Weekly Astrology: ಧನು ರಾಶಿಯವರಿಗೆ ಈ ವಾರ ಅದೃಷ್ಟದ ವಾರ; ಉಳಿದ ರಾಶಿಯವರಿಗೆ ಯಾವ ಫಲ ಸಿಗಲಿದೆ?

Weekly Horoscope August 8-15th: ಪ್ಲವನಾಮ ಸಂವತ್ಸರ ದಕ್ಷಿಣಾಯಣದ ಗ್ರೀಷ್ಮ ಋತು ಕರ್ಕಾಟಕ ಮಾಸದ 23 ನೇ ದಿನ. ತಿಥಿ: (ಆಷಾಢ ಕೃಷ್ಣ) ಅಮಾವಾಸ್ಯೆ, ನಕ್ಷತ್ರ: ಪುಷ್ಯ, ಯೋಗ: ವ್ಯತೀಪಾತ, ಕರಣ: ಚತುಷ್ಪಾದ್ ಗಂ, ನಾಗವಾನ್, ರಾಹುಕಾಲ : ಸಾಯಂಕಾಲ 4.30 ರಿಂದ 6ಗಂಟೆವರೆಗೆ ಇರಲಿದೆ. ಈ ದಿನದ ದ್ವಾದಶ ರಾಶಿ ದಿನ ಭವಿಷ್ಯ ಕುರಿತು ಕೆ.ಎಲ್ ವಿದ್ಯಾಶಂಕರ ಸೋಮಯಾಜಿ ತಿಳಿಸಿದ್ದಾರೆ. ಇವರ ಸಂಪರ್ಕಕ್ಕೆ : 9449186129

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಮೇಷ

  ಈ ವಾರದಲ್ಲಿ ವರಿಷ್ಠ ಅಧಿಕಾರಿಗಳಿಗೆ ವಿಶೇಷವಾದ ಅಧಿಕಾರಗಳು ಪ್ರಾಪ್ತವಾಗಲಿದೆ. ತಾಂತ್ರಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ಕೆಲವರಿಗೆ ಪ್ರಶಸ್ತಿ ಲಭಿಸುವಂತೆ ಆಗುವುದು. ಇಂಜಿನಿಯರಿಂಗ್ ಶಿಕ್ಷಣದಲ್ಲಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ವಿಶೇಷ ಸಾಧನೆ ತೋರಿರುವುದರಿಂದ ವಿದೇಶಕ್ಕೆ ತೆರಳುವ ಸಂಭವವಿದೆ. ಸೋದರ ಮಾವನ ಪ್ರಭಾವದಿಂದ ಹಾಗೂ ನಿಮ್ಮ ಪ್ರಯತ್ನಗಳಿಂದ ಉತ್ತಮ ಉದ್ಯೋಗ ಗಳಿಸುವಿರಿ. ರಿಯಲ್ ಎಸ್ಟೇಟ್ ವ್ಯವಹಾರಗಳಿಂದ ವರಮಾನವನ್ನು ಹೆಚ್ಚಿಸಿಕೊಳ್ಳುವಿರಿ. ಮನೆಯಲ್ಲಿ ಎಲ್ಲರ ಆರೋಗ್ಯ ಚೆನ್ನಾಗಿದ್ದು ಮನಸ್ಸಿಗೆ ನೆಮ್ಮದಿ ಇರುವುದು.

  ವೃಷಭ

  ಈ ವಾರ ನೀವು ಎಲ್ಲರೊಂದಿಗೆ ಮುಕ್ತವಾಗಿ ಬೆರೆಯಬೇಕು. ಮನೆ ಕೊಳ್ಳುವ ವಿಷಯದ ಬಗ್ಗೆ ಮನೆಯವರಿಂದ ಹೆಚ್ಚಿನ ಮಾಹಿತಿಯನ್ನು ಪಡೆಯುವಿರಿ. ಶಿಕ್ಷಕ ವೃತ್ತಿಯನ್ನು ಆರಂಭಿಸುವ ಬಗ್ಗೆ ಆಲೋಚಿಸಿದವರಿಗೆ ಶುಭ ವಾರ. ಹಣಕಾಸಿನ ಹೊಸ ಮೂಲವೊಂದು ಸೃಷ್ಟಿಯಾಗುವುದು. ವಿಶೇಷವಾಗಿ ಮಹಿಳೆಯರಿಗೆ ಹೊಸ ಹುದ್ದೆ ದೊರೆಯಲಿದೆ. ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ವಿಚಾರದಲ್ಲಿ ಮರೆಯಲಾಗದ ಒಂದು ಕಹಿ ಘಟನೆ ನೆಡೆಯಬಹುದು. ವಾಹನ ಚಾಲನೆಯಂತಹ ಕಾರ್ಯದಲ್ಲಿ ಯಾವುದೇ ರೀತಿಯ ಆತುರವು ಒಳ್ಳೆಯದಲ್ಲ.

  ಮಿಥುನ

  ಷೇರು ಮಾರುಕಟ್ಟೆ ಹಾಗೂ ಕಮಿಶನ್ ವ್ಯಾಪಾರ ಮುಂತಾದ ವೃತ್ತಿಯಲ್ಲಿರುವವರಿಗೆ ಈ ವಾರ ಲಾಭಾಂಶ ವೃದ್ಧಿಯಾಗಿ ಹೆಚ್ಚಿನ ಬೆಳವಣಿಗೆ ಕಾಣಬಹುದು. ಗೃಹ ನಿರ್ಮಾಣ ಅಥವಾ ನಿವೇಶನ ಖರೀದಿಯ ಕೆಲಸ ಆರಂಭಿಸಲು ಒಳ್ಳೆಯ ಕಾಲವಾಗಿದೆ. ಈ ವಾರ ನಿಮ್ಮ ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಮತ್ತು ಮಾರ್ಗದರ್ಶನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಹಣ್ಣು ಮಾರಾಟಗಾರರಿಗೆ ಉತ್ತಮ ವ್ಯಾಪಾರ ಹಾಗೂ ಲಾಭ ಇರುವುದು. ಶ್ರೀ ವಿಷ್ಣು ಸಹಸ್ರನಾಮ ಪಠನೆ ಮಾಡಿ.

  ಕರ್ಕಾಟಕ

  ಮನೆಗಾಗಿ ವಿಲಾಸಿ ಸಾಮಗ್ರಿಗಳನ್ನು ಖರೀದಿಸುವುದು ಖರ್ಚಿಗೆ ದಾರಿಯಾಗಲಿದೆ. ಈ ವಾರ ವೃತ್ತಿರಂಗದಲ್ಲಿ ನಿಮಗಾಗಿ ಅದೃಷ್ಟದ ಬಾಗಿಲು ತೆರೆಯುವುದು. ವ್ಯಾಪಾರ ವ್ಯವಹಾರಗಳು ಸರಾಗವಾಗಿ ನಡೆಯಲಿದೆ. ಚಲನ ಚಿತ್ರರಂಗದವರಿಗೆ ಒಳ್ಳೆಯ ಖ್ಯಾತಿ ದೊರೆಯುವುದು. ತಾಂತ್ರಿಕ ಕ್ಷೇತ್ರದಲ್ಲಿ ಗುರಿ ಮುಟ್ಟುವ ಗಣನೀಯ ಸಾಧನೆ ತೋರಿ ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗುವಿರಿ. ಸಕಾಲಕ್ಕೆ ಸ್ನೇಹಿತರಿಂದ ಹಣದ ಸಹಾಯ ಸಿಗಲಿದೆ. ದೈವಾನುಗ್ರಹದಿಂದ ನೀವು ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭವನ್ನು ಪಡೆಯುವಿರಿ.

  ಸಿಂಹ

  ನಿಮ್ಮ ಗುರುಬಲ ಚೆನ್ನಾಗಿದೆ. ರಾಜಕೀಯ ರಂಗವನ್ನು ಪ್ರವೇಶಿಸುವ ಇಚ್ಚೆಯನ್ನು ನಿಮ್ಮ ಸ್ನೇಹಿತರಲ್ಲಿ ವ್ಯಕ್ತಪಡಿಸುವಿರಿ. ದೂರ ದೃಷ್ಟಿ ಇಟ್ಟುಕೊಂಡು ಕಾರ್ಯ ಪ್ರವೃತ್ತರಾಗುವುದು ಉತ್ತಮ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಈ ವಾರ ನಿಮ್ಮ ಹೊಸ ಆಕಾಂಕ್ಷೆಗಳನ್ನು ಹಾಗೂ ಜೀವನದ ಗುರಿಗಳನ್ನು ಚೆನ್ನಾಗಿ ಅರಿತುಕೊಳ್ಳುವಿರಿ. ಮದುವೆಯ ವಿಷಯಗಳು ಪ್ರಸ್ತಾಪಕ್ಕೆ ಬರಲಿದೆ. ಮನೆಯವರ ಆರೋಗ್ಯದ ಬಗೆಗೆ ಹೆಚ್ಚಿನ ಕಾಳಜಿ ವಹಿಸಿ. ವೈಯಕ್ತಿಕ ವಿಚಾರಗಳಲ್ಲಿ ಸಣ್ಣ ಪುಟ್ಟ ಬದಲಾವಣೆಯಿಂದ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುವಿರಿ.

  ಕನ್ಯಾ

  ಹೆಚ್ಚಿನ ಅತ್ಮವಿಶ್ವಾಸದಿಂದಾಗಿ ಈ ವಾರ ಹೊಸ ಯೋಜನೆಗಳನ್ನು ಕಾರ್ಯಗತ ಗೊಳಿಸುವಲ್ಲಿ ವಿಫಲರಾಗುವಿರಿ. ಪಾಲುದಾರಿಕೆ ಅನಿವಾರ್ಯವಾಗಿ ಸಂಕಷ್ಟ ಪರಿಸ್ಥಿತಿಯಲ್ಲಿ ಕುಟುಂಬದ ಸ್ಥಾನಮಾನವನ್ನು ಮುಂದುವರೆಸುವಂತಾಗಲಿದೆ. ಬಹಳಷ್ಟು ದೀರ್ಘಕಾಲಿಕ ಕಾರ್ಯಗಳು ಚಾಲನೆಗೊಂಡು ಪುನಃ ಸ್ತಬ್ಧವಾಗುತ್ತದೆ. ಕೃಷಿ, ಹೈನು ಉತ್ಪನ್ನಗಳಿಂದ ಆದಾಯದಲ್ಲಿ ಗಣನೀಯ ಸುಧಾರಣೆ ಕಾಣಲಿದೆ. ನಿಮ್ಮೆಲ್ಲಾ ಪ್ರಮುಖ ಗುರಿ ಸಾಧನೆಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಬೇಡಿಕೆ ಸಿಗುವುದು. ಶ್ರೀ ವಿನಾಯಕನಿಗೆ ಅಭಿಷೇಕ ಮಾಡಿಸಿ.

  ತುಲಾ
  ಈ ವಾರ ನಿಮ್ಮ ಹೆಜ್ಜೆ ಬಿರುಸಾಗಿ ಸಾಗಲಿದೆ. ಕೆಲಸದಲ್ಲಿ ಪ್ರಶಂಸೆ ಸಿಗುವುದು. ವಾರದ ಮೊದಲ ಭಾಗದಲ್ಲಿ ನೂತನ ಸಂಬಂಧಗಳು ಕೂಡಿಬರುವುದು. ಮನೆ ಕಟ್ಟುವ ನಿಮ್ಮ ಆಸೆಗೆ ಸಹೋದರರಿಂದ ಹೆಚ್ಚಿನ ಪ್ರೋತ್ಸಾಹ ಸಿಗುವುದು. ಈ ವಾರದಲ್ಲಿ ಷೇರು-ಡಿಬೆಂಚರುಗಳನ್ನು ಕೊಳ್ಳಬಹುದು. ಅಧಿಕಾರಿಗಳು ನಿಮ್ಮ ಅಭಿಪ್ರಾಯಗಳಿಗೆ ಹೆಚ್ಚಿನ ಮನ್ನಣೆ ನೀಡುವರು. ವ್ಯಾಪಾರ-ವ್ಯವಹಾರಗಳು ಒಂದು ತಹಬಂದಿಗೆ ಬರಲಿವೆ. ನಿಮ್ಮ ಒಡನಾಡಿಗಳ ಪ್ರೀತಿ ವಿಶ್ವಾಸ ಸಹಕಾರದಿಂದ ಕಾರ್ಯವನ್ನು ಸುಲಭದಲ್ಲಿ ಸಾಧಿಸುವಿರಿ.

  ವೃಶ್ಚಿಕ

  ನೀವು ಭೇಟಿ ಮಾಡುವ ವ್ಯಕ್ತಿಯ ಸಾಂಗತ್ಯ ಸಾರ್ಥಕ ಎನಿಸುವುದು. ಮನೆಯನ್ನು ನವೀಕರಿಸುವಂತಹ ಆಲೋಚನೆಯಲ್ಲಿ ತೊಡಗುವಿರಿ. ಸಾಂಸಾರಿಕ ಸ್ಥಿತಿಗತಿ ಉತ್ತಮವಾಗಿರುತ್ತದೆ. ಭೂಸಂಬಂಧಿ ವ್ಯವಹಾರದಲ್ಲಿರುವವರಿಗೆ ಧನಲಾಭವಾಗುವುದು. ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆ ಸಂಭವವಿದೆ. ಅರ್ಧಕ್ಕೆ ನಿಂತ ಎಲ್ಲಾ ಕಾರ್ಯಗಳು ಈ ವಾರದಲ್ಲಿ ಪುನಃ ಚಾಲನೆ ದೊರೆಯಲಿದೆ. ಪೊಲೀಸ್ ಮತ್ತು ಅಬಕಾರಿ ಸಿಬ್ಬಂದಿಗಳಿಗೆ ಶುಭವಾರವೆನಿಸಲಿದೆ. ಜಾಹಿರಾತು ಸಂಸ್ಥೆ ಜನರಿಗೆ ವಿಶೇಷ ಆದಾಯ ಇರುವುದು.

  ಧನು

  ಈ ವಾರ ನಿಮ್ಮ ಪಾಲಿಗೆ ಅದೃಷ್ಟದ ವಾರವಾಗಿದೆ. ನಿಮ್ಮ ಸಂಸಾರ ನಿರ್ವಹಣೆಯ ವಿಷಯದಲ್ಲಿ ಖಚಿತ ನಿರ್ಧಾರ ತೆಗೆದುಕೊಳ್ಳಬೇಕಾಗುವುದು. ಹೋಟೆಲ್​ ಉದ್ದಿಮೆದಾರರಿಗೆ ಸ್ವಲ್ಪ ಮಟ್ಟಿನ ನಷ್ಟಗಳು ಸಂಭವಿಸಬಹುದು ಅಥವಾ ಕೆಲಸಗಾರರ ಬೇಡಿಕೆ, ಸಮಸ್ಯೆ ಎದುರಾಗಬಹುದು. ವರಿಷ್ಠರೊಡನೆ ಗಣಿಗಾರಿಕೆ ವಿಷಯಗಳ ಬಗ್ಗೆ ಚರ್ಚೆ. ವಿದೇಶದ ಶಿಕ್ಷಣಾವಕಾಶವನ್ನು ಪಡೆದುಕೊಳ್ಳುವಿರಿ. ಪ್ರಾಧ್ಯಾಪಕರಿಗೆ ಮತ್ತು ತಾಂತ್ರಿಕ ವಿಷಯಗಳ ಸಲಹೆಗಾರರಿಗೆ ಶುಭವಾರ. ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಪ್ರವಾಸ ಯೋಜನೆಗಳನ್ನು ಹಾಕುವಿರಿ.

  ಮಕರ

  ಸ್ವಲ್ಪ ಪರಿಶ್ರಮ ಕೂಡ ಈ ವಾರ ಕಾರ್ಯಸಾಧನೆಯಲ್ಲಿ ಪ್ರದರ್ಶಿಸಲು ಸಾಧ್ಯವಾಗದಂತಾಗಲಿದೆ. ನಿಮ್ಮಲ್ಲಿನ ಸುಪ್ತವಾಗಿ ಅಡಗಿರುವ ಪ್ರತಿಭೆ, ಕೌಶಲ್ಯಗಳನ್ನು ಹೊರ ತೆಗೆಯಲು ಅವಕಾಶಗಳು ಸಿಕ್ಕಿದರೂ, ಬಳಸಿಕೊಳ್ಳಲು ಅಸಾಧ್ಯವಾಗುವಂತಹ ಪರಿಸ್ಥಿತಿಗೆ ತಲುಪುವಿರಿ. ಯಾವುದಾದರೂ ಹೊಸ ವಿಚಾರವನ್ನು ಕಲಿಯಲು ಈ ವಾರ ಸರಿಯಲ್ಲ. ಸಂಬಂಧ ಬೆಳೆಸಲೂ ಕೂಡ ಉತ್ಸುಕರಾಗಿದ್ದೀರಿ. ವ್ಯವಹಾರದಲ್ಲಿ ಲಾಭನಷ್ಟಗಳನ್ನು ಸುಧಾರಿಸಿಕೊಂಡು ಹೋಗುವ ಮನಸ್ಸು ಬರಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು.

  ಕುಂಭ
  ಈ ವಾರ ಹೊಸ ಜನರ ಭೇಟಿಯಾಗುವುದು ಹಾಗೂ ಹೊಸ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ನೀವು ಬಹಳಷ್ಟು ಜಾಣತನ ತೋರಬೇಕಾಗುವುದು. ಈಗ ನಿಮ್ಮ ಹೆಸರಿನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಹಾಗೂ ಹೊಸ ಸಾಧನೆಗಳನ್ನು ಸಾಧಿಸಲು ಸಮಯ ಒದಗಿ ಬರುವುದು. ಮಕ್ಕಳ ವಿದ್ಯಾಭ್ಯಾಸದತ್ತ ಹೆಚ್ಚಿನ ಗಮನ ಹರಿಸುವಿರಿ. ಚಿಲ್ಲರೆ ವ್ಯಾಪಾರಿಗಳಿಗೆ ತೃಪ್ತಿಕರ ಲಾಭ. ಮದುವೆ ಮುಂಜಿ ಕಾರ್ಯಗಳು ನಿಶ್ಚಯವಾಗಲಿದೆ.

  ಮೀನ
  ಎಲ್ಲರೊಂದಿಗೆ ಎಲ್ಲಾ ವಿಚಾರದಲ್ಲಿ ಹೊಂದಿಕೊಳ್ಳುವ ನಿಮ್ಮ ಗುಣ ಹಾಗೂ ಸಾಮರ್ಥ್ಯ ಈ ವಾರ ಬಹಳಷ್ಟು ಮುಖ್ಯವೆನಿಸುವುದು. ನಿಮ್ಮೆಲ್ಲಾ ನೂತನ ಯೋಚನೆಗಳನ್ನು ಜನರು ಇಷ್ಟ ಪಡುತ್ತಾರೆ. ಆರ್ಥಿಕ ತಾಪತ್ರಯಗಳು ಹೇಳಿಕೊಳ್ಳಲಾಗದಂತಾಗಲಿದೆ. ನ್ಯಾಯವಾದಿಗಳಿಗೆ ಶುಭವಾರ. ಹೊಸ ಯೋಜನೆಗಳಿಗೆ ಚಾಲನೆ ನೀಡುವಿರಿ. ಗುರು ಹಿರಿಯರ ಆಶೀರ್ವಾದ ಪಡೆಯುವಿರಿ. ಬಹಳ ದಿನಗಳ ನಂತರ ಹಿಂದಿನಿಂದ ಬಾಕಿ ಇರುವ ಮನೆ ದೇವರ ಕೆಲಸಗಳನ್ನು ಮಾಡಿ ಮುಗಿಸುವ ನಿರ್ಧಾರಕ್ಕೆ ಬರುವಂತಾಗುವುದು.

  ಕೆ.ಎಲ್ ವಿದ್ಯಾಶಂಕರ ಸೋಮಯಾಜಿ
  9449186129
  Published by:Latha CG
  First published: