Sankashti: ಸಂಕಷ್ಟ ಚತುರ್ಥಿ ದಿನ ಉಪವಾಸ ಯಾಕೆ ಮಾಡಬೇಕು? ಇದರ ಹಿಂದಿನ ಕಾರಣವೇನು?

Lord Ganesha: ಉಪವಾಸವು ಹಿಂದೂ ಧರ್ಮದ ಹಾಗೂ ಹಿಂದೂ ಸಂಪ್ರದಾಯ, ಆಚರಣೆಯ ಒಂದು ಪ್ರಮುಖ ಭಾಗವಾಗಿದೆ. ನಿರ್ದಿಷ್ಟ ವಿಶೇಷ ದಿನಗಳಲ್ಲಿ ಉಪವಾಸ ಮಾಡುವುದು ದೇವರನ್ನು ಮೆಚ್ಚಿಸಲು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ .

ವಿನಾಯಕ

ವಿನಾಯಕ

  • Share this:
    ಸಂಕಷ್ಟ ಚತುರ್ಥಿ  (Sankashta Chaturthi)ದಿನವು ಹಿಂದೂಗಳಿಗೆ (Hindu) ಶುಭ ಉಪವಾಸದ ದಿನವಾಗಿದ್ದು, ಮಂಗಳವಾರದಂದು (Tuesday)ಬರುವ ಸಂಕಷ್ಟಿ ಚತುರ್ಥಿಯನ್ನೇ ಸಂಕಷ್ಟ ಚತುರ್ಥಿ ಅಥವಾ ಸಂಕಷ್ಟ ಚುತುರ್ಥಿ ಎಂದು ಆಚರಿಸಲಾಗುತ್ತದೆ.ಸಾಮಾನ್ಯವಾಗಿ ಬರುವ ಎಲ್ಲಾ ಸಂಕಷ್ಟ ಚತುರ್ಥಿಗಿಂತ ವಿಕಟ ಸಂಕಷ್ಟ ಚತುರ್ಥಿ( Vikata Sankasta hara chathurthi)  ಅತ್ಯಂತ ಪವಿತ್ರ ದಿನವೆಂದು ಹೇಳಲಾಗುತ್ತದೆ.ಹೀಗಾಗಿ ಈ ಗಣೇಶನ(Lord Ganesh) ದೇವಾಲಯಗಳಲ್ಲಿ(Temple) ವಿಶೇಷ ಪೂಜೆ ಕೈಗೊಳ್ಳಲಾಗುತ್ತದೆ. ಈ ದಿನ ಕಟ್ಟುನಿಟ್ಟಾದ ವ್ರತ ಕೈಗೊಂಡು ಭಕ್ತಿಯಿಂದ ವಿನಾಯಕನನ್ನು ಆರಾಧಿಸಲಾಗುತ್ತದೆ. (Prayer)ಈ ದಿನ ವಿಘ್ನ ನಿವಾರಕ ವಿನಾಯಕನ ಧ್ಯಾನ ಮಾಡಿದರೆ ಸಕಲ ಸಂಕಷ್ಟಗಳೆಲ್ಲವೂ ಪರಿಹಾರವಾಗುತ್ತದೆ. ಆದ್ದರಿಂದ ಭಕ್ತರು ಈ ದಿನ ವಿಶೇಷವಾಗಿ ಗಣೇಶನಿಗೆ ಪೂಜೆ ಸಲ್ಲಿಸುವುದರ ಜತೆಗೆ ತಮ್ಮ ಬೇಡಿಕೆಗಳನ್ನು ವಿನಾಯಕನ ಮುಂದಿಡುತ್ತಾರೆ.

    ಜೊತೆಗೆ ವಿಕಟ ಸಂಕಷ್ಟ ಚತುರ್ಥಿಯಲ್ಲಿ ಭಕ್ತರು ಬೇಗನೆ ಎದ್ದು ಸ್ನಾನ ಮಾಡುತ್ತಾರೆ. ಅವರು ಮಣ್ಣು, ತಾಮ್ರ ಅಥವಾ ಚಿನ್ನದಿಂದ ಮಾಡಿದ ಗಣೇಶನ ವಿಗ್ರಹವನ್ನು ಪೂಜಿಸುತ್ತಾರೆ. ಸರಿಯಾದ ಆಚರಣೆಗಳು ಮತ್ತು ಅರ್ಪಣೆಗಳೊಂದಿಗೆ ಅವನನ್ನು ಪೂಜಿಸಲಾಗುತ್ತದೆ. ಗಣೇಶನ ಅಚ್ಚುಮೆಚ್ಚಿನ ಸಿಹಿ ‘ಮೋದಕ’ ವನ್ನು ‘ಆರತಿ’ ಮಾಡಿದ ನಂತರ ಅರ್ಪಿಸಲಾಗುತ್ತದೆ.

    ಕಟ್ಟುನಿಟ್ಟಾದ ವ್ರತ ಆಚರಣೆ

    ಈ ದಿನ ಗಣೇಶನನ್ನು ಮೆಚ್ಚಿಸಲು ಭಕ್ತರು ವಿಕಟ ಚತುರ್ಥಿ ದಿನದಂದು ಕಟ್ಟುನಿಟ್ಟಾದ ವ್ರತವನ್ನು ಇಟ್ಟುಕೊಳ್ಳುತ್ತಾರೆ. ಉಪವಾಸವು ಸೂರ್ಯೋದಯದಿಂದ ಪ್ರಾರಂಭವಾಗುತ್ತದೆ ಮತ್ತು ಸಂಜೆ ಚಂದ್ರನನ್ನು ನೋಡಿದ ನಂತರ ಕೊನೆಗೊಳ್ಳುತ್ತದೆ. ಇಡೀ ದಿನವನ್ನು ಏನನ್ನೂ ತಿನ್ನದೇ ಧ್ಯಾನದಲ್ಲಿ ಕಳೆಯುತ್ತಾರೆ. ಕೆಲವು ಜನರು ಭಾಗಶಃ ಉಪವಾಸವನ್ನು ಆಚರಿಸುತ್ತಾರೆ. ಹಾಗಿದ್ರೆ ಸಂಕಷ್ಟಿ ದಿನ ಯಾಕೆ ಉಪವಾಸ ಮಾಡಬೇಕು .. ಇಂದು ಉಪವಾಸ ಮಾಡಿದ್ರೆ ಏನು ಪ್ರಯೋಜನವಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ

    ಇದನ್ನೂ ಓದಿ :ನಾಳೆ ಅಂಗಾರಕ ಸಂಕಷ್ಟಿ; ಈ ಪೂಜಾ ವಿಧಿ ವಿಧಾನ ಪಾಲಿಸಿ ಗಣೇಶನ ಪೂಜಿಸಿ

    *ಸಂಕಷ್ಟಿದಿನ ಆಹಾರ ಧಾನ್ಯಗಳನ್ನ ತ್ಯಜಿಸಿ ಮನಸ್ಸನ್ನ ನಿಯಂತ್ರಣದಲ್ಲಿ ಇಟ್ಟುಕೊಂಡು ಪೂಜೆ ಸಲ್ಲಿಸಿದಾಗ ನಾವು ಮಾಡುವ ಪ್ರಾರ್ಥನೆ ನೇರವಾಗಿ ದೇವರನ್ನ ತಲುಪುತ್ತದೆ. ಹೀಗಾಗಿ ಸಂಕಷ್ಟಿ ದಿನದಂದು ಬೆಳಗ್ಗೆಯಿಂದ ಸಂಜೆಯವರೆಗೆ ಉಪವಾಸದಿಂದ ಇದ್ದು ಗಣೇಶನನ್ನ ಶ್ರದ್ಧಾ ಭಕ್ತಿಯಿಂದ ಪ್ರಾರ್ಥಿಸಬೇಕು.

    ಬೇಯಿಸಿದ ಆಹಾರ ಸೇವನೆ ಮಾಡಬಾರದು

    * ಸಂಕಷ್ಟಿದಿನ ಉಪವಾಸ ಮಾಡುವವರು ಯಾವುದೇ ಕಾರಣಕ್ಕೂ ಬೇಯಿಸಿದ ಆಹಾರ ಪದಾರ್ಥಗಳ ಸೇವನೆ ಮಾಡಬಾರದು..ಆರೋಗ್ಯ ಸಮಸ್ಯೆ ಇದ್ದವರು, ಉಪವಾಸದ ವೇಳೆ ಹಾಲು ಅಥವಾ ಎಳನೀರು ಸೇವನೆ ಮಾಡಬಹುದು.. ಸಂಜೆ ಚಂದ್ರನಿಗೆ ಅರ್ಘ್ಯ ಕೊಟ್ಟ ಬಳಿಕ ಉಪವಾಸ ವೃತ ಮುರಿಯುವುದರಿಂದ ಮಾಡಿದ ಪ್ರಾರ್ಥನೆ ಸಫಲವಾಗುತ್ತದೆ.

    *ದೇವರನ್ನು ಒಲಿಸಿಕೊಳ್ಳಲು ನಾವು ಆಚರಿಸುವ ಉಪವಾಸವು ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಸಕಾರಾತ್ಮಕ ಶಕ್ತಿಯನ್ನು, ಸಕಾರಾತ್ಮಕ ಚಿಂತನೆಯನ್ನು ಪಡೆದುಕೊಳ್ಳಲು ಸ್ವ ಇಚ್ಛೆಯಿಂದ ಊಟವನ್ನು ಅಥವಾ ಸಂಪೂರ್ಣ ಆಹಾರವನ್ನು ತ್ಯಾಗ ಮಾಡಿದರೆ ಅದು ಉಪವಾಸವಾಗುತ್ತದೆ. ಉಪವಾಸವು ಮನಸ್ಸನ್ನು ಮತ್ತು ದೇಹವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಉಪವಾಸದ ಸಮಯದಲ್ಲಿ ಓರ್ವ ವ್ಯಕ್ತಿಯು ತನ್ನನ್ನು ತಾನು ನಿಯಂತ್ರಿಸಿಕೊಳ್ಳುತ್ತಾನೆ ಇದರಿಂದ ಅವನಲ್ಲಿದ್ದ ನಕಾರಾತ್ಮಕ ಶಕ್ತಿಯು ದೂರಾಗುತ್ತದೆ.

    ಇದನ್ನೂ ಓದಿ : ರಸ್ತೆ, ಓಣಿ, ಗಲ್ಲಿ, ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವಂತಿಲ್ಲ; ಸರ್ಕಾರದ ಮಾರ್ಗಸೂಚಿ

    *ಉಪವಾಸವು ಹಿಂದೂ ಧರ್ಮದ ಹಾಗೂ ಹಿಂದೂ ಸಂಪ್ರದಾಯ, ಆಚಾರದ ಒಂದು ಪ್ರಮುಖ ಭಾಗವಾಗಿದೆ. ನಿರ್ದಿಷ್ಟ ವಿಶೇಷ ದಿನಗಳಲ್ಲಿ ಉಪವಾಸ ಮಾಡುವುದು ದೇವರನ್ನು ಮೆಚ್ಚಿಸಲು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ . ಹೀಗಾಗಿ ಸಂಕಷ್ಟಿಯ ಶುಭ ದಿನದಂದು ಒಬ್ಬರು ಶುದ್ಧ ಹೃದಯ ಮತ್ತು ಆತ್ಮದಿಂದ ಪ್ರಾರ್ಥಿಸಿದರೆ ಎಲ್ಲಾ ಆಸೆಗಳನ್ನು ಮತ್ತು ಕನಸುಗಳು ನನಸಾಗುತ್ತವೆ ಎಂದು ನಂಬಲಾಗಿದೆ. ಆದ್ದರಿಂದ, ಸಂಕಷ್ಟ ಚತುರ್ಥಿಯಲ್ಲಿ ಉಪವಾಸ ಮತ್ತು ಆಚರಣೆಗಳನ್ನು ಆಚರಿಸುವುದು ಹೆಚ್ಚು ಪ್ರಯೋಜನಕಾರಿ ಎನ್ನಲಾಗುತ್ತದೆ.
    Published by:ranjumbkgowda1 ranjumbkgowda1
    First published: