆ ಸಮಯವಾಗಿದೆ. ಅಂದರೆ, ಸೂರ್ಯಾಸ್ತದ ಬಳಿಕ ಮತ್ತು ರಾತ್ರಿ ಆಗಮನದ ಮುಂಚಿನ ಕಾಲ. ಸೋಮ ಪ್ರದೋಷದ ಆರಾಧನೆಯ ಮುಹೂರ್ತವು ಸಂಜೆ 06:20 ರಿಂದ 08:49 ರವರೆಗೆ ಇರುತ್ತದೆ. ಇಡೀ ದಿನ ಸರ್ವಾರ್ಥ ಸಿದ್ಧಿ ಯೋಗ ಇರಲಿದ್ದು. ಇದು ಬೆಳಿಗ್ಗೆ 07:02 ರಿಂದ ಪ್ರಾರಂಭವಾಗುತ್ತದೆ.

    Published by:Seema R
    First published: