• Home
 • »
 • News
 • »
 • astrology
 • »
 • Weekly Horoscope: ನವರಾತ್ರಿ ಸುಸಂದರ್ಭದಲ್ಲಿ ಯಾರ ಬಾಳಲ್ಲಿ ತುಂಬಲಿದೆ ನವರಂಗು? ಇಲ್ಲಿದೆ ದ್ವಾದಶ ರಾಶಿಗಳ ವಾರ ಭವಿಷ್ಯ

Weekly Horoscope: ನವರಾತ್ರಿ ಸುಸಂದರ್ಭದಲ್ಲಿ ಯಾರ ಬಾಳಲ್ಲಿ ತುಂಬಲಿದೆ ನವರಂಗು? ಇಲ್ಲಿದೆ ದ್ವಾದಶ ರಾಶಿಗಳ ವಾರ ಭವಿಷ್ಯ

ವಾರ ಭವಿಷ್ಯ

ವಾರ ಭವಿಷ್ಯ

ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಲಾಭ? ಉದ್ಯೋಗ, ಆರೋಗ್ಯ, ಆರ್ಥಿಕ ಪರಿಸ್ಥಿತಿ, ದಾಂಪತ್ಯ ಜೀವನ ಹೇಗಿರಲಿದೆ? ದೋಷ ಪರಿಹಾರಕ್ಕೆ ಏನು ಮಾಡಬೇಕು? ಈ ವಾರ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಈ ಬಗ್ಗೆ ಇಲ್ಲಿದೆ ಮಾಹಿತಿ…

 • Share this:

   ಮಹಾಲಯ ಅಮಾವಾಸ್ಯೆ (Mahalaya Amavasye) ಬಳಿಕ  ಅಂದರೆ ಸೆಪ್ಟೆಂಬರ್ 26ರಿಂದ ನವರಾತ್ರಿಯ (Navarathri) ಶುಭ ಸಂದರ್ಭ ಆರಂಭವಾಗುತ್ತದೆ. 9 ದಿನಗಳ ಕಾಲ ಶಕ್ತಿ ದೇವತೆಯನ್ನು ವಿವಿಧ ರೂಪಗಳಲ್ಲಿ ಆರಾಧನೆ ಮಾಡಿ, ಪೂಜಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ತಾಯಿ ದುರ್ಗೆ (Goddess Durga) ಯಾರಿಗೆ ಒಳಿತು ಮಾಡುತ್ತಾಳೆ? ನವರಾತ್ರಿ ಶುಭ ಸಂದರ್ಭದಲ್ಲಿ ಗ್ರಹಗತಿಗಳು ಹೇಗಿರುತ್ತವೆ? ಈ ವಾರ ಯಾರಿಗೆ ಒಳಿತು? ಯಾರಿಗೆ ಕೆಡುಕು? ದ್ವಾದಶ ರಾಶಿಗಳ ಫಲಾಫಲಗಳೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ…


  ಮೇಷ ರಾಶಿ


  ಈ ವಾರ ಈ ರಾಶಿಯವರಿಗೆ ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ಆದರೂ ಖರ್ಚು ಅತಿಯಾಗಿರುತ್ತದೆ. ಮನಸ್ಸಿನಲ್ಲಿದ್ದ ದುಗುಡ ದುಮ್ಮಾನಗಳು ದೂರವಾಗಿ ಸಂತೋಷವಾಗುತ್ತದೆ. ನಿಮ್ಮ ಯಶಸ್ಸಿನ ಹಾದಿಯಲ್ಲಿ ಸಾಕಷ್ಟು ಜನ ಅಡ್ಡಿ ಮಾಡಲೆತ್ನಿಸುವರು. ನಿಮ್ಮ ಎಚ್ಚರಿಕೆಯ ನಡೆಯಿಂದ ಎದುರಾಗಬಹುದಾದ ತೊಂದರೆಗಳನ್ನು ತಪ್ಪಿಸಿಕೊಳ್ಳಿ. ನಿಮ್ಮ ಪ್ರಾಮಾಣಿಕತೆಯ ಫಲವು ನಿಮ್ಮನ್ನು ಅರಸಿ ಬರುತ್ತದೆ. ಉದ್ಯೋಗದಲ್ಲಿ ಮೇಲೇರುವ ಸಾಧ್ಯತೆ ಇದೆ.


  ವೃಷಭ ರಾಶಿ


  ಈ ವಾರ ಈ ರಾಶಿಯವರು ಹಣಕಾಸಿನ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ಬ್ಯಾಂಕಿನಿಂದ ಹಣಕಾಸು ಸಹಾಯದ ನಿರೀಕ್ಷೆಯಲ್ಲಿರುವ ನಿಮಗೆ ಈ ಸಹಾಯ ಒದಗಿಬರುತ್ತದೆ. ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು. ಅತಿಯಾದ ಉದ್ವೇಗ ನಿಮ್ಮನ್ನು ಕಾಡಬಹುದು. ಯಾರ ಮೇಲೆಯೂ ಸಲ್ಲದ ಆರೋಪಗಳನ್ನು ಮಾಡಲು ಹೋಗಬೇಡಿ.


  ಮಿಥುನ ರಾಶಿ


  ಈ ವಾರ ಈ ರಾಶಿಯವರಿಗೆ ಆರ್ಥಿಕ ಸ್ಥಿತಿಯು ಸಾಮಾನ್ಯವಾಗಿರುತ್ತದೆ. ಆದ್ದರಿಂದ ಖರ್ಚಿಗೆ ಕಡಿವಾಣವನ್ನು ಹಾಕಿರಿ. ನಿಮ್ಮ ಒಡಹುಟ್ಟಿದವರಿಂದ ಅನಿರೀಕ್ಷಿತ ಸಹಾಯ ದೊರೆತು ಸಂತಸಪಡುವಿರಿ. ಆದರೆ ಕುಟುಂಬದ ಸದಸ್ಯರಿಂದಲೇ ಸಣ್ಣಪುಟ್ಟ ವಿರೋಧಗಳನ್ನು ಕಾಣಬಹುದು. ಎಲ್ಲರೊಂದಿಗೂ ಸೌಹಾರ್ದಯುತವಾಗಿ ಮಾತನಾಡಿದಲ್ಲಿ ಸಮಸ್ಯೆ ಬಗೆಹರಿಯುತ್ತದೆ. ವೃತ್ತಿಯಲ್ಲಿ ಏಳಿಗೆಯನ್ನು ಕಾಣಬಹುದು.


  ಕರ್ಕಾಟಕ ರಾಶಿ


  ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಕೆಲವೊಂದು ವಿಚಾರಗಳಲ್ಲಿ ನಿರ್ಣಯ ಕೈಗೊಳ್ಳುವ ಮುನ್ನ ಹಿರಿಯರೊಡನೆ ಸಮಾಲೋಚನೆ ಮಾಡುವುದು ಒಳಿತು. ಅನಿರೀಕ್ಷಿತವಾಗಿ ಕೆಲವು ಶತ್ರುಗಳು ಮಿತ್ರರಾಗುವರು.


  ಇದನ್ನೂ ಓದಿ: Astrology: ಮಹಾಲಯ ಅಮಾವಾಸ್ಯೆಯ ಈ ದಿನ ಹೇಗಿರಲಿದೆ ನಿಮ್ಮ ದಿನಭವಿಷ್ಯ


  ಸಿಂಹ ರಾಶಿ


  ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ನಿರೀಕ್ಷೆಯ ಮಟ್ಟದಲ್ಲಿ ಇರುತ್ತದೆ. ಯಾವುದೇ ರೀತಿಯ ಮಾತುಕತೆಯಲ್ಲಿ ನಿಧಾನವಾಗಿ ವ್ಯವಹರಿಸಿದಲ್ಲಿ ನಿಮ್ಮ ಕಾರ್ಯಗಳು ಆಗುವವು. ನಿಮ್ಮ ಕೆಲಸಕಾರ್ಯಗಳಲ್ಲಿ ಸ್ನೇಹಿತರ ಸಹಕಾರ ಸಿಗುತ್ತದೆ. ವಿವಾಹ ಆಕಾಂಕ್ಷಿಗಳಿಗೆ ಸಂಬಂಧ ಕೂಡಿಬರಲಿದೆ.


  ಕನ್ಯಾ ರಾಶಿ


  ಈ ವಾರ ಈ ರಾಶಿಯವರಿಗೆ ಹಣದ ಒಳ ಹರಿವು ಸಾಮಾನ್ಯವಾಗಿ ಇರುತ್ತದೆ. . ಹೆಂಗಸರು ನಡೆಸುವ ಹಣಕಾಸಿನ ವ್ಯವಹಾರಗಳಲ್ಲಿ ಹಿನ್ನಡೆ ಆಗಲಿದೆ. ಸಂಗಾತಿಯೊಡನೆ ಸಾಕಷ್ಟು ಕಾವೇರಿದ ಮಾತುಗಳು ಆಗಬಹುದು. ಯಾವುದೇ ಯೋಜನೆಯನ್ನು ರೂಪಿಸುವ ಮುನ್ನ ಅದರ ಬಗ್ಗೆ ಅವಲೋಕನ ಬಹಳ ಅಗತ್ಯ. ಮಿತ್ರರ ನೇತೃತ್ವದಲ್ಲಿ ವ್ಯವಹಾರ ಸುಗಮವಾಗಿ ನಡೆಯುತ್ತದೆ.


  ತುಲಾ ರಾಶಿ


  ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಅನ್ಯರೊಡನೆ ವ್ಯವಹಾರ ನಡೆಸುವಾಗ ಎಚ್ಚರವಿರಲಿ, ವಿನಾಕಾರಣ ಟೀಕೆಗೆ ಗುರಿಯಾಗಬೇಕಾದೀತು. ಸ್ಥಿರಾಸ್ತಿ ವಿಷಯದಲ್ಲಿ ಪ್ರಗತಿಯನ್ನು ಕಾಣುವಿರಿ. ಚಿಕ್ಕಮಕ್ಕಳ ಯೋಗಕ್ಷೇಮದ ಬಗ್ಗೆ ಹೆಚ್ಚು ಗಮನವಿರಲಿ.


  ವೃಶ್ಚಿಕ ರಾಶಿ


  ಈ ವಾರ ಈ ರಾಶಿಯವರು ಆದಾಯದಲ್ಲಿ ಸ್ಥಿರತೆಯನ್ನು ಕಾಣಬಹುದು. ಹೊಸ ಆದಾಯ ತರುವ ಮಾರ್ಗದ ಬಗ್ಗೆ ಆಲೋಚನೆ ಮಾಡುವಿರಿ. ಸ್ವಯಂ ಉದ್ಯೋಗ ಮಾಡುವವರು ಉತ್ತಮ ಆದಾಯದ ನಿರೀಕ್ಷೆ ಮಾಡಬಹುದು. ಎಲ್ಲಾ ಅಡೆತಡೆಗಳನ್ನು ಮೀರಿ ನಿಮ್ಮ ಕೆಲಸವನ್ನು ಸಾಧಿಸುವಿರಿ. ಸ್ಥಿರಾಸ್ತಿ ಖರೀದಿಯತ್ತ ಆಲೋಚನೆ ಮಾಡುವಿರಿ.


  ಧನು ರಾಶಿ


  ಈ ವಾರ ಈ ರಾಶಿಯವರಿಗೆ ಆದಾಯಕ್ಕೆ ಮೀರಿದ ಖರ್ಚು ಇರುವುದರಿಂದ ಹಣದ ನಿರ್ವಹಣೆಯನ್ನು ಸರಿಯಾಗಿ ಮಾಡಿರಿ. ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದರೂ ಆತಂಕವೇನಿಲ್ಲ, ಹಾಗಂತ ಮೈಮರೆಯುವುದು ಬೇಡ. ನಿಮ್ಮ ಕುಟುಂಬದ ಸಾಮರಸ್ಯವನ್ನು ಕಾಪಾಡಲು ಹೆಚ್ಚು ಶ್ರಮವಹಿಸುವಿರಿ.


  ಮಕರ ರಾಶಿ


  ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ನಿರೀಕ್ಷೆಯಷ್ಟು ಇರುತ್ತದೆ. ಹಿತಶತ್ರುಗಳ ಬಗ್ಗೆ ಹೆಚ್ಚು ಜಾಗರೂಕತೆಯಿಂದ ಇರುವುದು ಒಳ್ಳೆಯದು. ನಿಮ್ಮ ಉಪಕಾರಿ ಗುಣವನ್ನು ಕೆಲವರು ದುರುಪಯೋಗ ಮಾಡಿಕೊಳ್ಳಬಹುದು. ಹೊಸ ಸ್ಫೂರ್ತಿಯೊಂದಿಗೆ ಕೆಲಸವನ್ನು ಮಾಡುವಿರಿ. ಬೇರೆಯವರ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ಆಹಾರದ ವಿಷಯದಲ್ಲಿ ಎಚ್ಚರವಾಗಿರಿ. ಇಲ್ಲವಾದಲ್ಲಿ ಅನಾರೋಗ್ಯ ಉಂಟಾಗಬಹುದು.


  ಕುಂಭ ರಾಶಿ


  ಈ ವಾರ ಈ ರಾಶಿಯವರು ಖರ್ಚನ್ನು ಸಾಕಷ್ಟು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಒಳ್ಳೆಯ ಕೆಲಸದ ನಿರೀಕ್ಷೆಯಲ್ಲಿ ಇರುವಿರಿ. ಆದಾಯದ ಹೊಸ ದಾರಿ ಗೋಚರವಾಗುವ ಸಾಧ್ಯತೆ ಇದೆಯಂತ್ರಾಗಾರಗಳಲ್ಲಿ ಅಗ್ನಿ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆಯಿಂದ ಇರಿ.


  ಇದನ್ನೂ ಓದಿ: Gaja Lakshmi: ಗಜಲಕ್ಷ್ಮಿ ಪೂಜೆಯಿಂದ ಸಂಪತ್ತು ದುಪ್ಪಟ್ಟು ವೃದ್ಧಿ; ವ್ರತದ ಮಹತ್ವ ಇದು


  ಮೀನ ರಾಶಿ


  ಈ ವಾರ ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸಲೇಬೇಕು. ಪ್ರೀತಿ-ಪ್ರೇಮದಲ್ಲಿ ಅನಿರೀಕ್ಷಿತ ಆತಂಕ ಎದುರಾಗಬಹುದು. ಬಂಧುಗಳು ನಿಮಗೆ ಕಿರಿಕಿರಿ ಮಾಡಿದರೂ ದೈವಕೃಪೆಯಿಂದ ನೀವು ಪಾರಾಗುವಿರಿ. ಹಿರಿಯರ ಸಲಹೆ ನಿಮ್ಮ ವ್ಯವಹಾರದಲ್ಲಿ ಸಾಕಷ್ಟು ಪ್ರಯೋಜನ ಉಂಟುಮಾಡುತ್ತವೆ.

  Published by:Annappa Achari
  First published: