Weekly Horoscope: ಈ ವಾರ ಯಾವ ರಾಶಿಗೆ ಯಾವ ಫಲ? ಡಿ.13 ರಿಂದ ಡಿ.19ರವರೆಗೆ ದ್ವಾದಶ ರಾಶಿಗಳ ವಾರ ಭವಿಷ್ಯ ಹೀಗಿದೆ

Zodiac Sign: ತುಲಾ ರಾಶಿಯವರಿಗೆ ಈ ವಾರ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಈ ವಾರ ಕಠಿಣವಾಗಲಿದೆ. ಇದರಿಂದ ಹಲವಾರು ಸಮಸ್ಯೆಗಳು ಬರಲಿದೆ. ಈ ಸ್ಥಿತಿಯಿಂದ ಮುಕ್ತಿ ಪಡೆಯಲು ಶ್ರೀಕೃಷ್ಣನನ್ನು ಆರಾಧಿಸಿ

 ವಾರ ಭವಿಷ್ಯ

ವಾರ ಭವಿಷ್ಯ

 • Share this:
  ಹೊಸ ವರ್ಷದ(New Year) ಪ್ರಾರಂಭಕ್ಕೆ ಕೆಲವೇ ದಿನಗಳು(Few days) ಬಾಕಿ ಇವೆ. ಹೀಗಾಗಿ 2021ರ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್‌ನಲ್ಲಿ(December) ದ್ವಾದಶ ರಾಶಿಗಳ ಭವಿಷ್ಯ ಹೇಗಿರಲಿದೆ. ಈ ವರ್ಷದ ಕೊನೆಯಲ್ಲಿ ಯಾರ ಜೀವನದ ದಿಕ್ಕು ಬದಲಾಗಲಿದೆ, ಡಿ.13 ರಿಂದ ಡಿ.19ರವರೆಗೆ ಯಾವ ರಾಶಿಯವರಿಗೆ ಶುಭಫಲವಿದೆ ಎನ್ನುವ ರಾಶಿಫಲದ ಮಾಹಿತಿ ಇಲ್ಲಿದೆ ನೋಡಿ

  1)ಮೇಷ ರಾಶಿ: ಈ ವಾರ ಮೇಷ ರಾಶಿಯವರಿಗೆ ಎಲ್ಲವೂ ಉತ್ತಮವಾಗಿರಲಿದೆ.. ನಿಮಗೆ ಉಂಟಾಗುವ ಎಲ್ಲಾ ಅಡೆತಡೆಗಳನ್ನ ನೀವು ಸುಲಭವಾಗಿ ಜಯಿಸಲಿದ್ದೀರಾ.. ಆದರೂ ಕೆಲವು ಅಡೆತಡೆಗಳು ನಿಮ್ಮನ್ನ ನಿಮ್ಮ ಗುರಿಯಿಂದ ದೂರ ಇಡಲು ಪ್ರಯತ್ನ ಮಾಡಲಿದೆ. ಆದ್ರೆ ನಿಮ್ಮ ದೃಢ ಸಂಕಲ್ಪದಿಂದ ನಿವಾರಣೆ ಸಾಧ್ಯ. ಈ ವಾರ ಆದಷ್ಟೂ ಶಾಂತಿಯಿಂದ ಇರುವುದು ಮುಖ್ಯ.. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವವರು ಆದಾಯಗಳಿಸುವ ಸಾಧ್ಯತೆ ಇದೆ. ನಿಮ್ಮ ಪ್ರಣಯ ಜೀವನ ಉತ್ತಮವಾಗಿರಲಿದೆ..

  ಇದನ್ನೂ ಓದಿ: ಭಾನುವಾರದ ಈ ದಿನ ಹೇಗಿರಲಿದೆ 12 ರಾಶಿಗಳ ದಿನಭವಿಷ್ಯ

  2)ವೃಷಭ ರಾಶಿ: ವೃಷಭ ರಾಶಿಯವರಿಗೆ ಈ ವಾರದ ಆರಂಭ ಆರ್ಥಿಕವಾಗಿ ಲಾಭ ತರಲಿದೆ. ನಿಮ್ಮ ದಿನಚರಿಯಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ. ಕೆಲಸದ ಸ್ಥಳದಲ್ಲಿ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಿ. ವಾರದ ಮಧ್ಯ ಭಾಗದಲ್ಲಿ ಸಣ್ಣ-ಪುಟ್ಟ ನಷ್ಟ ಉಂಟಾಗಲಿದೆ. ಕುಟುಂಬದವರು ಹಾಗೂ ಸ್ನೇಹಿತರ ಜತೆಗೆ ಸಂತಸದ ಸಮಯ ಕಳೆಯುವಿರಿ

  3)ಮಿಥುನ ರಾಶಿ: ಮಿಥುನ ರಾಶಿಯವರು ಇಂದು ಧೀರ್ಘಕಾಲದ ಗೆಳೆಯರನ್ನ ಭೇಟಿಯಾಗಲಿದ್ದಾರೆ. ನಿಮ್ಮ ಸಂಬಂಧಗಳು ಮತ್ತಷ್ಟು ಗಟ್ಟಿಗೊಳ್ಳಲಿದೆ.ನಿಮ್ಮ ಯೋಜನೆಗಳು ಸಫಲವಾಗಲು ನೀವು ಹೆಚ್ಚಿನ ಪ್ರಯತ್ನ ಮಾಡಬೇಕಿದೆ.ವಿದ್ಯಾರ್ಥಿಗಳಿಗೆ ಅಷ್ಟೇನು ಉತ್ತಮವಾಗಿ ಇಲ್ಲ.. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು

  4)ಕಟಕ ರಾಶಿ: ಕೆಲಸದ ಸ್ಥಳದಲ್ಲಿ ಕಟಕ ರಾಶಿಯವರಿಗೆ ಈ ವಾರ ಉತ್ತಮವಾಗಿರಲಿದೆ. ಬೇರೆ ಬೇರೆ ಮೂಲಗಳಿಂದ ಆದಾಯ ಬರಲಿದೆ. ನಿಮ್ಮ ಯೋಜನೆಗಳ ಲೋಪದೋಷಗಳ ಬಗ್ಗೆ ನೀವು ಬಹಳ ಜಾಗರೂಕರಾಗಿರಬೇಕು..ವ್ಯಾಪಾರ-ವ್ಯವಹಾರದಲ್ಲಿ ಉತ್ತಮ ಲಾಭಗಳಿಸಲಿದ್ದೀರಾ.ಬುಧವಾರ,ಶುಕ್ರವಾರ ನಿಮಗೆ ಹೆಚ್ಚಿನ ಅದೃಷ್ಟ ತರಲಿದೆ. ಸಂಬಂಧದ ವಿಷಯದಲ್ಲಿ ಸಮಸ್ಯೆಗಳು ತಲೆದೂರಲಿದೆ ಹೀಗಾಗಿ ಜಾಗೃತರಾಗಿರುವುದು ಉತ್ತಮ

  5)ಸಿಂಹರಾಶಿ: ಸಿಂಹರಾಶಿಯವರು ವಾರದ ಆರಂಭದಲ್ಲಿ ಜಾಗೃತೆಯಿಂದ ಇರುವುದು ಉತ್ತಮ. ಈ ವಾರ, ನೀವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವು ನಿರ್ಣಾಯಕವಾಗಿರುತ್ತದೆ ಮತ್ತು ಪ್ರತಿಯೊಂದೂ ದೀರ್ಘಾವಧಿಯ ಪರಿಣಾಮವನ್ನು ಹೊಂದಿರುತ್ತದೆ. ಏನಾದರೂ ತಪ್ಪಾದಲ್ಲಿ, ಅದು ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮದುವೆ ಮತ್ತು ನಿಶ‌್ಚಿತಾರ್ಥದ ಬಗ್ಗೆ ಯೋಚಿಸಲು ಇದು ಸಕಾಲವಲ್ಲ

  6)ಕನ್ಯಾ ರಾಶಿ:  ಪ್ರಣಯದ ವಿಷಯದಲ್ಲಿ ಕನ್ಯಾರಾಶಿಯವರಿಗೆ ಈ ವಾರ ಉತ್ತಮವಾಗಿರಲಿದೆ. ದಂಪತಿಗಳ ಪಾಲಿಗೆ ಈ ವಾರ ಉತ್ತಮವಾಗಿರಲಿದೆ.ನೀವು ಸಹಾಯ ಮಾಡಿದವರಿಂದ ನೀವು ಪ್ರತಿಫಲ ಬಯಸುತ್ತೀರಾ..ವೃತ್ತಿ ರಂಗದಲ್ಲಿ ಯಶಸ್ಸು ಪಡೆಯಲಿದ್ದೀರಾ. ನೀವು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿದ್ದರೆ, ನೀವು ಅವ್ಯವಸ್ಥಿತವಾಗಿ ಹೂಡಿಕೆ ಮಾಡದಂತೆ ನೋಡಿಕೊಳ್ಳಿ. ನಿಮ್ಮ ಹೊಸ ವ್ಯಾಪಾರದ ಪರವಾನಗಿಗೆ ಸಂಬಂಧಿಸಿದ ಕೆಲವು ಸಮಸ್ಯೆ ಬರಬಹುದು. ವಿದ್ಯಾರ್ಥಿಗಳು ಹೊಸ ಕೋರ್ಸ್‌ಗಳಿಗೆ ಸೇರುವ ಬಗ್ಗೆ ಯೋಚಿಸುತ್ತಾರೆ.

  7)ತುಲಾ ರಾಶಿ: ತುಲಾ ರಾಶಿಯವರಿಗೆ ಈ ವಾರ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಈ ವಾರ ಕಠಿಣವಾಗಲಿದೆ. ಇದರಿಂದ ಹಲವಾರು ಸಮಸ್ಯೆಗಳು ಬರಲಿದೆ. ಈ ಸ್ಥಿತಿಯಿಂದ ಮುಕ್ತಿ ಪಡೆಯಲು ಶ್ರೀಕೃಷ್ಣನನ್ನು ಆರಾಧಿಸಿ, ಮತ್ತು ಅವನು ನಿಮ್ಮನ್ನು ಎಲ್ಲಾ ನಕಾರಾತ್ಮಕ ಶಕ್ತಿಯಿಂದ ರಕ್ಷಿಸುತ್ತಾನೆ. ನೀವು ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಎಚ್ಚರಿಕೆಯಿಂದ ಇರಿ ಇಲ್ಲದಿದ್ದರೆ ಅದು ನಿಮಗೆ ಉಲ್ಟಾ ಹೊಡೆಯುವ ಸಾಧ್ಯತೆ ಇರುತ್ತದೆ.ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಸಮಸ್ಯೆ ಬಗೆಹರಿಯಲಿದೆ. ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವುದು ಸೂಕ್ತ.

  8)ವೃಶ್ಚಿಕ ರಾಶಿ: ಈ ವಾರವು ನಿಮಗೆ ಅದ್ಭುತವಾಗಿರಲಿದೆ. ವ್ಯಾಪಾರದಲ್ಲಿ ಹೊಸ ಪಾಲುದಾರರನ್ನ ಪಡೆಯಲಿದ್ದೀರಾ. ಕಾನೂನುಬದ್ಧವಲ್ಲದ ಯಾವುದೇ ಚಟುವಟಿಕೆಯಲ್ಲಿ ನಿಮ್ಮ ಪಾಲ್ಗೊಳ್ಳುವಿಕೆಯ ಬಗ್ಗೆ ನೀವು ಜಾಗರೂಕರಾಗಿರಬೇಕು. ವಾರದ ದ್ವಿತೀಯಾರ್ಧದಲ್ಲಿ ನಿಮ್ಮ ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸಿ. ದಂಪತಿಗಳಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ. ಒತ್ತಡಗಳು ಉಂಟಾಗಲಿದೆ.

  9)ಧನುರಾಶಿ: ಈ ವಾರ ನಿಮಗೆ ಒಳ್ಳೆಯ ವಾರವಾಗಬಹುದು. ಈ ವಾರ, ಅದೃಷ್ಟವು ನಿಮ್ಮ ಅಂಚಿನಲ್ಲಿರಬಹುದು. ಸಾಮಾನ್ಯವಾಗಿ ಹೇಳುವುದಾದರೆ, ಈ ವಾರ ನೀವು ಬಯಸಿದ ವಿತ್ತೀಯ ಲಾಭವನ್ನು ನಿಮಗೆ ದೊರೆಯಲಿದೆ.ನೀವು ವ್ಯಾಪಾರ ವ್ಯವಸ್ಥಾಪಕರಿಂದ ನಗದು ಸಹಾಯವನ್ನು ಪಡೆಯಬಹುದು .ಅಥವಾ ನಿಮ್ಮ ಕಂಪನಿ ಪಾಲುದಾರರ ಪ್ರಸ್ತಾಪವು ಯಶಸ್ವಿಯಾಗುವ ಸಾಧ್ಯತೆಯಿದೆ.ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುವ ಸಾಧ್ಯತೆಯಿದೆ.

  ಇದನ್ನೂ ಓದಿ: ಮದುವೆ ನಿರ್ಣಯ ಕುರಿತ ನಿರ್ಧಾರಕ್ಕೆ ಈ ರಾಶಿಯ ಪ್ರೇಮಿಗಳಿಗೆ ಇಂದು ಶುಭ ದಿನ

  10)ಮಕರ ರಾಶಿ: ಉದ್ಯೋಗ ಸಂಬಂಧ ಪ್ರಯಾಣ ಸಾಧ್ಯತೆ. ನೀವು ಕೆಲವು ತೊಂದರೆಗಳನ್ನು ಎದುರಿಸಲು ಸಿದ್ಧರಾಗಿರಬೇಕು. ಈ ವಾರ, ನಿಮ್ಮ ಆರೋಗ್ಯ ರಕ್ಷಣೆಗೆ ನೀವು ಆದ್ಯತೆ ನೀಡಬೇಕು. ವ್ಯಾಪಾರ ಸಹವರ್ತಿಯೊಂದಿಗೆ ಜಗಳವಾಡುವುದನ್ನು ವಿರೋಧಿಸುವುದು ಉತ್ತಮ. ಕೆಲಸದ ಸ್ಥಳ ಅಥವಾ ಉದ್ಯೋಗದ ಬಗ್ಗೆ ಆತಂಕ ಇರಬಹುದು. ವಿದೇಶಕ್ಕೆ ಭೇಟಿ ನೀಡುವ ಅವಕಾಶವಿದೆ. ನಿಮ್ಮ ವೃತ್ತಿಜೀವನವನ್ನು ತ್ಯಜಿಸುವ ಬಗ್ಗೆ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಕೆಲವು ಭಿನ್ನಾಭಿಪ್ರಾಯಗಳಿರಬಹುದು. ಈ ವಾರ ನೀವು ನಿಮ್ಮ ವೈವಾಹಿಕ ಪಾಲುದಾರಿಕೆಯ ಮೇಲೆ ಗಮನ ಹರಿಸಬೇಕು. ನಿಮ್ಮ ಸಂಗಾತಿಯೊಂದಿಗೆ ವ್ಯವಹರಿಸುವಾಗ, ದಯೆ ಮತ್ತು ನಮ್ರತೆಯಿಂದ ವರ್ತಿಸಿ

  11)ಕುಂಭ ರಾಶಿ: ಈ ವಾರ ನಿಮಗೆ ನಿರ್ಣಾಯಕವಾದ ವಾರ. ನಿಮ್ಮ ಬದುಕಲ್ಲಿ ಅನೇಕ ತಿರುವು ಬರಲಿದೆ.. ಕೆಲಸದಲ್ಲಿ ಚಂಚಲತೆ ಉಂಟಾಗಲಿದೆ. ಕೆಲಸಕ್ಕೆ ಸಂಬಂಧಿಸದಂತೆ ನೀವ ತೆಗೆದುಕೊಳ್ಳುವ ಎಲ್ಲಾ ನಿರ್ಣಯಗಳು ಯಶ್ವಿಯಾಗಲಿದೆ. ಪ್ರಣಯ ಸಂಬಂಧಗಳಿಗೆ ಈ ವಾರ ಉತ್ತಮವಾಗಿರಲಿದೆ. ಅವಿವಾಹಿತರಿಗೆ ಮದುವೆ ಯೋಗ ಒದಗಿ ಬರಲಿದೆ.ಆರೋಗ್ಯದ ಮೇಲೆ ಗಮನ ನೀಡುವುದು ಸೂಕ್ತ

  12)ಮೀನರಾಶಿ: ಈ ವಾರ ನಿಮಗಾಗಿ ಸಮಯವನ್ನು ಹುಡುಕಲು ನಿಮಗೆ ಕಷ್ಟವಾಗುತ್ತದೆ. ಈ ವಾರ ನೀವು ಲಾಭ ಗಳಿಸುವ ಸಾಧ್ಯತೆ ಇದೆ. ನಿಮ್ಮ ಸ್ನೇಹಪರ ನಡವಳಿಕೆಯು ನಿಮ್ಮ ಬಗ್ಗೆ ಮೆಚ್ಚುಗೆ ಪಡುವಂತೆ ಮಾಡಲಿದೆ.ನಿಮ್ಮ ಜೀವನೋತ್ಸಾಹ ಈ ವಾರ ಹೆಚ್ಚಿರಲಿದೆ. ನಿಮ್ಮ ಪ್ರಣಯ ಜೀವನದಲ್ಲಿ ನೀವು ಪ್ರಗತಿ ಸಾಧಿಸಬಹುದು ಮತ್ತು ವಾರದ ಉಳಿದ ಭಾಗವು ಉತ್ತಮವಾಗಿರುತ್ತದೆ.
  Published by:ranjumbkgowda1 ranjumbkgowda1
  First published: