Weekly Horoscope: ಗಣೇಶ ಬಂದ, ಯಾರಿಗೆ ಅದೃಷ್ಟ ತಂದ? ಇಲ್ಲಿದೆ ಓದಿ ಈ ವಾರದ ರಾಶಿ ಭವಿಷ್ಯ

ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಲಾಭ? ಉದ್ಯೋಗ, ಆರೋಗ್ಯ, ಆರ್ಥಿಕ ಪರಿಸ್ಥಿತಿ, ದಾಂಪತ್ಯ ಜೀವನ ಹೇಗಿರಲಿದೆ? ದೋಷ ಪರಿಹಾರಕ್ಕೆ ಏನು ಮಾಡಬೇಕು? ಈ ವಾರ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಈ ಬಗ್ಗೆ ಇಲ್ಲಿದೆ ಮಾಹಿತಿ…

ವಾರ ಭವಿಷ್ಯ

ವಾರ ಭವಿಷ್ಯ

 • Share this:
  ಶುಕ್ರ ಗ್ರಹವು (Venus) ವ್ಯಕ್ತಿಯ ಜೀವನದಲ್ಲಿ ಸಂತೋಷ (Happy Life) ಮತ್ತು ಸಮೃದ್ಧಿಯನ್ನು (Prosperity) ತರುತ್ತದೆ. ಶುಕ್ರ ಗ್ರಹವು ಈಗಾಗಲೇ ಸಿಂಹ ರಾಶಿಗೆ (Leo) ಪ್ರವೇಶಿಸಿದೆ. ಆದರೆ ಸೂರ್ಯನು (Sun) ಸಿಂಹ ರಾಶಿಯ ಅಧಿಪತಿ ಮತ್ತು ಶುಕ್ರ ಮತ್ತು ಸೂರ್ಯನ ನಡುವಿನ ಸಂಬಂಧವು ಉತ್ತಮವಾಗಿಲ್ಲ. ಶುಕ್ರ ಗ್ರಹಕ್ಕೆ ಅಹಿತಕರ ಪರಿಸ್ಥಿತಿಯಾಗಲಿದ್ದು, ಇದರ ಪರಿಣಾಮ ರಾಶಿಗಳ (Rashi) ಮೇಲೆ ಬೀಳಲಿದೆ.  ಆದರೆ ಗೌರಿಗಣೇಶ ಹಬ್ಬ ಆಚರಿಸಿರುವ ಎಲ್ಲರ ಮೇಲೆ ದಯಾಮಯ ಗಣೇಶನ ಆಶೀರ್ವಾದ ಇದ್ದೇ ಇರುತ್ತದೆ. ಹಾಗಾದರೆ ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಲಾಭ? ಉದ್ಯೋಗ, ಆರೋಗ್ಯ, ಆರ್ಥಿಕ ಪರಿಸ್ಥಿತಿ, ದಾಂಪತ್ಯ ಜೀವನ ಹೇಗಿರಲಿದೆ? ದೋಷ ಪರಿಹಾರಕ್ಕೆ ಏನು ಮಾಡಬೇಕು? ಈ ವಾರ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಈ ಬಗ್ಗೆ ಇಲ್ಲಿದೆ ಮಾಹಿತಿ…

  ಮೇಷ ರಾಶಿ

  ಈ ರಾಶಿಯವರಿಗೆ ಅನಗತ್ಯ ಸುತ್ತಾಟದಿಂದ ದೇಹಾಲಸ್ಯವಾಗಬಹುದು. ಕೆಲವರಿಗೆ ಉದ್ಯೋಗ ನಿಮಿತ್ತ ದೂರ ಪ್ರಯಾಣ ಅಥವಾ ವಿದೇಶ ಪ್ರಯಾಣ ಮಾಡಬೇಕಾಗಬಹುದು. ಹೀಗಾಗಿ ವೈಯಕ್ತಿಕ ಆರೋಗ್ಯದ ಬಗ್ಗೆ ಗಮನವಿರಲಿ. ಈ ವಾರ ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ.

  ವೃಷಭ ರಾಶಿ

  ಈ ವಾರ ನೀವು ಕುಟುಂಬ ಸದಸ್ಯರೊಡನೆ ಧಾರ್ಮಿಕ ಸ್ಥಳಗಳಿಗಾಗಿ ಪ್ರಯಾಣ ಬೆಳೆಸುವಿರಿ. ಆದರೆ ಹೊಸದಾಗಿ ಕಟ್ಟುತ್ತಿರುವ ಮನೆಯ ಕೆಲಸ ಪೂರ್ಣಗೊಳ್ಳದೇ ಚಿಂತೆ ಆಗಬಹುದು. ಇನ್ನು ಆತ್ಮೀಯರ ಸಲಹೆಯಿಂದ ಕೆಲವು ವಿಪತ್ತಿನಿಂದ ಪಾರಾಗುವಿರಿ. ಹಣದ ಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಕೆಲವು ನೌಕರಸ್ಥರಿಗೆ ಬಿಡುವಿಲ್ಲದ ಕೆಲಸಗಳಿಂದಾಗಿ ಅವರ ಸಂಗಾತಿಯ ಕೋಪಕ್ಕೆ ಗುರಿಯಾಗಬಹುದು.

  ಮಿಥುನ ರಾಶಿ

  ಈ ರಾಶಿಯವರ ಕೈಕೆಳಗಿನ ಕೆಲಸಗಾರರು ನಿಮ್ಮ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಎಚ್ಚರಿಕೆ ವಹಿಸಬೇಕು. ಈ ವಾರ ಧನಾಗಮನ ಸಾಮಾನ್ಯವಾಗಿರುತ್ತದೆ. ಕೃಷಿಕರಿಗೆ ಹೆಚ್ಚಿನ ವರಮಾನ ಒದಗಿಬರುವ ಸಾಧ್ಯತೆ ಇದೆ. ಕುಟುಂಬದವರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು. ಸಂಗಾತಿ ಕಡೆಯವರ ಶುಭ ಕಾರ್ಯಕ್ರಮಗಳಿಗೆ ಹೋಗಿ ಬರುವ ಸಾಧ್ಯತೆ ಇದೆ.

  ಕರ್ಕಾಟಕ ರಾಶಿ

  ಈ ವಾರ ಈ ರಾಶಿಯವರ ಹಣದ ಒಳಹರಿವು ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಹೀಗಾಗಿ ನಿಮ್ಮ ಯೋಜನೆಗಳನ್ನು ಪ್ರಾಮುಖ್ಯತೆಗೆ ಅನುಗುಣವಾಗಿ ಜಾರಿಗೊಳಿಸಿರಿ. ಸ್ತ್ರೀಯರೊಡನೆ ಹಣಕಾಸಿನ ವ್ಯವಹಾರ ಮಾಡುವಾಗ ಸಾಕಷ್ಟು ಎಚ್ಚರವಿರಲಿ. ದೂರವಾಗಿದ್ದ ಬಂಧುಗಳನ್ನು ಹತ್ತಿರ ಮಾಡಿಕೊಳ್ಳುವಿರಿ.

  ಇದನ್ನೂ ಓದಿ: Pitra Dosh: ಜಾತಕದಲ್ಲಿ ಪಿತೃ ದೋಷಕ್ಕೆ ಕಾರಣವಾಗುವ ಅಂಶ ಇವಂತೆ

  ಸಿಂಹ ರಾಶಿ

  ಈ ವಾರ ನಿಮ್ಮ ಕೆಲಸ ಕಾರ್ಯಗಳಿಗೆ ಸಾಕಷ್ಟು ಸಹಾಯ ದೊರೆತು ಕಾರ್ಯಸಾಧನೆ ಆಗುವುದು. ದೃಢ ನಿರ್ಧಾರಗಳಿಂದ ಮಾಡಿದ ವ್ಯವಹಾರಗಳಲ್ಲಿ ಸಾಕಷ್ಟು ಲಾಭವಿರುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಗೆ ಮೀರಿ ಇರುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಂಪನ್ಮೂಲ ಕ್ರೋಢೀಕರಣ ಮಾಡುವಿರಿ. ದೊಡ್ಡ ಹಣಕಾಸಿನ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಉನ್ನತ ಅಧಿಕಾರಿಗಳಿಗೆ ಪದೋನ್ನತಿ ಸಿಗುವ ಸಾಧ್ಯತೆ ಇದೆ.

  ಕನ್ಯಾ ರಾಶಿ

  ಈ ರಾಶಿಯವರು ಪ್ರೀತಿ ಪ್ರೇಮ ಪ್ರಕರಣಗಳಲ್ಲಿ ಯಶಸ್ಸನ್ನು ಕಾಣಬಹುದು. ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉದ್ಯೋಗ ದೊರೆಯುತ್ತದೆ. ಆದರೆ ವಿದೇಶಿ ವ್ಯವಹಾರ ಮಾಡುವಾಗ ಬಹಳ ಎಚ್ಚರವಿರಲಿ. ಬಂಧು ಬಾಂಧವರೊಡನೆ ನಿಮ್ಮ ನಡವಳಿಕೆಯಿಂದ ನಿಷ್ಠುರವನ್ನು ತಂದು ಕೊಳ್ಳುವಿರಿ. ಈ ವಾರ ಗಣ್ಯರ ಪರಿಚಯದಿಂದ ನಿಮ್ಮ ಕಾರ್ಯ ಸಾಧನೆ ಆಗುತ್ತದೆ.

  ತುಲಾ ರಾಶಿ

  ಈ ವಾರ ನಿಮಗೆ . ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಮಕ್ಕಳಿಂದ ನಿಮಗೆ ಧನಸಹಾಯ ಸಿಗುವ ಸಾಧ್ಯತೆ ಇದೆ. ಇನ್ನು ನೀವು ಕಣ್ಣಿನ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಲೇಬೇಕು. ಕೆಲವೊಂದು ಕೆಲಸಗಳಲ್ಲಿ ನಿಮ್ಮ ಕುಯುಕ್ತಿ ಬಯಲಾಗಿ ಮುಜುಗರ ಪಡುವ ಸಂದರ್ಭವಿದೆ.

  ವೃಶ್ಚಿಕ ರಾಶಿ

  ಈ ವಾರ ಈ ರಾಶಿಯವರ ಧನಾದಾಯ ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ತೆರೆದುಕೊಳ್ಳುತ್ತವೆ.  ಗೃಹ ನಿರ್ಮಾಣ ಅಥವಾ ಖರೀದಿ ಮಾಡುವ ಸಾಧ್ಯತೆ ಇದೆ. ರಾಜಕೀಯದಲ್ಲಿ ಹಂತ-ಹಂತವಾಗಿ ಮೇಲೇರುವ ಸಾಧ್ಯತೆ ಇದೆ. ಖರೀದಿ ಮತ್ತು ಮಾರಾಟ ಮಾಡುವ ವ್ಯಾಪಾರಸ್ಥರಿಗೆ ಉತ್ತಮ ಲಾಭವಿರುತ್ತದೆ. ಬುದ್ಧಿಜೀವಿಗಳು ವಿಪರೀತ ಮಾತನಾಡಿ ಮುಜುಗರಕ್ಕೆ ಒಳಗಾಗುವರು.

  ಧನು ರಾಶಿ

  ಈ ರಾಶಿಯವರಿಗೆ ವೈಯಕ್ತಿಕ ಸಮಸ್ಯೆಗಳು ಪರಿಹಾರವಾಗಿ ಮನಸ್ಸು ಪ್ರಶಾಂತಗೊಳ್ಳುತ್ತದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಧನ್ಯತೆಯನ್ನು  ಕಾಣುವಿರಿ. ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಅಗತ್ಯ. ತಂದೆ-ತಾಯಿಗಳಿಗೆ ಮಕ್ಕಳ ಸಲುವಾಗಿ  ದೂರದ ಊರು ಅಥವಾ ವಿದೇಶಕ್ಕೆ ಹೋಗುವ ಯೋಗವಿದೆ.

  ಮಕರ ರಾಶಿ

  ಈ ವಾರ ನೀವು ಹಣಕಾಸಿನ ವಿಷಯದಲ್ಲಿ ಅತ್ಯಂತ ಜಾಗರೂಕರಾಗಿರಿ. ಯಾರಿಗೂ ಸಾಲ ಕೊಡುವುದು ಬೇಡ. ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಇರಲಿ. ಕುಟುಂಬ ಸಮಸ್ಯೆಗಳಿಗೆ ಕುಳಿತು ಆಲೋಚಿಸಿ ಪರಿಹಾರ ಕಂಡುಕೊಳ್ಳುವಿರಿ. ಪಾಲುದಾರಿಕೆಯ ವ್ಯವಹಾರಗಳಲ್ಲಿ ಉತ್ತಮ ಯಶಸ್ಸನ್ನು ಕಾಣುವಿರಿ. ಕಚೇರಿ ಕೆಲಸಗಳಲ್ಲಿ ಉತ್ತಮ ಹೆಸರನ್ನು ಪಡೆಯುವಿರಿ. ಸಹೋದ್ಯೋಗಿಗಳೊಡನೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳುವಿರಿ.

  ಕುಂಭ ರಾಶಿ

  ಈ ರಾಶಿಯ ಯುವಕರ ವೈಯಕ್ತಿಕ ವಿಚಾರಗಳು ಹೊರಬರುವ ಸಾಧ್ಯತೆ ಇದೆ, ಎಚ್ಚರ ವಹಿಸಿರಿ. ಮನೆ ಬದಲಾವಣೆಯ ವಿಚಾರ ಮುನ್ನೆಲೆಗೆ ಬರುತ್ತದೆ. ಶತ್ರುಗಳು ಸೃಷ್ಟಿಸುವ ಸಂಚುಗಳಲ್ಲಿ ಸಿಕ್ಕಿಬೀಳದಂತೆ ಎಚ್ಚರ ವಹಿಸಿರಿ. ನ್ಯಾಯಾಲಯದಲ್ಲಿನ ಕಟ್ಟಳೆಗಳ ಬಗ್ಗೆ ದೃಢನಿರ್ಧಾರ ತೆಗೆದುಕೊಂಡಲ್ಲಿ ಸಾಕಷ್ಟು ಒಳಿತನ್ನು ಕಾಣಬಹುದು. ಕೆಲವೊಂದು ಋಣಪರಿಹಾರವಾಗಿ ಮನಸ್ಸು ಸಂತೃಪ್ತಿಗೊಳ್ಳುತ್ತದೆ.

  ಇದನ್ನೂ ಓದಿ: Numerology: ಯಾರು ಯಾವ ಬಣ್ಣದ ಬಟ್ಟೆ ಧರಿಸಬೇಕು? ಸಂಖ್ಯಾಶಾಸ್ತ್ರ ಹೀಗನ್ನುತ್ತೆ

  ಮೀನ ರಾಶಿ

  ಈ ವಾರ ನೀವು ಭೂ ಖರೀದಿ ಮಾಡಬಹುದು. ನಿಮ್ಮ ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ನೆನೆಗುದಿಗೆ ಬಿದ್ದಿದ್ದ ವಿಷಯವೊಂದು ಹೊರಬಂದು ನಿಮ್ಮ ಗೌರವಕ್ಕೆ  ಧಕ್ಕೆಯಾಗಬಹುದು. ನೌಕರಿಯಲ್ಲಿರುವವರಿಗೆ ಬೇಸರವಾಗುವ ಸಾಧ್ಯತೆಗಳಿವೆ ಹಾಗೂ ಮನಸ್ಸಿಗೆ ಅಹಿತಕರವೆನಿಸುವ ಸುದ್ದಿಯನ್ನು ಕೇಳುವ ಸಾಧ್ಯತೆ ಇದೆ. ಈ ವಾರ ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆಗಳಿವೆ. ಹೀಗಾಗಿ ಎಚ್ಚರಿಕೆ ವಹಿಸುವುದು ಒಳಿತು.
  Published by:Annappa Achari
  First published: