Weekly Horoscope: ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ?

ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಲಾಭ? ಉದ್ಯೋಗ, ಆರೋಗ್ಯ, ಆರ್ಥಿಕ ಪರಿಸ್ಥಿತಿ, ದಾಂಪತ್ಯ ಜೀವನ ಹೇಗಿರಲಿದೆ? ದೋಷ ಪರಿಹಾರಕ್ಕೆ ಏನು ಮಾಡಬೇಕು? ಈ ವಾರ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಈ ಬಗ್ಗೆ ಇಲ್ಲಿದೆ ಮಾಹಿತಿ…

ವಾರ ಭವಿಷ್ಯ

ವಾರ ಭವಿಷ್ಯ

  • Share this:
ಮೇಷ ರಾಶಿಗೆ (Aries) ಬುಧನ (Mercury) ಪ್ರವೇಶವಾಗಿದೆ. ಮೀನರಾಶಿಯಲ್ಲಿದ್ದ ಬುಧ ಈಗಾಗಲೇ ಮೇಷ ರಾಶಿಗೆ ಪ್ರವೇಶ ಮಾಡಿದ್ದಾನೆ. ಬುದ್ಧನನ್ನು ಬುದ್ಧಿವಂತಿಕೆಯ ಪ್ರತೀಕ ಎಂದು ಕರೆಯಲಾಗುತ್ತದೆ. ಶಾಂತ ಸ್ವಭಾವದ ಗ್ರಹವಾಗಿರುವ ಬುಧನು, ಜೀವನದಲ್ಲಿ ಪ್ರಗತಿ ಮತ್ತು ಸಂಪತ್ತನ್ನು ನಿಯಂತ್ರಿಸುತ್ತದೆ. ಇನ್ನು ಬುಧನ ಸ್ಥಾನ ಬದಲಾವಣೆಯಿಂದ ದ್ವಾದಶ ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಉಂಟಾಗುತ್ತದೆ. ಈ ವಾರ (Week) ಕೆಲವರಿಗೆ ಲಾಭವಾದರೆ (Profit), ಇನ್ನು ಕೆಲವರಿಗೆ ನಷ್ಟವಾಗಲಿದೆ (Loss). ಕೆಲವರಿಗೆ ಶುಭವಾದರೆ, ಇನ್ನು ಕೆಲ ರಾಶಿಗಳಿಗೆ ಅಶುಭವಾಗಲಿದೆ. ಇನ್ನು ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಲಾಭ? ಉದ್ಯೋಗ, ಆರೋಗ್ಯ, ಆರ್ಥಿಕ ಪರಿಸ್ಥಿತಿ, ದಾಂಪತ್ಯ ಜೀವನ ಹೇಗಿರಲಿದೆ? ದೋಷ ಪರಿಹಾರಕ್ಕೆ ಏನು ಮಾಡಬೇಕು? ಈ ವಾರ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಈ ಬಗ್ಗೆ ಇಲ್ಲಿದೆ ಮಾಹಿತಿ…

ಮೇಷ ರಾಶಿ

ಈ ರಾಶಿಯವರಿಗೆ ಈ ವಾರ ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ನಿಮ್ಮ ವಿಶ್ವಾಸಿಗಳಿಗೆ ಅನಿವಾರ್ಯವಾಗಿ ಧನಸಹಾಯ ಮಾಡಬೇಕಾಗುತ್ತದೆ. ಕಣ್ಣಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಾಡಬಹುದು ಎಚ್ಚರ. ನಿಮ್ಮ ವೃತ್ತಿರಂಗದ ಬಗ್ಗೆ ಸಂತೋಷವಿರುತ್ತದೆ.

ನೆರೆಹೊರೆಯವರೊಡನೆ ನಿಷ್ಠುರವಾಗಿ ಅವರಿಂದ ದೂರವಾಗುವ ಸಾಧ್ಯತೆಗಳಿವೆ. ನಿಮ್ಮ ಸ್ವಂತ ವಿವೇಚನೆಯಿಂದ ಕೆಲವೊಂದು ಅಂತ ಕಲಹಗಳನ್ನು ನಿವಾರಣೆ ಮಾಡಿಕೊಳ್ಳುವಿರಿ.ಈ ವಾರ ನಿಮಗೆ ಭೂ ವ್ಯವಹಾರದಲ್ಲಿ ಹೆಚ್ಚಿನ ಲಾಭವಿರುತ್ತದೆ.

ವೃಷಭ ರಾಶಿ

 ಈ ರಾಶಿಯವರಿಗೆ ಈ ವಾರ ಹಣದ ಹರಿವು ನಿಮ್ಮ ಅಪೇಕ್ಷೆಯಂತೆ ಇರುತ್ತದೆ. ಪಿತ್ರಾರ್ಜಿತ ಸ್ವತ್ತುಗಳು ಸಿಗುವ ಸಾಧ್ಯತೆಯಿದೆ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಮುನ್ನಡೆ ಇರುತ್ತದೆ. ಕೆಲಸ ಕಾರ್ಯಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯನ್ನು ಕಾಣಬಹುದು.

ಅನಿಶ್ಚಿತತೆಯಿಂದ ವ್ಯವಹಾರಗಳಲ್ಲಿ ಲಾಭ ಕಡಿಮೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಸ್ವಲ್ಪ ಮಟ್ಟಿನ ಮುನ್ನಡೆ ಇರುತ್ತದೆ. ದೈಹಿಕ ಕೆಲಸಗಳನ್ನು ಮಾಡುವ ಕೆಲವರಿಗೆ ಕೆಲಸದೊತ್ತಡ ಕಡಿಮೆಯಾಗುವುದು. ಕೆಲವರಿಗೆ ಉದರ ಸಂಬಂಧಿ ಕಾಯಿಲೆಗಳು ಕಾಣಿಸಬಹುದು ಎಚ್ಚರ.

ಮಿಥುನ ರಾಶಿ

ಈ ರಾಶಿಯವರಿಗೆ ಈ ವಾರ ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪಮಟ್ಟಿನ ಏರುಪೇರುಗಳು ಕಂಡುಬಂದರೂ ಅಂತಹ ತೊಂದರೆಯಿರುವುದಿಲ್ಲ. ನಿಶ್ಚಿತ ಆದಾಯಕ್ಕೆ ಕೊರತೆಯಿರುವುದಿಲ್ಲ. ವಿದೇಶಿ ಹಣ ಬದಲಾವಣೆ ಮಾಡುವವರಿಗೆ ಲಾಭವಿರುತ್ತದೆ. ಮಹಿಳೆಯರ ಮನೋಭಿಲಾಷೆಗಳು ಈಡೇರುವ ಸಂದರ್ಭವಿದೆ.

ಬೇರೆಯವರ ವಾದ ವಿವಾದಗಳಲ್ಲಿ ಮಧ್ಯಸ್ಥಿಕೆ ವಹಿಸಬೇಕಾದ ಸಂದರ್ಭವಿದೆ, ಹೀಗಾಗಿ ಎಚ್ಚರವಹಿಸಿ ಮಾತನಾಡಿರಿ. ಜಮೀನು ಮತ್ತು ಆಸ್ತಿಗೆ ಸಂಬಂಧಪಟ್ಟ ನೊಂದಣಿ ಕಾರ್ಯಗಳು ಈಗ ಪೂರ್ಣಗೊಳ್ಳುತ್ತವೆ. ಸಂಸಾರದಲ್ಲಿ ಮುಸುಕಿನ ಗುದ್ದಾಟ ಇರುತ್ತದೆ, ತಾಳ್ಮೆಯಿಂದ ಪರಿಹರಿಸಿಕೊಳ್ಳಿರಿ.

ಕರ್ಕಾಟಕ ರಾಶಿ

 ಈ ರಾಶಿಯವರಿಗೆ ಈ ವಾರ  ಸ್ವಲ್ಪಮಟ್ಟಿನ ಹಣಕಾಸಿನ ತೊಂದರೆಗಳು ಪರಿಹಾರವಾಗುತ್ತವೆ. ನಿರೀಕ್ಷಿತ ಮೂಲಗಳಿಂದ ಹಣದ ಒಳಹರಿವು ಇರುತ್ತದೆ. ವ್ಯವಹಾರಗಳಲ್ಲಿ ನಿಮ್ಮ ಶ್ರಮ ಫಲ ನೀಡುವುದು.

ಬರಬೇಕಾಗಿದ್ದ ಬಾಕಿ ಹಣದಲ್ಲಿ ಸ್ವಲ್ಪ ಹಣ ಬರುತ್ತದೆ. ಎಣ್ಣೆ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಅಭಿವೃದ್ಧಿ ಇರುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆಯನ್ನು ಕಾಣಬಹುದು. ಕೆಲಸಕಾರ್ಯಗಳಲ್ಲಿ ಪ್ರಗತಿಯನ್ನು ಕಾಣಬಹುದು.

ಇದನ್ನೂ ಓದಿ: Ram Navami 2022: ಹತ್ತು ವರ್ಷಗಳ ನಂತರ ರಾಮನವಮಿಯಂದು ಬಂದಿದೆ ರವಿ ಪುಷ್ಯ ಯೋಗ; ತರಲಿದೆ ಶುಭ-ಭಾಗ್ಯ

ಸಿಂಹ ರಾಶಿ

ಈ ರಾಶಿಯವರಿಗೆ ಈ ವಾರ ಆರ್ಥಿಕ ತೊಂದರೆಗಳಿಂದ ಸ್ವಲ್ಪಮುಕ್ತಿಯನ್ನು ಕಾಣಬಹುದು. ಮನಸ್ಸಿಗೆ ಉಲ್ಲಾಸ ತರುವ ವಾರ್ತೆಯನ್ನು ಕೇಳುವಿರಿ. ಉದ್ದಿಮೆಗಳನ್ನು ನಡೆಸುತ್ತಿರುವವರಿಗೆ ಇದ್ದ ಕಾನೂನಿನ ತೊಡಕುಗಳು ನಿವಾರಣೆಯಾಗುತ್ತವೆ.

ವಿದೇಶದಲ್ಲಿ ಉದ್ಯೋಗವನ್ನು ಅರಸುತ್ತಿರುವವರೆಗೆ ಉದ್ಯೋಗ ದೊರೆಯುವ ಸಾಧ್ಯತೆಗಳು ಹೆಚ್ಚಾಗಿವೆ. ನಿಮ್ಮ ಅಭಿವೃದ್ಧಿಗೆ ಪೂರಕವಾದ ಅವಕಾಶಗಳು ಒದಗಿಬರುತ್ತವೆ. ಅವುಗಳನ್ನು ಸರಿಯಾಗಿ ಬಳಸಿಕೊಳ್ಳಿ.

ಕನ್ಯಾ ರಾಶಿ

ಈ ರಾಶಿಯವರಿಗೆ ಈ ವಾರ ಸಂಗಾತಿಯ ಆದಾಯವು ಅಲ್ಪಮಟ್ಟದ ಏರಿಕೆಯನ್ನು ಕಾಣಬಹುದು. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವವರ ವೇತನದಲ್ಲಿ ಏರಿಕೆಯನ್ನು ಕಾಣಬಹುದು. ವೃತ್ತಿ ಜೀವನದಲ್ಲಿ ಇರಿಸುಮುರಿಸು ಉಂಟಾಗುವ ಲಕ್ಷಣಗಳಿವೆ.

ಶ್ವಾಸಕೋಶ ಸಂಬಂಧಿತ ಕಾಯಿಲೆ ಇರುವವರು ಆಸ್ಪತ್ರೆಯನ್ನು ಸೇರುವ ಸಂಭವವಿದೆ ಎಚ್ಚರ. ಕುಟುಂಬದಲ್ಲಿ ಎಲ್ಲರ ಬೆಂಬಲಗಳಿಸಿ ಲಾಭ ಪಡೆಯಲು ಯತ್ನಿಸುವಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆಯನ್ನು ಕಾಣಬಹುದು.

ತುಲಾ ರಾಶಿ

ಈ ರಾಶಿಯವರಿಗೆ ಈ ವಾರ ಹಣದ ಒಳಹರಿವು ನಿರೀಕ್ಷೆಯಷ್ಟು ಇಲ್ಲದೆ ಕಷ್ಟವೆನಿಸಬಹುದು. ಸ್ನೇಹಿತರೊಂದಿಗೆ ಆರ್ಥಿಕ ವಿಷಯಗಳಲ್ಲಿ ವಿರಸ ಬರಬಹುದು. ವಿರೋಧಿಗಳನ್ನು ದೂರಸರಿಸಲು ಒಳ ತಂತ್ರಗಳನ್ನು ಬಳಸುವಿರಿ. ಹಿರಿಯರ ಸಲಹೆಗಳಿಂದ ಬರಲಿರುವ ಗಂಡಾಂತರಗಳಿಂದ ಪಾರಾಗುವಿರಿ.

ಆಸ್ತಿ ವಿಷಯಗಳಲ್ಲಿ ಹೊಸ ಸಮಸ್ಯೆಗಳು ತಲೆದೋರಬಹುದು. ವೃತ್ತಿ ಕ್ಷೇತ್ರದಲ್ಲಿ ಇದ್ದ ಸಮಸ್ಯೆಗಳು ಪರಿಹಾರವಾಗುವ ಸಾಧ್ಯತೆಗಳಿವೆ. ಅವಿವಾಹಿತರಿಗೆ ವಿವಾಹ ಒದಗುವ ಸಂದರ್ಭವಿದೆ.

ವೃಶ್ಚಿಕ ರಾಶಿ

ಈ ರಾಶಿಯವರಿಗೆ ಈ ವಾರ ಹಣಕಾಸಿನ ವಿಷಯದಲ್ಲಿ ಸ್ವಲ್ಪಮಟ್ಟಿನ ಸುಧಾರಣೆ ಇರುತ್ತದೆ. ಸ್ವಪ್ರಯತ್ನದಿಂದ ಕಾರ್ಯಕ್ಷೇತ್ರದಲ್ಲಿ ಉನ್ನತಿಯನ್ನು ಸಾಧಿಸಲು ಪ್ರಯತ್ನಿಸುವಿರಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲಗಳು ದೊರೆತು ಅಧ್ಯಯನಕ್ಕೆ ಅನುಕೂಲವಾಗುತ್ತದೆ. ಸರ್ಕಾರಿ ಅಧಿಕಾರಿಗಳಿಗೆ ವೃತ್ತಿಯಲ್ಲಿ ಇದ್ದ ಕಿರಿಕಿರಿಗಳು ಕಡಿಮೆಯಾಗುತ್ತವೆ. ಬಂಧುಗಳಿಂದ ಎದುರಾಗಬಹುದಾಗಿದ್ದ ವಿರೋಧಗಳು ಸ್ವಲ್ಪಮಟ್ಟಿಗೆ ತಣ್ಣಗಾಗುತ್ತವೆ.

ಧನು ರಾಶಿ

ಈ ರಾಶಿಯವರಿಗೆ ಈ ವಾರ ಹಣದ ಒಳ ಹರಿವು ಸಾಮಾನ್ಯ ಮಟ್ಟದಲ್ಲಿರುತ್ತದೆ. . ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಣೆ ಮಾಡಿ ಎಲ್ಲರ ಗಮನ ಸೆಳೆಯುವಿರಿ. . ಗಣ್ಯ ವ್ಯಕ್ತಿಗಳಿಗೆ ಸಹಕಾರ ನೀಡಿ ಅವರ ಆತ್ಮೀಯತೆಯನ್ನು ಗಳಿಸುವಿರಿ.

ನರದೌರ್ಬಲ್ಯ ಇರುವವರಿಗೆ ಸ್ವಲ್ಪ ಸುಧಾರಣೆ ಆಗುವ ಸಾಧ್ಯತೆ ಇದೆ. ಕೈಗೆತ್ತಿಕೊಂಡ ಕೆಲಸಗಳು ನಿಮ್ಮ ಸತತ ಪ್ರಯತ್ನದಿಂದಾಗಿ ಯಶಸ್ವಿಯಾಗಲಿವೆ. ಶುಭ ಸಮಾರಂಭಗಳಲ್ಲಿ ಭಾಗಿಯಾಗಲು ದೂರ ಪ್ರಯಾಣ ಮಾಡಬೇಕಾಗಬಹುದು.

ಮಕರ ರಾಶಿ

ಈ ರಾಶಿಯವರಿಗೆ ಈ ವಾರ ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಆದರೂ ಅನವಶ್ಯಕ ವ್ಯವಹಾರಗಳಲ್ಲಿ ಹಣ ತೊಡಗಿಸುವುದು ಬೇಡ. ಹೊಸ ಯೋಜನೆಯೊಂದನ್ನು ನಿರೂಪಿಸುವಲ್ಲಿ ಬಹಳ ಯಶಸ್ಸನ್ನು ಕಾಣುವಿರಿ.

ಸಮಾಧಾನದಿಂದ ವ್ಯವಹಾರ ಮಾಡುವುದರಿಂದ ಎಲ್ಲ ಕೆಲಸಗಳು ಕೈಗೂಡುತ್ತವೆ. ಗೃಹ ನಿರ್ಮಾಣ ಕಾರ್ಯದಲ್ಲಿ ಸ್ವಲ್ಪ ಹಿನ್ನಡೆಯಾದರೂ ನಂತರ ಪೂರ್ಣಗೊಳ್ಳುತ್ತದೆ. ಸ್ನೇಹಿತರೊಂದಿಗೆ ವ್ಯವಹಾರಕ್ಕೆ ಸಂಬಂಧವಿರುವ ಹಲವಾರು ವಿಷಯಗಳನ್ನು ವಿನಿಮಯ ಮಾಡಿಕೊಳ್ಳುವಿರಿ.

ಕುಂಭ ರಾಶಿ

ಈ ರಾಶಿಯವರಿಗೆ ಈ ವಾರ  ಆರ್ಥಿಕ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಕೊಡುವಿರಿ. ಸರ್ಕಾರದಿಂದ ಬರಬೇಕಾಗಿದ್ದ ಬಾಕಿ ಹಣ ಬರುತ್ತವೆ. ಆರೋಗ್ಯದ ಕಡೆ ನಿಗಾ ವಹಿಸಿರಿ. ಬ್ಯಾಂಕ್ ಅಧಿಕಾರಿಗಳು ಗ್ರಾಹಕರಿಂದ ವಂಚನೆಗೆ ಒಳಗಾಗುವ ಸಾಧ್ಯತೆಗಳಿವೆ, ಸ್ವಲ್ಪ ಎಚ್ಚರವಹಿಸಿರಿ. ರಾಜಕೀಯ ನಾಯಕರುಗಳ ತಿಕ್ಕಾಟದಲ್ಲಿ ನೀವು ಮೇಲೆ ಬರುವ ಸಾಧ್ಯತೆ ಇದೆ.

ಇದನ್ನೂ ಓದಿ: Astrology: ಮೇಷ ರಾಶಿಯಲ್ಲಿ ಆರಂಭವಾಗಿದೆ ಬುಧ ಸಂಕ್ರಮಣ, ಮುಂದಿನ 13 ದಿನಗಳವರೆಗೆ ಈ ರಾಶಿಯವರಿಗೆ ಅಶುಭ ಫಲ?

ಮೀನ ರಾಶಿ

ಈ ರಾಶಿಯವರಿಗೆ ಈ ವಾರ ಹಣದ ಒಳಹರಿವು ನಿಮಗೆ ತೃಪ್ತಿಯಾಗುವಷ್ಟು ಇರುತ್ತದೆ. ನೀವು ಈಗ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅತಿ ಅಗತ್ಯ. ನಿಮ್ಮ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳಲು ಪ್ರಯತ್ನ ಪಡುವಿರಿ. ಬಹಳ ಹಿಂದೆ ಕಳೆದು ಹೋಗಿದ್ದ ವಸ್ತುವೊಂದು ದೊರೆತು ಸಂತಸವಾಗುತ್ತದೆ.

ಅತಿಯಾದ ಆತ್ಮ ಗೌರವದಿಂದ ಜನರನ್ನು ದೂರ ಮಾಡಿಕೊಳ್ಳುವಿರಿ. ವ್ಯವಹಾರದಲ್ಲಿ ಇತರರ ವಿಷಯದಲ್ಲಿ ವಿನಾಕಾರಣ ಅಸಹನೆಯನ್ನು ತೋರಿಸುವುದರಿಂದ ನಿಮಗೆ ಸಿಗಬೇಕಾಗಿದ್ದ ಲಾಭ ಕಡಿಮೆಯಾಗುತ್ತದೆ.
Published by:Annappa Achari
First published: