liveLIVE NOW

Weekly Horoscope: ನವೆಂಬರ್ 28ರಿಂದ ಡಿಸೆಂಬರ್ 4ರವರೆಗೆ ದ್ವಾದಶ ರಾಶಿಗಳ ವಾರ ಭವಿಷ್ಯ

Astrology :ತುಲಾ ರಾಶಿಯವರಿಗೆ ಈ ವಾರ ಅತ್ಯುತ್ತಮ ಫಲಗಳಿವೆ..ವಾರದ ಆರಂಭದಲ್ಲಿ, ನಿಮಗೆ ಚಂದ್ರನ ಅನುಗ್ರಹವಿದೆ, ಇದು ನಿಮಗೆ ಸಂತೋಷವನ್ನು ನೀಡುತ್ತದೆ ಮತ್ತು ನಿಮಗೆ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ನಿಮ್ಮ ಹಿಂದಿನ ಹೂಡಿಕೆಯಿಂದ ನೀವು ಉತ್ತಮ ಲಾಭವನ್ನು ಪಡೆಯುತ್ತೀರಿ.

 • News18 Kannada
 • | November 28, 2021, 08:54 IST
  facebookTwitterLinkedin
  LAST UPDATED 9 MONTHS AGO

  AUTO-REFRESH

  ಹೈಲೈಟ್ಸ್

  ಡಿಸೆಂಬರ್ 4ರಂದು ಈ ವರ್ಷದ ಕೊನೆಯ ಸೂರ್ಯ ಗ್ರಹಣ ಸಂಭವಿಸಲಿದೆ.. ಸೂರ್ಯ ಗ್ರಹಣ ಇರುವುದರಿಂದ ಗ್ರಹಗಳ ಚಲನೆಯಲ್ಲಿ ಬದಲಾವಣೆ ಸಂಭವಿಸಲಿದೆ. ಧನು ರಾಶಿಯಲ್ಲಿ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸುವುದರಿಂದ,ನವೆಂಬರ್ (November) 28ರಿಂದ ಡಿಸೆಂಬರ್ 4ರವರೆಗೆ ದ್ವಾದಶ ರಾಶಿಗಳ(Zodiac Signs) ಫಲ ಹೇಗಿರಲಿದೆ.. ಯಾವ ರಾಶಿಗೆ ಈ ವಾರ ಏನು ಫಲ ಸಿಗಲಿದೆ..? ಯಾವ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ ಎಂಬ ಮಾಹಿತಿ ಇಲ್ಲಿದೆ..

  1) ಮೇಷ ರಾಶಿ :ಈ ವಾರ ಮೇಷ ರಾಶಿಯವರ ಆತ್ಮವಿಶ್ವಾಸ ದೃಢ ನಿರ್ಧಾರ ಅವರನ್ನು ಹೆಚ್ಚು ಶ್ರೀಮಂತರನ್ನಾಗಿ ಮಾಡುತ್ತದೆ. ಹೂಡಿಕೆ ಮಾಡಿದರೆ ನಿಮಗೆ ಅದು ಹೆಚ್ಚಿನ ಲಾಭ ತಂದುಕೊಡಲಿದೆ.

  ಅನಗತ್ಯ ವಿಚಾರಗಳಲ್ಲಿ ವಾದ ಮಾಡದೇ ಇರುವುದು ಮೇಷ ರಾಶಿಯವರಿಗೆ ಒಳ್ಳೆಯದು.. ಮೇಷ ರಾಶಿಗಳ ಪ್ರೇಮಿಗಳ ಪಾಲಿಗೆ ಈ ವಾರ ಉತ್ತಮವಾಗಿದೆ..ಉದ್ಯೋಗಕಾಂಕ್ಷಿಗಳು ಹೊಸ ಉದ್ಯೋಗ ಪಡೆಯಬಹುದು..

  2) ವೃಷಭ ರಾಶಿ: ವಾರದ ಆರಂಭದ ದಿನಗಳಲ್ಲಿ ವೃಷಭ ರಾಶಿಯವರಿಗೆ ಅಷ್ಟಾಗಿ ಒಳ್ಳೆಯದಾಗುವುದಿಲ್ಲ. ನಿಮ್ಮ ಕೆಲಸದಲ್ಲಿ ಅಡಚಣೆ ಉಂಟಾಗಲಿದೆ. ನಿಮಗೆ ಆರೋಗ್ಯ ಸಮಸ್ಯೆ ಕಾಡಲಿದೆ ಹೃದಯ ರೋಗದಿಂದ ಬಳಲುತ್ತಿರುವವರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

  ಈ ಹಿಂದೆ ನೀವು ಯಾರಿಗಾದರೂ ಹಣ ನೀಡಿದ್ದರೆ ಅದನ್ನು ನೀವು ಮರಳಿ ಪಡೆಯುತ್ತೀರಾ.ಪ್ರೇಮಿಗಳ ಪಾಲಿಗೆ ಈ ವಾರ ಉತ್ತಮವಾಗಿದೆ..

  3) ಮಿಥುನ ರಾಶಿ: ಮಿಥುನ ರಾಶಿಯವರಿಗೆ ವೃತ್ತಿಜೀವನದಲ್ಲಿ ಈ ವಾರ ಅತ್ಯುತ್ತಮ.  ಕಠಿಣ ಪರಿಶ್ರಮದಿಂದ ನೀವು ಉತ್ತಮ ಫಲಿತಾಂಶ ಪಡೆಯುತ್ತೀರಾ. ಒಡಹುಟ್ಟಿದವರೊಂದಿಗಿನ ವಿವಾದಗಳು ಈಗ ಬಗೆಹರಿಯುತ್ತವೆ.

  ನಿಮ್ಮ ಮಕ್ಕಳ ಆರೋಗ್ಯ ಸುಧಾರಣೆಯಾಗಲಿದೆ.. ಅನಗತ್ಯ ಖರ್ಚು ಮಾಡುವುದನ್ನು ಈ ವಾರ ತಪ್ಪಿಸಿ.. ಮದುವೆ ಸಂಬಂಧಿತ ವಿಷಯಗಳ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು.

  ಇದನ್ನೂ ಓದಿ :ತುಳಸಿ ಗಿಡ ಒಣಗಿದರೆ ಮನೆಗೆ ಅಶುಭ; ತಕ್ಷಣಕ್ಕೆ ಈ ರೀತಿ ಮಾಡಿ

  4) ಕಟಕ ರಾಶಿ: ಚಂದ್ರನ ಅನುಗ್ರಹ ಕಟಕರಾಶಿಯವರುಮೇಲಿದೆ.. ಕಟಕರಾಶಿಯವರು ವ್ಯವಹಾರದಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

  ಕೆಲಸದಲ್ಲಿ ತಾಳ್ಮೆಯನ್ನು ಕಾಪಾಡಿಕೊಂಡು ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡುವುದರಿಂದ ಮೇಲಾಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ.. ನಿಮ್ಮ ನಷ್ಟಗಳು ಲಾಭವಾಗಿ ಬದಲಾಗುವ ಸಮಯ ಇದು. ವ್ಯವಹಾರಗಳಲ್ಲಿ ಹಣ ಹೂಡಿಕೆಗೆ ಉತ್ತಮ ಸಮಯ.

  5)ಸಿಂಹ ರಾಶಿ : ಸಿಂಹ ರಾಶಿಯವರು ಹೆಚ್ಚು ಆತ್ಮವಿಶ್ವಾಸದಿಂದ ಕೂಡಿರುವರು.ಸುತ್ತಮುತ್ತಲಿನ ಜನರ ಬಗ್ಗೆ ಎಚ್ಚರಿಕೆಯಿಂದ ಮೋಸ ಹೋಗದಂತೆ ಜಾಗೃತೆಯಿಂದ ಇರುವರು. ಹೊಸ ಯೋಜನೆ ಪ್ರಾರಂಭ ಮಾಡುವ ಬಗ್ಗೆ ನೀವು ಯೋಚನೆ ಮಾಡುವಿರಿ. ಅವಿವಾಹಿತರಿಗೆ ಉತ್ತಮ ಸಂಬಂಧ ಕೂಡಿ ಬರುವ ಸಾಧ್ಯತೆ..ತಾಯಿಯ ಆರೋಗ್ಯ ಸಮಸ್ಯೆಗಳ ಬಗ್ಗೆ ನಿಮಗೆ ಅರಿವು ಬರಲಿದೆ.

  6)ಕನ್ಯಾ ರಾಶಿ :ವಾರದ ಆರಂಭದಲ್ಲಿ, ನೀವು ಒಂಟಿತನವನ್ನು ಅನುಭವಿಸುವಿರಿ. ನೀವು ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

  ನಿರುತ್ಸಾಹವು ನಿಮಗೆ ಕೋಪ ಮತ್ತು ಅಸಂತೋಷವನ್ನು ಉಂಟುಮಾಡಬಹುದು. , ಅಸಹನೆ ಮತ್ತು ಆತುರದಿಂದ ನೀವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ವಾಹನ ಚಾಲನೆ ಮಾಡುವಾಗ ಆದಷ್ಟು ಜಾಗೃತೆಯಿಂದ ಇರಿ.

  7)ತುಲಾ ರಾಶಿ : ತುಲಾ ರಾಶಿಯವರಿಗೆ ಈ ವಾರ ಅತ್ಯುತ್ತಮ ಫಲಗಳಿವೆ..ವಾರದ ಆರಂಭದಲ್ಲಿ, ನಿಮಗೆ ಚಂದ್ರನ ಅನುಗ್ರಹವಿದೆ, ಇದು ನಿಮಗೆ ಸಂತೋಷವನ್ನು ನೀಡುತ್ತದೆ ಮತ್ತು ನಿಮಗೆ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.

  ನಿಮ್ಮ ಹಿಂದಿನ ಹೂಡಿಕೆಯಿಂದ ನೀವು ಉತ್ತಮ ಲಾಭವನ್ನು ಪಡೆಯುತ್ತೀರಿ. ನಿಮ್ಮ ಸಂಗಾತಿಯ ಜೊತೆಗೆ ನೀವು ಉತ್ತಮ ಸಮಯ ಕಳೆಯಲಿದ್ದೀರಾ.. ಅವಿವಾಹಿತರಿಗೆ ಉತ್ತಮ ಸಂಬಂಧ ಬರಲಿದೆ.. ವಿದ್ಯಾರ್ಥಿಗಳ ಪಾಲಿಗೆ ಈ ವಾರ ಉತ್ತಮವಾಗಿದೆ..

  8)ವೃಶ್ಚಿಕ ರಾಶಿ : ವಾರದ ಆರಂಭದಲ್ಲಿ, ನೀವು ಕಾರ್ಯನಿರತ, ಸಕ್ರಿಯ ಮತ್ತು ತಾಳ್ಮೆಯಿಂದ ಇರುತ್ತಿರಾ. ನೀವು ಹಲವು ಕಡೆ ನಿಮ್ಮ ವ್ಯವಹಾರವನ್ನು ವಿಸ್ತರಣೆ ಮಾಡಲಿದ್ದೀರಾ. ಮೇಲಾಧಿಕಾರಿಗಳಿಂದ ನಿಮ್ಮ ಕೆಲಸಕ್ಕೆ ಬೆಂಬಲ.

  ನಿಮ್ಮ ಕೆಲಸಗಳಿಗೆ ಕುಟುಂಬದವರಿಂದಲೇ ಬೆಂಬಲ.. ನಿಮ್ಮ ಹಿತ ಶತ್ರುಗಳು ನಿಯಂತ್ರಣದಲ್ಲಿ ಇರಲಿದ್ದಾರೆ.. ಅವಿವಾಹಿತರಿಗೆ ಉತ್ತಮ ಫಲವಿದೆ..ವಾಹನ ಚಲಾಯಿಸುವಾಗ ಎಚ್ಚರಿಕೆ ಇರಲಿ..

  9)ಧನು ರಾಶಿ: ವಾರದ ಆರಂಭದಲ್ಲಿ, ಚಂದ್ರನ ಆಶೀರ್ವಾದ ನಿಮ್ಮ ಮೇಲೆ ಇರಲಿದೆ., ಕಳೆದ ವಾರದ ನಿರಾಶೆ ಸಂತೋಷವಾಗಿ ಬದಲಾಗುತ್ತದೆ. ನೀವು ಗೊಂದಲದಿಂದ ಹೊರಬರುತ್ತೀರಿ. ನಿಮ್ಮ ನಿರ್ಧಾರವು ವ್ಯಾಪಾರ ಆದಾಯದ ಲಾಭವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.

  ನಿಮ್ಮ ಮುಂದೂಡಲ್ಪಟ್ಟ ಯೋಜನೆಗಳನ್ನು ಪ್ರಾರಂಭಿಸಲು ಇದು ಸರಿಯಾದ ಸಮಯ. ಆಶೀರ್ವಾದದ ಸಹಾಯದಿಂದ, ನಿಮ್ಮ ಕಠಿಣ ಪರಿಶ್ರಮಕ್ಕೆ ನೀವು ಸ್ವಲ್ಪ ಪ್ರತಿಫಲವನ್ನು ಪಡೆಯಬಹುದು. ನೀವು ಕುಟುಂಬ ಅಥವಾ ಸ್ನೇಹಿತರೊಂದಿಗೆ ಧಾರ್ಮಿಕ ಸ್ಥಳಕ್ಕೆ ಹೋಗುತ್ತೀರಿ, ನೀವು ಯಾವುದೇ ಆಧ್ಯಾತ್ಮಿಕ ಸ್ಥಳಕ್ಕೆ ನಿರ್ದಿಷ್ಟ ಮೊತ್ತವನ್ನು ದಾನ ಮಾಡಲು ಅಥವಾ ಅಗತ್ಯವಿರುವವರಿಗೆ ಸಹಾಯ ಮಾಡಲು ಯೋಜಿಸುತ್ತೀರಿ. ನೀವು ಬಡವರಿಗೆ ಸಹಾಯ ಮಾಡಬಹುದು

  ಇದನ್ನೂ ಓದಿ :ಕನಸಿನಲ್ಲಿ ಬೆಕ್ಕು, ಸೂರ್ಯಾಸ್ತ ಕಂಡರೆ ಏನು ಅರ್ಥ; ಏನು ಹೇಳುತ್ತದೆ ಸ್ವಪ್ನಾ ಶಾಸ್ತ್ರ?

  10)ಮಕರ ರಾಶಿ : ವಾರದ ಆರಂಭದಲ್ಲಿ, ನೀವು ಒಂಟಿತನವನ್ನು ಅನುಭವಿಸಬಹುದು. ನೀವು ಕೆಲವು ಆರೋಗ್ಯ ಸಮಸ್ಯೆಗಳನ್ನು ಹೊಂದಿರಬಹುದು.ಈ ವಾರ ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಬೇಡಿ.

  ನಿಮ್ಮ ಲಾಭಗಳು ನಷ್ಟಗಳಾಗಿ ಬದಲಾಗಬಹುದು. ನೀವು ಘರ್ಷಣೆಗಳಲ್ಲಿ ಒತ್ತಡವನ್ನು ತಪ್ಪಿಸುತ್ತೀರಾ., ಕುಟುಂಬದವರೊಂದಿಗೆ ಸಂಘರ್ಷ ನಡೆಯಲಿದೆ..ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲಿದ್ದಾರಾ.

  11): ಕುಂಭ ರಾಶಿ: ವಾರದ ಮೊದಲ ಎರಡು ದಿನಗಳು ನಿಮಗೆ ಉತ್ತಮವಾಗಿದೆ. ನೀವು ಸಂತೋಷವಾಗಿರಬಹುದು. ನೀವು ಮನಸ್ಸಿನಲ್ಲಿ ಶಾಂತಿಯನ್ನು ಅನುಭವಿಸಬಹುದು. ನಿಮ್ಮ ಗುರಿಗಳ ಮೇಲೆ ನೀವು ಗಮನ ಹರಿಸಬಹುದು.

  ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಸಮಯವನ್ನು ಹೊಂದಬಹುದು. ವ್ಯಾಪಾರಕ್ಕಾಗಿ ಹೊಸ ಪಾಲುದಾರಿಕೆಯನ್ನು ನೀವು ನಿರ್ಧರಿಸಬಹುದು.ಪ್ರೇಮಿಗಳು ಸಂಬಂಧದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಉತ್ತಮ.

  12)ಮೀನ ರಾಶಿ :ನಿಮ್ಮ ಪೋಷಕರ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಎಲ್ಲೋ ಸಿಕ್ಕಿಹಾಕಿಕೊಂಡಿರುವ ಆಸ್ತಿ ಮತ್ತೆ ನಿಮ್ಮ ಪಾಲಾಗಲಿದೆ.

  ಕಾನೂನು ಪ್ರಕರಣದಲ್ಲಿ ಗೆಲುವು ಸಿಗಲಿದೆ. ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರಲಿದೆ.ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಬೇರೆ ಕಡೆಗೆ ತೆರಳಬಹುದು.. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ..