• Home
  • »
  • News
  • »
  • astrology
  • »
  • Zodiac Sign: ರಾಶಿ ಆಧಾರದ ಮೇಲೆ ನೀವು ಈ ತರಕಾರಿ ತಿನ್ನಬೇಕಂತೆ

Zodiac Sign: ರಾಶಿ ಆಧಾರದ ಮೇಲೆ ನೀವು ಈ ತರಕಾರಿ ತಿನ್ನಬೇಕಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Vegetables And Zodiac Sign: ಜ್ಯೋತಿಷ್ಯವನ್ನು ನಂಬುವವರದ್ದು ಒಂದು ಪೈಕಿಯಾದರೆ ನಂಬದೇ ಇರುವವರೂ ಬಹಳಷ್ಟು ಜನರಿದ್ದಾರೆ. ಆದ್ರೆ ರಾಶಿಗನುಗುಣವಾಗಿ ಈ ಹಣ್ಣು ತರಕಾರಿಗಳನ್ನು ಹೇಳಲಾಗಿದ್ದರೂ ಇದು ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ಮುಖ್ಯವಾಗುತ್ತದೆ.

  • Trending Desk
  • 3-MIN READ
  • Last Updated :
  • Share this:

ಉತ್ತಮ ಆರೋಗ್ಯಕ್ಕಾಗಿ ತರಕಾರಿ (Vegetables)  ಹಣ್ಣುಗಳನ್ನು (Fruits) ತಿನ್ನಬೇಕು ಅಂತಾ ವೈದ್ಯರು ಹೇಳ್ತಾನೇ ಇರ್ತಾರೆ. ಈಗಂತೂ ನಗರದದಲ್ಲಿ ಈ ತರಕಾರಿ ಹಣ್ಣುಗಳಿಗೆ ಸಾಕಷ್ಟು ಆಯ್ಕೆಗಳಿರುತ್ತವೆ. ದುಡ್ಡೊಂದಿದ್ದರೆ ಸಾಕು. ನಮಗೆ ತಿನ್ನಬೇಕು ಅನ್ನಿಸಿದ ಹಣ್ಣುಗಳೆಲ್ಲವೂ ನಮಗೆ ಸಿಗುತ್ತವೆ. ಆದರೆ ಯಾರು ಯಾವ ತರಕಾರಿಗಳನ್ನು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಅನ್ನೋ ಆಯ್ಕೆ ಮಾತ್ರ ನಮ್ಮದೇ ಆಗಿರುತ್ತದೆ. ಜ್ಯೋತಿಷ್ಯದಲ್ಲಿ (Astrology)  ನಾವು ತಿನ್ನುವ ಆಹಾರಕ್ಕೆ, ನಮ್ಮ ಆರೋಗ್ಯಕ್ಕೆ (Health) ಹಾಗೂ ಮಾನಸಿಕ ಸ್ಥಿತಿಗೆ ವಿಶೇಷವಾದ ಹೊಂದಾಣಿಕೆ ಇದೆ ಎಂದು ಹೇಳಲಾಗುತ್ತದೆ.


ಜ್ಯೋತಿಷಿಗಳು ನಿಮ್ಮ ಜನ್ಮ ರಾಶಿಗಳಿಗೆ ಅನುಗುಣವಾಗಿ ಕೆಲವೊಂದು ತರಕಾರಿಗಳನ್ನು ತಿನ್ನಬೇಕೆಂದು ಸಲಹೆ ನೀಡ್ತಾರೆ. ಅದರಲ್ಲೂ ಪ್ರಸಿದ್ಧ ಜೋತಿಷಿ ಹಾಗೂ ಜೀವನಶೈಲಿ ಬರಹಗಾರರಾಗಿರುವ ಲಾರೆನ್‌ ಆಶ್‌ ಅವರು ಯಾವ ರಾಶಿಯವರು ಯಾವ ತರಕಾರಿ ತಿನ್ನಬೇಕು ಅನ್ನೋದ್ರ ಬಗ್ಗೆ ಮಾಹಿತಿ ನೀಡಿದ್ದಾರೆ.


ಮೇಷ ರಾಶಿ – ಮೆಣಸಿನಕಾಯಿ: ಮೇಷ ರಾಶಿಯವರು ಹೆಚ್ಚು ಬ್ಯುಸಿಯಾದ ಜೀವನಶೈಲಿ ಹೊಂದಿರುವವರು. ಕಷ್ಟಪಟ್ಟು ಕೆಲಸ ಮಾಡಿದರೆ ಎಲ್ಲವನ್ನೂ ಹೊಂದಬಹುದು ಎಂಬುದಾಗಿ ನಂಬಿದವರು.


ಎದ್ದ ಕ್ಷಣದಿಂದ ಹಿಡಿದು ಅಂತಿಮವಾಗಿ ರಾತ್ರಿ ಮಲಗುವವರೆಗೂ ಮೇಷ ರಾಶಿಯವರ ವೇಳಾಪಟ್ಟಿಯು ಜಾಮ್-ಪ್ಯಾಕ್ ಆಗಿರುತ್ತದೆ ಎಂದು ಹೇಳಲಾಗುತ್ತದೆ.


ಜ್ಯೋತಿಷ್ಯದ ಪ್ರಕಾರ ಮೆಣಸಿನಕಾಯಿ ನಿಮಗೆ ಒಳ್ಳೆಯದು ಎನ್ನಲಾಗುತ್ತದೆ. ಇದನ್ನು ನೀವು ಆಮ್ಲೇಟ್‌ ನಿಂದ ಹಿಡಿದು ಪಾಸ್ತಾದ ವರೆಗೆ ಎಲ್ಲದಕ್ಕೂ ಸೇರಿಸಬಹುದು. ಈ ತರಕಾರಿಯು ಆಂಟಿ ಆಕ್ಸಿಡೆಂಟ್ಸ್‌ ಗುಣಗಳನ್ನು ಹೊಂದಿದ್ದು ನಿಮ್ಮ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ ಎನ್ನಲಾಗುತ್ತದೆ.


ವೃಷಭ - ಚೀನೀಕಾಯಿ: ವೃಷಭ ರಾಶಿಯವರು ಹೆಚ್ಚು ಪ್ರಾಯೋಗಿಕ ಮನಸ್ಥಿತಿಯವರಾಗಿರುತ್ತಾರೆ. ಜೊತೆಗೆ ಏಕಾಗ್ರತೆಗೂ ಹೆಚ್ಚು ಪ್ರಸಿದ್ಧರಾಗಿರುತ್ತಾರೆ.


ಚೀನೀಕಾಯಿ ನಿಮಗೆ ಅತ್ಯಂತ ಒಳ್ಳೆಯದು ಅಂತ ಹೇಳಲಾಗುತ್ತದೆ. ಇದು ಆರೋಗ್ಯಕ್ಕೆ ಬೇಕಾಗಿರುವ ಪ್ರಮುಖ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕ (ಆಂಟಿ ಆಕ್ಸಿಡೆಂಟ್ಸ್)ಗಳಿಂದ ತುಂಬಿರುತ್ತದೆ.‌ ಇದನ್ನು ಕರ್ರಿ, ಪಲ್ಯೆ ಸಾಂಬಾರ್‌, ಚಟ್ನಿ ಹೀಗೆ ಬೇಕಾದಷ್ಟು ವಿಧದಲ್ಲಿ ಅಡುಗೆ ಮಾಡಬಹುದಾಗಿದೆ.
ಮಿಥುನ- ಕೇಲ್‌ ಸೊಪ್ಪು : ಮಿಥುನ ರಾಶಿಯವರು ಪ್ರತಿಯೊಂದರಲ್ಲೂ ವೆರೈಟಿಯನ್ನು ಇಷ್ಟಪಡುವವರು. ಡೇಟಿಂಗ್ ಆಯ್ಕೆಯಿಂದ ಹಿಡಿದು ಆಹಾರದ ಆಯ್ಕೆಗಳವರೆಗೆ ಹೊಸದನ್ನು ಹುಡುಕುತ್ತಿರುತ್ತಾರೆ.


ಇದು ತುಂಬಾ ತಮಾಷೆಯ ಮತ್ತು ಹೊಂದಿಕೊಳ್ಳುವ ರಾಶಿಚಕ್ರ ಚಿಹ್ನೆ. ಈ ರಾಶಿಗೆ ಒಪ್ಪುವಂತೆ ಕೇಲ್ (Kale) ಸೊಪ್ಪನ್ನು ಹೆಸರಿಸಲಾಗುತ್ತದೆ. ಅಂದಹಾಗೆ ಕೇಲ್ ಅನ್ನು ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ.


ಏಕೆಂದರೆ ಇದು ಜೀವಸತ್ವಗಳು ಮತ್ತು ಖನಿಜಗಳ, ಪೋಷಕಾಂಶಗಳ ದಟ್ಟವಾದ ಮೂಲವಾಗಿದೆ. ಸ್ಮೂಥಿಗಳಿಂದ ಹಿಡಿದು ಕೇಲ್ ಚಿಪ್ಸ್‌ ವರೆಗೂ ಕೇಲ್‌ ಸೊಪ್ಪನ್ನು ನೀವು ವಿವಿಧ ರೆಸಿಪಿಗಳನ್ನು ತಯಾರಿಸಬಹುದು.


ಕರ್ಕಾಟಕ - ಸಿಹಿ ಆಲೂಗಡ್ಡೆ: ವಿಶೇಷವಾಗಿ ಸೌಕರ್ಯವು ನಿಮ್ಮ ಮೊದಲ ಆದ್ಯತೆಯಾಗಿದೆ. ಸಾಮಾನ್ಯವಾಗಿ ಈ ರಾಶಿಯವರ ಜೀವನ ಒತ್ತಡದಿಂದ ಕೂಡಿರುತ್ತದೆ.


ಆಹಾರ ತಯಾರಿಕೆ ಹಾಗೂ ಮತ್ತು ಸತ್ಕಾರದಲ್ಲಿ ತೊಡಗಿಸಿಕೊಳ್ಳುವ ಮೂಲಕ ನೀವು ಒತ್ತಡವನ್ನು ತಗ್ಗಿಸಿಕೊಳ್ಳಲು ಬಯಸುತ್ತೀರಿ. ಆದ್ದರಿಂದ, ರಾಶಿಚಕ್ರದ ಚಿಹ್ನೆಯು ಸಿಹಿ ಆಲೂಗಡ್ಡೆಗಳೊಂದಿಗೆ ಜೋಡಿಯಾಗಿರುವುದು ಅರ್ಥಪೂರ್ಣವಾಗಿದೆ.


ಈ ರುಚಿಕರವಾದ ಗೆಣಸು ತಯಾರಿಸಿದ ಆಹಾರಕ್ಕೆ ಇನ್ನಷ್ಟು ಶ್ರೀಮಂತಿಕೆಯನ್ನು ಸೇರಿಸುತ್ತದೆ. ವಿಟಮಿನ್ ಎ ಮತ್ತು ಫೈಬರ್‌ನಿಂದ ತುಂಬಿರುವ ಗೆಣಸು ಪೌಷ್ಟಿಕಾಂಶದ ಅತ್ಯುತ್ತಮ ಮೂಲವಾಗಿದೆ.


ಸಿಂಹ - ಬ್ರಸೆಲ್ಸ್ : ಸಿಂಹ ರಾಶಿಯವರು ಸ್ವಾಭಾವಿಕವಾಗಿ ಗಮನ ಸೆಳೆಯುತ್ತಾರೆ. ಎಲ್ಲಿಯಾದರೂ ಥ್ರಿಲ್ ಅನ್ನು ಹುಡುಕುತ್ತಾರೆ. ಜೀವನದ ಚಿಕ್ಕ ಕ್ಷಣಗಳು ಸಹ ಸ್ಮರಣೀಯವಾಗಬಹುದು ಎಂದು ನಂಬುತ್ತಾರೆ.


ಇದು ಬ್ರಸೆಲ್ಸ್ ಮೊಗ್ಗುಗಳನ್ನು ನಿಮ್ಮ ಪರಿಪೂರ್ಣ ಜೋಡಿಯನ್ನಾಗಿ ಮಾಡುತ್ತದೆ. ಪುಟ್ಟ ಕ್ಯಾಬೀಜ್‌ ನಂತೆ ಕಾಣುವ ಈ ತರಕಾರಿಯಲ್ಲಿ ಫೈಬರ್, ವಿಟಮಿನ್ಗಳು, ಖನಿಜಗಳು ಮತ್ತು ಆಂಟಿ ಆಕ್ಸಿಡೆಂಟ್ಸ್‌ ಸಮೃದ್ಧವಾಗಿವೆ. ಸಲಾಡ್‌ ನಿಂದ ಹಿಡಿದು ವಿವಿಧ ಭಕ್ಷ್ಯಗಳನ್ನು ಇದರಿಂದ ತಯಾರಿಸಬಹುದುದಾಗಿದೆ.


ಕನ್ಯಾ - ಅವರೆಕಾಳು: ಕನ್ಯಾ ರಾಶಿಯವರು ಹೆಚ್ಚಾಗಿ ನೇರವಂತಿಕೆ ಹೊಂದಿರುತ್ತಾರೆ. ನೀವು ನಿರ್ದಿಷ್ಟ ಗುರಿಗಳನ್ನು ಹಾಗೆಯೇ ತೀಕ್ಷ್ಣವಾದ ಕಣ್ಣುಗಳನ್ನು ಹೊಂದಿದ್ದೀರಿ. ಆದ್ದರಿಂದ ನೀವು ಇಷ್ಟಪಡುವ ವಿಷಯಗಳಿಗೆ ಅಂಟಿಕೊಳ್ಳುತ್ತೀರಿ.


ಅವರೆಕಾಳು ಫೈಬರ್, ವಿಟಮಿನ್ ಸಿ ಮತ್ತು ವಿಟಾಮಿನ್‌ ಕೆ ಮತ್ತು ಫೋಲೇಟ್ ಸೇರಿದಂತೆ ಪೋಷಕಾಂಶಗಳ ಮೂಲವಾಗಿದೆ. ಹಾಗೂ ಬಹುತೇಕ ಭಾರತೀಯ ಅಡುಗೆಗಳಲ್ಲಿ ಇದನ್ನು ಸುಲಭವಾಗಿ ಬಳಸಬಹುದಾಗಿದೆ.


ತುಲಾ - ಶತಾವರಿ: ತುಲಾ ರಾಶಿಚಕ್ರವು ವಿನೋದಕ್ಕೆ ಹೆಸರುವಾಸಿಯಾಗಿದೆ. ನೀವು ಕೆಲವು ವಿಷಯಗಳ ಬಗ್ಗೆ ಬಲವಾದ ಅಭಿಪ್ರಾಯಗಳನ್ನು ಹೊಂದಿದ್ದರೂ, ನೀವು ಅದರ ಒಳ ಹೊರಗನ್ನು ಅರ್ಥ ಮಾಡಿಕೊಳ್ಳುತ್ತೀರಿ.


ಹಾಗಾಗಿ ನಿಮಗೆ ಶತಾವರಿ ಸರಿಯಾಗಿ ಹೊಂದುತ್ತದೆ. ಶತಾವರಿಯನ್ನು ನೀವು ಹೇಗೆ ತಯಾರಿಸಿದರೂ ಅಥವಾ ನೀವು ಯಾವುದರೊಂದಿಗೆ ಜೋಡಿಸಿದರೂ ನೀವು ಅತ್ಯುತ್ತಮ ರುಚಿಯನ್ನು ಪಡೆಯಬಹುದು. ಇದು ಉತ್ಕರ್ಷಣ ನಿರೋಧಕಗಳು, ಅಮೈನೋ ಆಮ್ಲಗಳು, ಖನಿಜಗಳು ಮತ್ತು ಕಿಣ್ವಗಳ ಉತ್ತಮ ಮೂಲವಾಗಿದೆ.


ವೃಶ್ಚಿಕ: ಟೊಮ್ಯಾಟಿಲೋಸ್ : ವೃಶ್ಚಿಕ ರಾಶಿಯು ತುಂಬಾ ಆಳವಾದ ಮತ್ತು ನಿಗೂಢ ರಾಶಿ ಚಿಹ್ನೆಯಾಗಿದೆ. ನಿಮ್ಮ ಮರೆಮಾಚುವ ಗುಣವನ್ನು ನೋಡಿ ಜನರು ಆಶ್ಚರ್ಯ ಪಡುತ್ತಾರೆ.


ನೀವು ಜೀವನದಲ್ಲಿ ಏನು ಬಂದರೂ ಎದುರಿಸುವಂಥವರಾಗಿದ್ದು ಸ್ವಲ್ಪ ಮಟ್ಟಿಗಿನ ಕಷ್ಟಕ್ಕೆಲ್ಲ ಹೆದರುವ ಪೈಕಿಯಲ್ಲ. ನಿಮಗೆ ವಿಶಿಷ್ಟ ಟೊಮ್ಯಾಟೋದ ತಳಿಯಲ್ಲಿ ಒಂದಾದ ಟೊಮ್ಯಾಟಿಲೋಸ್ ಉತ್ತಮ ತರಕಾರಿಯಾಗಿದೆ.


ಪರಿಮಳ ಹಾಗೂ ರುಚಿಯಲ್ಲಿ ಹೆಚ್ಚಿನ ವ್ಯತ್ಯಾಸ ಉಂಟುಮಾಡದೇ ನಿಮ್ಮ ಊಟಕ್ಕೆ ವಿಶೇಷ ರುಚಿ ಸೇರಿಸಲು ಉತ್ತಮ ತರಕಾರಿಯಾಗಿದೆ. ಇದು ವಿಟಮಿನ್ ಸಿ ಮತ್ತು ಎ ಯ ಉತ್ತಮ ಮೂಲವಾಗಿದೆ.


ಧನು ರಾಶಿ - ಕ್ಯಾರೆಟ್ : ನೀವು ಧನುರಾಶಿಯವರಾದರೆ ಯಾವಾಗಲೂ ಹೊಸದನ್ನು ಹುಡುಕುತ್ತಿರುತ್ತೀರಿ. ನಿಮ್ಮ ಕಣ್ಣನ್ನು ಸೆಳೆಯುವಂಥ ಆಕರ್ಷಣೆಗೆ ನೀವು ಎದುರು ನೋಡುತ್ತಿರುತ್ತೀರಿ.


ಸಾಹಸಮಯ ಪ್ರಕೃತಿಯಾಗಿರುವ ನಿಮಗೆ ಕ್ಯಾರೆಟ್‌ ಅತ್ಯಂತ ಸೂಕ್ತವಾದ ತರಕಾರಿಯಾಗಿದೆ. ನಿಮ್ಮ ದೇಹವು ನಿಮ್ಮ ಆತ್ಮದಂತೆ ರೋಮಾಂಚಕ ಭಾವನೆಯನ್ನು ಹೊಂದಿರುವ ಸಂಪೂರ್ಣ ಆರೋಗ್ಯದ ಪ್ರಕಾರವನ್ನು ಉತ್ತೇಜಿಸುತ್ತದೆ.


ಅಂದಹಾಗೆ ಕ್ಯಾರೆಟ್‌ ಬೀಟಾ ಕ್ಯಾರೋಟಿನ್, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ.


ಮಕರ – ಆಲೂಗಡ್ಡೆ: ಯಾವುದೇ ಸ್ನೇಹ, ಸಂಬಂಧವನ್ನು ಗಟ್ಟಿಗೊಸುವಲ್ಲಿ ಮರಕ ರಾಶಿ ಪ್ರಾಮುಖ್ಯತೆ ಪಡೆಯುತ್ತದೆ. ಆ ವಿಶ್ವಾಸಾರ್ಹತೆಯನ್ನು ನೀವು ಕಾಪಾಡಿಕೊಳ್ಳುತ್ತೀರಿ. ನೀವು ಮಾಡುವ ಕೆಲಸ, ನಿಮ್ಮ ಸ್ವಭಾವ ಏನು ಅನ್ನೋದು ನಿಮ್ಮ ರಾಶಿಗಳಿಗೂ ಅನ್ವಯಿಸುತ್ತದೆ.


ನೀವು ಆಲೂಗಟ್ಟೆಯಂಥ ಸಾಂಪ್ರದಾಯಿಕವಾದ ತರಕಾರಿಯನ್ನು ಹೆಚ್ಚು ಆನಂದಿಸುವಿರಿ. ಕ್ಲಾಸಿಕ್ ಆಹಾರಗಳಿಗೆ ಬಂದಾಗ ಆಲೂಗಡ್ಡೆ ಅತ್ಯುತ್ತಮವಾಗಿದೆ.


ಅವುಗಳು ಫೈಬರ್‌ನಲ್ಲಿ ಸಮೃದ್ಧವಾಗಿವೆ, ಇದರಿಂದಾಗಿ ನಿಮ್ಮನ್ನು ಹೆಚ್ಚು ನೀವು ಶಕ್ತಿಯನ್ನು ಹೊಂದುತ್ತೀರಿ. ಈ ಆಲೂಗಡ್ಡೆಯಿಂದ ಬಗೆಬಗೆಯ ಆಹಾರ ತಯಾರಿಸಿ ಸೇವಿಸಬಹುದಾಗಿದೆ.


ಕುಂಭ - ಆವಕಾಡೊ: ನೀವು ಜೀವನದಲ್ಲಿ ನಿಮ್ಮದೇ ಆದ ದಾರಿಯನ್ನು ಹುಡುಕುತ್ತಿರುವ ನಿಜವಾದ ವ್ಯಕ್ತಿ. ಹೊಸ ದೃಷ್ಟಿಕೋನದಿಂದ ವಿಷಯಗಳನ್ನು ನೋಡುತ್ತೀರಿ.


ನಿಮ್ಮ ಪ್ರೀತಿಯು ನಿಮ್ಮ ಉತ್ತಮ ಗುಣಗಳಲ್ಲಿ ಒಂದಾಗಿದೆ. ಆವಕಾಡೊಗಳು ತಾಂತ್ರಿಕವಾಗಿ ಒಂದು ಹಣ್ಣು ಎಂಬುದು ನಿಜವಾಗಿದ್ದರೂ, ಇದು ನಿಮಗೆ ಒಳ್ಳೆಯದು ಎನ್ನಲಾಗುತ್ತದೆ.


ಇದನ್ನೂ ಓದಿ: ಮನೆಯ ಈ ಸ್ಥಳದಲ್ಲಿ ಡ್ರೀಮ್ ಕ್ಯಾಚರ್ ಹಾಕಿ, ಸಮಸ್ಯೆಗಳೆಲ್ಲಾ ಪರಿಹಾರವಾಗುತ್ತೆ


ಆವಕಾಡೊಗಳು ನಿಮ್ಮ ದೈನಂದಿನ ಡೋಸ್ ಆರೋಗ್ಯಕರ ಕೊಬ್ಬು ಮತ್ತು ಆಹಾರದ ಫೈಬರ್ ಅನ್ನು ನೀಡುತ್ತವೆ. ಜೊತೆಗೆ, ಅವುಗಳು ವಿಟಮಿನ್‌ಗಳಿಂದ ತುಂಬಿವೆ.


ಅದು ಜ್ಞಾಪಕಶಕ್ತಿಯನ್ನು ಹೆಚ್ಚಿಸಲು ಮತ್ತು ನಿಮ್ಮ ಆಲೋಚನೆಯನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ, ಇದು ಕುಂಭ ರಾಶಿಚಕ್ರದ ಬುದ್ಧಿಜೀವಿಗಳಿಗೆ ಉತ್ತಮ ಆಯ್ಕೆಯಾಗಿದೆ.


ಮೀನ: ಅಣಬೆಗಳು: ಮೀನ ರಾಶಿಯವರು ಯಾವುದೇ ಪರಿಸ್ಥಿತಿಗೆ ಅನಾಯಾಸವಾಗಿ ಹೊಂದಿಕೊಳ್ಳುತ್ತಾರೆ. ನೀವು ಯಾವಾಗಲೂ ವಿಷಯಗಳ ಸಕಾರಾತ್ಮಕ ಭಾಗವನ್ನು ನೋಡುತ್ತೀರಿ.


ಆದ್ದರಿಂದ ಹೊಸದನ್ನು ಪ್ರಯತ್ನಿಸಲು ನೀವು ಸುಲಭವಾಗಿ ಒಲವು ತೋರಬಹುದು. ಅಣಬೆಗಳು ಅಸಂಖ್ಯಾತ ಪ್ರಭೇದಗಳಲ್ಲಿ ಬರುತ್ತವೆ. ಪ್ರತಿಯೊಂದೂ ತನ್ನದೇ ಆದ ವಿಶಿಷ್ಟ ರುಚಿ ಮತ್ತು ವಿನ್ಯಾಸವನ್ನು ಹೊಂದಿದೆ.


ಕಡಿಮೆ ಕ್ಯಾಲೋರಿಗಳು ಮತ್ತು ಹೆಚ್ಚಿನ ವಿಟಮಿನ್ಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ. ಅಂದರೆ ನಿಮ್ಮ ದೈನಂದಿನ ಆಹಾರದ ನೈಸರ್ಗಿಕ ಹರಿವನ್ನು ಅಡ್ಡಿಪಡಿಸದೆಯೇ ನಿಮ್ಮ ನೆಚ್ಚಿನ ಊಟಕ್ಕೆ ಅಣಬೆಗಳನ್ನು ಎಷ್ಟು ಬೇಕಾದರೂ ಸೇರಿಸಬಹುದು.


ಇದನ್ನೂ ಓದಿ: ಈ ರಾಶಿಯವವರಿಗೆ ಕೆಂಪು ಬಣ್ಣದ ಕಾರು ಲಕ್ಕಿ, ಉಳಿದ ರಾಶಿಗೆ ಯಾವ ಕಲರ್ ಸೂಟ್​ ಆಗುತ್ತೆ?


ಒಟ್ಟಾರೆ, ಜ್ಯೋತಿಷ್ಯವನ್ನು ನಂಬುವವರದ್ದು ಒಂದು ಪೈಕಿಯಾದರೆ ನಂಬದೇ ಇರುವವರೂ ಬಹಳಷ್ಟು ಜನರಿದ್ದಾರೆ. ಆದ್ರೆ ರಾಶಿಗನುಗುಣವಾಗಿ ಈ ಹಣ್ಣು ತರಕಾರಿಗಳನ್ನು ಹೇಳಲಾಗಿದ್ದರೂ ಇದು ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ಮುಖ್ಯವಾಗುತ್ತದೆ. ಇವು ಆರೋಗ್ಯವಂತ ಶರೀರಕ್ಕೆ ಅತ್ಯಂತ ಅವಶ್ಯಕ ಆಹಾರಗಳಾಗಿವೆ ಅನ್ನೋದನ್ನು ವೈದ್ಯರೂ ಹೇಳುತ್ತಾರೆ.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು