Weekly Horoscope: ಅಕ್ಷಯ ತೃತೀಯದ ಹೊಸ್ತಿಲಲ್ಲಿ ಅಕ್ಷಯವಾಗುತ್ತಾ ಸುಖ-ಶಾಂತಿ? ದ್ವಾದಶ ರಾಶಿಗಳ ವಾರಫಲ ಇಲ್ಲಿದೆ

ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಲಾಭ? ಉದ್ಯೋಗ, ಆರೋಗ್ಯ, ಆರ್ಥಿಕ ಪರಿಸ್ಥಿತಿ, ದಾಂಪತ್ಯ ಜೀವನ ಹೇಗಿರಲಿದೆ? ದೋಷ ಪರಿಹಾರಕ್ಕೆ ಏನು ಮಾಡಬೇಕು? ಈ ವಾರ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಈ ಬಗ್ಗೆ ಇಲ್ಲಿದೆ ಮಾಹಿತಿ…

ವಾರ ಭವಿಷ್ಯ

ವಾರ ಭವಿಷ್ಯ

  • Share this:
    ನಿನ್ನೆಯಷ್ಟೇ ಶನಿ ಅಮಾವಾಸ್ಯೆ (Shani Amavasye) ಮುಗಿದಿದೆ, ಜೊತೆಗೆ ನಿನ್ನೆ ಸೂರ್ಯ ಗ್ರಹಣ (Solar Eclipse) ಕೂಡ ಸಂಭವಿಸಿದೆ. ಭಾರತದಲ್ಲಿ (India) ಇದು ಗೋಚರಿಸದೇ ಇದ್ದರೂ ದ್ವಾದಶ ರಾಶಿಗಳ ಮೇಲೆ ಇದರ ಪರಿಣಾಮ (Effect) ಇದ್ದೇ ಇರುತ್ತದೆ. ಜೊತೆಗೆ ಮುಂದೆ ಅಕ್ಷಯ ತೃತೀಯ (Akshaya Tritiya) ಇದೆ. ಹೀಗಾಗಿ ಈ ವಾರ ವಿಶೇಷತೆಗಳೇ ಇವೆ ಎಂದಾಯಿತು. ಹಾಗಾದರೆ ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಲಾಭ? ಉದ್ಯೋಗ, ಆರೋಗ್ಯ, ಆರ್ಥಿಕ ಪರಿಸ್ಥಿತಿ, ದಾಂಪತ್ಯ ಜೀವನ ಹೇಗಿರಲಿದೆ? ದೋಷ ಪರಿಹಾರಕ್ಕೆ ಏನು ಮಾಡಬೇಕು? ಈ ವಾರ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಈ ಬಗ್ಗೆ ಇಲ್ಲಿದೆ ಮಾಹಿತಿ…

     ಮೇಷ ರಾಶಿ

    ಈ ರಾಶಿಯವರಿಗೆ ಈ ವಾರ ಹಣದ ಒಳಹರಿವು ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗುವ ಸಾಧ್ಯತೆಗಳಿವೆ. ದೇಹದಲ್ಲಿ ಉಷ್ಣಾಂಶ ಜಾಸ್ತಿಯಾಗಿ ತಲೆನೋವು ಇತ್ಯಾದಿ ಕಾಯಿಲೆ ಬರಬಹುದು. ಈ ಬಗ್ಗೆ ಗಮನ ಹರಿಸುವುದು ಉತ್ತಮ. ಸಂಗಾತಿಯ ಹೆಸರಿನಲ್ಲಿ ಕೊಟ್ಟಿದ್ದ ಸಾಲಗಳು ವಾಪಸ್ ಬರದೇ ಇರಬಹುದು ಹುಷಾರ್...

    ವೃಷಭ ರಾಶಿ

    ಈ ರಾಶಿಯವರಿಗೆ ಈ ವಾರ ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಹೊಸ ವಾಹನ ಖರೀದಿ ಮಾಡುವ ಸಾಧ್ಯತೆ ಇದೆ. ವೃತ್ತಿಯಲ್ಲಿ ಹಿತ ಶತ್ರುಗಳು ನಿಮ್ಮನ್ನು ಕಾಡಬಹುದು. ದೀರ್ಘಕಾಲೀನ ಕಾಯಿಲೆ ಇರುವವರು ಎಚ್ಚರವಾಗಿರುವುದು ಉತ್ತಮ. ಶೀಘ್ರವೇ ಔಷಧೋಪಚಾರಗಳನ್ನು ಮಾಡಿಕೊಳ್ಳುವುದು ಉತ್ತಮ.

    ಮಿಥುನ ರಾಶಿ

    ಈ ರಾಶಿಯವರಿಗೆ ಈ ವಾರ ಆದಾಯದಷ್ಟೇ ಖರ್ಚು ಇರುತ್ತದೆ. ಹಾಗಾಗಿ ಖರ್ಚು ವೆಚ್ಚದ ಬಗ್ಗೆ ಗಮನ ಇರಲಿ. ಹಂತಹಂತವಾಗಿ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡು ಮುನ್ನಡೆಯುವಿರಿ. ಒಡಹುಟ್ಟಿದವರಿಂದ ನಿಮ್ಮ ವ್ಯಾಪಾರ ವ್ಯವಹಾರಗಳಿಗೆ ಸಾಕಷ್ಟು ಸಹಾಯ ದೊರೆಯುತ್ತದೆ. ಕಗ್ಗಂಟಾಗಿದ್ದ ಪಿತ್ರಾರ್ಜಿತ ಆಸ್ತಿಯಲ್ಲಿ ನಿಮ್ಮ ಪಾಲು ದೊರೆಯುತ್ತದೆ.

    ಕರ್ಕಾಟಕ ರಾಶಿ

    ಈ ರಾಶಿಯವರಿಗೆ ಈ ವಾರ ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ನಿಮಗೆ ಬೇಕಾದ ಸಾಲ ಸೌಲಭ್ಯ ಸರಾಗವಾಗಿ ದೊರೆಯುತ್ತದೆ. ಆತ್ಮಸ್ಥೈರ್ಯದಿಂದ ಮಾಡಿದ ಕೆಲಸಗಳಿಗೆ ಉತ್ತಮ ಫಲಿತಾಂಶ ನಿರೀಕ್ಷೆ ಮಾಡಬಹುದು. ಹೊಸ ಹೊಸ ವ್ಯವಹಾರಗಳಿಗೆ ಪಾಲ್ಗೊಳ್ಳಲು ಆಹ್ವಾನ ಬರುತ್ತದೆ. ಯೋಚಿಸಿ ಮುಂದಡಿ ಇಡಿ. ಅಮೂಲ್ಯ ವಸ್ತುಗಳ ಸಂಗ್ರಹಣೆ ಮಾಡುವ ಆಸೆ ಗರಿಗೆದರುತ್ತದೆ. ವಯಸ್ಕರಿಗೆ ವಿವಾಹ ಸಂಬಂಧ ಒದಗಿಬರುವ ಸಾಧ್ಯತೆಗಳಿವೆ. ಕುಟುಂಬ ಸಮೇತರಾಗಿ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ಕೊಡುವಿರಿ.

    ಇದನ್ನೂ ಓದಿ: Ganesha: ಗಣೇಶ ಇಲಿಯನ್ನು ಯಾಕೆ ವಾಹನ ಮಾಡಿಕೊಂಡಿದ್ದಾನೆ ಗೊತ್ತಾ?

    ಸಿಂಹ ರಾಶಿ

    ಈ ರಾಶಿಯವರಿಗೆ ಈ ವಾರ ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ನಿಮ್ಮ ಯೋಜನೆಗಳನ್ನು ಆದ್ಯತೆಯ ಮೇಲೆ ಜಾರಿಗೊಳಿಸುವುದು ಉತ್ತಮ. ಪ್ರಯಾಣ ಕಾಲದಲ್ಲಿ ಅಪರಿಚಿತರ ಜೊತೆ ಎಚ್ಚರವಾಗಿರಿ. ಇವರು ನಿಮ್ಮನ್ನು ದಾರಿತಪ್ಪಿಸಲು ಯತ್ನಿಸುವರು. ಗಣ್ಯರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವ ಅವಕಾಶಗಳು ಕೆಲವರಿಗೆ ಒದಗಿಬರುತ್ತದೆ. ಸ್ವತ್ತು ವಿವಾದಗಳಲ್ಲಿ ಬಂಧುಗಳೊಡನೆ ಸೌಹಾರ್ದಯುತವಾಗಿ ಮಾತನಾಡಿದಲ್ಲಿ ಸಮಸ್ಯೆ ಬಗೆಹರಿಯುತ್ತದೆ. ಮಾತನಾಡುವಾಗ ಹಗುರವಾದ ಮಾತುಗಳು ಬೇಡ.

    ಕನ್ಯಾ ರಾಶಿ

    ಈ ರಾಶಿಯವರಿಗೆ ಈ ವಾರ ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ವಿವಾಹ ಅಪೇಕ್ಷಿತರಿಗೆ ಸಂಬಂಧ ಒದಗಿಬರುವ ಸಾಧ್ಯತೆ ಇದೆ. ಮನೆಯವರ ಅಸಮ್ಮತಿಯ ನಡುವೆಯೂ ಕೆಲವರು ಸಂಗಾತಿಯ ಆಯ್ಕೆಯನ್ನು ಮಾಡಿಕೊಳ್ಳುವರು. ಸಣ್ಣಪುಟ್ಟ ವ್ಯಾಪಾರ ಮಾಡುವವರಿಗೆ ನಿರೀಕ್ಷಿತ ಲಾಭವಿರುತ್ತದೆ. ಮೂಳೆ ತೊಂದರೆ ಇರುವವರು ಎಚ್ಚರವಹಿಸಿರಿ.

    ತುಲಾ ರಾಶಿ

    ಈ ರಾಶಿಯವರಿಗೆ ಈ ವಾರ ಆದಾಯಕ್ಕಿಂತ ವೆಚ್ಚ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಹಣದ ನಿರ್ವಹಣೆಯನ್ನು ಸರಿಯಾಗಿ ಮಾಡಿಕೊಳ್ಳಿ. ಭೂ ಸಂಬಂಧಿ ವ್ಯವಹಾರಗಳನ್ನು ಮಾಡುವವರಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ಪಾಲುದಾರಿಕೆಯ ವ್ಯವಹಾರದಲ್ಲಿ ಆದಾಯ ಕಡಿಮೆಯಿರುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯನ್ನು ಕಾಣಬಹುದು.

    ವೃಶ್ಚಿಕ ರಾಶಿ

    ಈ ರಾಶಿಯವರಿಗೆ ಈ ವಾರ ನಿರೀಕ್ಷಿತ ಮೂಲಗಳಿಂದ ಆದಾಯವಿರುತ್ತದೆ. ಹೀಗಾಗಿ ಹಣದ ಒಳಹರಿವು ಉತ್ತಮವಾಗಿರುತ್ತದೆ. ಗೃಹ ನಿರ್ಮಾಣಕ್ಕೆ ಇದ್ದ ಅಡ್ಡಿ ಆತಂಕಗಳು ಈಗ ನಿವಾರಣೆ ಆಗುತ್ತವೆ. ಸಂಗಾತಿಯ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ಅನಿರೀಕ್ಷಿತವಾಗಿ ಆರಂಭಗೊಂಡ ವ್ಯಾಪಾರಗಳು ಕೆಲವರಿಗೆ ಲಾಭ ತರುತ್ತವೆ. ಸ್ನೇಹಿತರೊಡನೆ ಮನಬಿಚ್ಚಿ ಮಾತನಾಡುವುದರಿಂದ ಇದ್ದ ಕಸಿವಿಸಿ ದೂರವಾಗುತ್ತದೆ.

    ಧನು ರಾಶಿ

    ಈ ರಾಶಿಯವರಿಗೆ ಈ ವಾರ ತಂದೆಯಿಂದ ಧನಸಹಾಯ ಒದಗಿಬರುವ ಸಾಧ್ಯತೆ ಇದೆ. ವೃತ್ತಿಯಲ್ಲಿ ಸಹೋದ್ಯೋಗಿಗಳಿಂದ ಸಹಕಾರ ದೊರೆಯುತ್ತದೆ. ಹೊಸ ನಿವೇಶನವನ್ನು ಕೊಳ್ಳುವ ಯೋಗವಿದೆ. ಒಡಹುಟ್ಟಿದವರಿಂದ ಆಸ್ತಿಯ ಬಗ್ಗೆ ತಗಾದೆ ಬರಬಹುದು. ಪಿತ್ರಾರ್ಜಿತ ಆಸ್ತಿಗಳು ಒದಗುವ ಸಂದರ್ಭವಿರುತ್ತದೆ. ಹಿರಿಯರ ಸಲಹೆಗಳು ನಿಮಗೆ ವ್ಯವಹಾರದಲ್ಲಿ ಉತ್ತಮ ಮಾರ್ಗದರ್ಶನ ಮಾಡುತ್ತವೆ.

    ಮಕರ ರಾಶಿ

    ಈ ರಾಶಿಯವರಿಗೆ ಈ ವಾರ ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಜಾಗರೂಕತೆ ಮುಖ್ಯ. ನಿಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಹೆಚ್ಚು ಗಮನಹರಿಸಿರಿ. ನೆರೆಹೊರೆಯವರೊಂದಿಗೆ ಸ್ನೇಹ ಸಂಬಂಧ ವೃದ್ಧಿಸಿಕೊಳ್ಳುವಿರಿ. ಅನಿರೀಕ್ಷಿತ ಗೌರವ ಕೆಲವರಿಗೆ ದೊರೆಯಬಹುದು.

    ಕುಂಭ ರಾಶಿ

    ಈ ರಾಶಿಯವರಿಗೆ ಈ ವಾರ ಹಣದ ಒಳಹರಿವು ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲವನ್ನು ಈಗ ತೀರಿಸಬಹುದು. ದೈಹಿಕ ಕೆಲಸಗಳನ್ನು ಮಾಡುವವರಿಗೆ ಸ್ವಲ್ಪ ಕೆಲಸ ಕಡಿಮೆಯಾಗುವ ಸಂದರ್ಭವಿದೆ. ಶೀತಬಾಧೆ ಇರುವವರು ಎಚ್ಚರ ವಹಿಸಿರಿ. ಯುವಕರು ಅವರ ಸಾಮರ್ಥ್ಯವನ್ನು ಅರಿತು ಕೆಲಸ ವಹಿಸಿಕೊಳ್ಳುವುದು ಉತ್ತಮ ಇಲ್ಲವಾದಲ್ಲಿ ಎಲ್ಲರ ಮುಂದೆ ಅಗೌರವಕ್ಕೆ ಪಾತ್ರರಾಗುವಿರಿ.

    ಇದನ್ನೂ ಓದಿ: Astrology: ವಿಕೇಂಡ್​ ಪ್ರವಾಸದಲ್ಲಿ ದಿನ ಕಳೆಯಲಿದ್ದಾರೆ ಈ ರಾಶಿಯವರು; ಇಲ್ಲಿದೆ ದಿನಭವಿಷ್ಯ

    ಮೀನ ರಾಶಿ

    ಈ ರಾಶಿಯವರಿಗೆ ಈ ವಾರ ಹಣದ ಒಳಹರಿವು ಉತ್ತಮವಾಗಿರುತ್ತದೆ. ದುಂದುವೆಚ್ಚಕ್ಕೆ ಕಡಿವಾಣ ಹಾಕುವುದು ಅತಿ ಅಗತ್ಯ. ನೌಕರ ವರ್ಗದವರ ಕಠಿಣ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ದೊರೆತು ಪ್ರೋತ್ಸಾಹಧನ ಸಿಗುವ ಸಾಧ್ಯತೆ ಇದೆ. ಮಹಿಳೆಯರು ಭಾವೋದ್ವೇಗದಿಂದ ಮಾತನಾಡಿದಲ್ಲಿ ಅವರ ಗೌರವಕ್ಕೆ ಕುಂದು ಬರಬಹುದು. ಉಸಿರಾಟದ ತೊಂದರೆ ಇರುವವರು ಎಚ್ಚರಿಕೆಯಿಂದ ಇದ್ದು ಚಿಕಿತ್ಸೆ ಪಡೆಯುವುದು ಉತ್ತಮ.
    Published by:Annappa Achari
    First published: