Weekly Horoscope: ಬುಧ-ಚಂದ್ರನ ಸಂಯೋಗ, ಈ ವಾರ ಯಾರಿಗೆ ಅಶುಭ? ಯಾರಿಗೆ ಶುಭ ಯೋಗ?

ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಲಾಭ? ಉದ್ಯೋಗ, ಆರೋಗ್ಯ, ಆರ್ಥಿಕ ಪರಿಸ್ಥಿತಿ, ದಾಂಪತ್ಯ ಜೀವನ ಹೇಗಿರಲಿದೆ? ದೋಷ ಪರಿಹಾರಕ್ಕೆ ಏನು ಮಾಡಬೇಕು? ಈ ವಾರ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಈ ಬಗ್ಗೆ ಇಲ್ಲಿದೆ ಮಾಹಿತಿ…

ವಾರ ಭವಿಷ್ಯ

ವಾರ ಭವಿಷ್ಯ

  • Share this:
    ಇಂದಿನಿಂದ ಅಂದರೆ ಮೇ 29ರಿಂದ ಚಂದ್ರನ (Moon) ಸಂಚಾರ ಮೇಷ ರಾಶಿಯ (Aries) ನಂತರ ವೃಷಭ ರಾಶಿಯಲ್ಲಿ (Taurus) ಇರುತ್ತದೆ. ಅತ್ತ ಈಗಾಗಲೇ ಬುಧನು (Mercury) ವೃಷಭ ರಾಶಿಯಲ್ಲಿರುವುದರಿಂದ, ಅಂತಹ ಪರಿಸ್ಥಿತಿಯಲ್ಲಿ, ಬುಧ ಮತ್ತು ಚಂದ್ರನ ಸಂಯೋಗವೂ ರೂಪುಗೊಳ್ಳುತ್ತದೆ. ಈ ಗ್ರಹಗಳ ಬದಲಾವಣೆಯಿಂದಾಗಿ ರಾಶಿಗಳ (Rashi) ಮೇಲೂ ಶುಭ, ಅಶುಭ ಫಲಗಳಾಗುತ್ತವೆ. ಹಾಗಾದರೆ ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಲಾಭ? ಉದ್ಯೋಗ, ಆರೋಗ್ಯ, ಆರ್ಥಿಕ ಪರಿಸ್ಥಿತಿ, ದಾಂಪತ್ಯ ಜೀವನ ಹೇಗಿರಲಿದೆ? ದೋಷ ಪರಿಹಾರಕ್ಕೆ ಏನು ಮಾಡಬೇಕು? ಈ ವಾರ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಈ ಬಗ್ಗೆ ಇಲ್ಲಿದೆ ಮಾಹಿತಿ… 

    ಮೇಷ ರಾಶಿ

    ಈ ವಾರ ಈ ರಾಶಿಯವರಿಗೆ ಹಣದ ಹರಿವು ಉತ್ತಮವಾಗಿರುತ್ತದೆ. ನೀವು ಇಚ್ಛೆಪಟ್ಟಿದ್ದ ಆಸ್ತಿಯ ಬೆಲೆ ಹೆಚ್ಚಾಗಬಹುದು. ಅನಿರೀಕ್ಷಿತ ಧನಾಗಮನದಿಂದ ನಿಮಗೆ ಅಚ್ಚರಿಯಾಗಬಹುದು. ಉನ್ನತ ಅಧಿಕಾರಿಗಳ ಅನುಗ್ರಹದಿಂದಾಗಿ ವೃತ್ತಿಯಲ್ಲಿ ಸಾಕಷ್ಟು ಅನುಕೂಲ ಒದಗುತ್ತದೆ.

    ವೃಷಭ ರಾಶಿ

    ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಇರುತ್ತದೆ. ಕೆಲವರಿಗೆ ಜನರಿಂದ ಪುರಸ್ಕಾರ ಪಡೆಯುವ ಯೋಗವಿದೆ. ಪ್ರಾಪ್ತ ವಯಸ್ಕರಿಗೆ ವಿವಾಹ ಸಂಬಂಧ ಒದಗುವ ಸಾಧ್ಯತೆ ಇದೆ. ಹೊಟ್ಟೆಗೆ ಸಂಬಂಧಪಟ್ಟ ಅನಾರೋಗ್ಯ ಬಾಧಿಸಬಹುದು, ಜಾಗೃತೆಯಾಗಿರಿ.

    ಮಿಥುನ ರಾಶಿ

    ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಸಂಗಾತಿಗೆ ಅವರ ತಂದೆಯಿಂದ ಆಸ್ತಿ ದೊರಕುವ ಸಾಧ್ಯತೆಗಳಿವೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳು ಇವೆ. ಆಕಸ್ಮಿಕ ಧನ ಲಾಭವಾಗುವ ಸಾಧ್ಯತೆ ಕಾಣುತ್ತಿದೆ.

    ಕರ್ಕಾಟಕ ರಾಶಿ

    ಈ ವಾರ ಈ ರಾಶಿಯವರಿಗೆ ನಿಮ್ಮ ನಿರೀಕ್ಷೆಯಷ್ಟು ಹಣದ ಒಳಹರಿವು ಇರುತ್ತದೆ. ನೀವು ಈ ಹಿಂದೆ ಬಂದಿದ್ದ ಅಪವಾದದಿಂದ ಪಾರಾಗುವಿರಿ. ಆದರೂ ನಿಮ್ಮ ಒಳ್ಳೆಯತನವನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುವರು, ಹೀಗಾಗಿ ಜಾಗರೂಕತೆಯಿಂದ ಇರಿ. ನಿಮ್ಮ ಕೆಲಸ ಕಾರ್ಯಗಳಿಗೆ ಒಡಹುಟ್ಟಿದವರಿಂದ ಸಹಾಯ ದೊರೆಯುತ್ತದೆ.

    ಇದನ್ನೂ ಓದಿ: Astrology: ಆರ್ಥಿಕ ಸಹಾಯ ಒದಗಿ ಬರಲಿದೆ ಈ ರಾಶಿಯವರಿಗೆ; ಇಲ್ಲಿದೆ ದಿನಭವಿಷ್ಯ

    ಸಿಂಹ ರಾಶಿ

    ಈ ವಾರ ಈ ರಾಶಿಯವರ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ಈ ವಾರ ಕಚೇರಿ ಕೆಲಸದ ಮೇಲೆ ದೂರ ಪ್ರಯಾಣ ಮಾಡಬೇಕಾಗಬಹುದು. ಸಣ್ಣಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಲೇಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಯನ್ನು ಕಾಣಬಹುದು.

    ಕನ್ಯಾ ರಾಶಿ

    ಈ ವಾರ ಈ ರಾಶಿಯವರ ಹಣದ ಒಳಹರಿವು ಸಾಮಾನ್ಯ ಸ್ಥಿತಿಯಲ್ಲಿ ಇರುತ್ತದೆ. ಉದ್ಯೋಗದಲ್ಲಿ ಅತಿಯಾದ ಒತ್ತಡಗಳನ್ನು ಎದುರಿಸಬೇಕಾಗಬಹುದು. ತಾಳ್ಮೆಯಿಂದ ಇದ್ದಲ್ಲಿ ನಿಮಗೆ ಅನುಕೂಲವಾಗುತ್ತದೆ. ಯಾರ ಮೇಲೆಯೂ ಅತಿಯಾದ ನಂಬಿಕೆ ಇಡುವುದು ಒಳಿತಲ್ಲ.

    ತುಲಾ ರಾಶಿ

    ಈ ವಾರ ಈ ರಾಶಿಯವರ ಆರ್ಥಿಕ ಸ್ಥಿತಿಯು ಸಾಮಾನ್ಯ ಮಟ್ಟದಲ್ಲಿ ಇರುತ್ತದೆ. ನ್ಯಾಯಾಲಯದಲ್ಲಿನ ತೀರ್ಪು ನಿಧಾನವಾಗುವ ಸಾಧ್ಯತೆಗಳಿವೆ. ಮಹಿಳೆಯರಿಗೆ ರಾಜಕೀಯ ಪಕ್ಷಗಳಲ್ಲಿ ಯಶಸ್ಸು ದೊರೆಯುತ್ತದೆ. ಕಳೆದುಕೊಂಡಿದ್ದ ಗೌರವ ಸ್ಥಾನ ಪುನಃ ದೊರೆಯುತ್ತವೆ.

    ವೃಶ್ಚಿಕ ರಾಶಿ

    ಈ ವಾರ ಈ ರಾಶಿಯವರು ಅನಿರೀಕ್ಷಿತವಾಗಿ ಒಂದು ವ್ಯವಹಾರದಲ್ಲಿ ಹೂಡಿದ್ದ ಹಣ ಸಾಕಷ್ಟು ಲಾಭಗಳಿಸುತ್ತದೆ. ಕುಟುಂಬ ವ್ಯವಹಾರವನ್ನು ಮಾಡುತ್ತಿರುವವರು ಹಣ ಸೋರಿಕೆಯ ಬಗ್ಗೆ ಎಚ್ಚರವಹಿಸಿರಿ. ಆರೋಗ್ಯದ ಬಗ್ಗೆ ಗಮನ ಹರಿಸಿರಿ. ಬಹುದಿನಗಳ ನಂತರ ಸಂಗಾತಿಯೊಡನೆ ವಿಹಾರಕ್ಕಾಗಿ ಹೋಗಿಬರುವ ಸಾಧ್ಯತೆಗಳಿವೆ.

    ಧನು ರಾಶಿ

    ಈ ವಾರ ಈ ರಾಶಿಯವರ ಆರ್ಥಿಕ ಸ್ಥಿತಿಯು ಸಾಮಾನ್ಯ ಮಟ್ಟದಲ್ಲಿ ಇರುತ್ತದೆ. ಕೋರ್ಟು-ಕಚೇರಿ ವಿಚಾರಗಳಲ್ಲಿ ಸ್ವಲ್ಪಮಟ್ಟಿನ ಯಶಸ್ಸನ್ನು ಕಾಣಬಹುದು. ನಿಮಗೆ ಎದುರಾಗುವ ಸಮಸ್ಯೆಗಳನ್ನು ಸಮಾಧಾನವಾಗಿ ಸ್ವೀಕರಿಸಿರಿ.

    ಮಕರ ರಾಶಿ

    ಈ ವಾರ ಈ ರಾಶಿಯವರ ಆರ್ಥಿಕ ಸ್ಥಿತಿಯು ಸಾಮಾನ್ಯ ಮಟ್ಟದಲ್ಲಿ ಇರುತ್ತದೆ. ಕುಟುಂಬದ ವ್ಯವಹಾರಗಳಲ್ಲಿ ಅಭಿವೃದ್ಧಿ ಇರುತ್ತದೆ. ಹಿರಿಯರಿಗೆ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಆರೋಗ್ಯ ವ್ಯತ್ಯಾಸ ಕಾಣಬಹುದು. ವೈಯಕ್ತಿಕ ಕೆಲಸಗಳಲ್ಲಿ ಹೆಚ್ಚು ಯಶಸ್ಸನ್ನು ಕಾಣಬಹುದು.

    ಕುಂಭ ರಾಶಿ

    ಈ ವಾರ ಈ ರಾಶಿಯವರ ಆರ್ಥಿಕ ಸ್ಥಿತಿಯು ನಿಮ್ಮ ನಿರೀಕ್ಷೆಯಷ್ಟು ಇದ್ದೇ ಇರುತ್ತದೆ. ನಿವೇಶನ ಅಥವಾ ಸ್ಥಿರಾಸ್ತಿಯನ್ನು ಖರೀದಿ ಮಾಡುವ ಯೋಗವಿದೆ. ದಿನನಿತ್ಯದ ವ್ಯವಹಾರಗಳು ಎಂದಿನಂತೆ ನಡೆಯಲಿವೆ. ಹಣಕಾಸಿನ ಸಂಸ್ಥೆಗಳನ್ನು ನಡೆಸುವವರಿಗೆ ಅಭಿವೃದ್ಧಿ ಇರುತ್ತದೆ.

    ಇದನ್ನೂ ಓದಿ: Sunday Horoscope: ಭಾನುವಾರದಂದು ಹೀಗೆ ಮಾಡಿದರೆ ಲಕ್ ಕುದುರುತ್ತೆ!

    ಮೀನ ರಾಶಿ

    ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಉತ್ತಮವಾಗಿರುತ್ತದೆ. ಇದೀಗ ಮೂಳೆ ಸಂಬಂಧಿತ ನೋವು ಸ್ವಲ್ಪ ಹೆಚ್ಚಬಹುದು. ಮಹಿಳೆಯರಿಗೆ ಸಾಮಾಜಿಕ ಸ್ಥಾನಮಾನ ದೊರಕುವ ಸಾಧ್ಯತೆ ಇದೆ. ಲೇವಾದೇವಿ ವ್ಯವಹಾರವನ್ನು ಮಾಡುವವರಿಗೆ ನಿರೀಕ್ಷಿತ ಆದಾಯ ಬರುತ್ತದೆ.
    Published by:Annappa Achari
    First published: