Chhath Puja: ಏನಿದು ಛತ್​ ಪೂಜೆ? ಯಮುನಾ ನದಿಯಲ್ಲಿ ಆಚರಿಸುವ ಹಬ್ಬದ ವಿಶೇಷತೆ ಏನು?

ನಾಲ್ಕು ದಿನಗಳ ಕಾಲ ಆಚರಿಸುವ ಈ ಹಬ್ಬಕ್ಕೆ ವಿಶೇಷ ಮಾನ್ಯತೆ ಇದೆ. ಸೂರ್ಯನಿಗೆ ವಿಶೇಷ ಅರ್ಘ್ಯ ಅರ್ಪಿಸುವುದು ಈ ಹಬ್ಬದ ವಿಶೇಷ

ಛತ್​ ಪೂಜೆ

ಛತ್​ ಪೂಜೆ

 • Share this:
  ದೀಪಾವಳಿ ಬಳಿಕ ಉತ್ತರ ಭಾರತದ ಅದರಲ್ಲೂ ಪ್ರಮುಖವಾಗಿ ಬಿಹಾರ, ಜಾರ್ಖಂಡ್​ ಮತ್ತು ಪೂರ್ವ ಉತ್ತರ ಪ್ರದೇಶದಲ್ಲಿ ಛತ್​ ಪೂಜೆಯನ್ನು ಆಚರಿಸಲಾಗುತ್ತದೆ. ನಾಲ್ಕು ದಿನಗಳ ಕಾಲ ಆಚರಿಸುವ ಈ ಹಬ್ಬಕ್ಕೆ ವಿಶೇಷ ಮಾನ್ಯತೆ ಇದೆ. ಸೂರ್ಯನಿಗೆ ವಿಶೇಷ ಅರ್ಘ್ಯ ಅರ್ಪಿಸುವುದು ಈ ಹಬ್ಬದ ವಿಶೇಷ. ಈ ಮಹಿಳೆಯರು ಉಪವಾಸವಿದ್ದು, ಸೂರ್ಯಾಸ್ತ ಮತ್ತು ಸೂರ್ಯ ಉದಯದ ಸಮಯದಲ್ಲಿ ಆರ್ಘ್ಯ ಅರ್ಪಿಸುತ್ತಾರೆ. ಯಮುನಾ ನದಿಯಲ್ಲಿ ಮೊಣಕಾಲಿನವರೆಗೂ ನೀರಿನಲ್ಲಿ ನಿಂತು ಈ ಹಬ್ಬವಬ್ಬಯ ಆಚರಿಸುವ ಮೂಲಕ ಸೂರ್ಯನಿಗೆ ನಮಿಸುತ್ತಾರೆ.

  ಏನಿ ಹಬ್ಬದ ಮಹತ್ವ?
  ಛತ್​​ ಪೂಜೆಯು ಸೂರ್ಯ ದೇವರು ಮತ್ತು ಅವನ ಪತ್ನಿ ಉಷಾಗೆ ಮೀಸಲಾದ ಹಬ್ಬವಾಗಿದೆ, ಇದನ್ನು ಛಾತಿ ಮೈಯಾ ಎಂದೂ ಕರೆಯುತ್ತಾರೆ. ಛತ್ ಪೂಜೆಯ ಸಮಯದಲ್ಲಿ, ಶಕ್ತಿ ಮತ್ತು ಜೀವ ಶಕ್ತಿಯ ಮೂಲವಾಗಿರುವ ಸೂರ್ಯ ಭಗವಂತನಿಗೆ ಧನ್ಯವಾದಗಳನ್ನು ಅರ್ಪಿಸುತ್ತಾರೆ. ಎಲ್ಲಾ ಶಕ್ತಿಯ ಮೂಲವೆಂದು ಪರಿಗಣಿಸಲಾದ ಭಗವಾನ್ ಸೂರ್ಯನಿಗೆ ಸಮರ್ಪಿತವಾದ ಏಕೈಕ ಹಬ್ಬ ಇದಾಗಿದೆ.

  ನಾಲ್ಕು ದಿನಗಳ ಕಾಲ ನಡೆಯುವ ಛತ್​ ಪೂಜೆ
  8 ನವೆಂಬರ್ 2021: ನಹಯ್-ಖಯ್
  9 ನವೆಂಬರ್ 2021: ಖರ್ನಾ
  10 ನವೆಂಬರ್ 2021: ಮುಳುಗುವ ಸೂರ್ಯನಿಗೆ ಅರ್ಘ್ಯ
  11 ನವೆಂಬರ್ 2021: ಉದಯಿಸುವ ಸೂರ್ಯನಿಗೆ ಅರ್ಘ್ಯ

  ಜೀವ ನೀಡುವ ಶಕ್ತಿಗೆ ನಮನ

  ಛತ್ ಎಂದರೆ ಆರು, ಈ ಹಬ್ಬವನ್ನು ಕಾರ್ತಿಕ ಮಾಸದ ಆರನೇ ದಿನದಂದು ಆಚರಿಸಲಾಗುತ್ತದೆ ಎಂದು ಸೂಚಿಸುತ್ತದೆ. ಈ ದಿನ, ಭಕ್ತರು ಬೆಳಕಿನ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಬ್ರಹ್ಮಾಂಡದ ಎಲ್ಲಾ ಜೀವಿಗಳಿಗೆ ಶಕ್ತಿಯನ್ನು ನೀಡುವ ಜೀವ ಶಕ್ತಿ ಸೂರ್ಯ. ಈ ಹಿನ್ನಲೆ ಆತನ ಆರಾಧಿಸಲಾಗುತ್ತದೆ. ನಹಯ್​-ಖಯ್​, ಖರ್ನಾ, ಅಸ್ತಮಿಸುವ ಸೂರ್ಯನಿಗೆ ಅರ್ಘ್ಯ, ಉದಯಿಸುವ ಸೂರ್ಯನಿಗೆ ಆರ್ಘ್ಯ ಹೀಗೆ ದಿನಕ್ಕೆ ಒಂದರಂತೆ ಹಬ್ಬ ಆಚರಿಸಲಾಗುತ್ತದೆ. ಉಪವಾಸವು ಹಬ್ಬದ ಪ್ರಮುಖ ಭಾಗವಾಗಿದೆ

  ಛತ್​ ಪೂಜೆ ಇತಿಹಾಸ
  ಪ್ರಾಚೀನ ವೇದಗಳ ಕಾಲದಿಂದಲೂ ಛತ್ ಪೂಜೆಯನ್ನು ನಡೆಸಲಾಗುತ್ತಿತ್ತು. ಈ ಯುಗದಲ್ಲಿ ಋಷಿಗಳು ಉಪವಾಸವನ್ನು ನಿರ್ವಹಿಸಿದ ನಂತರ ಸೂರ್ಯನ ಕಿರಣಗಳಿಂದ ಶಕ್ತಿ ಮತ್ತು ಜೀವಶಕ್ತಿಯನ್ನು ಪಡೆಯಲು ಸೂರ್ಯನ ಬೆಳಕಿಗೆ ತಮ್ಮನ್ನು ಒಡ್ಡಿಕೊಳ್ಳುವ ಮೂಲಕ ಪ್ರಾರ್ಥನೆಗಳನ್ನು ನಡೆಸುತ್ತಿದ್ದರು.

  ಇದನ್ನು ಓದಿ: Zodiac Sign: ಸಿಕ್ಕಾಪಟ್ಟೆ ಧೈರ್ಯಶಾಲಿಗಳಂತೆ ಈ ರಾಶಿಯವರು; ಹೌದಾ!

  ಮತ್ತೊಂದು ದಂತಕಥೆಯ ಪ್ರಕಾರ, ದ್ರೌಪದಿ ಮತ್ತು ಪಾಂಡವರು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಕಳೆದುಕೊಂಡ ರಾಜ್ಯವನ್ನು ಮರಳಿ ಪಡೆಯಲು ಛತ್ ಅನ್ನು ಆಚರಿಸುತ್ತಿದ್ದರು.

  ಮತ್ತೊಂದು ದಂತಕಥೆಯ ಪ್ರಕಾರ, ಛತ್ ಪೂಜೆಯನ್ನು ಮೊದಲು ಸೂರ್ಯ ಮತ್ತು ಕುಂತಿಯ ಸಂತತಿಯಾದ ಕರ್ಣನು ನಡೆಸಿದರು. ಕರ್ಣನು ಅಂಗದೇಶದ ಅಧಿಪತಿಯಾಗಿದ್ದನು, ಇದು ಇಂದಿನ ಬಿಹಾರದ ಭಾಗಲ್ಪುರವಾಗಿದ್ದು, ಈ ರಾಜ್ಯದ ಜನರು ಇಂದಿಗೂ ಈ ಪೂಜೆ ಅನುಸರಿಸಿಕೊಂಡು ಬರುತ್ತಿದ್ದಾರೆ ಎನ್ನಲಾಗಿದೆ.

  ಇದನ್ನು ಓದಿ: Vastu Tips: ಈ ವಸ್ತುಗಳು ನಿಮ್ಮ ಪರ್ಸ್​ನಲ್ಲಿದ್ದರೆ, ಮೊದಲು ತೆಗಿಯಿರಿ

  ಪ್ರತಿಬಾರಿ ಸುದ್ದಿಯಾಗುವ ಛತ್​ ಪೂಜೆ 

  ಸಂಪ್ರದಾಯಿಕ ಆಚರಣೆಯಾಗಿರುವ ಈ ಛತ್​ ಪೂಜೆ ಪ್ರತಿಬಾರಿ ರಾಜಕೀಯ ಕಾರಣದಿಂದಲೂ ಸುದ್ದಿಯಾಗುತ್ತದೆ. ಇದಕ್ಕೆ ಕಾರಣ ಯುಮನಾ ನದಿ. ಯಮುನಾ ನದಿಯಲ್ಲಿ ನಿಂತು ಮಹಿಳೆಯರು ಸೂರ್ಯನಿಗೆ ದರ್ಪಣ ಬಿಡುತ್ತಾರೆ. ಆದರೆ, ಛತ್​ ಪೂಜಾ ಸಂದರ್ಭದಲ್ಲಿ ಯಮುನಾ ನದಿಯಲ್ಲಿ ಅಮೋನಿಯಾ ಅಂಶ ಹೆಚ್ಚಾಗುವ ಪರಿಣಾಮ ನೀರು ಕಲುಷಿತಗೊಂಡು ನೊರೆಯಾಗುತ್ತದೆ. ಇಂತಹ ನೊರೆಯಲ್ಲಿಯೇ ಲಕ್ಷಾಂತರ ಭಕ್ತರು ನೀರಿನಲ್ಲಿ ಮಿಂದು ಎದ್ದು, ಸೂರ್ಯನಿಗೆ ಅರ್ಘ್ಯ ಬಿಡುತ್ತಾರೆ. ಈ ವಿಚಾರವಾಗಿ ಈ ಬಾರಿ ಕೂಡ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಟೀಕೆಗೆ ಗುರಿಯಾಗಿದ್ದಾರೆ. ಇನ್ನು ಈ ನೊರೆ ತೆಗೆಯಲು ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ ಆದರೂ ನೀರಿನ ಅಮೋನಿಯಾ ಮಟ್ಟ ಹೆಚ್ಚಿದೆ.
  Published by:Seema R
  First published: