• Home
 • »
 • News
 • »
 • astrology
 • »
 • Tirupati Temple: ತಿರುಪತಿ ತಿಮ್ಮಪ್ಪನಿಗೆ ಮುಡಿ ಹರಕೆ ಕೊಡುವುದರ ಹಿಂದಿದೆ ರೋಚಕ ಕಥೆ!

Tirupati Temple: ತಿರುಪತಿ ತಿಮ್ಮಪ್ಪನಿಗೆ ಮುಡಿ ಹರಕೆ ಕೊಡುವುದರ ಹಿಂದಿದೆ ರೋಚಕ ಕಥೆ!

ತಿರುಪತಿ ತಿರುಮಲ

ತಿರುಪತಿ ತಿರುಮಲ

ತಿರುಪತಿ ತಿರುಮಲ ವೆಂಕಟೇಶನಿಗೆ ಭಕ್ತರು ಕೂದಲು ಕೊಡುವುದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಪದ್ಧತಿ ಎಂದಿನಿಂದ ಮತ್ತು ಯಾಕಾಗಿ ಆರಂಭವಾಯ್ತು ಎಂಬುದುರ ಬಗ್ಗೆ ನಿಮಗೆಷ್ಟು ಗೊತ್ತು? ತಿಳಿಯೋಣ ಬನ್ನಿ.

 • News18 Kannada
 • 2-MIN READ
 • Last Updated :
 • Thiruparankundram, India
 • Share this:

ತಿರುಪತಿ ಬಾಲಾಜಿಯನ್ನು ವಿಷ್ಣುವಿನ ರೂಪವೆಂದು ನಂಬುತ್ತಾರೆ ಭಕ್ತರು (Devotees). ಧಾರ್ಮಿಕ ನಂಬಿಕೆಯ ಪ್ರಕಾರ, ಇಲ್ಲಿ ತನ್ನ ಮನಸ್ಸಿನಲ್ಲಿರುವ ಎಲ್ಲಾ ಪಾಪಗಳನ್ನು ಮತ್ತು ಕೆಟ್ಟ ಅಭ್ಯಾಸಗಳನ್ನು ತ್ಯಜಿಸುವ ವ್ಯಕ್ತಿ, ಲಕ್ಷ್ಮಿ ದೇವಿಯು ಅವನ ಎಲ್ಲಾ ದುಃಖಗಳನ್ನು ನಾಶಪಡಿಸುತ್ತಾಳೆ. ಈ ಕಾರಣದಿಂದಾಗಿ, ಜನರು ತಮ್ಮ ಎಲ್ಲಾ ಕೆಟ್ಟ ಅಭ್ಯಾಸಗಳನ್ನು ಮತ್ತು ಪಾಪಗಳನ್ನು ಕೂದಲಿನ ರೂಪದಲ್ಲಿ ಕತ್ತರಿಸುತ್ತಾರೆ ಎಂಬುದು ಐತಿಹ್ಯವಿದೆ. ಇದಕ್ಕಾಗಿಯೇ ಸಾವಿರಾರು ವರ್ಷಗಳಿಂದ ಮುಡಿಕೊಡುವುದು ಎಂಬ ಪದ್ಧತಿಯು ನಡೆದುಕೊಂಡು ಬಂದಿದೆ. ನಮ್ಮ ದೇಶದ ಅತಿ ಶ್ರೀಮಂತ ದೇಗುಲ ಎನಿಸಿರುವ ತಿರುಪತಿ ತಿರುಮಲ ದೇವಸ್ಥಾನಕ್ಕೆ (Thirupathi Thirumala Temple) ಭಾರತದಾದ್ಯಂತ ಭಕ್ತರಿದ್ದಾರೆ. ಆದರೆ, ಇಷ್ಟು ಖ್ಯಾತಿ ಪಡೆದ ದೇವಸ್ಥಾನದ ಹಲವಾರು ಆಸಕ್ತಿಕರ ಸಂಗತಿಗಳು ಬಹುತೇಕರಿಗೆ ತಿಳಿದಿಲ್ಲ.


ಕೇಶದಾನ ಮಾಡುವ ಹಿಂದೆ ಒಂದು ದಂತಕಥೆ ಇದೆ. ಈ ಅಭ್ಯಾಸ ಹೇಗೆ ಪ್ರಾರಂಭವಾಯಿತು? ಒಂದು ದಿನ ನೀಲಾದ್ರಿ ಶಿಖರಕ್ಕೆ ಭೇಟಿ ನೀಡುವಾಗ ಬಾಲಾಜಿ ಅಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆಗ ನೀಲಾದ್ರಿ ದೇವಿಯು ತನ್ನ ಪೂಜೆಗೆಂದು ಅಲ್ಲಿಗೆ ಬಂದಾಗ ಬಾಲಾಜಿಯ ತಲೆಯ ಮೇಲಿದ್ದ ಗಾಯದಿಂದ ಅವನ ಕೂದಲು ಉದುರುವುದನ್ನು ಕಂಡಳು. ಆಗ ನೀಲಾದ್ರಿ ದೇವಿಯು ತನ್ನ ಮುಡಿಯನ್ನು ಗಾಯದ ಗುರುತುಗೆ ಹಾಕಿ ಗಾಯವನ್ನು ಕಾಣದ ರೀತಿಯಲ್ಲಿ ಮುಚ್ಚಿದಳು.

ಆಗ ಬಾಲಾಜಿ ನಿದ್ದೆಯಿಂದ ಎದ್ದಾಗ ನೀಲಾದ್ರಿ ದೇವಿಯ ತಲೆಯ ಮೇಲೆ ಕಿತ್ತುಕೊಂಡ ಕೂದಲು ಕಂಡಿತು. ನೀಲಾದ್ರಿ ದೇವಿಯು ತನ್ನ ಮೇಲೆ ತೋರಿದ ಭಕ್ತಿಯನ್ನು ಕಂಡು ಸಂತುಷ್ಟನಾದ ಬಾಲಾಜಿಯು ಇತರ ಭಕ್ತರ ಮುಡಿಯನ್ನು ನೀಲಾದ್ರಿ ದೇವಿಗೆ ಪುನಃ ಅರ್ಪಿಸುತ್ತಾರೆ ಬಾಲಾಜಿ.  ಅಂತಹ ಭಕ್ತಿಯಿಂದ ತನ್ನ ಮುಡಿಯನ್ನು ಅರ್ಪಿಸುವ ಯಾವುದೇ ಭಕ್ತನು ಶಾಶ್ವತವಾಗಿ ಧನ್ಯನಾಗಿರುತ್ತಾನೆ ಎಂದು ಅವರು ವರವನ್ನು ದೇವಿಯು ನೀಡಿದಳು. ಅಂದಿನಿಂದ ಅನೇಕ ಭಕ್ತರು ಭಕ್ತಿಯಿಂದ ಇಲ್ಲಿ ಮುಡಿಯನ್ನು ಅರ್ಪಿಸುತ್ತಾರೆ. ಈ ಪದ್ಧತಿಯಲ್ಲಿ ಭಕ್ತರು ತಮ್ಮ ಕೂದಲನ್ನು ದೇವರಿಗೆ ಅರ್ಪಿಸುತ್ತಾರೆ. ಅದರರ್ಥ ಒಬ್ಬನ ಅಹಂಕಾರವು ಮುಡಿಯೊಂದಿಗೆ ದೇವರಿಗೆ ಶರಣಾಗಿದೆ ಎಂದು ಅರ್ಥ.

 ಈ ರೀತಿಯಲ್ಲಿ ಇನ್ನೊಂದು ಪುರಾಣವಿದೆ. 


ಬಾಲಾಜಿ ಮದುವೆಗಾಗಿ ಕುಬೇರನಿಂದ ಸಾಲ ಪಡೆದಿದ್ದ. ಆಗ ಅವರು ಕುಬೇರನಿಗೆ ಕಲಿಯುಗದಲ್ಲಿ ನನ್ನ ಭಕ್ತರು ನನಗೆ ಚಿನ್ನ, ಬೆಳ್ಳಿ, ಹಣ, ಕೂದಲು ತಂದು ಕೊಡುತ್ತಾರೆ ಮತ್ತು ನಾನು ನಿನ್ನ ಋಣ ತೀರಿಸುತ್ತೇನೆ ಎಂದು ಹೇಳಿದನು. ಹೀಗೆ ಅಲ್ಲಿನವರು ಕೊಡುವ ಕೇಶರಾಶಿಯಿಂದ ಬಾಲಾಜಿಗೆ ಸಹಾಯವಾಗುತ್ತದೆ ಎಂದು ಅರ್ಥ. ಹಾಗಾಗಿ ತಿರುಪತಿ ದೇವಸ್ಥಾನದಲ್ಲಿ ಕೂದಲು ದಾನ ಮಾಡುವುದು ವಾಡಿಕೆ. ದೇವಸ್ಥಾನದ ಸಮೀಪದಲ್ಲಿರುವ ಕಲ್ಯಾಣ ಕಟ್ಟಾದಲ್ಲಿ ಸಾಮೂಹಿಕವಾಗಿ ಕೂದಲು ದಾನ ಮಾಡಲಾಗುತ್ತದೆ.

ತಿರುಪತಿಯ ಪಾದಕ್ಕೆ ಕೂದಲು ದಾನ ಮಾಡುವುದರಿಂದ ಮನದ ಆಸೆ ಈಡೇರುತ್ತದೆ. ಲಕ್ಷ್ಮಿ ದೇವಿ ಮತ್ತು ಭಗವಾನ್ ವಿಷ್ಣು (ಬಾಲಾಜಿ) ಅಂತಹ ಭಕ್ತರಿಂದ ಯಾವಾಗಲೂ ಸಂತೋಷಪಡುತ್ತಾರೆ ಮತ್ತು ಅವರ ಸಂಪತ್ತು, ಸಮೃದ್ಧಿಯ ಆಶೀರ್ವಾದವನ್ನು ನೀಡುತ್ತಾರೆ. ಇದು ಭಕ್ತರ ನಂಬಿಕೆಯಂತೆ ಇಲ್ಲಿ ಪುರುಷರು ಮತ್ತು ಮಹಿಳೆಯರು ಕೂದಲು ದಾನ ಮಾಡುತ್ತಾರೆ.ತಿಮ್ಮಪ್ಪನ ತಲೆಯಲ್ಲಿರುವುದು ನಿಜವಾದ ಕೂದಲು!

ವೆಂಕಟೇಶ್ವರನ ತಲೆಯಲ್ಲಿರುವ ಕೂದಲು ಪೂರ್ತಿ ರೇಷ್ಮೆಯಂತೆ ಇದೆ.  ವಿಗ್​ ಅಲ್ಲದೇ,  ನಿಜವಾದ ಕೂದಲಾಗಿದೆ. ಈ ರೀತಿ ಲೋಪವಿಲ್ಲದ ಕೂದಲ ಹಿಂದೊಂದು ಕತೆಯಿದೆ.

ಬಾಲಾಜಿಯು ಭೂಮಿಯಲ್ಲಿದ್ದ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಕೂದಲು ಕಳೆದುಕೊಳ್ಳುತ್ತಾನೆ. ಆಗ ಗಂಧರ್ವ ದೇವತೆ ನೀಲಾ ದೇವಿ ಎಂಬಾಕೆ ತನ್ನ ಕೂದಲನ್ನೇ ಕತ್ತರಿಸಿ ಬಾಲಾಜಿಗೆ ನೀಡಿ, ಅದನ್ನು ತಲೆಯಲ್ಲಿ ಸಿಕ್ಕಿಸಿಕೊಳ್ಳುವಂತೆ ಕೋರಿಕೊಳ್ಳುತ್ತಾಳೆ. ಆಕೆಯ ಭಕ್ತಿಗೆ ಮೆಚ್ಚಿದ ಬಾಲಾಜಿ, ಅವಳ ಕೋರಿಕೆಯನ್ನು ಮನ್ನಿಸುತ್ತಾನೆ. ಅಷ್ಟೇ ಅಲ್ಲ, ತನ್ನ ದೇಗುಲಕ್ಕೆ ಬಂದು ಯಾರು ತಮ್ಮ ಕೂದಲನ್ನು ಕೊಡುತ್ತಾರೋ ಅವರನ್ನು ಆಶೀರ್ವದಿಸುವುದಾಗಿ ಮಾತು ಕೊಡುತ್ತಾನೆ. ಅಂದಿನಿಂದ ಇಂದಿನವರೆಗೂ ಜನರು ಕೋರಿಕೆಗಳನ್ನು ಈಡೇರಿಸುವಂತೆ ಹರಕೆ ಕಟ್ಟಿ ತಿರುಪತಿಗೆ ಬಂದು ಕೂದಲು ಕೊಡುವುದು ನಡೆದುಕೊಂಡು ಬಂದಿದೆ.


ಇನ್ನೊಂದು ವಿಶೇಷವೆಂದರೆ, ನೀವಿದನ್ನು ಕೇಳುವವರೆಗೆ ನಂಬುವುದಿಲ್ಲ, ಆದರೆ, ಈ ದೇವಾಲಯದಲ್ಲಿರುವ ತಿಮ್ಮಪ್ಪನ ಚಿತ್ರದ ಹಿಂದೆ ಕಿವಿಗೊಟ್ಟರೆ ಸಮುದ್ರದಲೆಗಳ ಮೊರೆತ ಕೇಳಿಸುತ್ತದೆ. ಇಷ್ಟೆಲ್ಲಾ ಐತಿಹ್ಯಗಳನ್ನು  ಹೊಂದಿದೆ ತಿರುಪತಿ ದೇವಸ್ಥಾನ.

First published: