ಕನಸು ಒಂದು ಸುಂದರ ಅನುಭವ, ಲಾಜಿಕ್ ಇಲ್ಲದೇ ಬೀಳುವ ಕನಸುಗಳೆಂದರೆ ಎಲ್ಲರಿಗೂ ಪ್ರೀತಿ. ಆದರೆ ಕೆಲವೊಂದು ಕನಸುಗಳು ನಮ್ಮನ್ನು ಗೊಂದಲಕ್ಕೀಡು ಮಾಡುತ್ತವೆ. ಭಯ ಪಡುವಂತೆ ಇರುತ್ತವೆ. ನಮ್ಮ ಇಷ್ಟಗಳನ್ನು ಪೂರೈಸುವ ಕನಸು ಬಿದ್ದರೆ ಖುಷಿ, ದೆವ್ವದ ಕನಸಿಗೆ ಬೆಚ್ಚಿ ಬೀಳುವ ಅನುಭವ ಆಗುತ್ತದೆ. ಇನ್ನೂ ಕೆಲ ಕನಸಿಗೆ ಇದರ ಹಿಂದಿನ ಅರ್ಥವೇನು ಅಂತಾ ಯೋಚನೆ ಮಾಡಲು ಶುರು ಮಾಡುತ್ತೇವೆ. ಅದರಲ್ಲಿ ಒಂದು ಈ ಬೆಂಕಿಯ ದೃಶ್ಯವಿರುವ ಕನಸು. ಜ್ಯೋತಿಷ್ಯ ಇಂಥ ಕನಸುಗಳ ಮೇಲೆಯೂ ಶುಭ, ಅಶುಭ ಎಂದು ಅರ್ಥೈಸುತ್ತದೆ.
ಕನಸಿಗಿದೆ ಹತ್ತಾರು ಅರ್ಥ
ನಮ್ಮಲ್ಲಿ ಇನ್ನೂ ಸಹ ಕನಸುಗಳಿಗೆ ನಾನಾ ಅರ್ಥ ಕಲ್ಪಿಸಲಾಗುತ್ತದೆ. ಕೆಲವರು ಕನಸಿಗೆ ಶುಭ-ಅಶುಭದ ಪಟ್ಟ ಕೊಟ್ಟರೆ, ಇನ್ನು ಕೆಲವರು ನಿದ್ದೆ ಮಾಡಿ ಏಳುವ ತನಕ, ಅದಾದ ನಂತರ ಅದು ಕನಸಷ್ಟೇ ಯಾವುದೇ ಅರ್ಥವಿಲ್ಲ ಅಂತಾರೆ.
ಕನಸಿನಲ್ಲಿ ನೀರು ಕಂಡರೆ ಒಂದರ್ಥ, ಮದುವೆ ಕನಸು ಕಂಡರೆ ಇನ್ನೊಂದರ್ಥ ಹೀಗೆ ಕೆಲವು ಕನಸುಗಳಿಗೆ ನಿರ್ದಿಷ್ಟ ಅರ್ಥ ನೀಡಲಾಗಿದೆ. ಇವುಗಳನ್ನು ನಮ್ಮ ಬದುಕಿನ ಮುನ್ಸೂಚಕಗಳೆಂದು ಸಹ ಹೇಳಲಾಗುತ್ತದೆ. ಜ್ಯೋತಿಷ್ಯ ಇಂಥ ಕನಸುಗಳ ಮೇಲೆಯೂ ಶುಭ, ಅಶುಭ ಎಂದು ಅರ್ಥೈಸುತ್ತದೆ.
ಕನಸಿನಲ್ಲಿ ಬೆಂಕಿ ಕಾಣುವುದನ್ನು ಎರಡು ರೀತಿಯಲ್ಲಿ ಅರ್ಥೈಸಲಾಗುತ್ತದೆ. ಒಂದು ಆಧ್ಯಾತ್ಮಿಕವಾಗಿ ಇನ್ನೊಂದು ಜ್ಯೋತಿಷ್ಯದ ಪ್ರಕಾರ. ಆಧ್ಯಾತ್ಮಿಕವಾಗಿ ಎಂದರೆ ಅದು ನಮ್ಮೊಳಗಿನ ವ್ಯಕ್ತಿತ್ವದ ಬಗ್ಗೆ ಹೇಳಿದರೆ ಜ್ಯೋತಿಷ್ಯ ಬದುಕಿನಲ್ಲಿ ಮುಂದೆ ನಡೆಯಬಹುದಾದ ಸಂಕೇತಗಳನ್ನು ಹೇಳುತ್ತದೆ.
ಕನಸಿನಲ್ಲಿ ಬೆಂಕಿಯನ್ನು ನೋಡುವುದು ಒಳ್ಳೆಯದೇ?
ಬೆಂಕಿ ಎಂದರೆ ಬಲವಾದ ಭಾವನೆಗಳು, ಉತ್ಸಾಹ, ನಿಮ್ಮ ಪ್ರೀತಿ. ಬೆಂಕಿಯು ಶುದ್ಧೀಕರಣದ ಸಂಕೇತವಾಗಿದೆ. ಹೀಗಾಗಿ ಬೆಂಕಿಯ ಕನಸುಗಳು ಸಾಮಾನ್ಯವಾಗಿ ಒಳ್ಳೆಯದು.
ಕೆಲವೊಮ್ಮೆ, ಬೆಂಕಿಯ ಕನಸುಗಳು ನೀವು ಅಪಾಯಕ್ಕೆ ಹೋಗುತ್ತಿರುವಿರಿ ಮತ್ತು ಜಾಗರೂಕರಾಗಿರಬೇಕು ಎಂಬ ಎಚ್ಚರಿಕೆಯನ್ನು ಸಹ ಅರ್ಥೈಸಬಹುದು.
ಕನಸಿನಲ್ಲಿ ಬೆಂಕಿಯನ್ನು ನೋಡಿದರೆ ಏನರ್ಥ?
ಹಾಗಾದರೆ ನಾವಿಲ್ಲಿ ಕನಸಿನಲ್ಲಿ ಬೆಂಕಿಯನ್ನು ನೋಡಿದರೆ ಆಧ್ಯಾತ್ಮಿಕವಾಗಿ ಏನರ್ಥ ಎಂಬುದನ್ನು ತಿಳಿಯೋಣ.
ಬೆಂಕಿ ನಿಮ್ಮ ಉತ್ಸಾಹದ ಪ್ರತಿನಿಧಿ
ಶಕ್ತಿಯ ಸಾಮಾನ್ಯ ಸಂಕೇತವೆಂದರೆ ಬೆಂಕಿ, ಏಕೆಂದರೆ ಅದು ಶಾಖ ಮತ್ತು ಬೆಳಕನ್ನು ಉತ್ಪಾದಿಸುತ್ತದೆ. ಬೆಂಕಿಯು ನಮ್ಮನ್ನು ಬೆಚ್ಚಗಿಡುವುದು ಮಾತ್ರವಲ್ಲದೆ ಬೇರೆ ಬೇರೆ ಉದ್ದೇಶಗಳಿಗೂ ಉಪಯೋಗಕ್ಕೆ ಬರುತ್ತದೆ.
ಬೆಂಕಿಯು ನಮ್ಮಲ್ಲಿರುವ ಉತ್ಸಾಹವನ್ನು ಪ್ರತಿನಿಧಿಸುತ್ತದೆ. ಜೀವನದಲ್ಲಿ ಯಶಸ್ಸು ಕಾಣಲು ನಮ್ಮೊಳಗಿನ, ಉತ್ಸಾಹದ ಪಾತ್ರ ದೊಡ್ಡದು. ನೀವು ಮಹತ್ವಾಕಾಂಕ್ಷೆ ಉಳ್ಳವರಾಗಿದ್ದರೆ, ನಿಮ್ಮ ಕನಸಿನಲ್ಲಿ ಬೆಂಕಿಯು ನಿಮ್ಮ ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ.
ಕೋಪದ ಸಂಕೇತ
ಬೆಂಕಿಯ ಬಗ್ಗೆ ಕನಸು ಕಾಣುವುದು ಎಂದರೆ ಜ್ವಾಲಾಮುಖಿಯಂತೆ ಸ್ಫೋಟಗೊಳ್ಳಲಿರುವ ಕೋಪವನ್ನು ನಿಗ್ರಹಿಸುವುದು. ಆದ್ದರಿಂದ ನೀವು ನಿಮ್ಮ ಪರಿಸ್ಥಿತಿಯನ್ನು ವಿಶ್ಲೇಷಿಸಬೇಕು ಮತ್ತು ನಿಮ್ಮೊಳಗೆ ನೀವು ಕೋಪವನ್ನು ಶುಶ್ರೂಷೆ ಮಾಡುತ್ತಿದ್ದೀರಾ ಎಂದು ನೋಡಲು ಆತ್ಮಾವಲೋಕನ ಮಾಡಿಕೊಳ್ಳಬೇಕು.
ಅಂದರೆ ನೀವು ಹೆಚ್ಚು ಕೋಪಿಷ್ಠರಾಗುತ್ತಿದ್ದೀರಾ ಎಂಬುದನ್ನು ಇದು ತೋರಿಸುತ್ತದೆ. ಹೀಗಾಗಿ ಎಲ್ಲಿ ಕೋಪ ಮಾಡಿಕೊಳ್ಳಬೇಕು, ಸುಮ್ಮನೇ ಕೋಪ ಮಾಡಿಕೊಳ್ಳುವ ಪ್ರವೃತ್ತಿಯನ್ನು ಬಿಟ್ಟು ಬಿಡಬೇಕು ಎಂದು ಕನಸಿನ ಬೆಂಕಿ ಹೇಳುತ್ತದೆ.
ಬೆಂಕಿಯು ಬುದ್ಧಿವಂತಿಕೆಯ ಸಂಕೇತ
ನಿಮ್ಮ ಜೀವನವನ್ನು ಉತ್ತಮಗೊಳಿಸಲು ನೀವು ಆಧ್ಯಾತ್ಮಿಕ ಹಸ್ತಕ್ಷೇಪವನ್ನು ಬಯಸುತ್ತಿದ್ದರೆ, ನಿಮ್ಮ ಕನಸಿನಲ್ಲಿ ಬೆಂಕಿ ಕಂಡರೆ ಅದು ಬುದ್ಧಿವಂತಿಕೆಯ ಸಂಕೇತ ಮತ್ತು ನೀವು ಪ್ರಬುದ್ಧರಾಗಲು ಬಯಸುತ್ತೀರಿ ಎಂದರ್ಥ.
ಇದಲ್ಲದೆ, ಬೆಂಕಿಯನ್ನು ಶುದ್ಧೀಕರಣಕ್ಕಾಗಿ ಬಳಸಲಾಗುತ್ತದೆ. ಆದ್ದರಿಂದ, ಬೆಂಕಿಯ ಕನಸು ನಿಮ್ಮ ಮನಸ್ಸಿನಲ್ಲಿನ ಕೆಟ್ಟ ಆಲೋಚನೆಗಳನ್ನು ಹೊಡೆದೋಡಿಸುತ್ತದೆ.
ಆಧ್ಯಾತ್ಮಿಕವಾಗಿ ನಮ್ಮ ಕನಸಲ್ಲಿ ಬೀಳುವ ಬೆಂಕಿಗೆ ಇಷ್ಟೇಲ್ಲಾ ಅರ್ಥವಿದೆ. ಆದಾಗ್ಯೂ ನೀವು ಬೆಂಕಿಯ ಕನಸು ಕಂಡರೆ ಭಯ ಪಡುತ್ತೀರಿ ಎಂದಾದರೆ ಮಲಗುವ ಮುನ್ನ ಬೆಂಕಿಯ ಯಾವುದೇ ವಿಚಾರಗಳನ್ನು ಕೇಳಬೇಡಿ, ನೋಡಬೇಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ