Weekly Horoscope: ನವೆಂಬರ್ 21 ರಿಂದ 27ರವರೆಗೆ ದ್ವಾದಶ ರಾಶಿಗಳ ವಾರ ಭವಿಷ್ಯ ಹೀಗಿದೆ..!

Weekly Horoscope : ಮೇಷ ರಾಶಿಯವರು ಈ ವಾರ ಆಹಾರದ ಕಡೆಗೆ ಕೊಂಚ ಗಮನ ಕೊಡಬೇಕು.ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕು. ಮೇಷರಾಶಿಯಲ್ಲಿ ಪ್ರೇಮಿಗಳಿಗೆ ಉತ್ತಮ ಫಲವಿದ್ದು, ಕುಟುಂಬದವರ ಬೆಂಬಲ ಸಿಗಲಿದೆ. ವಾರದ ಕೊನೆಯ ಕೆಲವು ದಿನಗಳಲ್ಲಿ, ಚಂದ್ರನು ನಕಾರಾತ್ಮಕವಾಗಿ ಇರುವುದರಿಂದ ಬಹಳ ಜಾಗೃತವಾಗಿ ಮೇಷ ರಾಶಿಯವರು ಇರುವುದು ಒಳ್ಳೆಯದು..

ರಾಶಿಗಳ ವಾರ ಫಲ

ರಾಶಿಗಳ ವಾರ ಫಲ

 • Share this:
  ನವೆಂಬರ್ (November) 21ರಿಂದ ನವೆಂಬರ್ 27ರವರೆಗೆ ದ್ವಾದಶ ರಾಶಿಗಳ(Zodiac Signs) ಫಲ ಹೇಗಿರಲಿದೆ.. ಯಾವ ರಾಶಿಗೆ ಈ ವಾರ ಏನು ಫಲ ಸಿಗಲಿದೆ..? ಯಾವ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ ಎಂಬ ಮಾಹಿತಿ ಇಲ್ಲಿದೆ..

  ಮೇಷ ರಾಶಿ

  ವಾರದ ಆರಂಭದಲ್ಲಿ ಚಂದ್ರನೂ ಮೇಷ ರಾಶಿಯಲ್ಲಿ ಧನಾತ್ಮಕವಾಗಿ ಇರುತ್ತಾನೆ.. ಇದರಿಂದ ವಾರಪೂರ್ತಿ ಮೇಷ ರಾಶಿಯವರು ಸಂತೋಷ ಹಾಗೂ ಶಾಂತಿಯಿಂದ ಕೂಡಿರುತ್ತಾರೆ.. ಅಲ್ಲದೆ ಸುತ್ತಮುತ್ತಲಿನ ಜನರೊಂದಿಗೆ ಮೇಷ ರಾಶಿಯವರು ಸೌಜನ್ಯದಿಂದ ವರ್ತನೆ ಮಾಡುವರು..ಅಲ್ಲದೆ ವಾರದ ಆರಂಭದಲ್ಲಿ ಆದಾಯ ಮತ್ತು ವೆಚ್ಚಗಳು ಸಮತೋಲನದಲ್ಲಿರಲಿದೆ.  ಮೇಷ ರಾಶಿಯವರ ಉಳಿತಾಯ ಮಟ್ಟ ಸುಧಾರಿಸಲಿದೆ.. ಮನೆ ದುರಸ್ತಿ ಮಾಡಬೇಕು ಎಂದು ಬಯಸುವವರು ಈ ವಾರ ಕೂಡಿಟ್ಟ ಹಣವನ್ನು ದುರಸ್ತಿಗಾಗಿ ವಿನಿಯೋಗ ಮಾಡುವರು.

  ಮೇಷ ರಾಶಿಯವರು ಈ ವಾರ ಆಹಾರದ ಕಡೆಗೆ ಕೊಂಚ ಗಮನ ಕೊಡಬೇಕು.ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕು. ಮೇಷರಾಶಿಯಲ್ಲಿ ಪ್ರೇಮಿಗಳಿಗೆ ಉತ್ತಮ ಫಲವಿದ್ದು, ಕುಟುಂಬದವರ ಬೆಂಬಲ ಸಿಗಲಿದೆ. ವಾರದ ಕೊನೆಯ ಕೆಲವು ದಿನಗಳಲ್ಲಿ, ಚಂದ್ರನು ನಕಾರಾತ್ಮಕವಾಗಿ ಇರುವುದರಿಂದ ಬಹಳ ಜಾಗೃತವಾಗಿ ಮೇಷ ರಾಶಿಯವರು ಇರುವುದು ಒಳ್ಳೆಯದು..

  ವೃಷಭ ರಾಶಿ

  ವೃಷಭ ರಾಶಿಯಲ್ಲಿ ಚಂದ್ರನ ಉತ್ಕೃಷ್ಟ ಸ್ಥಾನದಲ್ಲಿ ಇರಲಿದ್ದಾನೆ..ಈ ವಾರ ವೃಷಭ ರಾಶಿಯವರು ಆರೋಗ್ಯಯುತವಾಗಿ ಇದ್ದು ಹೆಚ್ಚು ಆತ್ಮವಿಶ್ವಾಸದಿಂದ ಕೂಡಿರುತ್ತಾರೆ..ವಿವಿಧ ಮೂಲಗಳಿಂದ ವೃಷಭ ರಾಶಿಯವರಿಗೆ ಆದಾಯ ಬರಲಿದೆ.. ವ್ಯಾಪಾರಿಗಳು ಹೊಸ ಪಾಲುದಾರಿಕೆಗಳನ್ನು ಈ ವಾರ ತೆರೆಯಲಿದ್ದಾರೆ..
  ಉದ್ಯೋಗ ಹುಡುಕಾಟದಲ್ಲಿ ಇದ್ದವರಿಗೆ ಇವರ ಉತ್ತಮವಾದ ಉದ್ಯೋಗ ಸಿಗಲಿದೆ.ವೃಷಭ ರಾಶಿಯವರು  ಕುಟುಂಬದೊಂದಿಗೆ ಸಾಮರಸ್ಯ ಕಾಪಾಡಿಕೊಳ್ಳಲಿದ್ದಾರೆ..ಆಸ್ತಿ ವಿಷಯದಲ್ಲಿ ವಾದ ಕಲಹ ಏರ್ಪಡುವ ಸಾಧ್ಯತೆ ಇದೆ.. ವೃಷಭ ರಾಶಿಯ ಪ್ರೇಮಿಗಳಿಗೆ ಈ ವಾರ ಅಷ್ಟೊಂದು ಫಲಪ್ರದವಾಗುವುದಿಲ್ಲ..

  ಮಿಥುನ ರಾಶಿ

  ವಾರದ ಆರಂಭದಲ್ಲಿ, ಚಂದ್ರನು ನಕಾರಾತ್ಮಕವಾಗಿರುತ್ತನೆ. ಒಂಟಿತನ ಕಾಡಲಿದೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ.ನಿಮ್ಮ ನಡವಳಿಕೆ ನಿಮ್ಮ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಲಿದೆ.. ಅನಗತ್ಯ ದುಂದುವೆಚ್ಚ ಆಗಲಿದೆ.. ಆದ್ರೆ ವಾರದ ಮಧ್ಯದಲ್ಲಿ ಮಿಥುನ ರಾಶಿಯವರು ಕೊಂಚ ನಿರಾಳತೆಯನ್ನು ಅನುಭವಿಸಬಹುದಾಗಿದೆ.. ವಿದ್ಯಾರ್ಥಿಗಳಿಗೆ ಉತ್ತಮ ದಾಯಕವಾಗಿದೆ.ಹೊಸ ವ್ಯಾಪಾರ ಶುರು ಮಾಡುವವರಿಗೆ ವಾರದ ಮಧ್ಯಭಾಗ ಅನುಕೂಲಕರವಾಗಿದೆ..

  ಇದನ್ನೂ ಓದಿ :ನಿಮ್ಮ ವೈವಾಹಿಕ ಜೀವನ ಚೆನ್ನಾಗಿರಬೇಕಾ..? ಹಾಗಿದ್ರೆ ಈ ದಿನ ಹುಟ್ಟಿದ ಹುಡುಗಿಯರನ್ನ ಮದುವೆಯಾಗಿ

  ಕಟಕ ರಾಶಿ

  ವಾರದ ಆರಂಭ, ಚಂದ್ರನು ಕಟಕ ರಾಶಿಯಲ್ಲಿ ಧನಾತ್ಮಕವಾಗಿರುತ್ತಾನೆ. ಕಟಕರಾಶಿಯವರು ವ್ಯವಹಾರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತೀರಾ , ನಿಮ್ಮ ನಷ್ಟಗಳು ಈಗ ಲಾಭಗಳಾಗಿ ಬದಲಾಗಬಹುದು, ಅದು ನಿಮ್ಮ ಆರ್ಥಿಕ ಜೀವನವನ್ನು ಸುಧಾರಿಸುತ್ತದೆ. ನಿಮ್ಮ ಅಧೀನ ಅಧಿಕಾರಿಗಳ ಸಹಾಯದಿಂದ, ನೀವು ಕಷ್ಟಕರವಾದ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ನಿಮ್ಮ ವ್ಯವಹಾರದಲ್ಲಿ ಹೆಚ್ಚುವರಿ ಹಣವನ್ನು ಹೂಡಿಕೆ ಮಾಡಲು ನೀವು ನಿರ್ಧರಿಸುತ್ತೀರಿ. ಇದು ಮುಂದಿನ ದಿನಗಳಲ್ಲಿ ನಿಮಗೆ ಆರ್ಥಿಕ ಪ್ರಯೋಜನಗಳನ್ನು ನೀಡಬಹುದು. ನೀವು ಕೆಲಸದಲ್ಲಿ ನಿರತರಾಗಿರುತ್ತೀರಿ, ಆದ್ದರಿಂದ ನೀವು ಕುಟುಂಬದ ವಿಷಯಗಳಿಗೆ ಸರಿಯಾದ ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ ನವೆಂಬರ್ 22 ರ ಬಳಿಕ ನಿಮಗೆ ಶುಭ ಫಲವಿಲ್ಲ.ವಾರದ ಮಧ್ಯ ಭಾಗದಲ್ಲಿ ಗುಪ್ತ ಶತ್ರುಗಳು ಮತ್ತು ವಿರೋಧಿಗಳು ನಿಮಗೆ ಹಾನಿ ಮಾಡಬಹುದು. ನೀವು ವಾರದ ಕೊನೆಯಲ್ಲಿ ಖಿನತೆ ಅನುಭವಿಸುವುದರಿಂದ ನೀವು ಸ್ವತ್ತುಗಳಲ್ಲಿ ನಷ್ಟವನ್ನು ಎದುರಿಸಬಹುದು. ಖಿನ್ನತೆಯಿಂದ ಹೊರಬರಲು ಧ್ಯಾನ ಮತ್ತು ಯೋಗವನ್ನು ಮಾಡಿದ್ರೆ ಉತ್ತಮವಾಗಿರಲಿದೆ.ನವೆಂಬರ್ 24ರ ಬಳಿಕ ಅತಿವೇಗದ ಚಾಲನೆಯೇ ಬಗ್ಗೆ ಎಚ್ಚರಿಕೆಯಿಂದ ಇರಬೇಕು.. ಹೊಸ ವ್ಯವಹಾರಗಳಿಗೆ ಸಹಿ ಹಾಕುವಾಗ ಎಚ್ಚರಿಕೆಯಿಂದಿರಬೇಕು.

   ಸಿಂಹ ರಾಶಿ

  ವಾರದ ಆರಂಭದಲ್ಲಿ ಸಿಂಹರಾಶಿಯವರಿಗೆ ಕೆಲಸದ ಒತ್ತಡ ಹೆಚ್ಚಾಗಲಿದೆ.. ವೃತ್ತಿಯ ವಿಷಯಗಳಲ್ಲಿಯೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.ನಿಮ್ಮ ಪೋಷಕರು ಅನಾರೋಗ್ಯದಿಂದ ಬಳಲುತ್ತಿದ್ದರೆ ಅವರ ಆರೋಗ್ಯ ಸುಧಾರಣೆಯಾಗಲಿದೆ.
  ಭಾರತದ ಮಧ್ಯಭಾಗದಲ್ಲಿ ನಿಮ್ಮ ಗ್ರಹಗಳು ನಕಾರಾತ್ಮಕವಾಗಿ ಇರುವುದರಿಂದ ನೀವು ಅನಾರೋಗ್ಯಪೀಡಿತರಾಗಬಹುದು..ಹೀಗಾಗಿ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರುವುದು ಸೂಕ್ತ..
  ವಾರದ ಕೊನೆಯಲ್ಲಿ ನಿಮ್ಮ ಆದಾಯದ ಮೂಲಗಳು ಹೆಚ್ಚಾಗಲಿದ್ದು ನಿಮ್ಮ ಆರ್ಥಿಕವಾಗಿ ಸುಧಾರಣೆ ಕಾಣಲಿದ್ದಿರಾ. ಈ ವಾರ ನೀವು ಅನಾಥಾಶ್ರಮಗಳು ವೃದ್ಧಾಶ್ರಮಗಳು ಸೇರಿ ಧಾರ್ಮಿಕ ಸಂಸ್ಥೆಗಳಿಗೆ ದಾನ ಕೊಡುವ ನಿರ್ಧಾರ ಮಾಡಲಿದ್ದೀರಾ

  ಕನ್ಯಾರಾಶಿ

  ಕಳೆದವಾರ ನಿಮ್ಮಲ್ಲಿ ಇದ್ದ ಸಮಸ್ಯೆಗಳು ಮುಕ್ತಾಯವಾಗಿದ್ದು, ನಿಮ್ಮ ಕಠಿಣ ಪರಿಶ್ರಮ ಸಕಾರಾತ್ಮಕ ಫಲಿತಾಂಶಗಳಾಗಿ ಬದಲಾಗಲಿದೆ..ನೀವು ಇವರ ತಾಳ್ಮೆಯಿಂದ ಇದ್ದರೆ ಅತ್ಯುತ್ತಮ ಕೆಲಸಗಳನ್ನು ಮಾಡಬಹುದು..ನಿಮ್ಮ ಒಡಹುಟ್ಟಿದವರು ಜೊತೆ ಪ್ರವಾಸ ಹೋಗುವ ಸಾಧ್ಯತೆಯಿದೆ. ಅವಿವಾಹಿತರು ತಮ್ಮ ಸ್ನೇಹಿತರ ಸಹಾಯದಿಂದ ಪ್ರೀತಿ ಪಡೆದುಕೊಳ್ಳಬಹುದು ಒಡಹುಟ್ಟಿದವರ ಜೊತೆಗೆ ಇದ್ದ ವೈ ಮನಸ್ಸುಗಳು ದೂರವಾಗಲಿದೆ. ಹಿತಶತ್ರುಗಳ ಬಗ್ಗೆ ಜಾಗೃತಿ ವಹಿಸುವುದು ಸೂಕ್ತ

  ತುಲಾ ರಾಶಿ

  ವಾರದ ಆರಂಭದಲ್ಲಿ ತುಲಾ ರಾಶಿಯವರಿಗೆ ಒಂಟಿತನ ಹಾಗೂ ದುಃಖ ಕಾಡಲಿದೆ..ಮಾತಿನ ಮೇಲೆ ತುಲಾ ರಾಶಿಯವರು ಇವರ ನಿಯಂತ್ರಣದಲ್ಲಿರಬೇಕು.. ಇಲ್ಲದಿದ್ದರೆ ನಿಮ್ಮ ಕುಟುಂಬದ ಸಾಮರಸ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.. ಕೆಲಸದ ವಿಚಾರದಲ್ಲಿ ಶ್ರದ್ಧೆ ಇರಲಿ.ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಬರಲಿದೆ.ಕುಟುಂಬದವರೊಂದಿಗೆ ವಾರದಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ತುಲಾ ರಾಶಿಯವರು ಪ್ರವಾಸ ಕೈಗೊಳ್ಳಲಿದ್ದಾರೆ. ಮನಸ್ಸಿನ ಶಾಂತಿಗಾಗಿ ಪೂಜಾಕೈಂಕರ್ಯ ನೆರವೇರಿಸಲಿದ್ದಾರೆ. ತುಲಾ ರಾಶಿಯವರಿಗೆ ಇವರ ಸಂಗಾತಿಯೊಂದಿಗಿನ ಘರ್ಷಣೆಯ ಸಮಸ್ಯೆಗಳು ಬಗೆಹರಿಯಲಿವೆ.

  ವೃಶ್ಚಿಕ ರಾಶಿ

  ವಾರದ ಆರಂಭದಲ್ಲಿ ಚಂದ್ರನ ಕೃಪೆ ನಿಮ್ಮ ಮೇಲೆ ಇರಲಿದೆ... ನಿಮ್ಮ ಮನೆಯ ವಾತಾವರಣವು ಉತ್ತಮವಾಗಿರಲಿದೆ.ಇದು ವ್ಯವಹಾರದಲ್ಲಿ ಅಥವಾ ಕೆಲಸದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ. ನೀವು ವ್ಯಾಪಾರದಲ್ಲಿ ಹೊಸ ಪಾಲುದಾರಿಕೆಗಳನ್ನು ಸಹ ನಿರ್ಧರಿಸಬಹುದು. ನಿಮ್ಮ ಸ್ನೇಹಿತರು ಮತ್ತು ಕುಟುಂಬದವರ ಸಹಾಯದಿಂದ ನೀವು ಎಷ್ಟು ಸಾಧ್ಯವೋ ಅಷ್ಟು ದಾನ ಮಾಡಬಹುದು. ನಿಮ್ಮ ಕೆಲಸದಲ್ಲಿ ನೀವು ತಾರ್ಕಿಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಬಹುದು, ಪ್ರಚಾರದ ವಿಷಯದಲ್ಲಿ ನೀವು ಕೆಲವು ಪ್ರತಿಫಲಗಳನ್ನು ನಿರೀಕ್ಷಿಸಬಹುದು. ನವೆಂಬರ್ 22 ರಿಂದ, ವಿಷಯಗಳು ಸ್ವಲ್ಪ ಕಷ್ಟಕರವಾಗಿದೆ.ಕೆಲವು ಸಣ್ಣಪುಟ್ಟ ಸಮಸ್ಯೆಗಳು ಎದುರಾಗಲಿವೆ.ನವೆಂಬರ್ 24ರ ಬಳಿಕ ಹಲವು ಸುಧಾರಣೆಗಳು ಆಗಬೇಕು ಕೃಷಿ ರಿಯಲ್ ಎಸ್ಟೇಟ್ ಮಾಡುತ್ತಿರುವವರಿಗೆ ಉತ್ತಮವಾಗಿದೆ.. ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ.

  ಇದನ್ನೂ ಓದಿ :ನಿಮ್ಮ ಸಹಿ ಹೇಳುತ್ತೆ, ನಿಮ್ಮ ಸ್ವಭಾವ...

  ಧನು ರಾಶಿ

  ವಾರದ ಆರಂಭ ನಿಮಗೆ ಉತ್ತಮವಾಗಿದ್ದು, ನಿಮ್ಮ ಕುಟುಂಬದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಅವರ ಆರೋಗ್ಯ ಸುಧಾರಿಸಲಿದೆ. ನಿಮ್ಮ ಹಿರಿಯರು ನಿಮ್ಮ ಕೆಲಸವನ್ನು ಮೆಚ್ಚಬಹುದು, ಪ್ರತಿಫಲಗಳ ವಿಷಯದಲ್ಲಿ ನಿಮಗೆ ಬಡ್ತಿ ಸಿಗಬಹುದು. ಯಾವುದೇ ಕಾನೂನು ಪ್ರಕರಣದಲ್ಲಿ ನೀವು ಒಳ್ಳೆಯ ಸುದ್ದಿಯನ್ನು ಕೇಳಬಹುದು. ನಿಮ್ಮ ಪ್ರತಿಸ್ಪರ್ಧಿಗಳು ಮತ್ತು ವ್ಯಾಪಾರ ಪ್ರತಿಸ್ಪರ್ಧಿಗಳನ್ನು ನೀವು ಸಂಪೂರ್ಣವಾಗಿ ನಿಯಂತ್ರಿಸಬಹುದು. ವಾರದ ಮಧ್ಯದಲ್ಲಿ ವಿಷಯಗಳು ಉತ್ತಮವಾಗಿರುವುದಿಲ್ಲ. ನೀವು ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ಪ್ರೇಮಿಗಳು ಈ ವಾರ ಅನಗತ್ಯ ಮಾತುಕತೆಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳಿತು.

  ಮಕರ ರಾಶಿ

  ಮಕರ ರಾಶಿಯಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಬಗ್ಗೆ ಯೋಚನೆ ಮಾಡುತ್ತಾರೆ.ಪ್ರಸ್ತುತ ವಿದ್ಯಮಾನಗಳ ಬಗ್ಗೆ ಮಕರ ರಾಶಿಯ ಜನರು ಇವರ ಹೆಚ್ಚಿನ ಆಸಕ್ತಿ ತೋರಲಿದ್ದಾರೆ.. ನಿಮ್ಮ ಯಶಸ್ಸಿನ ಓಟಕ್ಕೆ ಈ ವಾರ ಕೆಲವು ಸಣ್ಣಪುಟ್ಟ ಅಡತಡೆಗಳು ಉಂಟಾಗಲಿವೆ.ಮಕರ ರಾಶಿಯಲ್ಲಿನ ಪ್ರೇಮಿಗಳಿಗೆ ಈ ವಾರ ಅತ್ಯುತ್ತಮ. ಉದ್ಯೋಗಾಂಕ್ಷಿಗಳಿಗೆ ಉದ್ಯೋಗ ಸಿಗಲಿದೆ.

  ಕುಂಭ ರಾಶಿ

  ಕುಂಭ ರಾಶಿಯವರಿಗೆ ಈ ವಾರದ ಆರಂಭ ಅಷ್ಟೊಂದು ಉತ್ತಮವಾಗಿರುವುದಿಲ್ಲ ಚಂದ್ರನು ಈ ರಾಶಿಯಲ್ಲಿ ನಕಾರಾತ್ಮಕವಾಗಿ ಇರುತ್ತಾನೆ. ನೀವು ಹೆಚ್ಚು ಅತೃಪ್ತಿ ಅನುಭವಿಸುತ್ತೀರಾ. ಜವಾಬ್ದಾರಿಗಳನ್ನು ನೀವು ಹೊರೆ ಎಂದು ಭಾವಿಸುವಿರಿ. ಕೆಲಸದಲ್ಲಿ ತೊಂದರೆಗಳು ಉಂಟಾಗಲಿದೆ.. ನವೆಂಬರ್ 22ರ ಬಳಿಕ ನಿಮ್ಮ ರಾಶಿಯಲ್ಲಿ ಎಲ್ಲವೂ ಉತ್ತಮಗೊಳ್ಳಲಿದೆ. ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯಲಿದ್ದೀರಾ. ಹಿತ ಶತ್ರುಗಳು ಹಾಗೂ ನಿಮ್ಮ ಶತ್ರುಗಳ ಬಗ್ಗೆ ನೀವು ಹೆಚ್ಚು ಜಾಗೃತೆಯಿಂದ ಇರಲಿದ್ದು ಅವರನ್ನು ನಿಯಂತ್ರಣ ಮಾಡಲು ಮುಂದಾಗುವಿರಿ

  ಮೀನ ರಾಶಿ

  ಈ ವಾರದ ಆರಂಭ ಮೀನಾ ರಾಶಿಯವರಲ್ಲಿ ಅತ್ಯುತ್ತಮವಾಗಿದೆ. ಒಡಹುಟ್ಟಿದವರು ಆಸ್ತಿ ವಿವಾದಗಳು ಬಗೆಹರಿಯಲಿವೆ. ನಿಮ್ಮ ಗುರಿಯ ಕಡೆಗೆ ನೀವು ಹೆಚ್ಚಿನ ಗಮನ ಕೇಂದ್ರೀಕರಿಸುವಿರಿ ನಿಮ್ಮ ಅಧೀನ ಅಧಿಕಾರಿಗಳು ನಿಮ್ಮ ಕಠಿಣ ನಿರ್ಧಾರಗಳಿಗೆ ಸಹಾಯ ಮಾಡುವರು. ಉದ್ಯೋಗಾಕಾಂಕ್ಷಿಗಳು ಉತ್ತಮ ಕೆಲಸ ಪಡೆಯುವರು . ನವೆಂಬರ್ 22 ರಿಂದ, ಪರಿಸ್ಥಿತಿ ಹದಗೆಡುತ್ತದೆ. ನೀವು ಒಂಟಿತನ ಮತ್ತು ದುಃಖವನ್ನು ಅನುಭವಿಸುವಿರಿ. ನಿಮ್ಮ ಪೋಷಕರ ಬಗ್ಗೆ ಕಾಳಜಿ ವಹಿಸಿ. ನಿಮಗೆ ಈ ವಾರ ಸಂತಾನಭಾಗ್ಯ ಇರಲಿದೆ..
  Published by:ranjumbkgowda1 ranjumbkgowda1
  First published: