Feng Shui: ಚೀನಿ ವಾಸ್ತುವಿನ ಮಹತ್ವ ಏನು? ಫೆಂಗ್ ಶೂಯಿ ಬಗ್ಗೆಗಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ!

ಚೀನಾ ಸಂಸ್ಕೃತಿಯಲ್ಲಿ ಫೆಂಗ್ ಶೂಯಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಇದು ಒಬ್ಬರ ಜೀವನಕ್ಕೆ ಸಕಾರಾತ್ಮಕತೆ ಮತ್ತು ಸಂತೋಷವನ್ನು ತರುತ್ತದೆ ಎಂದು ಅಲ್ಲಿ ಈಗಲೂ ನಂಬಲಾಗುತ್ತದೆ. 

ಚೈನೀಸ್ ವಾಸ್ತು ಶಾಸ್ತ್ರ ಫೆಂಗ್ ಶೂಯಿ

ಚೈನೀಸ್ ವಾಸ್ತು ಶಾಸ್ತ್ರ ಫೆಂಗ್ ಶೂಯಿ

  • Share this:
ಭಾರತದಲ್ಲಿ ವಾಸ್ತು ಸಲಹೆಗಳು (Vastu Tips) ಇರುವ ಹಾಗೇ ಚೀನಾ ದೇಶದಲ್ಲೂ ಹಲವು ವಾಸ್ತು ಸಲಹೆಗಳು ಇಂದಿಗೂ ಚಾಲ್ತಿಯಲ್ಲಿವೆ. ಹಾಗಿದ್ದರೆ, ಈ ಫೆಂಗ್‌ ಶೂಯಿ (Feng Shui) ಎಂದರೇನು? ಅದು ಹೇಗೆ ಪ್ರಯೋಜನ ಆಗುತ್ತದೆ?. ಈ ಎಲ್ಲ ಮಾಹಿತಿಗಳನ್ನು ನಾವು ನಿಮಗಾಗಿ ಇಂದು ನೀಡಲಿದ್ದೇವೆ. ಈ ಫೆಂಗ್‌ ಶೂಯಿ ಪದವೇ ವಿಚಿತ್ರ ಎನಿಸಿದರೂ ಅದರಿಂದ ಹಲವು ಪ್ರಯೋಜನಗಳಿವೆ ಎಂದು ಚೀನಾ ವಾಸ್ತು ಪಂಡಿತರು ಹೇಳುತ್ತಾರೆ. ಈ ಫೆಂಗ್‌ ಶೂಯಿ ಬಗ್ಗೆ ನಿಮಗೇನಾದರೂ ತಿಳಿದಿಯೇ? ತಿಳಿದಿದ್ದರೆ ಒಳ್ಳೆಯದು, ತಿಳಿಯದೇ ಇದ್ದರೆ, ಇಲ್ಲಿ ಓದಿ ತಿಳಿದುಕೊಳ್ಳಿ.

ಪ್ರತಿಯೊಬ್ಬರ ಜೀವನಕ್ಕೆ ಫೆಂಗ್ ಶೂಯಿ ಸಕಾರಾತ್ಮಕತೆ, ಅದೃಷ್ಟ, ಸಮೃದ್ಧಿ ಮತ್ತು ಸಂಪತ್ತನ್ನು ತರುತ್ತದೆ. ಪ್ರತಿಯೊಬ್ಬರೂ ತಿಳಿದಿರಬೇಕಾದ ಕೆಲವು ಮೂಲಭೂತ ಫೆಂಗ್ ಶೂಯಿ ತತ್ವಗಳು ಇಲ್ಲಿವೆ ನೋಡಿ.

ಚೀನಾ ಸಂಸ್ಕೃತಿಯಲ್ಲಿ ಫೆಂಗ್ ಶೂಯಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಇದು ಒಬ್ಬರ ಜೀವನಕ್ಕೆ ಸಕಾರಾತ್ಮಕತೆ ಮತ್ತು ಸಂತೋಷವನ್ನು ತರುತ್ತದೆ ಎಂದು ಅಲ್ಲಿ ಈಗಲೂ ನಂಬಲಾಗುತ್ತದೆ.

ಇದು ಸಾವಿರಾರು ವರ್ಷಗಳ ಹಿಂದೆ ಚೀನಾದಲ್ಲಿ ಅಭಿವೃದ್ಧಿ ಹೊಂದಿದ ಪ್ರಾಚೀನ ವಿಜ್ಞಾನವಾಗಿದೆ. ಇದರ ಅಕ್ಷರಶಃ ಅರ್ಥವನ್ನು ಹೇಳಬೆಕೆಂದರೆ, ಇದು ಗಾಳಿ (ಫೆಂಗ್) ಮತ್ತು ನೀರು (ಶುಯಿ) ಎಂಬ ಅರ್ಥವನ್ನು ನೀಡುತ್ತದೆ. ಚೀನಾ ಸಂಸ್ಕೃತಿಯಲ್ಲಿ, ನೀರು ಮತ್ತು ಗಾಳಿ ಎರಡೂ ಜನರ ಜೀವನಕ್ಕೆ ಉತ್ತಮ ಆರೋಗ್ಯವನ್ನು ತರಬಲ್ಲ ಅತ್ಯಂತ ಮುಖ್ಯ ಘಟಕಾಂಶಗಳು ಆಗಿವೆ.

ಹಾಗಿದ್ದರೆ ಫೆಂಗ್ ಶೂಯಿ ಎಂದರೇನು?

ಈಗಾಗಲೇ ಹೇಳಿರುವಂತೆ, ಇದರರ್ಥ ಗಾಳಿ ಮತ್ತು ನೀರು, ಮಾನವ ಉಳಿವಿಗಾಗಿ ಎರಡು ಪ್ರಮುಖ ಅಂಶಗಳು ಆಗಿವೆ, ಇವು ಪ್ರತಿಯೊಬ್ಬರ ಜೀವನಕ್ಕೂ ಅದೃಷ್ಟ, ಸಮೃದ್ಧಿ ಮತ್ತು ಆರೋಗ್ಯವನ್ನು ತರುತ್ತವೆ ಎಂದು ಚೀನಾ ದೇಶದ ಜನರು ನಂಬುತ್ತಾರೆ. ಇದು ಜನರು ಮತ್ತು ಅವರು ಇರುವ ಪರಿಸರದ ಪರಸ್ಪರ ಕ್ರಿಯೆಯಾಗಿದೆ ಮತ್ತು ಸಕಾರಾತ್ಮಕ ಶಕ್ತಿಗಳೊಂದಿಗೆ ಸಂವಹನ ನಡೆಸಲು ಜನರಿಗೆ ಸಹಾಯ ಮಾಡುತ್ತದೆ ಮತ್ತು ಜೀವನದಲ್ಲಿ ಸಕಾರಾತ್ಮಕತೆಯನ್ನು ಸಾಧಿಸುವುದು ಹೇಗೆ ಎಂದು ಚೀನಾ ಜನರಿಗೆ ಕಲಿಸುತ್ತದೆ.

ಇದನ್ನು ಓದಿ: ಜುಲೈ 12ರಿಂದ ಶನಿ ಹಿಮ್ಮುಖ ಚಲನೆ; ಈ ರಾಶಿಯವರ ಮೇಲಿರಲಿದೆ ಸಾಡೇ ಸಾತಿ ಪರಿಣಾಮ

ಫೆಂಗ್ ಶೂಯಿಯ ಮೂಲ ತತ್ವಗಳು ಹೀಗಿವೆ:

ಪಂಚಭೂತಗಳು: ಈ ಪಂಚಭೂತಗಳ ಪ್ರಕಾರ, ನಮ್ಮ ವಿಶ್ವವು 5 ಪ್ರಮುಖ ಅಂಶಗಳಿಂದ ಮಾಡಲ್ಪಟ್ಟಿದೆ - ಮರ, ಭೂಮಿ, ಲೋಹ, ಬೆಂಕಿ ಮತ್ತು ನೀರು. ಈ ಅಂಶಗಳನ್ನು ಮನೆಯಲ್ಲಿ ಸರಿಯಾಗಿ ಇರಿಸಿದರೆ, ಅದು ಮನೆಯ ಪ್ರತಿಯೊಬ್ಬ ಸದಸ್ಯರಿಗೂ ಪ್ರಯೋಜನವನ್ನು ನೀಡುತ್ತದೆ ಮತ್ತು ಅವರ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ.

ಬಗುವಾ ನಕ್ಷೆ : ಈ ಬಗುವಾ ಪದವು ಮ್ಯಾಂಡರಿನ್‌ ಪದದಿಂದ ಬಂದಿದೆ, ಇದರರ್ಥ "ಎಂಟು ಪ್ರದೇಶಗಳು" ಎಂಬುದಾಗಿದೆ. ಇದು ಪ್ರತಿಯೊಂದು ಕ್ಷೇತ್ರಗಳಾದ ವೃತ್ತಿ, ಸಂಪತ್ತು, ಕುಟುಂಬ, ಆರೋಗ್ಯ ಇತ್ಯಾದಿಗಳಂತಹ ನಿರ್ದಿಷ್ಟ ಜೀವನ ಅನುಭವಕ್ಕೆ ಸಂಬಂಧಿಸಿದೆ.

ಪುರುಷ ಮತ್ತು ಸ್ತ್ರೀ ಶಕ್ತಿಗಳು: ಪುರುಷ ಮತ್ತು ಮಹಿಳೆಯ ಶಕ್ತಿಗಳು ಚೀನೀ ಸಂಸ್ಕೃತಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ, ಏಕೆಂದರೆ ಅವರುಗಳನ್ನು ಜೀವನದಲ್ಲಿ ಸಮತೋಲನವನ್ನು ಸೃಷ್ಟಿಸಲು ಅಗತ್ಯವಿರುವ ಪೂರಕ ಶಕ್ತಿಗಳು ಎಂದು ಕರೆಯುತ್ತಾರೆ.

ಇದನ್ನು ಓದಿ: ಮನೆಯಲ್ಲಿ ಪದೇ ಪದೇ ಸಮಸ್ಯೆ ಕಾಡುತ್ತಿದ್ರೆ, ಈ ಪಕ್ಷಿ ಚಿತ್ರ ಇಡಬೇಕಂತೆ!

ಬಣ್ಣಗಳು: ಫೆಂಗ್ ಶೂಯಿ ತತ್ವಗಳ ಪ್ರಕಾರ, ಮನೆಯಲ್ಲಿ ಸಕಾರಾತ್ಮಕತೆಯನ್ನು ನಿರ್ಮಿಸಲು ನಿರ್ದಿಷ್ಟ ದಿಕ್ಕಿನಲ್ಲಿ ಉತ್ತಮ ಸಂಯೋಜನೆಯನ್ನು ಹೊಂದಿರುವ ಬಣ್ಣಗಳನ್ನು ನೀವು ಆರಿಸಬೇಕು. ಉದಾಹರಣೆಗೆ, ನಿಮ್ಮ ಕೋಣೆಯಲ್ಲಿ ಹಸಿರು, ನೀಲಿ ಮತ್ತು ನೇರಳೆ ಬಣ್ಣಗಳನ್ನು ನೀವು ಸೇರಿಸಬಹುದು ಏಕೆಂದರೆ ಅವುಗಳು ಸಮೃದ್ಧಿಯೊಂದಿಗೆ ನೇರ ಸಂಬಂಧ ಹೊಂದಿವೆ.

ಕನ್ನಡಿಗಳು: ಆಧ್ಯಾತ್ಮಿಕವಾಗಿ, ಕನ್ನಡಿಗಳನ್ನು ಬುದ್ಧಿವಂತಿಕೆ, ಸಕಾರಾತ್ಮಕತೆ ಮತ್ತು ಜಾಗೃತಿಗೆ ಹೋಲಿಸುತ್ತಾರೆ. ಕನ್ನಡಿಗಳು ನಮಗೆ ಸತ್ಯವನ್ನೆ ತೋರಿಸುತ್ತವೆ. ಹಾಗೆಯೇ ಮನೆಗೆ ಸಂಪತ್ತು, ಸಂತೋಷ ಮತ್ತು ಯಶಸ್ಸನ್ನು ತರಲು ಕನ್ನಡಿಯನ್ನು ಸರಿಯಾದ ಸ್ಥಳದಲ್ಲಿ ಇರಿಸುವುದು ಮುಖ್ಯ. ಹಾಸಿಗೆಯ ಮೇಲೆ ಕನ್ನಡಿಯನ್ನು ಇಡಬಾರದು ಅಥವಾ ಮೂಗಿನ ಮಟ್ಟಕ್ಕಿಂತ ಮೇಲಕ್ಕೆ ಕನ್ನಡಿ ಹಾಕಬಾರದು ಎಂದು ಹೇಳಲಾಗುತ್ತದೆ. ಏಕೆಂದರೆ ಅದು ನಿಮ್ಮ ಜೀವನದಲ್ಲಿ ನಕಾರಾತ್ಮಕತೆಯನ್ನು ತರುತ್ತದೆ ಎಂದು ನಂಬಲಾಗುತ್ತದೆ.

ಫೆಂಗ್ ಶೂಯಿ ನಿಮ್ಮ ಜೀವನಕ್ಕೆ ಅದೃಷ್ಟ, ಆರೋಗ್ಯ ಮತ್ತು ಸಮೃದ್ಧಿಯನ್ನು ಹೊತ್ತು ತರಬಲ್ಲದು.. ಆದ್ದರಿಂದ, ಈ ಫೆಂಗ್ ಶೂಯಿ ತತ್ವಗಳನ್ನು ಅನುಸರಿಸಿ, ನಕಾರಾತ್ಮಕ ಶಕ್ತಿಗಳಿಂದ ದೂರವಿರಿ ಮತ್ತು ಸಂತಸದ ಜೀವನ ನಿಮ್ಮದಾಗಲಿ.
Published by:Seema R
First published: