Zodiac Sign: ಬುಧವಾರ ಜನಿಸಿದವರು ಚಂಚಲ ಸ್ವಭಾವದವರಂತೆ, ನೀವು ಹುಟ್ಟಿದ್ದು ಯಾವ ವಾರ?

Wednesday Born People Personality: ಬುಧವಾರ ಜನಿಸಿದವರ ವ್ಯಕ್ತಿಗಳು ಪ್ರತಿಯೊಂದನ್ನು ಇದನ್ನು ವಿಶ್ಲೇಷಣಾತ್ಮಕವಾಗಿ ನೋಡುತ್ತಾರೆ. ಅಕ್ಕಪಕ್ಕದವರು ಹಾಗೂ ಒಡಹುಟ್ಟಿದವರು ಒಂದಿಗೆ ಉತ್ತಮ ಸಂಬಂಧ ಹೊಂದಲು ಇಚ್ಛೆಪಡುವ ಇವರು ಎಂತಹ ಸವಾಲುಗಳಿದ್ದರು ಸಹ ಅವುಗಳನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಪರಿಹಾರ ಮಾಡಿಕೊಂಡು ಬಿಡುತ್ತಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಉತ್ತಮ ಮಾರ್ಗ ಜಾತಕ (Horoscope) ನೋಡುವುದು. ಹುಟ್ಟಿದ ವಾರ (Week), ಘಳಿಗೆ, ಸಮಯ (Time), ವಾರ, ಮಾಸ (Month) ಹೀಗೆ ಎಲ್ಲ ವಿಷಯಗಳನ್ನು ಲೆಕ್ಕಚಾರ ಹಾಕಿ ಜಾತಕವನ್ನು ಮಾಡಲಾಗುತ್ತದೆ. ಹಾಗಾಗಿ ಜಾತಕದಿಂದ ವ್ಯಕ್ತಿಯ (Person) ಭವಿಷ್ಯದ (Future) ವಿಚಾರಗಳನ್ನು ತಿಳಿಯಬಹುದಾಗಿದೆ. ಹುಟ್ಟಿದ ಸಮಯದಲ್ಲಿ ಗ್ರಹ, ನಕ್ಷತ್ರಗಳ (Planet and the stars)ಸ್ಥಿತಿಯು ಮುಖ್ಯವಾಗಿರುತ್ತದೆ. ವ್ಯಕ್ತಿಯು ಹುಟ್ಟಿದ ವಾರ ಸಹ ಜಾತಕ ಮಾಡುವಾಗ ಮಹತ್ವದ ಪಾತ್ರ ವಹಿಸುತ್ತದೆ. ಹುಟ್ಟಿದ ವಾರದ ಆಧಾರದ ಮೇಲೆ ವ್ಯಕ್ತಿಯ ಸ್ವಭಾವವನ್ನು ಹೇಳಲಾಗುತ್ತದೆ. ವಾರದ ಯಾವ ದಿನ ಹುಟ್ಟಿದ್ದಾರೆಂಬುದು ಸಹ ವ್ಯಕ್ತಿಯ ಸ್ವಭಾವವನ್ನು ತಿಳಿಯಲು ಅನುಕೂಲವಾಗುತ್ತದೆ. ಆಯಾ ವಾರದ ಪ್ರಭಾವವು ಆ ದಿನ ಹುಟ್ಟಿರುವವರ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಜನ್ಮದಿನವು ಸ್ವಭಾವ ಮತ್ತು ನಡವಳಿಕೆ ಮೇಲೆ ಪ್ರಭಾವ ಬೀರುವಂತಹ ಒಂದು ಆಳುವ ಗ್ರಹವನ್ನು ಸಹ ಹೊಂದಿದೆ ಎಂಬುದನ್ನು ತಿಳಿದಿರಬೇಕು. ಒಂದೊಂದು ದಿನ ಹುಟ್ಟಿದವರ ಸ್ವಭಾವ, ನಡವಳಿಕೆ ಒಂದೊಂದು ರೀತಿಯಾಗಿರುತ್ತದೆ. ಯಾವ ದಿನ ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಎಂದು ತಿಳಿದುಕೊಳ್ಳುವುದು ಬಹು ಮುಖ್ಯ. ಹೀಗಾಗಿ ಬುಧುವಾರ ಹುಟ್ಟಿದವರ ಸ್ವಭಾವ ಲಕ್ಷಣ ಹೇಗಿರುತ್ತದೆ ಎಂಬ ಮಾಹಿತಿ ಇಲ್ಲಿದೆ.

  ಬುಧುವಾರ ಹುಟ್ಟಿದವರ ಸ್ವಭಾವ ಹೇಗಿರುತ್ತದೆ..

  ಜ್ಯೋತಿಷ್ಯ ಶಾಸ್ತ್ರದಲ್ಲಿ ಹನ್ನೆರಡು ರಾಶಿಗಳು. ಪ್ರತಿ ರಾಶಿಗೆ ಅದರದ್ದೇ ಆದ ಗುಣ, ಸ್ವಭಾವಗಳು ಮತ್ತು ಅಧಿಪತಿಗಳು. ವ್ಯಕ್ತಿಯ ರಾಶಿಯ ಆಧಾರದ ಮೇಲೆ ಗುಣ, ಸ್ವಭಾವಗಳನ್ನು ಹೇಳಬಹುದಾಗಿದೆ. ಹಾಗೆಯೇ ಆಯಾ ವಾರ ಹುಟ್ಟಿದವರ ಸ್ವಭಾವವು ಭಿನ್ನವಾಗಿರುತ್ತದೆ. ವ್ಯಕ್ತಿಯ ಹುಟ್ಟಿದ ವಾರದ ಆಧಾರದ ಮೇಲೆ ಗುಣ, ಸ್ವಭಾವಗಳನ್ನು ತಿಳಿದುಕೊಳ್ಳಬಹುದಾಗಿದೆ. ಆಯಾ ವಾರಕ್ಕೆ ಅಧಿಪತ್ಯ ಹೊಂದಿರುವ ಗ್ರಹಗಳ ಪ್ರಭಾವವು ಸಹ ಆಯಾ ವಾರ ಜನಿಸಿದ ವ್ಯಕ್ತಿಗಳ ಮೇಲಾಗುತ್ತದೆ. ಹೀಗಾಗಿ ಬುಧುವಾರ ಹುಟ್ಟಿದವರ ಕೆಲವೊಂದು ಉತ್ತಮ ಗುಣಗಳನ್ನೂ ಮತ್ತೆ ಕೆಲವು ಅಸಹನೀಯ ಗುಣಗಳನ್ನೂ ಹೊಂದಿರುತ್ತಾರೆ. ಹಾಗಾದರೆ ಬುಧವಾರದಂದು ಜನಿಸಿದವರ ಗುಣ, ಸ್ವಭಾವ, ವ್ಯಕ್ತಿತ್ವ, ವೃತ್ತಿಜೀವನ, ಪ್ರಣಯ ಜೀವನದ ಬಗ್ಗೆ ನೋಡೋಣ.

  ಇದನ್ನೂ ಓದಿ: ಯಾವುದೇ ಶುಭ ಕಾರ್ಯಕ್ಕೆ ಮುನ್ನ ಸ್ವಸ್ತಿಕ್​ ಚಿಹ್ನೆ ಬಳಸುವುದು ಯಾಕೆ?

  ಬುಧವಾರ ಜನಿಸಿದವರು ಚಂಚಲ ಸ್ವಭಾವದವರು

  ಬುಧವಾರದ ಅಧಿಪತಿ ಗ್ರಹ ಬುಧ. ಇದು ಸೂರ್ಯನಿಗೆ ಹತ್ತಿರವಾದ ಹಾಗೂ ಎಲ್ಲಾ ಗ್ರಹಗಳಿಗಿಂತ ಚಿಕ್ಕದಾಗಿರುವ ಗ್ರಹವಾಗಿದೆ. ಬುಧವಾರ ಜನಿಸಿದವರು ಚಂಚಲ ಸ್ವಭಾವದವರಾಗಿದ್ದು, ಜೀವನದಲ್ಲಿ ಒಂದು ನಿಶ್ಚಿತತೆಯನ್ನು ಹೊಂದಿರುವುದಿಲ್ಲ. ಆದರೆ, ಇವರು ಬಹುಮುಖ ಪ್ರತಿಭೆಯಾಗಿದ್ದು, ಸಂವಹನಶೀಲರಾಗಿದ್ದಾರೆ. ಯಾವುದೇ ಸಮಸ್ಯೆಗಳಿರಲಿ ಅದರಿಂದ ಹೊರಬರುವುದು ಹೇಗೆಂದು ಗೊತ್ತು. ಜೊತೆಗೆ ಅಜಾಗರೂಕ ವ್ಯಕ್ತಿತ್ವ ಇರುವುದರಿಂದ ಅಷ್ಟಾಗಿ ನಂಬಿಕೊಳ್ಳಲು ಅರ್ಹರಲ್ಲ ಎಂದೂ ಹೇಳಲಾಗಿದೆ. ಹೊಸ ವಿಷಯವನ್ನು ಕಲಿತುಕೊಳ್ಳಲು ಕಾತರರಾಗಿರುವ ಇವರು, ಸದಾ ಸಕ್ರಿಯರಾಗಿರುತ್ತಾರೆ.

  ವ್ಯಕ್ತಿತ್ವ ಹೇಗೆ...?

  ಬುಧವಾರ ಜನಿಸಿದವರ ವ್ಯಕ್ತಿಗಳು ಪ್ರತಿಯೊಂದನ್ನು ಇದನ್ನು ವಿಶ್ಲೇಷಣಾತ್ಮಕವಾಗಿ ನೋಡುತ್ತಾರೆ. ಅಕ್ಕಪಕ್ಕದವರು ಹಾಗೂ ಒಡಹುಟ್ಟಿದವರು ಒಂದಿಗೆ ಉತ್ತಮ ಸಂಬಂಧ ಹೊಂದಲು ಇಚ್ಛೆಪಡುವ ಇವರು ಎಂತಹ ಸವಾಲುಗಳಿದ್ದರು ಸಹ ಅವುಗಳನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಪರಿಹಾರ ಮಾಡಿಕೊಂಡು ಬಿಡುತ್ತಾರೆ. ಇವರು ಮಾತನಾಡುವ ಸ್ವಭಾವದವರಿಗೆ ಇಷ್ಟವಾಗದೇ ಹೋದರೆ ಕೆಲವರಿಗೆ ಅದು ಗೊತ್ತು ದುರಹಂಕಾರ ಎಂದು ಅನಿಸುತ್ತದೆ.. ಆದರೆ ಅಂಥವರ ಮನವೊಲಿಕೆ ಕೂಡ ಇವರು ಮಾಡುತ್ತಾರೆ.ಇವರು ತಮ್ಮ ಜೀವನದಲ್ಲಿ ಅದೃಷ್ಟ ಪಡೆಯಲು ಮತ್ತು ಸಕಾರಾತ್ಮಕ ಫಲಿತಾಂಶ ಪಡೆಯಲು ಬುಧವಾರ ದೇವರ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಉತ್ತಮ.

  ಬುಧವಾರ ಜನಿಸಿದವರ ವೃತ್ತಿಜೀವನ ಹೇಗೆ..?

  ಬುದುವಾರ ಜನಿಸಿದವರು ವೃತ್ತಿ ಜೀವನದಲ್ಲಿ ಬಹಳ ಯಶಸ್ಸು ಕಾಣಲಿ ಇದ್ದಾರೆ. ಇವರ ಲೆಕ್ಕಾಚಾರದ ಕೆಲಸವು ಕೈಹಿಡಿಯಲಿದೆ. ಯಾವುದೇ ಕೆಲಸವಿದ್ದರೂ ಅದನ್ನು ಅಚ್ಚುಕಟ್ಟಾಗಿ ಮಾಡುವ ಸ್ವಭಾವದವರು. ಸದಾ ಹೊಸತನ ಇಷ್ಟಪಡುವವರು ಪ್ರಯಾಣಮಾಡಲು ಇಚ್ಛೆಪಡುತ್ತಾರೆ ಅಲ್ಲದೆ ತಮ್ಮ ಪ್ರಯಾಣದ ವೇಳೆ ಸಾಕಷ್ಟು ಜನ ಗೆಳೆಯರಾದ ಸಂಪಾದನೆ ಬಗ್ಗೆ ಇವರು ಸದಾ ಚಿಂತಿಸುತ್ತಾರೆ. ಹೀಗಾಗಿ ಬುಧವಾರ ಜನಿಸಿದವರು ಉತ್ತಮ ಬುದ್ಧಿವಂತಿಕೆಗೆ ಹೆಚ್ಚು ಅವಕಾಶವಿರುವ ಕ್ಷೇತ್ರದಲ್ಲಿ ಉದ್ಯೋಗ ಆಯ್ಕೆ ಮಾಡಿಕೊಂಡರೆ ಸಾಕಷ್ಟು ಪ್ರಗತಿ ಕಾಣಬಹುದು.

  ಬುಧವಾರ ಜನಿಸಿದವರ ಪ್ರೀತಿ ವಿಷಯ ಹೇಗೆ...?

  ಮಾತು ಬಲ್ಲವನಿಗೆ ಜಗಳವಿಲ್ಲ ಎಂಬಂತೆ ಮೊದಲೇ ಮಾತುಗಾರರಾಗಿರುವ ಇವರು ತಮ್ಮ ಸಂಗಾತಿಯನ್ನು ಬಹುಬೇಗ ಮನವೊಲಿಸುವ ಕಲೆಯನ್ನು ಹೊಂದಿರುತ್ತಾರೆ. ಹೀಗಾಗಿ ಎಂಥದ್ದೇ ಸನ್ನಿವೇಶ ಎದುರಾದರೂ ತಮ್ಮ ಮಾತುಗಳಿಂದ ಅವರನ್ನು ಮೋಡಿ ಮಾಡಿ ಸಂಬಾಳಿಸಿಬಿಡುತ್ತಾರೆ. ಆದರೆ, ಇವರು ಪ್ರೀತಿಸುವ ಸಂಗಾತಿಯಿಂದ ತುಂಬಾ ಪ್ರೀತಿಸಲ್ಪಡುವ ಇವರಿಗೆ ಅವರಿಂದ ಹೆಚ್ಚಿನ ಬೇಡಿಕೆಗಳೂ ಇರುವುದಿಲ್ಲ. ಆದರೆ, ಎದುರಿನವರ ತಪ್ಪನ್ನು ಮನಸ್ಸಿಗೆ ತೆಗೆದುಕೊಳ್ಳದೇ ಬಹುಬೇಗ ಕ್ಷಮಿಸುವ ಗುಣವನ್ನು ಹೊಂದಿದ್ದಾರೆ.

  ಇದನ್ನೂ ಓದಿ: ಹೋಮ-ಹವನಕ್ಕೆ ಮಾತ್ರವಲ್ಲ, ಆರೋಗ್ಯ ರಕ್ಷಣೆಗೂ ಧರ್ಬೆಹುಲ್ಲು ಸಹಕಾರಿ

  ಬುಧವಾರ ಜನಿಸಿದವರ ಮದುವೆ ಹೇಗೆ..?

  ಪ್ರೀತಿ ವಿಷಯದಲ್ಲಿ ಸಂಗಾತಿಯ ಮನಸ್ಸನ್ನು ಸುಲಭವಾಗಿ ಒಲಿಸುವ ಇವರು, ಸಂಬಂಧಗಳನ್ನು ಕಾಪಾಡಿಕೊಳ್ಳುವ ವಿಷಯಕ್ಕೆ ಬಂದಾಗ ಅಸಡ್ಡೆ ತೋರುತ್ತಾರೆ. ಕೆಲವೊಮ್ಮೆ ಇವರ ದ್ವಂದ್ವ ನಿಲುವುಗಳಿಂದ ಸಂಕಷ್ಟಕ್ಕೆ ಸಿಲುಕುತ್ತಾರೆ. ಇದರಿಂದ ನಿಮ್ಮ ಸಂಗಾತಿ ನೀವು ನಂಬಿಕೆಗೆ ಅರ್ಹರಲ್ಲ ಎಂಬ ತೀರ್ಮಾನಕ್ಕೆ ಬರಬಹುದು. ನೀವು ಸಾಕಷ್ಟು ಕುಟುಂಬಕ್ಕೆ ಸಮಯ ಕೊಡುವುದರ ಜೊತೆಗೆ ಅದರ ಪ್ರಧಾನತೆಯನ್ನು ಅರ್ಥ ಮಾಡಿಕೊಳ್ಳುವುದು ಉತ್ತಮ.
  Published by:ranjumbkgowda1 ranjumbkgowda1
  First published: