ಬಾಲ್ಯದ ಮೆಚ್ಚಿನ ದಿನಚರಿಗಳಲ್ಲಿ ಕಥೆ ಹೇಳುವುದು (Story Telling) ಇಲ್ಲವೇ ಕಥೆ ಆಲಿಸುವುದು ಸಾಮಾನ್ಯವಾಗಿ ಮಕ್ಕಳ ಹೆಚ್ಚು ಮೆಚ್ಚಿನ ಚಟುವಟಿಕೆಯಾಗಿರುತ್ತಿತ್ತು. ರಾತ್ರಿ ಮಲಗಬೇಕು ಎಂದರೆ ಯಾವುದಾದರೊಂದು ರಾಜಕುಮಾರ ಇಲ್ಲವೇ ರಾಜಕುಮಾರಿಯ ಕಥೆ (Fairy Tale) ಹೇಳಲೇಬೇಕು. ಹಿರಿಯರು ಕಥೆ ಹೇಳುವ ಶೈಲಿಯೇ ಮಜವಾಗಿರುತ್ತಿತ್ತು. ಸುಂದರವಾದ ಅರಮನೆಯ ವರ್ಣನೆ ರಾಜಕುಮಾರ (Prince) ರಾಜಕುಮಾರಿಯ ಸೌಂದರ್ಯದ ವರ್ಣನೆ ನಂತರ ನಡುವೆ ಬರುವ ರಾಕ್ಷಸ ರಾಕ್ಷಸಿಯರು ಹೀಗೆ ಅಂದು ಹೇಳುತ್ತಿದ್ದ ಕಥೆಗಳು ತುಂಬಾ ಸ್ವಾರಸ್ಯಮಯವಾಗಿರುತ್ತಿತ್ತು. ಹೀಗೆ ಕಾಲ್ಪನಿಕ ಕಥೆಗಳು ನಮ್ಮ ಬಾಲ್ಯದ ದಿನಗಳಲ್ಲಿ ಹೆಚ್ಚು ಮಹತ್ವದ್ದಾಗಿರುತ್ತಿತ್ತು
ರಾಷ್ಟ್ರೀಯ ಫೇರಿ ಟೇಲ್ ದಿನ
ಫೆಬ್ರವರಿ 26 ಅನ್ನು ರಾಷ್ಟ್ರೀಯ ಫೇರಿ ಟೇಲ್ ದಿನವನ್ನಾಗಿ ಕೂಡ ಆಚರಿಸಲಾಗುತ್ತದೆ. ಭಯಾನಕ ಪಾತ್ರಗಳು, ರಾಜಕುಮಾರ ರಾಜಕುಮಾರಿಯರು, ಸುಂದರವಾದ ಅರಮನೆ, ಹೀಗೆ ಫೇರಿ ಟೇಲ್ ಕಥೆಗಳು ತಮ್ಮದೇ ಆದ ಸೌಂದರ್ಯದಿಂದ ಮಿಳಿತಗೊಂಡಿವೆ ಹಾಗಾಗಿಯೇ ಮಕ್ಕಳಿಗೆ ಇಂತಹ ಕಥೆಗಳೆಂದರೆ ಅಚ್ಚುಮೆಚ್ಚು.
ಇಂದಿನ ಲೇಖನದಲ್ಲಿ ಕಾಲ್ಪನಿಕ ಕಥೆಗಳಲ್ಲಿ ಬರುವ ಪಾತ್ರಗಳು ಹಾಗೂ ಆ ಪಾತ್ರಗಳು ಯಾವ ರಾಶಿಗೆ ಸೂಕ್ತವಾಗಿ ಹೊಂದಾಣಿಕೆಯಾಗುತ್ತದೆ ಎಂಬುದನ್ನು ಇಂದಿನ ಲೇಖನದ ಮೂಲಕ ತಿಳಿದುಕೊಳ್ಳೋಣ.
ಮೇಷ ರಾಶಿ: ರಾಪುಂಜೆಲ್ ಕಥೆ
ಟ್ಯಾರೋನ (ಇಸ್ಪೀಟ್ ಎಲೆಗಳು) ನಿಗೂಢಗಳ ರಹಸ್ಯ ಕಥೆಯಲ್ಲಿ ಮೇಷ ರಾಶಿಯು ಟವರ್ ಕಾರ್ಡ್‌ನೊಂದಿಗೆ ಸಾಮರಸ್ಯ ಹೊಂದಿದೆ. ಕೂದಲು ಹಾಗೂ ತಲೆಯ ಬಗ್ಗೆ ಫೇರಿ ಟೇಲ್ ಕಥೆಗಳ ನಿರೂಪಣೆಯನ್ನು ಹೊಂದಿದೆ.
ಉದ್ದನೆಯ ಕೂದಲನ್ನು ಹೊಂದಿರುವ ಸುಂದರ ಹುಡುಗಿ ಎತ್ತರದ ಗೋಪುರದಲ್ಲಿ ವಾಸವಾಗಿದ್ದಳು ಎಂಬ ಕಥೆ ಕೂಡ ಈ ರಾಶಿಗೆ ಸಂಬಂಧಿಸಿದೆ.
ಮೇಷ ರಾಶಿಯ ಅಧಿಪತಿ ಮಂಗಳ ಗ್ರಹವಾದ್ದರಿಂದ ನಿರ್ಭೀತ ಸ್ವಭಾವ ಹಾಗೂ ಪ್ರಣಯ ರೂಪದ ಸಾಕ್ಷಾತ್ಕಾರವನ್ನು ಹೊಂದಿದೆ. ಇದರಿಂದಲೇ ಆಕೆಯನ್ನು ಎತ್ತರದ ಗೋಪುರದಿಂದ ಬಿಡಿಸಿಕೊಂಡು ಬರುವ ರಾಜಕುಮಾರ ಅಲ್ಲಿರುವ ಮಾಟಗಾತಿಯಿಂದ ಭಯಪಡುವುದಿಲ್ಲ.
ಇದನ್ನೂ ಓದಿ: ಗಿಡ-ಮರಗಳನ್ನು ನೆಡುವಾಗ ಈ ವಾಸ್ತು ಸಲಹೆ ಪಾಲಿಸಿದ್ರೆ, ನಿಮ್ಮ ಮನೆ ತುಂಬಾ ಹಣವೇ ತುಂಬಿರುತ್ತೆ
ವೃಷಭ ರಾಶಿ: ಬ್ಯೂಟಿ ಏಂಡ್ ಬೀಸ್ಟ್
ವೃಷಭ ರಾಶಿಯ ಅಧಿಪತಿ ಶುಕ್ರ ಗ್ರಹ ಪ್ರೀತಿ ಹಾಗೂ ಸೌಂದರ್ಯದ ಪ್ರತೀಕ. ವೃಷಭ ರಾಶಿಯವರದು ನಿರ್ಭೀತ ಸ್ವಭಾವವಾಗಿದ್ದರೂ ಅವರ ರೂಪದಿಂದ ಈ ನಿರ್ಭೀತ ಮರೆಯಾಗಿರುತ್ತದೆ.
ಬ್ಯೂಟಿ ಏಂಡ್ ಬೀಸ್ಟ್ ಕಥೆಯಲ್ಲೇ ಬೀಸ್ಟ್‌ಗಿದ್ದ ಶಾಪ ಇದಕ್ಕೆ ಉದಾಹರಣೆಯಾಗಿದೆ. ಈ ಸ್ವಭಾವದವರು ಸ್ವತಂತ್ರರು ಹಾಗೂ ಸ್ವೇಚ್ಛೆಯನ್ನು ಬಯಸುವವರು ಹಾಗಾಗಿಯೇ ಬೀಸ್ಟ್ ಮೃಗದ ರೂಪವನ್ನು ಶಿಕ್ಷೆಯಾಗಿ ಪಡೆದುಕೊಂಡನು.
ಈ ರಾಶಿಯವರು ಇಂದ್ರಿಯ ನಿಗ್ರಹರಾಗಿದ್ದು ಹೊಸ ಬಟ್ಟೆಗಳನ್ನು ತೊಡುವುದರೆಂದರೆ ಹೆಚ್ಚು ಇಷ್ಟಪಡುತ್ತಾರೆ. ಗುಲಾಬಿ ಹೂವು ಈ ರಾಶಿಯನ್ನು ಪ್ರತಿನಿಧಿಸುತ್ತದೆ.
ಮಿಥುನ ರಾಶಿ: ರಂಪೆಲ್‌ಸ್ಟಿಲ್ಟ್‌ಸ್ಕಿನ್ ಕಥೆ
ಮಿಥುನ ರಾಶಿಯವರು ಬುದ್ಧಿವಂತರು ಹಾಗೂ ಕುತೂಹಲ ಪ್ರವೃತ್ತಿಯವರು. ಇತರರಿಗಿಂತ ಚುರುಕಾತಿ ಕುಶಾಗ್ರಮತಿಗಳಾಗಿ ತಮ್ಮ ಕೆಲಸವನ್ನು ಮಾಡುವವರು. ರಂಪೆಲ್‌ಸ್ಟಿಲ್ಟ್‌ಸ್ಕಿನ್ ಕಥೆ ಕೂಡ ಮಿಥುನ ರಾಶಿಗೆ ಸರಿಹೊಂದುತ್ತದೆ. ಆ ರಾಶಿಯವರ ಅದೇ ಗುಣಗಳನ್ನು ರಂಪೆಲ್‌ಸ್ಟಿಲ್ಟ್‌ಸ್ಕಿನ್ ಪಾತ್ರಧಾರಿ ಹೊಂದಿರುವುದು ಇದಕ್ಕೆ ಉದಾಹರಣೆಯಾಗಿದೆ.
ಮಿಥುನ ರಾಶಿಯು ಮರ್ತ್ಯ ಮತ್ತು ಅಮರ ಅವಳಿಗಳಾದ ಕ್ಯಾಸ್ಟರ್ ಮತ್ತು ಪೊಲಕ್ಸ್‌ನಿಂದ ಸಂಕೇತಿಸಲ್ಪಟ್ಟಿದೆ ಅಂದರೆ ಈ ರಾಶಿಯವರು ಉಭಯ ಸ್ವಭಾವಿಗಳಾಗಿರುತ್ತಾರೆ.
ಕರ್ಕಾಟಕ ರಾಶಿ: ಸಿಂಡ್ರೆಲ್ಲಾಳ ಕಥೆ
ಚಂದ್ರ ಈ ರಾಶಿಯ ಅಧಿಪತಿ ಹಾಗೂ ಸ್ತ್ರೀಲಿಂಗ ಹಾಗೂ ತಾಯಿಯ ಮೂಲರೂಪವನ್ನು ಪ್ರತಿನಿಧಿಸುತ್ತದೆ. ಎಲ್ಲಾ ಕಾಲ್ಪನಿಕ ಕಥೆಗಳಲ್ಲಿ ಬರುವಂತೆ ಸಿಂಡ್ರೆಲ್ಲಾಳಿಗೆ ದುಷ್ಟ ಮಲತಾಯಿ ಇಲ್ಲವೇ ಮಾಂತ್ರಿಕ ಸ್ತ್ರೀ ವೈರಿಯಾಗಿ ಇದ್ದೇ ಇರುತ್ತಾಳೆ.
ಕಾಲ್ಪನಿಕ ಕಥೆಯಲ್ಲಿರುವಂತೆ ಆಕೆಗೆ ಸಹಾಯ ಮಾಡುವ ದೇವದೂತೆ ಕೂಡ ಸ್ತ್ರೀಪಾತ್ರಧಾರಿಯೇ ಆಗಿರುತ್ತಾರೆ. ಆಕೆಗೆ ಸಹಾಯ ಮಾಡುವ ಎಲ್ಲಾ ಪಾತ್ರಗಳು ಸ್ತ್ರೀಗೆ ಸಂಬಂಧಿಸಿದ್ದಾಗಿದೆ.
ಸಿಂಹ ರಾಶಿ: ದ ಫಾರ್ಗ್ ಪ್ರಿನ್ಸ್
ಸೂರ್ಯ ಗ್ರಹಾಧಿಪತಿಯಾಗಿರುವ ಸಿಂಹ ರಾಶಿಯ ಬಣ್ಣ ಚಿನ್ನದ ಬಣ್ಣವಾಗಿದೆ. ದ ಫಾರ್ಗ್ ಪ್ರಿನ್ಸ್ ಕಥೆಯ ಆರಂಭವೇ ಕಾಡಿನ ಕೊಳದಲ್ಲಿ ರಾಜಕುಮಾರಿ ತನ್ನ ಚಿನ್ನದ ಬಣ್ಣದ ಚೆಂಡನ್ನು ಕಳೆದುಕೊಂಡಲ್ಲಿದ್ದ ಪ್ರಾರಂಭವಾಗುತ್ತದೆ. ಸಿಂಹ ರಾಶಿಯ ಗುರುತೆಂದರೆ ಕಾಡಿನ ರಾಜ ಸಿಂಹನ ಅದೇ ಧೀಮಂತಿಕೆ ಗಾಂಭೀರ್ಯವಾಗಿದೆ.
ಕನ್ಯಾರಾಶಿ: ಲಿಟಲ್ ರೆಡ್ ರೈಡಿಂಗ್ ಹುಡ್
ಚಿಕ್ಕ ಹುಡುಗಿ ಹಾಗೂ ಮೋಸಗಾರ ತೋಳನ ಕುರಿತಾದ ಕಥೆಯಾಗಿದೆ. ಆಕೆ ಯಾವಾಗಲೂ ಕೆಂಪು ವೆಲ್ವೆಟ್‌ನ ಟೋಪಿಯನ್ನು ಧರಿಸುತ್ತಿದ್ದಳು ಹೀಗಾಗಿ ಆಕೆಯನ್ನು ಲಿಟಲ್ ರೆಡ್ ರೈಡಿಂಗ್ ಹುಡ್ ಎಂದು ಕರೆಯಲಾಗುತ್ತಿತ್ತು.
ಈ ರಾಶಿ ಹಾಗೂ ಕಥೆಗೆ ಸಂಬಂಧಿಸಿದಂತೆ ಲಿಟಲ್ ರೆಡ್ ರೈಡಿಂಗ್ ಹುಡ್ ಅನ್ನು ಕಬಳಿಸಿದ ತೋಳ ಹಾಗೂ ನಂತರ ಆಕೆಯನ್ನು ತೋಳದ ಹೊಟ್ಟೆಯನ್ನು ಬಗಿದು ರಕ್ಷಿಸುವುದು ಮುಖ್ಯ ಕಥಾನಕವಾಗಿದೆ. ಹಾಗಾಗಿಯೇ ದೇಹದ ಅಂಗಕ್ಕೆ ಸಂಬಂಧಿಸಿದಂತೆ ಕರುಳು ಈ ರಾಶಿಯ ಸಂಕೇತವಾಗಿದೆ.
ಈ ರಾಶಿಯವರು ಮುಗ್ಧ ಹಾಗೂ ಅಮಾಯಕ ಗುಣದವರು ಹಾಗೂ ತೋಳದಂತಹ ಮೋಸಗಾರರು ಲಿಟಲ್ ರೆಡ್ ರೈಡಿಂಗ್ ಹುಡ್ ಹೇಗೆ ಮೋಸಗೊಳಿಸುತ್ತಾರೆಯೋ ಅಂತೆಯೇ ಈ ರಾಶಿಯವರನ್ನು ಮೋಸಮಾಡುತ್ತಾರೆ ಆದರೆ ಮೋಸಹೋದರೂ ಕೂಡ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳುತ್ತಾರೆ ಮತ್ತು ಮೋಸಗಾರರಿಗೆ ಹೇಗೆ ಪಾಠ ಕಲಿಸುತ್ತಾರೆ ಎಂಬುದನ್ನು ಲಿಟಲ್ ರೆಡ್ ಪ್ರತಿನಿಧಿಸುತ್ತದೆ.
ತುಲಾ ರಾಶಿ: ದ ಪ್ರಿನ್ಸೆಸ್ ಏಂಡ್ ದ ಪಿ
ಮಾಪಲ ಹಾಗೂ ಸಮತೋಲವನ್ನು ತುಲಾ ರಾಶಿ ಸಂಕೇತಿಸುತ್ತದೆ. ಪಾರ್ಟ್‌ನರ್‌ಶಿಪ್‌ನ ಏಳನೇ ಮನೆಯನ್ನು ಈ ರಾಶಿ ಪ್ರತಿನಿಧಿಸುತ್ತದೆ. ದಿ ಪ್ರಿನ್ಸೆಸ್ ಅಂಡ್ ದಿ ಪೀ ತಾಯಿಯ ಪ್ರೀತಪಾತ್ರ ರಾಜಕುಮಾರನ ಕಥೆಯಾಗಿದ್ದು ತನ್ನ ಮಗನಿಗೆ ಸೂಕ್ತ ಪತ್ನಿ ದೊರೆಯದೇ ವಿಶ್ವದಾದ್ಯಂತ ಕನ್ಯೆ ಹುಡುಗುವ ಹತಾಶ ತಾಯಿಯನ್ನು ಸಂಕೇತಿಸುತ್ತದೆ. ಮಳೆಗಾಲದ ಒಂದು ಸಂಜೆ ಸುಂದರ ರಾಜಕುಮಾರಿಯು ಚಂಡಮಾರುತದ ದಾಳಿಗೆ ಹೆದರಿ ಆಶ್ರಯ ಪಡೆಯಲು ಕೋಟೆಯ ಬಾಗಿಲಿನ ಮೇಲೇರುತ್ತಾಳೆ.
ಶುಕ್ರ ಅಧಿಪತಿಯಾಗಿರುವ ಈ ರಾಶಿಯು ಅತಿಥಿ ಆಗುಂತಕರನ್ನು ಸ್ವಾಗತಿಸುವ ಗುಣದವರು ಹಾಗಾಗಿ ಆಶ್ರಯ ಕೋರಿದ ರಾಜಕುಮಾರಿಯ ಸ್ವಾಗತಕ್ಕೆ ಸಿದ್ಧರಾಗುತ್ತಾರೆ. ಕಥೆಯಲ್ಲಿ ಬರುವ ಕತಾಪಾತ್ರಗಳು ಕೂಡ ಈ ರಾಶಿಯವರ ಗುಣಸ್ವಭಾವಕ್ಕೆ ಸೂಕ್ತವಾಗಿ ಹೊಂದಿಕೊಳ್ಳುತ್ತಾರೆ.
ಇದನ್ನೂ ಓದಿ: ಹೋಳಿ ಹಬ್ಬ ಬರುವ ಮೊದಲೇ ನಿಮ್ಮ ಮನೆಯಲ್ಲಿ ಈ ಬದಲಾವಣೆ ಮಾಡಿ, ಅದೃಷ್ಟ ನಿಮ್ಮದಾಗಿಸಿಕೊಳ್ಳಿ
ವೃಶ್ಚಿಕ ರಾಶಿ: ಸ್ಲೀಪಿಂಗ್ ಬ್ಯೂಟಿ
ವೃಶ್ಚಿಕ ರಾಶಿ ಮರಣ ಹಾಗೂ ಪುನರ್ ಉತ್ಪಾದನೆಯಾದ ಎಂಟನೇ ಮನೆಯನ್ನು ಆಳುತ್ತದೆ. ಸ್ಲೀಪಿಂಗ್ ಬ್ಯೂಟಿ ಕಥೆ ಕೂಡ ಈ ರಾಶಿಯ ಗುಣಗಳಿಗೆ ಸೂಕ್ತವಾಗಿ ಹೊಂದುತ್ತದೆ.
ಇದೀಗ ತಾನೇ ಜನಿಸಿದ ಮಗು ಹಾಗೂ ಆ ಮಗು ಎದುರಿಸುವ ಸಂಕಷ್ಟಗಳನ್ನು ಕಥೆ ಒಳಗೊಂಡಿದೆ. ಈ ರಾಶಿಯ ಅದೇ ಗುಣಸ್ವಭಾವಗಳನ್ನು ಕಥಾನಾಯಕಿ ಹೊಂದಿರುತ್ತಾಳೆ.
ಧನು ರಾಶಿ: ಜ್ಯಾಕ್ ಮತ್ತು ಬೀನ್‌ಸ್ಟಾಕ್
ಬಡ ಹುಡುಗ ಜ್ಯಾಕ್ ಹಾಗೂ ಆತನಿಗೆ ದೊರೆಯುವ ಮಾಂತ್ರಿಕ ಐದು ಹುರುಳಿಯ ಕಥೆಯನ್ನು ಇದು ಸಾರುತ್ತದೆ. ಹುರುಳಿ ಬೀಜದಿಂದ ದೈತ್ಯ ಹುರುಳಿ ಮರ ಸ್ಥಾಪನೆಯಾಗುತ್ತದೆ ಹಾಗೂ ಅದನ್ನೇರಿ ಜ್ಯಾಕ್ ಆಕಾಶದಲ್ಲಿ ಒಂದು ರಾಜ್ಯವನ್ನು ತಲುಪುತ್ತಾನೆ
ಕಥೆಯಲ್ಲಿ ಬರುವ ಕಥಾಪಾತ್ರಗಳು ಈ ರಾಶಿಯ ಗುಣಗಳನ್ನು ಹೊಂದಿದೆ. ಒಂದು ರೀತಿಯ ತಂತ್ರಗಾರಿಕೆ ಈ ರಾಶಿಯವರ ಸ್ವಭಾವವಾಗಿದೆ. ಗುರು ಈ ರಾಶಿಯ ಆಡಳಿತ ನಡೆಸುವ ಗ್ರಹವಾಗಿದೆ.
ಕೃತ್ರಿಮತೆಯನ್ನು ಹೊಂದಿದ್ದರೂ ಈ ರಾಶಿಯವರು ಕುಶಲತೆಯಿಂದ ಸವಾಲುಗಳನ್ನು ಮೆಟ್ಟಿನಿಲ್ಲುವವರು. ಇತರರನ್ನು ಸೋಲಿಸಲು ತಮ್ಮ ತಂತ್ರಗಾರಿಕೆಯನ್ನು ಬಳಸುವ ಬುದ್ಧಿವಂತರು.
ಮಕರ ರಾಶಿ: ತ್ರಿ ಲಿಟಲ್ ಪಿಗ್ಸ್
ತ್ರಿ ಲಿಟಲ್ ಪಿಗ್ಸ್ ಒಂದು ನೀತಿ ಕಥೆಯಾಗಿದ್ದು ಜೀವನದಲ್ಲಿ ಬರುವ ಅಡೆತಡೆಗಳನ್ನು ಅಡ್ಡಿಆತಂಕಗಳನ್ನು ಹೇಗೆ ನಿವಾರಿಸಬೇಕೆಂಬ ಪಾಠವನ್ನು ತಿಳಿಸಿಕೊಡುತ್ತದೆ.
ಮಕರ ರಾಶಿಯವರ ಸ್ವಭಾವಕ್ಕೂ ಕಥೆಯಲ್ಲಿ ಬರುವ ಮೂರು ಹಂದಿಗಳಿಗೂ ಸಮಾನವಾದ ಹೊಂದಾಣಿಕೆಯನ್ನು ಕಾಣಬಹುದಾಗಿದೆ. ಈ ರಾಶಿವರು ಕುತಂತ್ರ ಹಾಗೂ ಪ್ರತೀಕಾರದ ಸಂಕೇತವಾಗಿದೆ. ಹಾಗಾಗಿಯೇ ಹಂದಿಗಳಿಗೆ ಮೋಸ ಮಾಡುವ ತೋಳಕ್ಕೆ ಕುತಂತ್ರ ಶೈಲಿಯಲ್ಲೇ ಇವುಗಳು ಶಾಸ್ತಿ ಮಾಡುತ್ತವೆ.
ಕುಂಭ ರಾಶಿ: ಅಗ್ಲಿ ಡಕ್ಲಿಂಗ್
ಕುಂಭ ರಾಶಿ ಇತರ ರಾಶಿಗಿಂತ ಭಿನ್ನವಾದುದು. ಯುರೇನಸ್ ಈ ರಾಶಿಯ ಅಧಿಪತಿ ಅಂತೆಯೇ ಸಾಹಸಿಗಳು ಜೊತೆಗೆ ಪರಿಶ್ರಮಪಡುವವರು. ಈ ರಾಶಿಯವರ ಅದೇ ಸ್ವಭಾವವನ್ನು ದ ಅಗ್ಲಿ ಡಕ್ಲಿಂಗ್ ಕಥೆಯಲ್ಲಿ ನೋಡಬಹುದು. ಇತರರಿಗಿಂತ ಬೇರೆಯಾಗಿ ನಿಲ್ಲುವ ಈ ಸ್ವಭಾವ ಇವರದ್ದಾಗಿದೆ.
ಮೀನ ರಾಶಿ: ದ ಲಿಟಲ್ ಮರ್‌ಮೈಡ್
ಮೀನ ರಾಶಿಯು ನೆಪ್ಚೂನ್‌ನಿಂದ ಆಳಲಾಗಿದೆ. ಸಮುದ್ರದ ದೇವತೆಯ ಹೆಸರಾಗಿದೆ. ದಿ ಲಿಟಲ್ ಮೆರ್ಮೇಯ್ಡ್ ಕಥೆ ಕೂಡ ಇದೇ ಸಿದ್ಧಾಂತದ ಪ್ರತೀಕವಾಗಿದೆ ಅಂದರೆ ಜಲಕನ್ಯೆ ಹಾಗೂ ನೀರಿಗೆ ಸಂಬಂಧಿಸಿದ್ದಾಗಿದೆ.
ಈ ರಾಶಿಯವರು ಪ್ರೀತಿಯನ್ನು ಪಡೆಯಲು ಎಷ್ಟೇ ಅಡೆತಡೆಗಳನ್ನು ದಾಟುವವರಾಗಿದ್ದಾರೆ. ಪ್ರತಿಯೊಂದರಲ್ಲೂ ಸುಂದರತೆಯನ್ನು ನೋಡುವವರು ಈ ರಾಶಿಯವರು. ಕಸದಿಂದ ರಸ ತೆಗೆಯುವ ನಿಪುಣತೆಯನ್ನು ಈ ರಾಶಿಯವರು ಪ್ರತಿನಿಧಿಸುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ