Weekly Horoscope: ಮೇ 9ರಿಂದ 15ರವರೆಗಿನ ವಾರ ಭವಿಷ್ಯ, ಯಾರಿಗೆ ಶುಭ? ಯಾರಿಗೆ ಲಾಭ? ಇಲ್ಲಿದೆ ಮಾಹಿತಿ

ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಲಾಭ? ಉದ್ಯೋಗ, ಆರೋಗ್ಯ, ಆರ್ಥಿಕ ಪರಿಸ್ಥಿತಿ, ದಾಂಪತ್ಯ ಜೀವನ ಹೇಗಿರಲಿದೆ? ದೋಷ ಪರಿಹಾರಕ್ಕೆ ಏನು ಮಾಡಬೇಕು? ಈ ವಾರ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಈ ಬಗ್ಗೆ ಇಲ್ಲಿದೆ ಮಾಹಿತಿ…

ವಾರ ಭವಿಷ್ಯ

ವಾರ ಭವಿಷ್ಯ

 • Share this:
  ಏಪ್ರಿಲ್ (April) ತಿಂಗಳ ಅಂತ್ಯ ಹಾಗೂ ಮೇ (May) ತಿಂಗಳ 2ನೇ ವಾರ 2 ಗ್ರಹಣಗಳಿಗೆ (Eclipses) ಸಾಕ್ಷಿಯಾಗಲಿದೆ. ಈಗಾಗಲೇ ಏಪ್ರಿಲ್ 30ರಂದು ಸೂರ್ಯ ಗ್ರಹಣ (Solar Eclipse) ಸಂಭವಿಸಿದ್ದರೆ, ಇದೇ ಮೇ 16ರಂದು ಚಂದ್ರ ಗ್ರಹಣ (Lunar Eclipse) ಸಂಭವಿಸಲಿದೆ. ಹೀಗಾಗಿ ಈ ಎರಡು ಗ್ರಹಣಗಳು ದ್ವಾದಶ ರಾಶಿಗಳ ಮೇಲೆ ಶುಭ ಹಾಗೂ ಅಶುಭ ಫಲಗಳನ್ನು ನೀಡುತ್ತದೆ. ಹಾಗಿದ್ರೆ ಕಳೆದ ಸೂರ್ಯ ಗ್ರಹಣದ ಪರಿಣಾಮ ಯಾರ ಮೇಲೆ ಆಗಲಿದೆ? ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಲಾಭ? ಉದ್ಯೋಗ, ಆರೋಗ್ಯ, ಆರ್ಥಿಕ ಪರಿಸ್ಥಿತಿ, ದಾಂಪತ್ಯ ಜೀವನ ಹೇಗಿರಲಿದೆ? ದೋಷ ಪರಿಹಾರಕ್ಕೆ ಏನು ಮಾಡಬೇಕು? ಈ ವಾರ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಈ ಬಗ್ಗೆ ಇಲ್ಲಿದೆ ಮಾಹಿತಿ…

  ಮೇಷ ರಾಶಿ

  ಈ ವಾರ ಈ ರಾಶಿಯವರಿಗೆ ಆದಾಯದಷ್ಟೇ ಖರ್ಚು ಇರುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಹಣ ನಿರ್ವಹಣೆ ಮಾಡಿರಿ. ಸ್ತ್ರೀಯರು ಅವರ ಖರ್ಚಿನ ಮೇಲೆ ಸ್ವಯಂ ನಿಯಂತ್ರಣ ಮಾಡಿಕೊಳ್ಳುವುದು ಅಗತ್ಯ. ನೀವು ನಿಮ್ಮ ಆರೋಗ್ಯದಲ್ಲಿ ಹೆಚ್ಚು ಚೇತರಿಕೆಯನ್ನು ಕಾಣಬಹುದು. ಆಸ್ತಿ ವಿಚಾರದಲ್ಲಿ ನಿಮಗೆ ಒಳಿತಾಗುತ್ತದೆ.

  ವೃಷಭ ರಾಶಿ

  ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ನಿರೀಕ್ಷೆಯ ಮಟ್ಟದಲ್ಲಿ ಇರುತ್ತದೆ. ಕೆಲವರು ನಿಮ್ಮ ಬಗ್ಗೆ ವಿಶೇಷ ಮಮಕಾರವನ್ನು ತೋರಿಸಿ ಸಾಕಷ್ಟು ಸಹಾಯ ಮಾಡುವರು. ಹಿರಿಯ ಅಧಿಕಾರಿಗಳ ಸಹಾಯದಿಂದ ಉದ್ಯೋಗದಲ್ಲಿ ಪ್ರಗತಿಯನ್ನು ಕಾಣಬಹುದು. ಬಹಳ ಶ್ರಮವಹಿಸಿ ಮಾಡಿದ್ದ ಕೆಲಸಗಳಿಗೆ ಈಗ ಪ್ರತಿಫಲ ಬರುತ್ತದೆ.

  ಮಿಥುನ ರಾಶಿ

  ಈ ವಾರ ಈ ರಾಶಿಯವರಿಗೆ ಅನಿರೀಕ್ಷಿತವಾಗಿ ಧನಸಹಾಯ ಬರುವ ಸಾಧ್ಯತೆಯಿದೆ. ಹೀಗಾಗಿ ಹಣದ ಹರಿವು ಉತ್ತಮವಾಗಿರುತ್ತವೆ. ದೂರ ಪ್ರಯಾಣದ ಸಾಧ್ಯತೆಗಳು ಇರುತ್ತವೆ. ಕೊಂಚ ಅನಾರೋಗ್ಯ ಕಾಡಬಹುದು, ಹುಷಾರಾಗಿರಿ. ಆಸ್ತಿ ಹಂಚಿಕೆ ವಿಚಾರದಲ್ಲಿ ತಂದೆಯೊಡನೆ ಸ್ವಲ್ಪ ಗಲಾಟೆಯಾಗಬಹುದು. ಯಾವುದೇ ಸಂದರ್ಭದಲ್ಲೂ ಅತಿಯಾದ ಮಾತು ಖಂಡಿತ ಬೇಡ.

  ಕರ್ನಾಟಕ ರಾಶಿ

  ಈ ವಾರ ಈ ರಾಶಿಯವರಿಗೆ ಹಣದ ಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಕೆಲಸದ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಇಷ್ಟ ಮಿತ್ರರ ಆಗಮನದಿಂದ ಮನೆಯಲ್ಲಿ ಸಂತೋಷ ಹೆಚ್ಚುತ್ತದೆ. ಮನಸ್ಸಿನಲ್ಲಿ ಇಲ್ಲದ ಆಲೋಚನೆಗಳು ಮೂಡಬಹುದು. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರವಹಿಸಿರಿ.

  ಇದನ್ನೂ ಓದಿ: Astrology: ಕೋಪ ನಿಯಂತ್ರಣದಲ್ಲಿದ್ದರೆ ಈ ದಿನ ಬೆಸ್ಟ್​ ದಿನವಾಗಿರಲಿದೆ ಈ ರಾಶಿಯವರಿಗೆ; ಇಲ್ಲಿದೆ ದಿನಭವಿಷ್ಯ

  ಸಿಂಹ ರಾಶಿ

  ಈ ವಾರ ಈ ರಾಶಿಯವರಿಗೆ ಹಣಕಾಸಿನ ಸ್ಥಿತಿ ಸಾಮಾನ್ಯವಾಗಿರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಇದ್ದ ಅಪನಂಬಿಕೆಯನ್ನು ದೂರ ಮಾಡಿ ದೃಢತೆಯನ್ನು ಸಾಧಿಸುವಿರಿ. ಬಂಧುಗಳಿಂದ ಕೆಲವು ಕೆಲಸಗಳಿಗೆ ವಿರೋಧ ವ್ಯಕ್ತವಾಗುವ ಸಾಧ್ಯತೆಗಳಿವೆ. ಹೊಟ್ಟೆಯಲ್ಲಿ ಕೆಲವರಿಗೆ ತೊಂದರೆ ಕಾಣಿಸಿಕೊಳ್ಳಬಹುದು. ಹೀಗಾಗಿ ಜಾಗ್ರತೆಯಾಗಿರಿ.

  ಕನ್ಯಾ ರಾಶಿ

  ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಸ್ಥಿರಾಸ್ತಿ ಖರೀದಿ ಬಗ್ಗೆ ಚಿಂತಿಸಿ ಮುನ್ನಡೆಯಬಹುದು. ವ್ಯವಹಾರದಲ್ಲಿ ಉನ್ನತಿಯನ್ನು ಕಾಣಬಹುದು. ಕೆಲವರಿಗೆ ಬೆನ್ನುನೋವು ಜಾಸ್ತಿಯಾಗುವ ಸಂದರ್ಭವಿದೆ. ಎಲ್ಲರೂ ಒಟ್ಟುಗೂಡಿ ಕುಲದೇವತಾ ದರ್ಶನಕ್ಕೆ ಹೋಗಿ ಬರುವ ಸಾಧ್ಯತೆಗಳಿವೆ.

  ತುಲಾ ರಾಶಿ

  ಈ ವಾರ ಈ ರಾಶಿಯವರಿಗೆ ಹಣಕಾಸಿನ ಸ್ಥಿತಿ ಸಾಮಾನ್ಯವಾಗಿರುತ್ತದೆ. ಅಜೀರ್ಣದಿಂದ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಆಗುವ ಸಾಧ್ಯತೆ ಇದೆ. ಹೀಗಾಗಿ ಜಾಗ್ರತೆಯಾಗಿರಿ. ಭೂ ವ್ಯವಹಾರಗಳಲ್ಲಿ ಸ್ವಲ್ಪ ಲಾಭ ಬರುತ್ತದೆ. ಸಂಗಾತಿಯ ಅಥವಾ ಸ್ನೇಹಿತರ ಸಹಕಾರದಿಂದ ಕೆಲವು ಕೆಲಸಗಳು ಆಗುತ್ತವೆ.

  ವೃಶ್ಚಿಕ ರಾಶಿ

  ಈ ವಾರ ಈ ರಾಶಿಯವರಿಗೆ ಹಣದ ಒಳ ಹರಿವು ನಿರೀಕ್ಷೆಗೆ ತಕ್ಕಂತೆ ಇರುತ್ತದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಸ್ನೇಹಿತ ರೊಡನೆ ಹಂಚಿಕೊಂಡ ಕೆಲವೊಂದು ವಿಷಯಗಳು ನಿಮಗೆ ಉತ್ತಮ ಫಲ ಕೊಡುತ್ತವೆ. ಉದ್ಯೋಗದ ಸ್ಥಳದಲ್ಲಿ ಇದ್ದ ಗೊಂದಲಗಳು ನಿವಾರಣೆಯಾಗುತ್ತವೆ. ಮನೆಯಲ್ಲಿ ರಂಪಾಟಗಳು ಹೆಚ್ಚಾಗುವ ಸಾಧ್ಯತೆ ಇದೆ, ತಾಳ್ಮೆಯಿಂದ ಇದ್ದಲ್ಲಿ ಎಲ್ಲವೂ ಸರಿಯಾಗುತ್ತದೆ.

  ಧನು ರಾಶಿ

  ಈ ವಾರ ಈ ರಾಶಿಯವರಿಗೆ ಆರ್ಥಿಕ ಸಂಕಷ್ಟಗಳು ಸ್ವಲ್ಪಮಟ್ಟಿಗೆ ದೂರಾಗುತ್ತವೆ. ಹಣದ ಒಳಹರಿವು ಸಾಮಾನ್ಯ ವಾಗಿರುತ್ತದೆ. ಸಂಗಾತಿಯ ಕಡೆಯವರಿಂದ ಆಸ್ತಿ ದೊರೆಯಬಹುದು. ಪಿತ್ರಾರ್ಜಿತ ಆಸ್ತಿಯಿಂದ ಆದಾಯ ಬರುತ್ತದೆ. ಬಂಧುಗಳು ನಿಮ್ಮನ್ನು ನೋಡಿ ಅಸೂಯೆ ಪಡುವರು.

  ಮಕರ ರಾಶಿ

  ಈ ವಾರ ಈ ರಾಶಿಯವರಿಗೆ ಆದಾಯ ಹೆಚ್ಚಾಗುವ ಸಾಧ್ಯತೆಗಳಿವೆ. ವಾಪಸ್ಸು ಬರಬೇಕಾ ಗಿದ್ದ ನಿಮ್ಮ ಹಣದಲ್ಲಿ ಸ್ವಲ್ಪ ಭಾಗ ಬರುತ್ತದೆ. ಹೆಣ್ಣು ಮಕ್ಕಳಿಗೆ ತವರುಮನೆಯಿಂದ ಯಾವುದಾದರೂ ಒಂದು ರೀತಿಯ ಉಡುಗೊರೆ ದೊರೆಯುವ ಸಾಧ್ಯತೆ ಇದೆ. ನವೀನ ರೀತಿಯ ಗೃಹ ನಿರ್ಮಾಣಕ್ಕೆ ಚಾಲನೆಯನ್ನು ನೀಡುವಿರಿ.

  ಕುಂಭ ರಾಶಿ

  ಈ ವಾರ ಈ ರಾಶಿಯವರಿಗೆ ಆದಾಯದಷ್ಟೇ ಖರ್ಚು ಇರುತ್ತದೆ. ಹಿರಿಯರ ಮಾತನ್ನು ಧಿಕ್ಕರಿಸುವುದರಿಂದ ನಿಮಗೆ ಹಾನಿಯಾಗಬಹುದು. ಸಂಗಾತಿಯಿಂದ ವಂಚನೆಗೆ ಒಳಗಾಗುವ ಸಾಧ್ಯತೆಗಳಿವೆ. ಕೆಲವು ಯುವಕರು ದುಡುಕಿನ ನಡವಳಿಕೆಯಿಂದ ಅಗೌರವಕ್ಕೆ ಒಳಗಾಗುವ ಸಾಧ್ಯತೆ ಇದೆ. ದೇವತಾ ಕಾರ್ಯಗಳನ್ನು ಮಾಡಲು ಹೆಚ್ಚು ಆಸಕ್ತಿ ವಹಿಸುವಿರಿ. ಶೀತಬಾಧೆ ಇರುವವರು ಎಚ್ಚರಿಕೆ ವಹಿಸಿರಿ.

  ಇದನ್ನೂ ಓದಿ: Shani Dosha: ಶಿವನನ್ನು ಬಿಡಲಿಲ್ಲ ಶನಿ ದೋಷ; ಪುರಾಣದ ಈ ಕಥೆ ಗೊತ್ತಾ?

  ಮೀನ ರಾಶಿ

  ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಸರ್ಕಾರದಿಂದ ದೊರೆಯಬೇಕಿದ್ದ ಅನುದಾನ ದೊರೆಯುತ್ತದೆ. ಕೆಲವರಿಗೆ ಉದ್ಯೋಗದಲ್ಲಿ ಪದೋನ್ನತಿ ದೊರೆಯುವ ಸಾಧ್ಯತೆ ಇದೆ. ಹಳೆಯ ಕೇಸುಗಳಲ್ಲಿ ನಿಮಗೆ ಹೆಚ್ಚಿನ ಅನುಕೂಲ ಆಗುತ್ತದೆ. ನಿಮ್ಮ ಕೆಲವು ಕೆಲಸಗಳಿಗೆ ಅನಿರೀಕ್ಷಿತ ಅಡೆತಡೆ ಆಗಬಹುದು.
  Published by:Annappa Achari
  First published: