Weekly Horoscope: ಕರ್ಕಾಟಕ ರಾಶಿಗೆ ಶುಕ್ರನ ಪ್ರವೇಶ, ಯಾರಿಗೆ ಲಾಭ? ಯಾರಿಗೆ ದೋಷ? ಇಲ್ಲಿದೆ ವಾರ ಭವಿಷ್ಯ

ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಲಾಭ? ಉದ್ಯೋಗ, ಆರೋಗ್ಯ, ಆರ್ಥಿಕ ಪರಿಸ್ಥಿತಿ, ದಾಂಪತ್ಯ ಜೀವನ ಹೇಗಿರಲಿದೆ? ದೋಷ ಪರಿಹಾರಕ್ಕೆ ಏನು ಮಾಡಬೇಕು? ಈ ವಾರ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಈ ಬಗ್ಗೆ ಇಲ್ಲಿದೆ ಮಾಹಿತಿ…

ವಾರ ಭವಿಷ್ಯ

ವಾರ ಭವಿಷ್ಯ

 • Share this:
  ಶುಕ್ರ ಗ್ರಹವು (Venus) ಇಂದು, ಅಂದರೆ ಆಗಸ್ಟ್ 7ರಂದು ಕಟಕ ರಾಶಿಗೆ (Cancer) ಪ್ರವೇಶಿಸಿದೆ.7 ಆಗಸ್ಟ್ 2022 ರಂದು ಮುಂಜಾನೆ 05:12ಕ್ಕೆ ಶುಕ್ರ ಗ್ರಹವು ಕರ್ಕಾಟಕ ರಾಶಿ ಪ್ರವೇಶಿಸಿದೆ. ಆಗಸ್ಟ್​ 31ರವರೆಗೆ ಶುಕ್ರ ಗ್ರಹವು ಅಲ್ಲೇ ಇರಲಿದ್ದು, ಬಳಿಕ ಸಿಂಹ ರಾಶಿಯಲ್ಲಿ (Leo) ಸಾಗುತ್ತದೆ. ಈ ಶುಕ್ರ ಸಂಕ್ರಮದಿಂದ (Shukra Sankrama) ದ್ವಾದಶ ರಾಶಿಗಳ ಮೇಲೆ ಪ್ರಭಾವ ಉಂಟಾಗಲಿದೆ. ಹಾಗಾದರೆ ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಲಾಭ? ಉದ್ಯೋಗ, ಆರೋಗ್ಯ, ಆರ್ಥಿಕ ಪರಿಸ್ಥಿತಿ, ದಾಂಪತ್ಯ ಜೀವನ ಹೇಗಿರಲಿದೆ? ದೋಷ ಪರಿಹಾರಕ್ಕೆ ಏನು ಮಾಡಬೇಕು? ಈ ವಾರ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಈ ಬಗ್ಗೆ ಇಲ್ಲಿದೆ ಮಾಹಿತಿ…

   ಮೇಷ ರಾಶಿ

  ಈ ವಾರ ಈ ರಾಶಿಯವರಿಗೆ ಧನ ಆದಾಯವು ಸಾಮಾನ್ಯಗತಿಯಲ್ಲಿ ಇರುತ್ತದೆ.ಆದರೆ ಹಣಕಾಸಿನ ಪರಿಸ್ಥಿತಿಗಳು ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಬಹುದು. ಪ್ರೇಮ ಸಂಬಂಧದಲ್ಲಿ ಇತರರ ಮಾತನ್ನು ಕೇಳದೆ ನಿಮ್ಮ ಸ್ವಂತ ನಿರ್ಧಾರ ತೆಗೆದುಕೊಳ್ಳಿ. ಮಂಗಳವಾರದಂದು ಆಂಜನೇಯನ ದೇವಸ್ಥಾನಕ್ಕೆ ತೆರಳಿ, ದೇವರಿಗೆ ಬೂಂದಿಯನ್ನು ಅರ್ಪಿಸಿ.

  ವೃಷಭ ರಾಶಿ

  ಈ ವಾರ ಈ ರಾಶಿಯವರಿಗೆ ಹಣಕಾಸಿನ ಅನುಕೂಲವಿರುತ್ತದೆ. ಈ ವಾರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆ. ವಿವಾಹ ಆಕಾಂಕ್ಷಿಗಳಿಗೆ ಸಂಬಂಧ ದೊರಕುವ ಸಾಧ್ಯತೆ ಇದೆ. ಈಗ ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮಾಡುವ ಯೋಗವಿದೆ. ನಿಮ್ಮ ಮನೆಯಲ್ಲಿರುವ ಮಹಿಳಾ ಸದಸ್ಯರಿಗೆ ಬಟ್ಟೆ ಅಥವಾ ಸೌಂದರ್ಯವರ್ಧಕಗಳನ್ನು ಉಡುಗೊರೆಯಾಗಿ ನೀಡಿ.

  ಮಿಥುನ ರಾಶಿ

  ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಅಗತ್ಯವನ್ನು ಪೂರೈಸುತ್ತದೆ. ಮಕ್ಕಳಿಗಾಗಿ ಹೆಚ್ಚು ಹಣ ವ್ಯಯವಾಗುತ್ತದೆ. ಶೀತಬಾಧೆ ಇರುವವರಿಗೆ ಅದರ ತೀವ್ರತೆ ಹೆಚ್ಚಬಹುದು. ಸಂಗಾತಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಉದ್ಯೋಗಸ್ಥರಿಗೆ ಕೆಲಸದಲ್ಲಿನ ಒತ್ತಡ ಕಡಿಮೆಯಾಗುತ್ತದೆ. ನಿಮ್ಮ ತಾಯಿ, ಸಹೋದರಿ, ಚಿಕ್ಕಮ್ಮ ಮತ್ತು ನಿಮ್ಮ ಕುಟುಂಬದ ಇತರ ಮಹಿಳಾ ಸದಸ್ಯರಿಗೆ ಬಳೆಗಳನ್ನು ಉಡುಗೊರೆಯಾಗಿ ನೀಡಿ.

  ಕರ್ಕಾಟಕ ರಾಶಿ

  ಈ ವಾರ ಈ ರಾಶಿಯವರಿಗೆ ಆದಾಯದಷ್ಟೇ ಖರ್ಚು ಇರುವುದರಿಂದ ಹಣದ ನಿರ್ವಹಣೆ ಅತಿ ಅಗತ್ಯ. ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಬೇಕು. ತಂದೆಯ ಆರೋಗ್ಯದ ಬಗ್ಗೆ ಮನಸ್ಸು ಚಿಂತಿಸುತ್ತಿರುತ್ತದೆ. ವಾರದ ಕೊನೆಯಲ್ಲಿ ಒಳ್ಳೆಯ ಸುದ್ದಿ ಬರಬಹುದು. ನಿಮ್ಮ ಆರೋಗ್ಯಕ್ಕಾಗಿ ಪ್ರತಿದಿನ ಮಲಗುವ ಮುನ್ನ ಒಂದು ಲೋಟ ಹಾಲು ಸೇವಿಸಿ.

  ಇದನ್ನೂ ಓದಿ: Astrology: ಜಗಳದ ತೊಂದರೆಯಲ್ಲಿ ಸಿಲುಕಲಿದ್ದಾರೆ ವೃಶ್ಚಿಕ, ಧನು ರಾಶಿಯವರು; ಹೇಗಿರಲಿದೆ ಉಳಿದವರ ದಿನಭವಿಷ್ಯ

  ಸಿಂಹ ರಾಶಿ

  ಈ ವಾರ ಈ ರಾಶಿಯವರಿಗೆ ನಿರೀಕ್ಷಿಯಷ್ಟೇ ಆದಾಯ ಇರುತ್ತದೆ. ಕಾರ್ಯಕ್ಷೇತ್ರದಲ್ಲಿ ಪ್ರಗತಿ ಕಂಡುಬರುವುದು ಮತ್ತು ಶುಭ ಸಮಾಚಾರ ಸಿಗಬಹುದು. ಆರೋಗ್ಯದಲ್ಲಿ ಸಾಮಾನ್ಯ ಸುಧಾರಣೆ ಕಂಡುಬರುತ್ತದೆ. ಸ್ಥಿರಾಸ್ತಿಯನ್ನು ಮಾಡುವ ವಿಚಾರದಲ್ಲಿ ಶುಭಸೂಚನೆಗಳು ದೊರೆಯುತ್ತವೆ. ಉದ್ಯೋಗದಲ್ಲಿ ನಿರೀಕ್ಷಿತ ಧನ ಏರಿಕೆ ನಿಧಾನವಾಗಬಹುದು. ನೀವು ವಿಷ್ಣುವಿನ ಆರಾಧನೆ ಮಾಡಿ.

  ಕನ್ಯಾ ರಾಶಿ

  ಈ ವಾರ ಈ ರಾಶಿಯವರಿಗೆ ಹಣದ ಒಳ ಹರಿವು ನಿರೀಕ್ಷೆಯಂತೆ ಇರುವುದಿಲ್ಲ. ಕೆಲಸದ ಸ್ಥಳದಲ್ಲಿ ಸಮತೋಲನ ಕಾಯ್ದುಕೊಂಡು ಮುನ್ನಡೆಯಬೇಕಾದ ಅಗತ್ಯವಿದೆ. ಉದ್ಯೋಗದ ನಿಮಿತ್ತ ತರಬೇತಿಯಲ್ಲಿ ಭಾಗವಹಿಸುವಿರಿ. ಕುಟುಂಬದ ಸಂತೋಷಕ್ಕಾಗಿ ನೀವು ಸ್ವಲ್ಪ ಪ್ರಯತ್ನ ಮಾಡಬೇಕಾಗುತ್ತದೆ. ಅತಿಯಾದ ಸುತ್ತಾಟದಿಂದ ದೇಹಾಲಸ್ಯ ಉಂಟಾಗುವ ಸಾಧ್ಯತೆಗಳಿವೆ.

  ತುಲಾ ರಾಶಿ

  ಈ ವಾರ ಈ ರಾಶಿಯವರಿಗೆ ಹಣದ ಒಳ ಹರಿವು ನಿರೀಕ್ಷೆಗೆ ತಕ್ಕಂತೆ ಇರುತ್ತದೆ. ನಿಮ್ಮ ಆರೋಗ್ಯವನ್ನು ಸುಧಾರಿಸಲು ನೀವು ದೃಢ ನಿರ್ಧಾರವನ್ನು ಮಾಡಿದರೆ, ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಸಂಗಾತಿ ಅಧಿಕ ಖರ್ಚು ಚಿಂತೆಗೀಡು ಮಾಡಬಹುದು. ಗರ್ಭಿಣಿಯರು ಹೆಚ್ಚು ಜಾಗ್ರತೆ ವಹಿಸುವುದು ಉತ್ತಮ. ಸಮಸ್ೆ ಪರಿಹಾರಕ್ಕೆ ಶ್ರೀಸೂಕ್ತಂ ಪಠಿಸಿ.

  ವೃಶ್ಚಿಕ ರಾಶಿ

  ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಸಾಧಾರಣವಾಗಿರುತ್ತದೆ. ಪ್ರೀತಿಪಾತ್ರರ ಉಪಸ್ಥಿತಿಯಲ್ಲಿ ಶಾಂತಿ ಮತ್ತು ಸಂತೋಷವನ್ನು ಅನುಭವಿಸಿ. ಈ ವಾರ ವ್ಯಾಪಾರ ಪ್ರಯಾಣದ ಮೂಲಕ ವಿಶೇಷ ಲಾಭವನ್ನು ಪಡೆಯಬಹುದು. ಆಯುಧಗಳ ಜೊತೆ ಕೆಲಸ ಮಾಡುವಾಗ ಎಚ್ಚರವಿರಲಿ, ಗಾಯವಾಗುವ ಸಂದರ್ಭವಿದೆ. ಹನುಮಂತನಿಗೆ ಕುಂಕುಮವನ್ನು ಅರ್ಪಿಸಿ.

  ಧನು ರಾಶಿ

  ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಮಂದಗತಿಯಲ್ಲಿ ಇದ್ದರೂ ಅದರ ನಿರ್ವಹಣೆ ಸರಿಯಾಗಿ ಮಾಡುವಿರಿ. ಉದ್ಯೋಗಸ್ಥರಿಗೆ ಸೂಕ್ತ ಸ್ಥಾನಮಾನ ಸಿಗುವ ಸಾಧ್ಯತೆಗಳಿವೆ. ಕೆಲಸದ ಕ್ಷೇತ್ರದಲ್ಲಿ ಕಟ್ಟುನಿಟ್ಟಿನ ಮನೋಭಾವನೆಯನ್ನು ಇಟ್ಟುಕೊಂಡರೆ ಮಾತ್ರ ಉತ್ತಮ ಫಲಿತಾಂಶ ಸಿಗುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಬಡವರಿಗೆ ವಸ್ತ್ರ ದಾನ ಮಾಡಿದರೆ ಒಳ್ಳೆಯದು.

  ಮಕರ ರಾಶಿ

  ಈ ವಾರ ಈ ರಾಶಿಯವರಿಗೆ ಆದಾಯ ಸಾಮಾನ್ಯವಾಗಿರುತ್ತದೆ. ಗುರುಹಿರಿಯರ ಬಗ್ಗೆ ಉತ್ತಮ ಗೌರವವನ್ನು ತೋರಿಸುವಿರಿ. ಸಂಗಾತಿಗೆ ಸರ್ಕಾರದಿಂದ ಬರಬೇಕಾಗಿದ್ದ ಸಹಾಯಧನ ಬರುತ್ತದೆ. ತಂದೆಯಿಂದ ನಿಮ್ಮ ವ್ಯಾಪಾರ ವ್ಯವಹಾರಗಳಿಗೆ ಬಂಡವಾಳ ದೊರೆಯುತ್ತದೆ. ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಮನೆ ಅಥವಾ ಕಚೇರಿಯ ನೌಕರರು ಅಥವಾ ಸೇವಕರಿಗೆ ಸಹಾಯ ಮಾಡಿ.

  ಕುಂಭ ರಾಶಿ

  ಈ ವಾರ ಈ ರಾಶಿಯವರಿಗೆ ಧನಾದಾಯವು ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಒಂದೆಡೆ ಸಾಲಪಡೆದು ಇತರ ಸಾಲಗಳನ್ನು ತೀರಿಸಬಹುದು. ಅನಗತ್ಯವಾಗಿ ಆಸ್ತಿ ಖರೀದಿಸಲು ಮುಂದಾಗಬೇಡಿ. ಪ್ರೇಮ ವ್ಯವಹಾರಗಳಲ್ಲಿ ಆಹ್ಲಾದಕರ ಅನುಭವವಿರುತ್ತದೆ. ಕೆಲಸದ ಕ್ಷೇತ್ರದಲ್ಲಿ ಈ ವಾರ ತೊಂದರೆ ಉಂಟಾಗಬಹುದು. ನಿತ್ಯವೂ ಶ್ರೀ ರಾಧೆ ಕೃಷ್ಣನ ಆರಾಧನೆ ಮಾಡಿ.

  ಇದನ್ನೂ ಓದಿ: Numerology: ಶ್ರಾವಣ ಮಾಸದ ರವಿವಾರ ಯಾವುದು ಶುಭ? ಯಾವುದು ಅಶುಭ?

  ಮೀನ ರಾಶಿ

  ಈ ವಾರ ಈ ರಾಶಿಯವರಿಗೆ ಆದಾಯ ಸಾಮಾನ್ಯ ರೀತಿಯಲ್ಲಿ ಇರುತ್ತದೆ. ವ್ಯಾಪಾರ ಪ್ರಯಾಣದ ಮೂಲಕ ಒಳ್ಳೆಯ ಸುದ್ದಿ ಬರಬಹುದು ಮತ್ತು ಉತ್ತಮ ಸ್ಥಳಕ್ಕೆ ಪ್ರಯಾಣಿಸುವ ಬಗ್ಗೆ ಯೋಚಿಸಬಹುದು. ಹೆಣ್ಣುಮಕ್ಕಳ ವಿದ್ಯಾಭ್ಯಾಸವು ನಿರೀಕ್ಷೆಗಿಂತ ಹೆಚ್ಚಿಗೆ ಇರುತ್ತದೆ. ಸಂಗಾತಿಯ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸಗಳಾಗಬಹುದು. ಪಕ್ಷಿಗಳಿಗೆ ಏಳು ಬಗೆಯ ಧಾನ್ಯಗಳನ್ನು ನೀಡಿ.
  Published by:Annappa Achari
  First published: