Weekly Horoscope: ಮಿಥುನ ರಾಶಿಯಲ್ಲಿ ಸೂರ್ಯ-ಬುಧನ ಸಂಚಾರದಿಂದ ಯಾರಿಗೆ ಶುಭ? ಯಾರಿಗೆ ಲಾಭ? ಇಲ್ಲಿದೆ ಓದಿ ವಾರ ಭವಿಷ್ಯ

ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಲಾಭ? ಉದ್ಯೋಗ, ಆರೋಗ್ಯ, ಆರ್ಥಿಕ ಪರಿಸ್ಥಿತಿ, ದಾಂಪತ್ಯ ಜೀವನ ಹೇಗಿರಲಿದೆ? ದೋಷ ಪರಿಹಾರಕ್ಕೆ ಏನು ಮಾಡಬೇಕು? ಈ ವಾರ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಈ ಬಗ್ಗೆ ಇಲ್ಲಿದೆ ಮಾಹಿತಿ…

ವಾರ ಭವಿಷ್ಯ

ವಾರ ಭವಿಷ್ಯ

  • Share this:
    ಬುಧ ಗ್ರಹವು (Mercury) 2022ರ ಜುಲೈ (July) 2ರಿಂದ ಮಿಥುನ ರಾಶಿಯನ್ನು (Gemini) ಪ್ರವೇಶಿಸಿದೆ. ಮುಂದಿನ ಎರಡು ವಾರಗಳವರೆಗೆ ಬುಧ ಗ್ರಹವು ಸೂರ್ಯನೊಂದಿಗೆ (Son) ಸಾಗುತ್ತದೆ. ಈ ವೇಳೆ ಇದು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಬುಧನ ಚಲನೆಯಿಂದ ಹಲವು ರಾಶಿಗಳಿಗೆ ಒಳಿತಾದರೆ, ಮತ್ತೆ ಕೆಲವು ರಾಶಿಯ ಜನರಿಗೆ ಅಷ್ಟು ಶ್ರೇಯಸ್ಕರವಲ್ಲ. ಹಾಗಾದರೆ ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಲಾಭ? ಉದ್ಯೋಗ, ಆರೋಗ್ಯ, ಆರ್ಥಿಕ ಪರಿಸ್ಥಿತಿ, ದಾಂಪತ್ಯ ಜೀವನ ಹೇಗಿರಲಿದೆ? ದೋಷ ಪರಿಹಾರಕ್ಕೆ ಏನು ಮಾಡಬೇಕು? ಈ ವಾರ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಈ ಬಗ್ಗೆ ಇಲ್ಲಿದೆ ಮಾಹಿತಿ…

    ಮೇಷ ರಾಶಿ

    ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಸಾಮಾನ್ಯವಾಗಿ ಇರುತ್ತದೆ. ಗುತ್ತಿಗೆ ವ್ಯವಹಾರವನ್ನು ಮಾಡುತ್ತಿರುವವರಿಗೆ ಅವರ ಬಾಕಿಹಣ ಬರಲಾರಂಭಿಸುತ್ತದೆ. ನಿಮ್ಮ ಒಡಹುಟ್ಟಿದವರೊಂದಿಗೆ ನೀವು ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ ಮತ್ತು ನಿಮ್ಮ ಕಿರಿಯರಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಈ ಅವಧಿಯು ಉದ್ಯೋಗಿಗಳಿಗೆ ತುಂಬಾ ಒಳ್ಳೆಯದು.

    ವೃಷಭ ರಾಶಿ

    ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಹಳೆಯ ಕೈಸಾಲಗಳನ್ನು ಸರ್ಕಾರಿ ಸಾಲಗಳ ಮೂಲಕ ತೀರಿಸಬಹುದು. ವೃತ್ತಿ ಜೀವನದಲ್ಲಿ ಬ್ರೇಕ್ ಎದುರು ನೋಡುತ್ತಿರುವವರಿಗೆ ಒಂದಷ್ಟು ಅವಕಾಶಗಳು ಸಿಗುತ್ತವೆ. ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳೊಡನೆ ಇದ್ದ ಮನಃಸ್ತಾಪ ದೂರವಾಗುತ್ತದೆ.

    ಮಿಥುನ ರಾಶಿ

    ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಹೊಸ ವ್ಯಾಪಾರ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಲು ಸಮಯವು ಫಲಪ್ರದವಾಗಿದೆ. ಹೊಸ ವಸ್ತ್ರಗಳನ್ನು ಖರೀದಿ ಮಾಡಲು ಮುಂದಾಗುವಿರಿ. ಆಸ್ತಿ ವಿಚಾರಗಳ ಬಗ್ಗೆ ಬಂಧುಗಳಲ್ಲಿ ಒಮ್ಮತ ಮೂಡಿ ಆಸ್ತಿ ವಿಭಾಗವಾಗುವುದು. ಅಪರೂಪದ ವ್ಯಕ್ತಿಯೊಬ್ಬರನ್ನು ಭೇಟಿಯಾಗಿ ನಿಮ್ಮ ವ್ಯವಹಾರದಲ್ಲಿ ಹೊಸ ರೀತಿಯ ತಿರುವನ್ನು ಕಾಣುವಿರಿ.

    ಕರ್ಕಾಟಕ ರಾಶಿ

    ಈ ವಾರ ಈ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಚೇತರಿಕೆಯನ್ನು ಕಾಣಬಹುದು. ಆದರೂ ಖರ್ಚನ್ನು ಮಿತಿಯಲ್ಲಿ ಇಟ್ಟುಕೊಳ್ಳುವುದು ಬಹಳ ಉತ್ತಮ. ನಿಮ್ಮ ಸ್ನೇಹಿತರು ಮತ್ತು ಪರಿಚಯಸ್ಥರೊಂದಿಗೆ ನೀವು ಪ್ರವಾಸವನ್ನು ಸಹ ಯೋಜಿಸಬಹುದು. ನಿಮ್ಮ ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗಿರುವುದಿಲ್ಲ. ನೀವು ಒತ್ತಡ ಮತ್ತು ನಿದ್ರಾ ಹೀನತೆಗೆ ಗುರಿಯಾಗುತ್ತೀರಿ. ಅಲ್ಲದೆ ಜ್ವರ ಮತ್ತು ಶೀತಕ್ಕೆ ಗುರಿಯಾಗಬಹುದು.

    ಇದನ್ನೂ ಓದಿ: Astrology: ಭಾನುವಾರ ಯಾವ ರಾಶಿಯವರ ದಿನ ಹೇಗಿರತ್ತೆ; ಇಲ್ಲಿದೆ ದಿನ ಭವಿಷ್ಯ

    ಸಿಂಹ ರಾಶಿ

    ಈ ವಾರ ಈ ರಾಶಿಯವರಿಗೆ ಆದಾಯದಷ್ಟೇ ಖರ್ಚು ಇರುತ್ತದೆ, ಸರಿಯಾಗಿ ಹಣ ನಿರ್ವಹಣೆಯನ್ನು ಮಾಡಿರಿ. ಇನ್ನು ನಿಮ್ಮ ಮನೆಯ ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಬಹುದು. ಮನೆಯ ಸದಸ್ಯರೊಂದಿಗೆ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ. ದೈವ ದರ್ಶನಕ್ಕಾಗಿ ಹೋಗಿ ಬರಬೇಕೆಂಬ ಆಸೆ ಈಡೇರುತ್ತದೆ.

    ಕನ್ಯಾ ರಾಶಿ

    ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ತಾಯಿಯೊಡನೆ ಹಣದ ವಿಷಯಕ್ಕೆ ಮುನಿಸು ಹೆಚ್ಚಾಗಬಹುದು. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಯಿದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಸ್ವಂತ ವ್ಯವಹಾರದಲ್ಲಿರುವವರು ತಮ್ಮ ವ್ಯವಹಾರದಲ್ಲಿ ಬೆಳವಣಿಗೆ ಮತ್ತು ವಿಸ್ತರಣೆಯನ್ನು ಕಾಣುತ್ತಾರೆ.

    ತುಲಾ ರಾಶಿ

    ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ನಿರೀಕ್ಷೆಗೆ ತಕ್ಕಂತೆ ಇರುತ್ತದೆ. ಕೆಲವರಿಗೆ ಉದ್ಯೋಗ ಸ್ಥಳದಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಚಿನ್ನಾಭರಣಗಳನ್ನು ಹೆಚ್ಚು ಎಚ್ಚರಿಕೆಯಿಂದ ಕಾಪಾಡಿಕೊಳ್ಳಿರಿ. ನಿಮ್ಮ ತಂದೆಯೊಂದಿಗೆ ನೀವು ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ ಮತ್ತು ನೀವು ಅವರ ಬೆಂಬಲ ಮತ್ತು ಸಹಾಯವನ್ನು ಪಡೆಯಬಹುದು. ಈ ಅವಧಿಯಲ್ಲಿ ನಿಮ್ಮ ತಂದೆಯ ಆರೋಗ್ಯವು ಸೂಕ್ಷ್ಮವಾಗಿರುತ್ತದೆ.

    ವೃಶ್ಚಿಕ ರಾಶಿ

    ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಸಾಮಾನ್ಯಗತಿಯಲ್ಲಿ ಇರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ನಿಮ್ಮ ಆರೋಗ್ಯವು ಸೂಕ್ಷ್ಮವಾಗಿರುತ್ತದೆ ಏಕೆಂದರೆ ನೀವು ಅಲರ್ಜಿಗಳು, ಜ್ವರ ಮತ್ತು ಶೀತಗಳಿಗೆ ಗುರಿಯಾಗುತ್ತೀರಿ.  ಕೈಬಿಟ್ಟು ಹೋಗಿದ್ದ ಹಿರಿಯರ ಆಸ್ತಿಯನ್ನು ಪುನಃ ಪಡೆಯಬಹುದು. ಯಾವುದೇ ವಿಷಯದಲ್ಲೂ ಅತಿಯಾದ ಉದ್ವೇಗವನ್ನು ಮಾಡಿಕೊಳ್ಳದಿರುವುದು ಬಹಳ ಉತ್ತಮ.

    ಧನು ರಾಶಿ

    ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಪಾಲುದಾರಿಕೆ ವ್ಯವಹಾರದಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವವರು, ಅವರ ಕೆಲಸದಲ್ಲಿ ಬೆಳವಣಿಗೆ ಇರುತ್ತದೆ. ಕೆಲವು ಮಹಿಳೆಯರ ಆಸೆ ಆಕಾಂಕ್ಷೆಗಳು ಈಡೇರಬಹುದು. ಸರ್ಕಾರಿ ಕಚೇರಿಯ ಕೆಲಸಗಳು ಶೀಘ್ರವಾಗಿ ಆಗುತ್ತದೆ. ಸಂಗಾತಿಯ ಆದಾಯದಲ್ಲಿ ಸಾಕಷ್ಟು ಹೆಚ್ಚಳವನ್ನು ಕಾಣಬಹುದು.

    ಮಕರ ರಾಶಿ

    ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ವ್ಯಾಪಾರ-ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಲಾಭವನ್ನು ಕಾಣಬಹುದು. ಬಹಳ ದಿನಗಳಿಂದ ನೀವು ನಿರೀಕ್ಷಿಸುತ್ತಿದ್ದ ಸಮಾಚಾರ ಕೇಳಿಬಂದು ಮನಸ್ಸಿನಲ್ಲಿ ಇದ್ದ ದುಗುಡಗಳು ಮರೆಯಾಗುತ್ತವೆ. ಮನೆಯ ಸದಸ್ಯರ ಅನಾರೋಗ್ಯವು ನಿಮ್ಮ ಕಾಳಜಿಯ ವಿಷಯವಾಗಬಹುದು, ಚಿಂತೆ ಮಾಡುವ ಬದಲು ನೀವು ಅವರ ಸೇವೆ ಮಾಡಿದರೆ ಉತ್ತಮವಾಗಿರುತ್ತದೆ.

    ಕುಂಭ ರಾಶಿ

    ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಅವಶ್ಯಕತೆಗೆ ತಕ್ಕಷ್ಟು ಇರುತ್ತದೆ. ಹೊರಗುತ್ತಿಗೆ ವ್ಯವಹಾರವನ್ನು ಮಾಡುತ್ತಿರುವವರಿಗೆ ಹೆಚ್ಚಿನ ಸಂಪಾದನೆ ಇರುತ್ತದೆ. ಆಸ್ತಿ ವಿಚಾರದಲ್ಲಿ ಮುನ್ನಡೆಯನ್ನು ಕಾಣಬಹುದು. ಪ್ರವಚನಗಳನ್ನು ನೀಡಲು ದೇವಾಲಯ ಅಥವಾ ಧಾರ್ಮಿಕ ಸಂಸ್ಥೆಗಳಿಗೆ ಹೋಗುವಿರಿ.

    ಇದನ್ನೂ ಓದಿ: Numerology: ಪ್ರೀತಿ ಫಲಿಸಲು ಜ್ಯೋತಿಷ್ಯದಲ್ಲಿದೆ ಸಲಹೆ! ಓದಿ

    ಮೀನ ರಾಶಿ

    ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಅವಶ್ಯಕತೆಗೆ ತಕ್ಕಷ್ಟು ಇರುತ್ತದೆ. ತಾಯಿಯ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವನ್ನು ಕಾಣಬಹುದು. ಅನಿರೀಕ್ಷಿತ ಪ್ರಯಾಣ ಸಂಭವಿಸಿ ಹೆಚ್ಚು ಖರ್ಚಿಗೆ ನಾಂದಿಯಾಗಬಹುದು. ವೃತ್ತಿಪರವಾಗಿ ನೋಡಿದರೆ, ಈ ಸಮಯವು ಸರ್ಕಾರಿ ನೌಕರರಿಗೆ ಅನುಕೂಲಕರವಾಗಿದೆ.
    Published by:Annappa Achari
    First published: