Vat Savitri: ಯಮನಿಂದ ಗಂಡನ ಬದುಕಿಸಿಕೊಂಡ ಸಾವಿತ್ರಿಯ ವ್ರತ ನಾಳೆ; ಈ ದಿನದ ಮಹತ್ವ ಇದು

ಸಾವಿತ್ರಿಯು ಯಮರಾಜನಿಂದ ತನ್ನ ಪತಿಯ ಜೀವನವನ್ನು ಮರಳಿ ಪಡೆದಳು ಮಾತ್ರವಲ್ಲದೆ ಇಡೀ ಕುಟುಂಬದವರ ಒಳಿತಿಗೆ ವರವನ್ನು ಪಡೆದಳು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಹಿಂದೂ ಧರ್ಮದಲ್ಲಿ ವತ್​​ ಸಾವಿತ್ರಿ (vat savitri ) ವ್ರತಕ್ಕೆ ವಿಶೇಷ ಮಹತ್ವ ಇದೆ. ಈ ದಿನದಂದು ವಿವಾಹಿತ ಮಹಿಳೆಯರು ತಮ್ಮ ಗಂಡನ ಆಯಸ್ಸು, ಆರೋಗ್ಯಕ್ಕೆ ಉಪವಾಸ ಮಾಡುತ್ತಾರೆ. ಮಹಾನ್ ಸಾವಿತ್ರಿಯು ಯಮನ ವಿರುದ್ಧ ಹೋರಾಡಿ ತನ್ನ ಮೃತ ಪತಿ ಸತ್ಯವಾನನನ್ನು ಬದುಕಿಸಿದಳು ಎಂದು ನಂಬಲಾಗಿದೆ. ಈ ವ್ರತವನ್ನು ಜ್ಯೇಷ್ಠ ಅಮಾವಾಸ್ಯೆಯಲ್ಲಿ ಆಚರಿಸಲಾಗುತ್ತದೆ. ಶನಿ ಜಯಂತಿಯೊಂದಿಗೆ ಈ ಬಾರಿ ವಟ್ ಸಾವಿತ್ರಿ ವ್ರತವನ್ನು ಆಚರಿಸಲಾಗುತ್ತದೆ.

  ಗಂಡನ ದೀರ್ಘಾಯುಷ್ಯಕ್ಕಾಗಿ ಪೂಜೆ
  ಈ ದಿನ ಎಲ್ಲಾ ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಆಲದ ಮರವನ್ನು ಪೂಜಿಸುವ ದಿನವೇ ಸಾವಿತ್ರಿ ವ್ರತ. ಜ್ಯೇಷ್ಠ ಮಾಸದ ಕೃಷ್ಣ ಪಕ್ಷದಲ್ಲಿ ಪ್ರತಿ ವರ್ಷ ಅಮಾವಾಸ್ಯೆಯಂದು ದಿನ ಬರುತ್ತದೆ. ಈ ಬಾರಿ ಇದೇ ದಿನ ಸೋಮಾವತಿ ಅಮಾವಸ್ಯೆ ಮತ್ತು ಹನುಮ ಜಯಂತಿ ಕೂಡ ಬಂದಿರುವುದು ವಿಶೇಷವಾಗಿದೆ.

  ಶುಭ ಮುಹೂರ್ತ

  ವತ್​​ ಸಾವಿತ್ರಿ ವ್ರತ ಮುಹೂರ್ತವು ಮೇ 20ರ ಮಧ್ಯಾಹ್ನ 2. 54ರ ಜ್ಯೇಷ್ಠ ಅಮಾವಾಸ್ಯೆ ದಿನಾಂಕ ಪ್ರಾರಂಭವಾಗುತ್ತದೆ. ಮೇ 30ರಂದು ಜ್ಯೇಷ್ಠ ಅಮಾವಾಸ್ಯೆ ದಿನಾಂಕ ಮುಕ್ತಾಯವಾಗುತ್ತದೆ.

  ಆಲದ ಮರದ ಪೂಜೆ

  ವಿವಾಹಿತ ಮಹಿಳೆಯರು ಇಂದು ಆಲದ ಮರವನ್ನು ಪೂಜಿಸುತ್ತಾರೆ. ಆಲದ ಮರದ ಕೆಳಗೆ ಮಹಿಳೆಯರು ಸಾವಿತ್ರಿ-ಸತ್ಯವಾನ್ ಮತ್ತು ಇತರ ಪ್ರಧಾನ ದೇವತೆಗಳನ್ನು ಪೂಜಿಸುತ್ತಾರೆ.
  ಆದ್ದರಿಂದ ಇದಕ್ಕೆ ವತ್​​​​ ಸಾವಿತ್ರಿ ಎಂದು ಹೆಸರಿಡಲಾಗಿದೆ. ಈ ವ್ರತದ ಫಲವಾಗಿ ದಾಂಪತ್ಯ ಜೀವನ ಸುಖಮಯ ಮತ್ತು ಸಮೃದ್ಧಿಯ ವರದಾನವಾಗುತ್ತದೆ. ವಾಸ್ತವವಾಗಿ, ಸಾವಿತ್ರಿಯು ಯಮರಾಜನಿಂದ ತನ್ನ ಪತಿಯ ಜೀವನವನ್ನು ಮರಳಿ ಪಡೆದಳು ಮಾತ್ರವಲ್ಲದೆ ಇಡೀ ಕುಟುಂಬದವರ ಒಳಿತಿಗೆ ವರವನ್ನು ಪಡೆದಳು.

  ಏನಿದು ಸತ್ಯವಾನ- ಸಾವಿತ್ರಿ ಕಥೆ
  ಪುರಾಣದ ಪ್ರಕಾರ, ಸಾವಿತ್ರಿಯು ರಾಜರ್ಷಿ ಅಶ್ವಪತಿಯ ಏಕೈಕ ಮಗಳು. ಸಾವಿತ್ರಿಯನ್ನು ದ್ಯುಮತ್ಸೇನನ ಮಗನಾದ ಸತ್ಯವಾನ್ ಜೊತೆ ವಿವಾಹ ನಿಶ್ಚಯಿಸಿದರು. ನಾರದನು ಸಾವಿತ್ರಿಯ ತಂದೆ ಅಶ್ವಪತಿಗೆ ಸತ್ಯವಾನನು ಸದ್ಗುಣಿ ಮತ್ತು ಧರ್ಮನಿಷ್ಠನು, ಆದರೆ ಅವನು ಅಲ್ಪಾಯುಷಿ ಎಂದು ಹೇಳಿದನು. ಮದುವೆಯಾದ ಒಂದು ವರ್ಷದ ನಂತರ ಅವನು ಸಾಯುತ್ತಾನೆ ಎಂದು ತಿಳಿಸಿದರು. ಈ ವಿಷಯ ತಿಳಿದ ಬಳಿಕ ಅಶ್ವಪತಿ ಮಗಳಿಗೆ ಸತ್ಯವಾನ್​ನನ್ನು ಮದುವೆ ಆಗದಂತೆ ಮನವಿ ಮಾಡುತ್ತಾನೆ. ಆದರೆ, ಸಾವಿತ್ರಿ ಮಾತ್ರ ಇದಕ್ಕೆ ಒಪ್ಪದೇ ಸತ್ಯವಾನನ್ನು ಮದುವೆ ಆಗುತ್ತಾಳೆ.

  ಅಲ್ಪಾಯುಷಿ ಸತ್ಯವಾನ
  ಸತ್ಯವಾನ ರಾಜಮನೆತನ ಸಿರಿ ಕಳೆದುಕೊಂಡು ತನ್ನ ಹೆತ್ತವರೊಂದಿಗೆ ಕಾಡಿನಲ್ಲಿ ವಾಸಿಸುತ್ತಿದ್ದನು, ಸಾವಿತ್ರಿ ಕೂಡ ಅವರೊಂದಿಗೆ ವಾಸಿಸಲು ಪ್ರಾರಂಭಿಸಿದಳು. ಈ ವೇಳೆ ನಾರದ ಮುನಿಗಳು ಹೇಳಿದಂತೆ ಗಂಡನ ದೀರ್ಘಾಯುಷ್ಯಕ್ಕಾಗಿ ಉಪವಾಸ ವ್ರತ ಆಚರಿಸುತ್ತಿರುತ್ತಾಳೆ.

  ಇದನ್ನು ಓದಿ: ಹನುಮಾನ್ ಚಾಲೀಸಾ ಭಜಿಸುವುದರಿಂದ ಎಷ್ಟೆಲ್ಲ ಪ್ರಯೋಜನ ಇದೆ ಗೊತ್ತಾ?

  ಹೆಂಡತಿ ತೊಡೆ ಮೇಲೆ ಪ್ರಾಣಬಿಟ್ಟ
  ಒಮ್ಮೆ ಸತ್ಯವಾನನು ಮರ ಕಡಿಯಲು ಕಾಡಿಗೆ ಹೋಗುತ್ತಾನೆ. ಈ ವೇಳೆ ಸತ್ಯವಾನನಿಗೆ ಮರ ಹತ್ತಲು ಶುರು ಮಾಡಿದ ತಕ್ಷಣ ತಲೆಯಲ್ಲಿ ವಿಪರೀತ ನೋವು ಶುರುವಾಯಿತು. ಆಲದ ಮರದ ಕೆಳಗೆ ಬಂದು ಸಾವಿತ್ರಿಯ ಮಡಿಲಲ್ಲಿ ತಲೆಯಿಟ್ಟು ಮಲಗಿದ.

  ಸ್ವಲ್ಪ ಸಮಯದ ನಂತರ ಯಮರಾಜನು ಮಾಯಾದೂತರೊಂದಿಗೆ ಸತ್ಯವಾನನ ಪ್ರಾಣವನ್ನು ತೆಗೆದುಕೊಂಡು ಹೋಗಲು ಬರುತ್ತಿರುವುದನ್ನು ಸಾವಿತ್ರಿ ನೋಡಿದಳು. ಆಗ ಸಾವಿತ್ರಿಯೂ ಗಂಡನ ಪ್ರಾಣದ ಜೊತೆ ಯಮನ ಹಿಂಬಾಲಿಸಿದಳು.

  ಯಮರಾಜನ ಹಿಂಬಾಲಿಸಿದ ಸಾವಿತ್ರಿ
  ಸ್ವಲ್ಪ ಸಮಯದ ನಂತರ ಯಮರಾಜನು ಸಾವಿತ್ರಿಯು ತನ್ನನ್ನು ಹಿಂಬಾಲಿಸುತ್ತಿರುವುದನ್ನು ನೋಡಿದನು. ಆಗ ಸಾವಿತ್ರಿಗೆ, ನೀನು ಭೂಮಿಯವರೆಗೂ ಸತ್ಯವಾನನೊಂದಿಗೆ ಇದ್ದೀಯ. ಈಗ ನೀವು ಹಿಂತಿರುಗುವಂತೆ ತಿಳಿಸಿದ. ಆದರೆ, ಸಾವಿತ್ರಿ ಮಾತ್ರ ಪತಿಯೊಂದಿಗೆ ಹೋಗುವುದು ಪತ್ನಿಯ ಧರ್ಮ ಎಂದಳು.

  ಇದನ್ನು ಓದಿ: ಯಾವುದೇ ಕಷ್ಟ ಬರಲಿ, ಸುಲಭವಾಗಿ ಪರಿಹರಿಸುವ ರಾಶಿಯ ಜನರು ಇವರು

  ಅತ್ತೆ- ಮಾವನಿಗೆ ವರ 

  ಯಮರಾಜನು ಸಾವಿತ್ರಿಯ ಸದ್ಗುಣದಿಂದ ಬಹಳ ಸಂತೋಷಪಟ್ಟು ವರ ಕೇಳುವಂತೆ ತಿಳಿಸಿದ. ಆಗ, ಸಾವಿತ್ರಿಯು ತನ್ನ ಅತ್ತೆಯ ದೃಷ್ಟಿಯನ್ನು ಮರಳುವಂತೆ ಕೋರಿದಳು. ವರ ನೀಡಿದ ಬಳಿಕವೂ ಸಾವಿತ್ರಿ ಯಮನನ್ನು ಅನುಕರಿಸುತ್ತಿರುತ್ತಾಳೆ. ಈ ವೇಳೆ ಮತ್ತೊಂದು ವರ ನೀಡುವುದಾಗಿ ಯಮ ಆಶ್ವಾಸನೆ ನೀಡಿದ. ಅದರಂತೆ ಮಾವ ಕಳೆದುಕೊಂಡ ಅರಮನೆಯ ಸಂಪತ್ತನ್ನು ಕೇಳಿದಳು.

  ಗಂಡನ ಉಳಿಸಿಕೊಂಡ ಸಾವಿತ್ರಿ

  ಇಷ್ಟಾದರೂ ಸಾವಿತ್ರಿ ಯಮರಾಜನನ್ನು ಅನುಸರಿಸುತ್ತಲೇ ಇದ್ದಳು. ಯಮರಾಜನು ಕಡೆಯದಾಗಿ ವರವನ್ನು ಕೇಳುವಂತೆ ಕೇಳಿದನು. ಸಾವಿತ್ರಿಯು ಸತ್ಯವಾನನ 100 ಪುತ್ರರ ತಾಯಿಯಾಗಲು ವರವನ್ನು ಕೇಳಿದಳು. ಯಮರಾಜನು ತನ್ನ ವಾಗ್ದಾನಕ್ಕೆ ಬದ್ಧನಾಗಿ ಸಾವಿತ್ರಿಗೆ 100 ಗಂಡುಮಕ್ಕಳ ತಾಯಿಯಾಗುವ ವರವನ್ನು ನೀಡಿದನು. ಅದರಂತೆ ಸತ್ಯವಾನನ ಜೀವನವನ್ನು ಹಿಂದಿರುಗಿಸಿದನು.

  ಸಕಲವೂ ಪಡೆದ ಸತ್ಯವಾನ-ಸಾವಿತ್ರಿ

  ಸಾವಿತ್ರಿ ಅಲ್ಲಿಂದ ಹಿಂತಿರುಗಿ ಆಲದ ಮರದ ಬಳಿ ಬಂದಳು. ಸತ್ಯವಾನನಿಗೆ ಯಮರಾಜನು ಜೀವನವನ್ನು ದಾನ ಮಾಡಿದನು. ಸಾವಿತ್ರಿಯ ಉಪವಾಸ ಮತ್ತು ಪುಣ್ಯ ಧರ್ಮದಿಂದ ಸತ್ಯವಾನನಿಗೆ ಮತ್ತೆ ಜೀವ ಸಿಕ್ಕಿತು. ಅವನ ಮಾವ ಕಳೆದುಹೋದ ರಾಜಮನೆತನವನ್ನೂ ಪಡೆದರು.

  ಅಂದಿನಿಂದ, ವಿವಾಹಿತ ಮಹಿಳೆಯರು ವತ್​​ ಸಾವಿತ್ರಿ ವ್ರತವನ್ನು ಆಚರಿಸಲು ಪ್ರಾರಂಭಿಸಿದರು, ಇದರಿಂದ ಅವರ ಪತಿಗೆ ದೀರ್ಘಾಯುಷ್ಯ, ಅವರಿಗೂ ಪುತ್ರ ಸಂತಾನ ಮತ್ತು ದಾಂಪತ್ಯ ಜೀವನವು ಸಂತೋಷದಿಂದ ಕೂಡಿರುತ್ತದೆ.
  Published by:Seema R
  First published: