Weekly Horoscope: ಈ ವಾರ ಯಾರಿಗೆ ಶುಭ, ಯಾರಿಗೆ ಅಶುಭ? ಇಲ್ಲಿದೆ ದ್ವಾದಶ ರಾಶಿಗಳ ಫಲಾಫಲ

ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಲಾಭ? ಉದ್ಯೋಗ, ಆರೋಗ್ಯ, ಆರ್ಥಿಕ ಪರಿಸ್ಥಿತಿ, ದಾಂಪತ್ಯ ಜೀವನ ಹೇಗಿರಲಿದೆ? ದೋಷ ಪರಿಹಾರಕ್ಕೆ ಏನು ಮಾಡಬೇಕು? ಈ ವಾರ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಈ ಬಗ್ಗೆ ಇಲ್ಲಿದೆ ಮಾಹಿತಿ…

ವಾರ ಭವಿಷ್ಯ

ವಾರ ಭವಿಷ್ಯ

  • Share this:
    ಈ ವಾರದಲ್ಲಿ ಚಂದ್ರ (Moon) ಮೀನರಾಶಿಯಿಂದ (Pisces) ವೃಷಭ ರಾಶಿಯವರೆಗೂ (Taurus) ಸಂಚರಿಸುತ್ತಾನೆ. ಅತ್ತ 17ರಿಂದ ಸೂರ್ಯ (Sun) ಕನ್ಯಾರಾಶಿ (Virgo) ಪ್ರವೇಶಿಸುತ್ತಾನೆ. ಇದರ ಜೊತೆಗೆ ನಿನ್ನೆಯಿಂದ ಬುಧ ಗ್ರಹವು (Mercury) ಕನ್ಯಾ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿದೆ. ಅಕ್ಟೋಬರ್‌ 2ಕ್ಕೆ ಮತ್ತೆ ನೇರವಾಗಿ ಚಲಿಸಲಿದೆ. ಈ ಎಲ್ಲಾ ಗ್ರಹಗಳ ಚಲನೆಯಿಂದ ದ್ವಾದಶ ರಾಶಿಗಳ ಮೇಲೆ ಶುಭ ಹಾಗೂ ಅಶುಭ ಫಲ ಉಂಟಾಗಲಿದೆ. ಹಾಗಾದರೆ ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಲಾಭ? ಉದ್ಯೋಗ, ಆರೋಗ್ಯ, ಆರ್ಥಿಕ ಪರಿಸ್ಥಿತಿ, ದಾಂಪತ್ಯ ಜೀವನ ಹೇಗಿರಲಿದೆ? ದೋಷ ಪರಿಹಾರಕ್ಕೆ ಏನು ಮಾಡಬೇಕು? ಈ ವಾರ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಈ ಬಗ್ಗೆ ಇಲ್ಲಿದೆ ಮಾಹಿತಿ…

    ಮೇಷ ರಾಶಿ

    ಈ ರಾಶಿಯ ನಿರುದ್ಯೋಗಿಗಳಿಗೆ ಉದ್ಯೋಗದ ಬಾಗಿಲು ತೆರೆಯುತ್ತದೆ. ಆತುರದ ನಿರ್ಧಾರಗಳಿಂದ ಕೆಲಸ ಕಾರ್ಯಗಳಲ್ಲಿ ವಿಘ್ನವಾಗಬಹುದು. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಆಮದು ಮತ್ತು ರಫ್ತು ವ್ಯವಹಾರ ಮಾಡುತ್ತಿರುವವರಿಗೆ ಕಾನೂನಿನ ಸಮಸ್ಯೆಗಳು ಬರಬಹುದು. ನಿಮ್ಮ ಬಂಧುಗಳ ಆಸ್ತಿಯನ್ನು ಖರೀದಿ ಮಾಡುವಿರಿ. ಪಾಲುದಾರಿಕೆ ವ್ಯವಹಾರಗಳಲ್ಲಿ ನಿಮಗೆ ಸ್ವಲ್ಪಮಟ್ಟಿನ ಇರಿಸು ಮುರುಸು ಉಂಟಾಗುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಉತ್ತಮ ಅನುಕೂಲಗಳು ಒದಗಿ ಬರುತ್ತವೆ. ಸಂಗಾತಿಗೆ ತವರುಮನೆಯಿಂದ ಆಸ್ತಿ ದೊರೆಯುವ ಸಾಧ್ಯತೆಗಳಿವೆ.

    ವೃಷಭ ರಾಶಿ

    ಈ ವಾರ ಈ ರಾಶಿಯ ನಿರುದ್ಯೋಗಿಗಳಿಗೆ ಹೊಸ ಉದ್ಯೋಗದ ಮಾರ್ಗ ಗೋಚರಿಸುತ್ತದೆ. ತಂದೆಯ ವ್ಯವಹಾರದಲ್ಲಿ ನಿಮಗೆ ಪಾಲ್ಗೊಳ್ಳುವ ಅವಕಾಶ ದೊರೆಯುತ್ತದೆ. ಗೃಹ ನಿರ್ಮಾಣ ಕಾರ್ಯಗಳಲ್ಲಿ ಯಶಸ್ಸು ದೊರೆತು ಇದಕ್ಕೆ ಬೇಕಾದ ಸಹಕಾರಗಳು ಮಿತ್ರರಿಂದ ದೊರೆಯುತ್ತವೆ. ಕೆಲವೊಂದು ತುರ್ತು ವಿಷಯಗಳ ಪರಿಹಾರಕ್ಕಾಗಿ ನಿಮ್ಮ ಸಂಬಂಧಿಗಳ ಸಹಾಯವನ್ನು ಪಡೆಯುವಿರಿ. ಕ್ರೀಡಾಪಟುಗಳಿಗೆ ಅನಿರೀಕ್ಷಿತವಾಗಿ ಅವರ ಸಾಮರ್ಥ್ಯ ಹೊರಹೊಮ್ಮುವ ಸಾಧ್ಯತೆಗಳಿವೆ. ಆದಾಯದಷ್ಟೇ ಖರ್ಚು ಇರುತ್ತದೆ. ಹಣ ನಿರ್ವಹಣೆಯನ್ನು ಸರಿಯಾಗಿ ಮಾಡಿಕೊಳ್ಳಿ. ವಿದೇಶಿ ವ್ಯವಹಾರ ಮಾಡುವವರಿಗೆ ವ್ಯವಹಾರ ಹೆಚ್ಚುತ್ತದೆ.

    ಮಿಥುನ ರಾಶಿ

    ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ವೃತ್ತಿಯಲ್ಲಿದ್ದ ಹಿತಶತ್ರುಗಳು ದೂರವಾಗುವರು. ಸಂಸಾರದಲ್ಲಿ ಸಂತೋಷ ಮೂಡಿ ಆನಂದಿಸುವಿರಿ. ದೊಡ್ಡಮಟ್ಟದ ಹೂಡಿಕೆ ಸದ್ಯಕ್ಕೆ ಬೇಡ. ಪ್ರಗತಿಯಲ್ಲಿರುವ ಮನೆ ಕೆಲಸಗಳಿಗೆ ಬೇಕಾದ ಹಣದ ಸಹಾಯ ದೊರೆಯುತ್ತದೆ. ಉದ್ದಿಮೆದಾರರು ಬಹಳ ದಿನಗಳಿಂದ ಕಾಯುತ್ತಿದ್ದ ಸರ್ಕಾರಿ ಆದೇಶ ಮತ್ತು ಸರ್ಕಾರದ ಮಂಜೂರಾತಿ ದೊರೆಯಬಹುದು. ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಇಚ್ಛೆ ಇದ್ದರೂ ಅವಕಾಶ ದೊರೆಯುವುದು ಕಡಿಮೆ. ಮಹಿಳೆಯರಿಗೆ ಅವರ ವೃತ್ತಿ ಕ್ಷೇತ್ರದಲ್ಲಿ ಸಾಕಷ್ಟು ಸಹಕಾರ ದೊರೆಯುತ್ತದೆ.

    ಕರ್ಕಾಟಕ ರಾಶಿ

    ಕುಟುಂಬ ಜೀವನದಲ್ಲಿ ಸಂತೋಷವನ್ನು ಕಾಣುವಿರಿ. ಆಸ್ತಿ ವಿವಾದಗಳಲ್ಲಿ ನಿಮಗೆ ಹೆಚ್ಚು ಅನುಕೂಲ ಆಗುತ್ತದೆ. ನೆರೆಹೊರೆಯವರೊಂದಿಗೆ ವಿರಸ ಖಂಡಿತ ಬೇಡ. ಸಂಗಾತಿಯ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸುವುದು ಬಹಳ ಉತ್ತಮ. ಕೆಲವು ಮಹಿಳೆಯರ ಇಷ್ಟಾರ್ಥಗಳು ಈಡೇರುತ್ತವೆ. ಸಾಮಾಜಿಕ ಸೇವೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಜಲ ಸಂಬಂಧಿ ಕೆಲಸಗಳನ್ನು ಮಾಡುವವರಿಗೆ ಉತ್ತಮ ಕೆಲಸ ದೊರೆತು ಆದಾಯ ಹೆಚ್ಚುತ್ತದೆಜಂಟಿ ವ್ಯವಹಾರಗಳಲ್ಲಿ ಹೆಚ್ಚಿನ ಕಿರಿಕಿರಿ ಮಾಡಿಕೊಳ್ಳದಿರುವುದು ಉತ್ತಮ. ಹಣದ ಒಳಹರಿವು ನಿರೀಕ್ಷೆಯ ಮಟ್ಟಕ್ಕೆ ಇರುತ್ತದೆ. ವಿದ್ಯಾರ್ಥಿಗಳು ಅಧ್ಯಾಪಕರಿಂದ ಅಭಿಮಾನಪೂರ್ವಕ ಮಾತುಗಳನ್ನು ಕೇಳುವರು.

    ಇದನ್ನೂ ಓದಿ: Surya Shukra Yuti: ಸೂರ್ಯ, ಶುಕ್ರ ಒಂದೇ ರಾಶಿಯಲ್ಲಿ: ಈ 4 ರಾಶಿಗಳಿಗೆ ಅಪಾಯ ಕಾದಿದೆ ಎಚ್ಚರಿಕೆ!

    ಸಿಂಹ ರಾಶಿ

    ಈ ರಾಶಿಯವರು ಸರ್ಕಾರಿ ಉದ್ಯೋಗದಲ್ಲಿದ್ದರೆ ಈ ವಾರ ಎಚ್ಚರಿಕೆಯಿಂದ ಇರಬೇಕು. ಯಾಕೆಂದರೆ ಸರ್ಕಾರಿ ಹುದ್ದೆಯಲ್ಲಿರುವವರಿಗೆ ಭ್ರಷ್ಟಾಚಾರದ ಆರೋಪ ಬರುವ ಸಾಧ್ಯತೆಗಳಿವೆ. ನಿಮ್ಮ ಒಳಮನಸ್ಸಿನಲ್ಲಿ ಅವ್ಯಕ್ತ ಭೀತಿ ಇರುತ್ತದೆ. ಆಧ್ಯಾತ್ಮ ಮಾರ್ಗಗಳನ್ನು ಪಾಲನೆ ಮಾಡುವುದರಿಂದ ಮನಸ್ಸಿಗೆ ಸ್ವಲ್ಪ ಸಂತೋಷ ದೊರೆಯುತ್ತದೆ. ಮಕ್ಕಳ ನಡುವೆ ವಾಗ್ವಾದ ನಡೆದು ಭಿನ್ನಾಭಿಪ್ರಾಯಗಳು ಮೂಡಬಹುದು. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ವಿದ್ಯಾರ್ಥಿಗಳಿಗೆ ಅವರ ಸಮಸ್ಯೆಗಳಿಂದ ಮುಕ್ತಿ ಹೊಂದುವ ಅವಕಾಶವಿದೆ. ಮಹಿಳಾ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ದೊರೆತು ಯಶಸ್ಸು ಸಿಗುತ್ತದೆ. ಕೈಗಾರಿಕೋದ್ಯಮಿಗಳಿಗೆ ಸರ್ಕಾರದಿಂದ ಬರಬೇಕಾಗಿದ್ದ ಎಲ್ಲ ರೀತಿಯ ಸಹಾಯಧನಗಳು ಈಗ ಬರುತ್ತವೆ.

    ಕನ್ಯಾ ರಾಶಿ

    ಈ ವಾರ ಈ ರಾಶಿಯವರನ್ನು ಕಾಡುತ್ತಿದ್ದ ದೀರ್ಘಕಾಲದ ಆರೋಗ್ಯ ಸಮಸ್ಯೆಯು ನಿವಾರಣೆ ಆಗಿ, ಆರೋಗ್ಯದಲ್ಲಿ ಸುಧಾರಣೆ ಆಗಲಿದೆ. ನೀವು ಈ ವಾರ ಕೌಟುಂಬಿಕ ಸಮಸ್ಯೆಗಳಿಂದ ಸ್ವಲ್ಪಮಟ್ಟಿಗೆ ಮುಕ್ತಿ ಪಡೆಯಬಹುದು. ಆಸ್ತಿ ನೋಂದಣಿ ಕೆಲಸ ಮಾಡುವವರಿಗೆ ಹೆಚ್ಚಿನ ಕೆಲಸ ದೊರೆಯುತ್ತದೆ. ಆಸ್ತಿ ಖರೀದಿ ಯತ್ನದಲ್ಲಿ ಯಶಸ್ಸನ್ನು ಕಾಣಬಹುದು. ಕೆಲವು ಮಹಿಳೆಯರಿಗೆ ಸಾಮಾಜಿಕ ಕ್ಷೇತ್ರದಲ್ಲಿ ದುಡಿಯುವ ಅವಕಾಶ ಒದಗಿ ಬರುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

    ತುಲಾ ರಾಶಿ

    ಈ ವಾರ ಈ ರಾಶಿಯವರ ಧನ ಆದಾಯವು ಉತ್ತಮವಾಗಿರುತ್ತದೆ. ಉದ್ಯೋಗದಲ್ಲಿರುವ ಮಹಿಳೆಯರು ಅವರ ನಡವಳಿಕೆಯಿಂದ ಟೀಕೆಗೊಳಗಾಗುವರು. ಅಧಿಕಾರಿಗಳ ಅಸಹಕಾರದಿಂದ ಕೆಲವು ಕೆಲಸಗಳಲ್ಲಿ ಹಿನ್ನಡೆಯನ್ನು ಕಾಣಬಹುದು. ಸರ್ಕಾರಿ ಉದ್ಯೋಗದಲ್ಲಿರುವವರು ವರ್ಗಾವಣೆಯನ್ನು ನಿರೀಕ್ಷಿಸಬಹುದು. ನಿಮ್ಮ ಕೆಲವು ಕೆಲಸಗಳಿಂದ ನೆರೆ ಹೊರೆಯವರ ವಿರೋಧ ಕಟ್ಟಿಕೊಳ್ಳುವಿರಿ. ಆದರೆ ಅನ್ಯರ ಕಿವಿ ಮಾತಿಗೆ ಅತಿ ಮಾನ್ಯತೆ ಬೇಡ. ವಿನಾಕಾರಣ ಬೇರೆಯವರನ್ನು ದೂಷಿಸಲು ಹೋಗಬೇಡಿರಿ. ನಿಂತುಹೋಗಿದ್ದ ವೃತ್ತಿ ಜೀವನವು ಪುನಃ ಆರಂಭವಾಗಬಹುದು.

    ವೃಶ್ಚಿಕ ರಾಶಿ

    ಈ ರಾಶಿಯವರಿಗೆ ಹಿರಿಯರಿಂದ ಆಸ್ತಿ ನಿಮಗೆ ಹಸ್ತಾಂತರ ಆಗುವ ಸಾಧ್ಯತೆ ಇದೆ. ಈ ವಾರ ಸಾಲ ಮಾಡುವುದು ಮತ್ತು ಜಾಮೀನು ಕೊಡುವುದು ಬೇಡ. ನಿಮ್ಮ ಆರೋಗ್ಯದ ಬಗ್ಗೆ ಎಚ್ಚರ ವಹಿಸಿರಿ. ಸ್ತ್ರೀಯರಿಗೆ ಅತಿಯಾದ ಕೆಲಸದಿಂದ ದೇಹಾಲಸ್ಯ ಉಂಟಾಗುತ್ತದೆ. ಹೊಸ ವ್ಯಕ್ತಿಗಳ ಪರಿಚಯವಾಗಿ ಮತ್ತು ಅವರ ಸಹಕಾರದಿಂದ ಕಲಾವಿದರುಗಳಿಗೆ ಗೌರವ ಪ್ರಾಪ್ತಿಯಾಗುತ್ತದೆ. ಅನಿರೀಕ್ಷಿತ ಮೂಲದಿಂದ ಧನಾಗಮನವಾಗಿ ಆರ್ಥಿಕ ಸ್ಥಿತಿ ಸದೃಢವಾಗುತ್ತದೆ. ಕಣ್ಣಿನ ಸಮಸ್ಯೆಗಳ ಪರಿಹಾರಕ್ಕೆ ವೃದ್ಧರಿಗೆ ಸಾಮಾಜಿಕ ಕಾರ್ಯಕರ್ತರುಗಳಿಂದ ಸಹಾಯ ದೊರೆಯುತ್ತದೆ. ತರಕಾರಿ, ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿ ಅದರ ವ್ಯಾಪಾರಸ್ಥರಿಗೆ ಲಾಭ ದೊರೆಯುತ್ತದೆ.

    ಧನು ರಾಶಿ

    ಈ ವಾರ ನೀವು ಸಾಕಷ್ಟು ಅಡೆತಡೆಗಳ ನಡುವೆಯೂ ಶುಭ ಕಾರ್ಯವೊಂದನ್ನು ಮಾಡಿ ಮುಗಿಸುವಿರಿ. . ಉದ್ಯೋಗಿಗಳಿಗೆ ಅವರ ಉದ್ಯೋಗದಲ್ಲಿ ಅಭಿವೃದ್ಧಿಯಾಗಿ ಹೆಚ್ಚಿನ ಹಣ ದೊರೆಯುತ್ತದೆ. ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಇದ್ದ ಒತ್ತಡವನ್ನು ನಿವಾರಿಸಿ ಕೊಳ್ಳುವಿರಿ. ಸರ್ಕಾರದ ಕಡೆಯಿಂದ ಬರಬೇಕಾಗಿದ್ದ ಹಣ ಈಗ ಬರುತ್ತದೆ. ಧಾರ್ಮಿಕ ಕೆಲಸಗಳನ್ನು ಮಾಡುವವರಿಗೆ ಬೇಕಾದ ಸಹಕಾರ ಸಮಾಜದಿಂದ ದೊರೆಯುತ್ತದೆ. ನಿಮ್ಮ ಆದಾಯವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ.

    ಮಕರ ರಾಶಿ

    ನೀವು ಈ ವಾರ ಒಂದು ನೂತನ ವ್ಯವಹಾರದಲ್ಲಿ ಹಣ ತೊಡಗಿಸುವ ಸಾಧ್ಯತೆಯಿದೆ. ಆದರೆ ಎಚ್ಚರದಿಂದ ಪರಿಶೀಲಿಸಿ ಹಣ ತೊಡಗಿಸಿರಿ. ಕೆಲವು ಯುವಕರಿಗೆ ಅವರ ಮಾತಿನಿಂದ ಉದ್ಯೋಗ ನಷ್ಟ ಆಗಬಹುದು. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅತಿ ಅಗತ್ಯ. ವಿದ್ಯಾರ್ಥಿಗಳಿಗೆ ಉತ್ತಮ ಸಹಾಯದ ಜೊತೆಗೆ ಉತ್ತಮ ಫಲಿತಾಂಶವನ್ನು ಪಡೆಯುವ ಯೋಗವಿದೆ. ಮಹಿಳೆಯರಿಗೆ ಅಭಿವೃದ್ಧಿ ಯೋಗವಿದೆ. ಹಣದ ಒಳಹರಿವು ನಿಮ್ಮ ಅಗತ್ಯ ಮತ್ತು ಅಪೇಕ್ಷೆಯಷ್ಟಿರುತ್ತದೆ. ಆರೋಗ್ಯದಲ್ಲಿ ಇದ್ದ ವ್ಯತ್ಯಾಸಗಳು ಸರಿಯಾಗುತ್ತವೆ.

    ಕುಂಭ ರಾಶಿ

    ಈ ರಾಶಿಯವರಿಗೆ ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಹೀಗಾಗಿ ಖರ್ಚು ಹೆಚ್ಚಾಗುವುದರಿಂದ ಹಣದ ಸಮತೋಲನ ಅಗತ್ಯ. ಉದ್ಯೋಗ ಕ್ಷೇತ್ರದಲ್ಲಿರುವವರಿಗೆ ಒಂದು ಒಳ್ಳೆಯ ಸುದ್ದಿ ಕೇಳಿ ಬರುತ್ತದೆ. ಹಣಕಾಸಿನ ವ್ಯವಹಾರ ನಡೆಸುವವರಿಗೆ ಸ್ವಲ್ಪಮಟ್ಟಿನ  ಹಿನ್ನಡೆ ಇರುತ್ತದೆ. ಸಾಂಪ್ರದಾಯಿಕ ಕೃಷಿಯನ್ನು ಮಾಡುವವರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ ಮತ್ತು ಅವರು ಬೆಳೆದ ವಸ್ತುಗಳಿಗೆ ಹೆಚ್ಚಿನ ಹಣ ದೊರೆಯುತ್ತದೆ. ಕೃಷಿಕರಿಗೆ ಸರ್ಕಾರದಿಂದ ಸಹಾಯಧನದ ರೂಪದಲ್ಲಿ ಕೃಷಿ ಉಪಕರಣಗಳು ದೊರೆಯಬಹುದು. ಮಹಿಳಾ ರಾಜಕಾರಣಿಗಳಿಗೆ ರಾಜಕೀಯದಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗುವ ಸಂದರ್ಭವಿದೆ.

    ಇದನ್ನೂ ಓದಿ: Samudrika Shastra: ಹೆಬ್ಬೆರಳಿನ ಆಕಾರ ಈ ರೀತಿ ಇದ್ದರೆ ಅವರು ಸಿಕ್ಕಾಪಟ್ಟೆ ಜಾಣರಂತೆ!

    ಮೀನ ರಾಶಿ

    ಕುಟುಂಬ ಸಮೇತ ಧಾರ್ಮಿಕ ಸ್ಥಳಗಳನ್ನು ನೋಡುವ ಯೋಗವಿದೆ. ತಾಳ್ಮೆಯಿಂದ ಮನೆಯಲ್ಲಿ ಉಂಟಾಗಬಹುದಾದ ಮನಃಸ್ತಾಪವನ್ನು ನಿವಾರಣೆ ಮಾಡಿಕೊಳ್ಳಿರಿ. ಆಪ್ತರು ಎನಿಸಿಕೊಂಡವರಿಂದ ನಿಮ್ಮ ವ್ಯವಹಾರಗಳಲ್ಲಿ ಸಾಕಷ್ಟು ಕಿರಿಕಿರಿ ಅನುಭವಿಸುವಿರಿ. ಆದಾಯ ಮತ್ತು ವೆಚ್ಚ ಸಮಾನವಾಗಿರುತ್ತದೆ. ಬಂಧುಗಳಲ್ಲಿನ ಭಿನ್ನಾಭಿಪ್ರಾಯವನ್ನು ದೂರ ಮಾಡುವಲ್ಲಿ ಸಾಕಷ್ಟು ಸಫಲತೆ ಕಾಣುವಿರಿ. ಭೂ ವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ನಿಮ್ಮ ಲೆಕ್ಕಪತ್ರಗಳನ್ನು ಮರುಪರಿಶೀಲನೆಗೆ ಒಳಪಡಿಸಬೇಕಾದ ಸಂದರ್ಭ ಬರಬಹುದು. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು.
    Published by:Annappa Achari
    First published: