ಗುರು ಗ್ರಹವನ್ನು ಸಮೃದ್ಧಿ ನೀಡುವ ಗ್ರಹ ಎಂದು ಕರೆಯಲಾಗುತ್ತದೆ. ಈ ಗ್ರಹವು ಸಂಪತ್ತು ಬುದ್ದಿವಂತಿಕೆಯನ್ನು ನೀಡುತ್ತದೆ. ಇದನ್ನು ಬೃಹಸ್ಪತಿ ಎಂದು ಸಹ ಕರೆಯಲಾಗುತ್ತದೆ. ಇದು ಭಕ್ತಿ ಪೂಜೆ ಹಾಗೂ ಸಂಪತ್ತನ್ನ ಸೂಚಿಸುತ್ತದೆ. ಹಾಗೆಯೇ ಚಂದ್ರನು ಸಹ ಸಮೃದ್ಧಿ ಮತ್ತು ಸಂಪತ್ತಿನ ಸಂಕೇತವಾಗಿದ್ದು, ಈ 2 ಒಟ್ಟಿಗೆ ಸೇರಿದಾಗ ಗಜ ಕೇಸರಿ ಯೋಗ ರೂಪುಗೊಳ್ಳುತ್ತದೆ. ಈ ಯೋಗವನ್ನು ಹೊಂದಿರುವ ಜನರಿಗೆ ಜೀವನದಲ್ಲಿ ಸಂಪತ್ತು ಹೆಚ್ಚಾಗುತ್ತದೆ, ಜನರಿಮದ ಪ್ರಶಂಸೆ ಪಡೆಯುತ್ತಾರೆ ಎನ್ನಲಾಗುತ್ತದೆ.
ಈ ಗಜಕೇಸರಿ ಯೋಗವನ್ನು ಆನೆ ಮತ್ತು ಸಿಂಹದ ಸಂಯೋಜನೆ ಎನ್ನಲಾಗುತ್ತದೆ. ಜಾತಕದಲ್ಲಿ ಚಂದ್ರ ಮತ್ತು ಗುರು ಕೇಂದ್ರದಲ್ಲಿ ಎದುರು ಬದುರಾಗಿ ಕುಳಿತಿದ್ದರೆ, ಈ ಗಜಕೇಸರಿ ಯೋಗ ರೂಪುಗೊಳ್ಳುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾರ ಜಾತಕದಲ್ಲಿ ಗಜಕೇಸರಿ ಯೋಗವಿರುತ್ತದೆಯೋ ಆ ವ್ಯಕ್ತಿಯು ಶ್ರೀಮಂತರಾಗುತ್ತಾರೆ ಎಂದು ಹೇಳಲಾಗುತ್ತದೆ. ಗುರು ಸಂಪತ್ತಿನ ಅಂಶವಾಗಿರುವುದರಿಂದ, ಈ ಸಮಯದಲ್ಲಿ ಹಣ ಹಾಗೂ ಯಶಸ್ಸು ವ್ಯಕ್ತಿಯ ಹಿಂಂದಿರುತ್ತದೆ ಎನ್ನಬಹುದು.
ಇದನ್ನೂ ಓದಿ: ಆಫೀಸ್ನಲ್ಲಿ ಇಂದು ಕಿರಿಕಿರಿಯಾಗೋದು ಪಕ್ಕಾ! ಹಾಗಿದ್ರೆ ನಿಮ್ಮ ಜಾತಕದಲ್ಲಿ ಏನಿದೆ ತಿಳಿದುಕೊಳ್ಳಿ
ಈ ಸಮಯದಲ್ಲಿ ವ್ಯಕ್ತಿಯು ತನ್ನ ಪ್ರತಿ ಕನಸನ್ನು ಸಹ ನನಸು ಮಾಡಿಕೊಳ್ಳಲು ಸಹಾಯವಾಗುತ್ತದೆ. ಹಲವಾರು ಯೋಜನೆಗಳು ಪೂರ್ಣವಾಗಿ ಬಹಳ ಸುಖಮಯವಾದ ಜೀವನ ಸಾಗಿಸಬಹುದಾಗಿದೆ. ಇನ್ನು ಈ ಗಜಕೇಸರಿ ಯೋಗವು ನಾಲ್ಕನೇ ಮತ್ತು ಹತ್ತನೇ ಮನೆಯಲ್ಲಿ ರೂಪುಗೊಂಡಾಗ, ಆ ವ್ಯಕ್ತಿಯ ವ್ಯವಹಾರ ಮತ್ತು ವೃತ್ತಿಜೀವನದಲ್ಲಿ ಯಾವುದೇ ಸಮಸ್ಯೆಗಳು ಬರುವುದಿಲ್ಲ.
ಯಾವ ಮನೆಯಲ್ಲಿ ಯೋಗ ರೂಪುಗೊಂಡರೆ ಲಾಭ?
ಕಟಕ ರಾಶಿಯಲ್ಲಿ ಗುರು, ಚಂದ್ರ ಹಾಗೂ ಮಂಗಳ ಇದ್ದಾಗ ಆ ರಾಶಿಯವರು ಶ್ರೀಮಂತರಾಗುತ್ತಾರೆ ಎನ್ನುವ ನಂಬಿಕೆ ಇದೆ. ಧನಸ್ಸು, ಮೀನ ಹಾಗೂ ಕಟಕದಲ್ಲಿ ಈ ಗುರು ಇದ್ದರೆ ಐಷಾರಾಮಿ ಜೀವನ ನಡೆಸುವ ಅದೃಷ್ಟ ಇದೆ ಎನ್ನಬಹುದು. ಗುರುವು ಎಲ್ಲಾ ಗ್ರಹಗಳಿಗೆ ಹಣ ಅಥವಾ ಸಂಪತ್ತಿನ ಕಾರಕ ಗ್ರಹ ಎನ್ನಲಾಗುತ್ತದೆ. ಚಂದ್ರನನ್ನು ನಗದು ಹಣ ಎಂದೂ ಕರೆಯಲಾಗುತ್ತದೆ ಆದ್ದರಿಂದ ಈ ಯೋಗವು ರೂಪುಗೊಂಡಾಗ ಅದು ವ್ಯಕ್ತಿಗೆ ಆನೆಯಷ್ಟು ದೊಡ್ಡದಾಗಿ ಸಂಪತ್ತು ಮತ್ತು ಹಣವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಈ ಯೋಗವು ವ್ಯಕ್ತಿಗೆ ಸಂಪತ್ತನ್ನು ಗಳಿಸಲು ಸಾಕಷ್ಟು ಅವಕಾಶಗಳನ್ನು ನೀಡುತ್ತದೆ.
ಗಜಕೇಸರಿ ಎಂಬ ಪದವು ಎರಡು ಪದಗಳಿಂದ ಕೂಡಿದೆ: ಗಜ+ಕೇಸರಿ. ಜನ್ಮ ಕುಂಡಲಿಯಲ್ಲಿ ಈ ಯೋಗವನ್ನು ಹೊಂದಿರುವ ವ್ಯಕ್ತಿಯು ಬಲಶಾಲಿ ಮತ್ತು ಶತ್ರುಗಳನ್ನು ಸೋಲಿಸುವ ಸಾಮರ್ಥ್ಯವನ್ನು ಹೊಂದಿರುತ್ತಾನೆ ಎನ್ನಲಾಗುತ್ತದೆ. ಅವರು ತನ್ನ ಶತ್ರುಗಳ ಮೇಲೆ ಪ್ರಾಬಲ್ಯ ಸಾಧಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.
ಇದನ್ನೂ ಓದಿ: ಈ ರೀತಿಯ ಜನರಿಗೆ ಸಹಾಯ ಮಾಡಿದ್ರೆ ನಿಮಗೆ ಕಷ್ಟವಂತೆ
ಇನ್ನು ಜಾತಕದ 7ನೇ ಮನೆಯಲ್ಲಿ ಈ ಗಜಕೇಸರಿ ಯೋಗ ರೂಪುಗೊಂಡಿದ್ದರೆ ನಿಮ್ಮ ದಾಂಪತ್ಯ ಜೀವನದಲ್ಲಿ ಯಾವುದೇ ಸಮಸ್ಯೆ ಬರದೇ, ಸುಖವಾಗಿ ಬಾಳಬಹುದು ಎಂದರ್ಥ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ