Weekly Horoscope: ಯಾರಿಗೆ ಶುಭ, ಯಾರಿಗೆ ಲಾಭ? ದ್ವಾದಶ ರಾಶಿಗಳ ಫಲಾಫಲಗಳೇನು? ಇಲ್ಲಿದೆ ವಾರ ಭವಿಷ್ಯ

ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಲಾಭ? ಉದ್ಯೋಗ, ಆರೋಗ್ಯ, ಆರ್ಥಿಕ ಪರಿಸ್ಥಿತಿ, ದಾಂಪತ್ಯ ಜೀವನ ಹೇಗಿರಲಿದೆ? ದೋಷ ಪರಿಹಾರಕ್ಕೆ ಏನು ಮಾಡಬೇಕು? ಈ ವಾರ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಈ ಬಗ್ಗೆ ಇಲ್ಲಿದೆ ಮಾಹಿತಿ…

ವಾರ ಭವಿಷ್ಯ

ವಾರ ಭವಿಷ್ಯ

 • Share this:
  ಇಂದು ಚಂದ್ರನು (Moon) ಎರಡೆರಡರು ರಾಶಿಯಲ್ಲಿ (Rashi) ಸಂಚರಿಸುತ್ತಾನೆ. ಚಂದ್ರನ ಸಂಚಾರ ಸಂಜೆಯವರೆಗೆ (Evening) ತುಲಾ ರಾಶಿಯಲ್ಲಿ (Libra) ಇರುತ್ತದೆ. ನಂತರ ಚಂದ್ರನು ವೃಶ್ಚಿಕ ರಾಶಿಯನ್ನು (Scorpio) ಪ್ರವೇಶಿಸುತ್ತಾನೆ. ಚಂದ್ರನ ಈ ಚಲನೆಯಿಂದಾಗಿ ದ್ವಾದಶ ರಾಶಿಗಳ ಮೇಲೆ ಶುಭ (Good) ಮತ್ತು ಅಶುಭ (Bad) ಪರಿಣಾಮಗಳು (Effect) ಉಂಟಾಗುತ್ತವೆ. ಹಾಗಾದರೆ ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಲಾಭ? ಉದ್ಯೋಗ, ಆರೋಗ್ಯ, ಆರ್ಥಿಕ ಪರಿಸ್ಥಿತಿ, ದಾಂಪತ್ಯ ಜೀವನ ಹೇಗಿರಲಿದೆ? ದೋಷ ಪರಿಹಾರಕ್ಕೆ ಏನು ಮಾಡಬೇಕು? ಈ ವಾರ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಈ ಬಗ್ಗೆ ಇಲ್ಲಿದೆ ಮಾಹಿತಿ…

  ಮೇಷ ರಾಶಿ

  ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಇರುತ್ತದೆ. ಆರ್ಥಿಕ ಸಂಕಷ್ಟಗಳು ಸ್ವಲ್ಪಮಟ್ಟಿಗೆ ದೂರವಾಗುತ್ತವೆ. ನಿಂತಿದ್ದ ಕೆಲವು ವ್ಯವಹಾರಗಳು ಪುನಃ ಆರಂಭಗೊಳ್ಳುತ್ತವೆ. ಈ ವಾರ ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿ. ನರಗಳ ದೌರ್ಬಲ್ಯದಿಂದ ಬಳಲುತ್ತಿರುವವರು ಹೆಚ್ಚಿನ ಎಚ್ಚರವಹಿಸಿರಿ.

  ವೃಷಭ ರಾಶಿ

  ಈ ವಾರ ಈ ರಾಶಿಯವರಿಗೆ ಧನಾಗಮನವು ನಿರೀಕ್ಷೆಯಷ್ಟಿರುತ್ತದೆ. ಆದರೂ ಹಣಕಾಸಿನ ವಿಷಯದಲ್ಲಿ ಹೆಚ್ಚು ಎಚ್ಚರವಹಿಸಿರಿ. ನಿಮ್ಮ ಸಂಗಾತಿಯ ಆದಾಯದಲ್ಲಿ ಸಾಕಷ್ಟು ಹೆಚ್ಚಳ ಕಾಣಬಹುದು. ಈ ವಾರ ನಿಮ್ಮ ತಾಯಿಯ ಆರೋಗ್ಯದ ಮೇಲೆ ಹೆಚ್ಚಿನ ಗಮನ ಇರಿಸಿ. ಅನೇಕ ಗ್ರಹಗಳ ಅನುಗ್ರಹದಿಂದ ನೀವು ಪ್ರತಿ ಪರೀಕ್ಷೆಯಲ್ಲಿ ಯಶಸ್ವಿಯಾಗುತ್ತೀರಿ.

  ಮಿಥುನ ರಾಶಿ

  ಈ ವಾರ ಈ ರಾಶಿಯವರಿಗೆ ಧನಾದಾಯವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಹೊಟ್ಟೆಗೆ ಸಂಬಂಧಪಟ್ಟ ತೊಂದರೆಗಳು ಬಾಧಿಸಬಹುದು, ಅದರ ಬಗ್ಗೆ ಜಾಗೃತೆ ವಹಿಸಿರಿ. ನಿಮ್ಮ ಮಾತುಗಳಿಂದ ವೃಥಾ ಆರೋಪ ಎದುರಿಸುವ ಸಾಧ್ಯತೆ ಇದೆ. ಹೀಗಾಗಿ ಮಾತಿನ ಮೇಲೆ ಸಾಕಷ್ಟು ಹಿಡಿತ ಇರುವುದು ಒಳ್ಳೆಯದು.  ‘ಓಂ ಬುಧಾಯ ನಮಃ’ ಎಂಬ ಬುಧ ಮಂತ್ರವನ್ನು ಪ್ರತಿದಿನ 108 ಬಾರಿ ಪಠಿಸಿ.

  ಕರ್ಕಾಟಕ ರಾಶಿ

  ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ತೃಪ್ತಿಕರವಾಗಿರುತ್ತದೆ.  ಗುರುಹಿರಿಯರಿಂದ ಸಾಕಷ್ಟು ಸಲಹೆ ಮತ್ತು ಮಾರ್ಗದರ್ಶನಗಳು ಒದಗಿಬರುತ್ತವೆ. ಆದರೆ ಆಸ್ತಿ ಹಂಚಿಕೆ ವಿಚಾರದಲ್ಲಿ ಗೊಂದಲಗಳು ಆಗಬಹುದು. ಅವಿವಾಹಿತರಿಗೆ ಸಂಬಂಧ ಒದಗಿ ಬರುವ ಸಾಧ್ಯತೆ ಇದೆ. ಹೆಚ್ಚಾಗಿ ನಿಮ್ಮ ಆರೋಗ್ಯಕ್ಕೆ ಆದ್ಯತೆ ನೀಡುವುದು ಮುಖ್ಯ.

  ಇದನ್ನೂ ಓದಿ: Astrology: ಈ ರಾಶಿಯವರಿಗೆ ಕೆಲವು ವಿಷಯಗಳು ಭ್ರಮನಿರಸ ಮಾಡಲಿದೆ; ಇಲ್ಲಿದೆ ದಿನಭವಿಷ್ಯ

  ಸಿಂಹ ರಾಶಿ

  ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಸಾಮಾನ್ಯಗತಿಯಲ್ಲಿ ಇರುತ್ತದೆ. ಉದ್ಯೋಗ ನಿಮಿತ್ತ ದೂರಪ್ರಯಾಣದ ಸಾಧ್ಯತೆಗಳಿವೆ. ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ಮಹಿಳೆಯರ ಆರೋಗ್ಯದಲ್ಲಿ ಚೇತರಿಕೆಯನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಶ್ರದ್ಧೆ ಕಡಿಮೆಯಾಗಬಹುದು.

  ಕನ್ಯಾ ರಾಶಿ

  ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಷೇರು ವ್ಯವಹಾರ ಮಾಡುವವರಿಗೆ ಹಿನ್ನಡೆ ಇರುತ್ತದೆ. ಬಂಗಾರಕ್ಕೆ ಸಂಬಂಧಪಟ್ಟಂತೆ ಕಲಹಗಳು ಆಗಬಹುದು. ರಕ್ತದ ಒತ್ತಡ ಅಥವಾ ಉಸಿರಾಟದ ತೊಂದರೆ ಇರುವವರು ಎಚ್ಚರ ವಹಿಸಿರಿ. ವಿವಾಹ ಆಕಾಂಕ್ಷಿಗಳಿಗೆ ಸಂಬಂಧಗಳು ಒದಗಿ ಬರುವ ಸಾಧ್ಯತೆಗಳಿವೆ.

  ತುಲಾ ರಾಶಿ

  ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. . ವೃತ್ತಿಯ ಸ್ಥಳದಲ್ಲಿ ಕಿರಿಕಿರಿ ಹೆಚ್ಚಾಗಬಹುದು. ಸರ್ಕಾರಿ ಕೆಲಸಗಳು ಸರಾಗವಾಗಿ ನಡೆಯುತ್ತವೆ. ಕುಟುಂಬ ಸದಸ್ಯರೊಡನೆ ವಾಗ್ವಾದ ಮಾಡದೇ ಸುಮ್ಮನೆ ಇರಿ. ಮಕ್ಕಳಿಂದ ನಿಷ್ಠುರದ ಮಾತುಗಳು ಕೇಳಿಬರುತ್ತವೆ. ಯಾವುದೇ ಸಂದರ್ಭದಲ್ಲಿ ಆತುರಪಡಬೇಡಿ ಮತ್ತು ಪ್ರತಿ ನಿರ್ಧಾರದ ಬಗ್ಗೆ ಎಚ್ಚರಿಕೆಯಿಂದ ಯೋಚಿಸಿ.

  ವೃಶ್ಚಿಕ ರಾಶಿ

  ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಉದರ ಸಂಬಂಧಿ ಕಾಯಿಲೆಗಳಿರುವವರು ಎಚ್ಚರಿಕೆ ವಹಿಸಿರಿ. ವೃತ್ತಿಯಲ್ಲಿದ್ದ ಶತ್ರುಗಳು ದೂರವಾಗುವರು. ಧಾರ್ಮಿಕ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ಮೂಡಿ ದೇವರ ಬಗ್ಗೆ ಒಲವು ಹೆಚ್ಚುವುದು.  'ಸಮಯವೇ ಹಣ' ಎಂಬ ವಾಕ್ಯವನ್ನು ನೀವು ಒಪ್ಪಿದರೆ, ನಿಮ್ಮ ಸಾಮರ್ಥ್ಯಗಳೊಂದಿಗೆ ಉನ್ನತ ಸ್ಥಾನವನ್ನು ತಲುಪಬಹುದು.

  ಧನು ರಾಶಿ

  ಈ ವಾರ ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಹೆಚ್ಚು ಜಾಗರೂಕತೆಯಿಂದ ಇರುವುದು ಉತ್ತಮ. ವಾಹನ ಖರೀದಿಯ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರುವಿರಿ. ನರದೌರ್ಬಲ್ಯ ಇರುವವರು ವಿಶ್ರಾಂತಿ ಮಾಡಿ ಹಾಗೂ ಡಾಕ್ಟರ್ ಸಲಹೆ ಪಡೆಯಿರಿ. ಗುರುವಾರದಂದು ದೇವಸ್ಥಾನದಲ್ಲಿ ಹಳದಿ ವಸ್ತುಗಳನ್ನು ದಾನ ಮಾಡಿ.

  ಮಕರ ರಾಶಿ

  ಈ ವಾರ ಈ ರಾಶಿಯವರ ಹಣಕಾಸು ಸ್ಥಿತಿ ಸಾಮಾನ್ಯವಾಗಿ ಇರುತ್ತದೆ. ಯಾರಿಗೂ ಸಾಲ ಕೊಡುವುದು ಬೇಡ. ಜಾಮೀನು ನೀಡುವುದು ಖಂಡಿತ ಬೇಡ. ಸ್ತ್ರೀಯರು ಹೊಂದಿರುವ ಆಸ್ತಿಗಳ ಮೇಲೆ ತಕರಾರು ಬರಬಹುದು. ನೀವು ಕೆಲಸದ ಕ್ಷೇತ್ರದಲ್ಲಿ ಅನೇಕ ಹೊಸ ಮತ್ತು ದೊಡ್ಡ ಸವಾಲುಗಳನ್ನು ಎದುರಿಸಬಹುದು. ಶನಿ ದೇವರನ್ನು ಆರಾಧಿಸಿ.

  ಕುಂಭ ರಾಶಿ

  ಈ ವಾರ ಈ ರಾಶಿಯವರ ಹಣಕಾಸಿನ ಹರಿವು ಸಾಮಾನ್ಯವಾಗಿರುತ್ತದೆ. ಆದರೂ ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪಮಟ್ಟಿನ ಚೇತರಿಕೆಯನ್ನು ಕಾಣಬಹುದು. ಸದ್ಯದಲ್ಲಿ ದೊಡ್ಡಮಟ್ಟದ ಹೂಡಿಕೆಗಳನ್ನು ಮಾಡದಿರುವುದು ಒಳಿತು. ಕುಟುಂಬದವರೊಡನೆ ಧಾರ್ಮಿಕ ಸ್ಥಳಗಳನ್ನು ನೋಡುವ ಯೋಗವಿದೆ. ನಿಮ್ಮ ಜೀವನದಲ್ಲಿನ ಸವಾಲುಗಳನ್ನು ಕಡಿಮೆ ಮಾಡಲು ವರ್ಷವಿಡೀ ಶಿವನ ಆಶೀರ್ವಾದವನ್ನು ಪಡೆಯಲು ಶಿವನನ್ನು ಆರಾಧಿಸಿ.

  ಇದನ್ನೂ ಓದಿ: Zodiac Signs : ಅಧಃಪತನದಲ್ಲಿ ಶನಿ, ಜೂನ್ ತಿಂಗಳು ಈ ರಾಶಿಯವರಿಗೆ ಹಣಕಾಸು ವಿಷಯದಲ್ಲಿ ಕೆಟ್ಟ ಸಮಯ!

  ಮೀನ ರಾಶಿ

  ಈ ವಾರ ಈ ರಾಶಿಯವರ ಹಣಕಾಸಿನ ಸ್ಥಿತಿಯು ಸಾಮಾನ್ಯವಾಗಿರುತ್ತದೆ. ಒಡವೆಗಳನ್ನು ಖರೀದಿ ಮಾಡಲು ಹೆಚ್ಚು ಆಸಕ್ತಿ ತೋರುವಿರಿ. ಸ್ವಯಂ ಉದ್ಯೋಗ ಮಾಡುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ವಾಹನ ಚಲಾಯಿಸುವಾಗ ಹೆಚ್ಚಿನ ನಿಗಾ ಇರಲಿ. ಸಂಕಷ್ಟ ಪರಿಹಾರಕ್ಕಾಗಿ ಹಕ್ಕಿಗಳಿಗೆ ಆಹಾರ ನೀಡಿರಿ.
  Published by:Annappa Achari
  First published: