Weekly Horoscope: ಮಿಥುನ ರಾಶಿಯವರಿಗೆ ಕಂಕಣ ಭಾಗ್ಯ; ಈ ವಾರ ಉಳಿದ ರಾಶಿಗಳಿಗೆ ಯಾವ ಫಲ ಸಿಗಲಿದೆ?

ಈ ವಾರದ ದ್ವಾದಶ ರಾಶಿ ದಿನ ಭವಿಷ್ಯ ಕುರಿತು ಕೆ.ಎಲ್ ವಿದ್ಯಾಶಂಕರ ಸೋಮಯಾಜಿ ತಿಳಿಸಿದ್ದಾರೆ. ಇವರ ಸಂಪರ್ಕಕ್ಕೆ : 9449186129

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಮೇಷ

  ಬಹಳಷ್ಟು ಅನುಕೂಲಕರ ಫಲಗಳನ್ನು ನಿಮಗೆ ಈ ವಾರದಲ್ಲಿನ ಶುಭ ಸಂಧರ್ಭವು ತರಲಿದೆ. ಸ್ವಂತ ಉದ್ಯೋಗದವರು ತಮ್ಮ ಕ್ಷೇತ್ರವನ್ನು ಹೆಚ್ಚು ವಿಸ್ತರಿಸಿಕೊಂಡು ಉನ್ನತ ಮಟ್ಟಕ್ಕೇರಿ ಅಭಿವೃದ್ಧಿ ಹೊಂದುವರು. ಮಕ್ಕಳು ವಿದ್ಯಾಭ್ಯಾಸದಲ್ಲಿ ಬಹಳ ಉತ್ಸಾಹವನ್ನು ತೋರಿ ಮುನ್ನಡೆಯುವುದನ್ನು ನೋಡಬಹುದು. ಎಲ್ಲಾ ರೀತಿಯ ಧವಸ ಧಾನ್ಯ ಹಾಗೂ ಮಸಾಲಾ ಸಾಮಗ್ರಿಗಳ ಸಗಟು ಹಾಗೂ ರಫ್ತು ವ್ಯಾಪಾರಿಗಳು ಮತ್ತು ಏಜೆಂಟರುಗಳಿಗೆ ಈ ವಾರ ವ್ಯವಹಾರದಲ್ಲಿ ಹೆಚ್ಚಿನ ಅನುಕೂಲವಾಗುವುದು.

  ವೃಷಭ

  ತಾವು ಬಯಸಿದ ಕ್ಷೇತ್ರದಲ್ಲಿ ಹೊಸ ತಿರುವನ್ನು ಪಡೆಯುವಲ್ಲಿ ಯಶಸ್ವಿಯಾಗುವರು. ಅಧಿಕಾರಿ ವರ್ಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರಿಗೆ ಜನಸಾಮಾನ್ಯರಿಂದ ಹೆಚ್ಚಿನ ಪ್ರೋತ್ಸಾಹ ಹಾಗೂ ಸಹಕಾರಗಳು ದೊರಕುತ್ತವೆ. ವಾಯು ಸಂಬಂಧವಾಗಿ ಆರೋಗ್ಯ ತೊಂದರೆಗಳು ಕಾಣಿಸಿಕೊಳ್ಳಬಹುದು. ವಾಹನ ಮಾರಾಟಗಳಿಂದ ಉತ್ತಮ ಆದಾಯವನ್ನು ಪಡೆದುಕೊಳ್ಳುವಿರಿ. ರಾಜಕೀಯದಲ್ಲಿ ಯಾವುದೇ ರೀತಿಯ ಬದಲಾವಣೆ ಈ ವಾರದಲ್ಲಿ ಸರಿಯಲ್ಲ. ಪ್ರಾಧ್ಯಾಪಕರಿಗೆ ಮತ್ತು ತಾಂತ್ರಿಕ ವಿಷಯಗಳ ಸಲಹೆಗಾರರಿಗೆ ಇದು ಶುಭ ವಾರವಾಗಿದೆ.

  ಮಿಥುನ

  ಶೈಕ್ಷಣಿಕ ರಂಗದಲ್ಲಿನ ನಿಮ್ಮ ಚಟುವಟಿಕೆಗಳಿಂದ ಉತ್ತಮ ಹೆಸರನ್ನುಗಳಿಸಿಕೊಳ್ಳುವಿರಿ. ಭಾವನಾತ್ಮಕ ಸಂಬಂಧಗಳನ್ನು ಬೆಳೆಸಲು ಇದು ಸೂಕ್ತ ಕಾಲವಾಗಿದೆ. ದೇವರ ಸೇವೆಯಿಂದ ನಿಮ್ಮ ಅದೃಷ್ಟ ಈ ವಾರ ಇಮ್ಮಡಿಗೊಳ್ಳಲಿದೆ. ಅವಿವಾಹಿತರಿಗೆ ಉತ್ತಮ ಕಡೆಯಿಂದ ಸಂಬಂಧ ಅರಸಿ ಬರುವುದು. ತಂದೆ-ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಅನಿವಾರ್ಯವಾಗುತ್ತದೆ. ಬಹುಕಾಲದಿಂದ ಅನುಭವಿಸುತ್ತಿರುವ ರೋಗಬಾಧೆಯು ಹಂತಹಂತವಾಗಿ ಚೇತರಿಕೆಯ ಮೆಟ್ಟಿಲನ್ನು ನೋಡಲಿದೆ.

  ಕರ್ಕಾಟಕ

  ಈ ವಾರವು ನಿಮ್ಮ ಜೀವನದಲ್ಲಿ ಹೊಸಹುರುಪನ್ನು ಮೂಡಿಸಿ ಆನಂದಯುಕ್ತವಾಗಿಡುವುದರಲ್ಲಿ ಸಂಶಯವಿಲ್ಲ.  ಏನನ್ನಾದರೂ ಸಾಧಿಸಲೇಬೇಕೆಂದಿರುವ ನಿಮಗೆ, ಆತ್ಮವಿಶ್ವಾಸದ ಕೊರತೆಯಂತೂ ಕಾಣಿಸದು. ವಿವಿಧ ಧಾರ್ಮಿಕ ಕಾರ್ಯಕ್ರಮ ಮಾಡುವುದರಿಂದ ಅಥವಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ಇರುವುದು. ನ್ಯಾಯಾಲಯ- ಕಛೇರಿಗಳ ಅಲೆದಾಟವೂ, ಕ್ಲೇಶಗಳು, ಚಿರಂಜೀವಿಗಳ ಬಗೆಗಿನ ಚಿಂತೆಯೂ ಹೆಚ್ಚಾಗಲಿದೆ. ಈಶ್ವರ ಆರಾಧನೆಯಿಂದ ಶುಭವಾಗುವುದು.

  ಸಿಂಹ

  ನಿಮ್ಮ ಎಲ್ಲಾ ವ್ಯವಹಾರಗಳೂ ಸಾಮಾನ್ಯ ಗತಿಯಲ್ಲಿ ಮುಂದುವರಿಯಲಿದೆ. ನಿಷ್ಫಲ ವಿಚಾರದಲ್ಲಿ ಸಮಯ ಹರಣವೂ, ಕೀರ್ತಿಹಾನಿಯು ಸಂಭವಿಸಲಿದೆ. ವಿದ್ಯಾರ್ಥಿಗಳಿಗೆ ಆಲಸ್ಯದ ಪರ್ವತ ಎದುರಾಗುವುದರಿಂದ ವಿದ್ಯಾರ್ಜನೆಯಲ್ಲಿ ಸ್ವಲ್ಪ ಹಿನ್ನಡೆಯಾಗಲಿದೆ. ಮಿತ್ರರಲ್ಲಿ ಸ್ನೇಹವೂ ಬಂಧುಗಳಲ್ಲಿ ಸಂಬಂಧವೂ ಉಳಿಸಿಕೊಂಡು ಹೋಗುವುದು ಇಹಕ್ಕೂ ಪರಕ್ಕೂ ಒಳಿತು ಉಂಟುಮಾಡುತ್ತದೆ. ಪಾಕಪ್ರವೀಣರಿಗೆ ವೃತ್ತಿಯಲ್ಲಿ ಹೆಸರುಮಾಡುವ ಕಾಲ ಅಥವಾ ಹೆಸರಾಂತ ಸಂಸ್ಥೆಯಲ್ಲಿ ಕೆಲಸ ಮಾಡುವ ಕಾಲ ಒದಗಿಬರಲಿದೆ.

  ಕನ್ಯಾ

  ಚರ್ಮಸಂಬಂಧವಾದ ಅನಾರೋಗ್ಯವು ಕಾಣಿಸಿದಲ್ಲಿ ಆಯುರ್ವೇದದ ಮೊರೆ ಹೋಗುವುದರಿಂದ ಸಮಸ್ಯೆಗೆ ಶಾಶ್ವತವಾಗಿ ಉತ್ತರ ದೊರಕಲಿದೆ. ರಸ್ತೆ ಗುತ್ತಿಗೆದಾರರಿಗೆ, ಮರ-ಮುಟ್ಟುಗಳ ಮತ್ತು ಕಲ್ಲಿನ ವ್ಯಾಪಾರ ಮಾಡುವವರು ತಮ್ಮ ಶ್ರಮದ ದುಪ್ಪಟ್ಟು ಸಂಪಾದನೆಯನ್ನು ಅಪೇಕ್ಷಿಸಬಹುದು. ಧೈರ್ಯದಿಂದ ಮುನ್ನುಗ್ಗಿ ಕೆಲಸ ಮಾಡುವವರಿಗೆ ನಿಮ್ಮ ಕನಸುಗಳು ನನಸಾಗಲಿದೆ. ಮನೆಯಲ್ಲಿ ಶಾಂತ ವಾತಾವರಣವಿದ್ದು ಮನಸ್ಸಿಗೆ ತುಸು ನೆಮ್ಮದಿ ಬರುವುದು. ಶುಭಕ್ಕಾಗಿ ನವಗ್ರಹರನ್ನು ಆರಾಧಿಸಿ.

  ತುಲಾ

  ಇತ್ತೀಚಿನ ದಿನದಲ್ಲಿ ವೈರಾಗ್ಯ ಹೊಂದಿರುವ ನೀವು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಪರಿಶ್ರಮದಿಂದ ದುಡಿದರೆ ಪ್ರಗತಿಯ ಹಾದಿಯನ್ನು ಕಾಣುವಿರಿ. ಸ್ನೇಹಪರ ಸ್ವಭಾವದಿಂದಾಗಿ ವೈಯಕ್ತಿಕ ಸ್ಥಾನ ಮಾನಗಳು ಲಭಿಸುವುದು. ಕ್ರೀಡಾಪಟುಗಳಿಗೆ, ಉಪನ್ಯಾಸಕರಿಗೆ ಮತ್ತು ಕಲಾವಿದರುಗಳಿಗೆ ಹೆಚ್ಚಿನ ಅವಕಾಶ ಲಭಿಸಲಿದೆ. ಮನೆಯಲ್ಲಿ ಮಂಗಳಕಾರ್ಯಗಳು ನೆಡೆಯುವ ಸೂಚನೆ ಕಾಣುತ್ತದೆ. ಕಾರ್ಯಕ್ಷೇತ್ರದಲ್ಲಿ ಶಾಂತಚಿತ್ತದಿಂದ ವ್ಯವಹರಿಸಿದರೆ ನಿಮ್ಮ ಹಾದಿ ಸುಗಮವಾಗಿ ಸಾಗುತ್ತದೆ.

  ವೃಶ್ಚಿಕ

  ದೈಹಿಕ ಕೆಲಸವನ್ನು ಮಾಡಿ ದುಡಿಮೆ ಮಾಡುತ್ತಿರುವವರು ದೇಹಕ್ಕೆ ಸ್ವಲ್ಪಮಟ್ಟಿನ ವಿಶ್ರಾಂತಿ ನೀಡಬೇಕಾಗುತ್ತದೆ. ಸಾರ್ವಜನಿಕರ ಸೇವೆ ಮಾಡುವವರಿಗೆ ಕೆಲವು ಅನುಯಾಯಿಗಳಿಂದ ಸಹಕಾರ ಕೆಲವರಿಂದ ಅಸಹಕಾರ ಎರಡನ್ನೂ ಸ್ವಾಗತಿಸುವ ಅನಿವಾರ್ಯ ಉಂಟಾಗುತ್ತದೆ. ತಾಳಿದವನು ಬಾಳಿಯಾನು ಎಂಬಂತೆ ದುಡುಕದೇ ಸಮಾದಾನದಿಂದ ವ್ಯವಹರಿಸಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನಿಮ್ಮ ಪರಿಪೂರ್ಣ ಪ್ರಯತ್ನವನ್ನು ಹಾಕುವುದು ಅಗತ್ಯ. ಮೂಳೆಗೆ ಸಂಬಂಧಿಸಿದ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ.

  ಧನು

  ಹಿಂದೆ ಮಾಡಿದ ತಪ್ಪುಗಳಿಗೆ ಪಶ್ಚಾತಾಪ ಪಡುತ್ತಿದ್ದರೂ ತಪ್ಪುಗಳು ಪುನರಾವರ್ತನೆಯಾಗುತ್ತಿದೆ. ಆದ್ದರಿಂದ ವೃತ್ತಿಯಲ್ಲಿ ಎಚ್ಚರವಹಿಸುವುದು ಲೇಸು. ಆದಾಯಕ್ಕೇನೂ ಕೊರತೆಯಿರದು ಆದರೂ ಖರ್ಚು-ವೆಚ್ಚದಲ್ಲಿ ಮಿತವ್ಯಯ ಸಾಧಿಸಲು ಪ್ರಯತ್ನಿಸಿ. ಬಹಳ ದಿನಗಳಿಂದ ಖಾಯಿಲೆಯಲ್ಲಿ ಬಳಲುತ್ತಿರುವವರಿಗೆ ಔಷಧಿಯು ಪ್ರತಿಕ್ರಿಯಿಸಿ ಚೇತರಿಕೆಯ ಹಂತಕ್ಕೆ ಹೋಗುವಿರಿ. ಚೋರ ಕೃತ್ಯಗಳು ನಡೆಯುವ ಸಂಭವವಿದೆ. ಒಮ್ಮೊಮ್ಮೆ ಸಾಮಾಜಿಕ ರಂಗದಲ್ಲಿ ಮುಜುಗರದ ಸನ್ನಿವೇಶಗಳು ಸೃಷ್ಟಿಯಾದೀತು ಜಾಗ್ರತೆವಹಿಸಿ.

  ಮಕರ

  ಶನಿ ನಿಮಗೆ ಎಲ್ಲಾ ಕಾರ್ಯದಲ್ಲೂ ಜಯವನ್ನು ತಂದುಕೊಡಲಿದ್ದಾರೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ನಿಷ್ಠೆ, ಪ್ರಾಮಾಣಿಕತೆ ಮತ್ತು ಸಾಧನೆಗೆ ಪುರಸ್ಕಾರಗಳು ದೊರಕಲಿದೆ. ಹವ್ಯಾಸಿ ಉಪನ್ಯಾಸಕರಿಗೆ ಹೇರಳವಾದ ಅವಕಾಶ ಲಭ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲವನ್ನು ಕೊಡುವುದರಲ್ಲಿ ಸಂಶಯವೇ ಇಲ್ಲ. ಕಾರ್ಯ ಸಾಧನೆಗೆ ಅಧಿಕ ತಿರುಗಾಟದಿಂದ ಆಯಾಸ ಮತ್ತು ಆಹಾರದಲ್ಲಿ ವಿಷದ ಅಂಶವು ಸೇರಿ ಆರೋಗ್ಯ ಹದಗೆಡುವ ಸಾಧ್ಯತೆಯಿದೆ, ಎಚ್ಚರವಹಿಸುವುದು ಅಗತ್ಯ. ಸಂತಾನಾಪೇಕ್ಷಿಗಳು ಫಲವನ್ನು ಪಡೆಯುವಿರಿ.

  ಕುಂಭ

  ದೇವಬಲದಿಂದಾಗಿ ಕುಟುಂಬದ ಹಾಗೂ ಕಾರ್ಯಕ್ಷೇತ್ರದ ಸಮಸ್ಯೆಯನ್ನು ಹಂತಹಂತವಾಗಿ ಸುಧಾರಣೆ ಮಾಡುವಿರಿ. ವಾಹನ, ವಸ್ತ್ರ, ಆಭರಣಗಳ ಖರೀದಿ, ಸತ್ಕಾರ್ಯದಲ್ಲಿ ಆಸಕ್ತಿ, ಬಂಧು-ಬಾಂಧವರ ಸಹಾಯ ಮೊದಲಾದ ಸತ್ಫಲವನ್ನು ಕಾಣಬಹುದು. ಪಿತ್ರಾರ್ಜಿತ ಆಸ್ತಿಯು ನಿಮ್ಮ ಪಾಲಾಗಲಿದೆ. ವಿದ್ಯಾಭ್ಯಾದಲ್ಲಿ ಒಳ್ಳೆಯ ಫಲಿತಾಂಶವನ್ನು ಪಡೆದು ನೀವು ಹೆಚ್ಚಿನ ವ್ಯಾಸಾಂಗಕ್ಕೆ ವಿದೇಶಕ್ಕೆ ತೆರಳುವ ಅವಕಾಶವಿದೆ. ರಾಜಕೀಯ ರಂಗದಲ್ಲಿ ಇರುವವರಿಗೆ ಈ ವರ್ಷವು ಅನುಕೂಲಕರವಾಗಿದೆ.

  ಮೀನ

  ಸೇವಕ ವರ್ಗದವರಿಂದ ಹೊಸದೊಂದು ಪಾಠ ಕಲಿಯುವ ಕಾಲ ಬರಲಿದೆ. ತೆರಿಗೆ ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿಗಳಿಗೆ ವಿಶೇಷ ಸ್ಥಾನಮಾನ ಪ್ರಾಪ್ತವಾಗಲಿದೆ. ದುಡುಕುತನದ ನಿರ್ಧಾರದಿಂದ ಕಾರ್ಯಹಾನಿಯಾಗುವ ಸಂಭವವಿದೆ. ಭೂ ಖರೀದಿಯಂತಹ ಅಥವಾ ಗೃಹ ನಿರ್ಮಾಣ ಕಾರ್ಯದಂತಹ ಯೋಚನೆಗಳು ಕಾರ್ಯರೂಪಕ್ಕೆ ಬರಲಿದೆ. ಬಟ್ಟೆ ವ್ಯಾಪಾರ ನೆಡೆಸುವವರಿಗೆ ಹೆಚ್ಚಿನ ಲಾಭ ದೊರಕಲಿದೆ. ಹಿತಶತ್ರುಗಳಿಂದ ವಂಚನಾಪ್ರಸಂಗವಿದ್ದರೂ ನಿಮಗೆ ಅನುಭವಕ್ಕೆ ಬರುವುದಿಲ್ಲ.
  Published by:Latha CG
  First published: