Relationship: ಬ್ರೇಕಪ್ ನೋವಿನಿಂದ ಹೊರ ಬರೋಕೆ ಹೆಲ್ಪ್ ಮಾಡುತ್ತೆ ಈ ವಾಸ್ತು ಟಿಪ್ಸ್

ವಾಸ್ತು

ವಾಸ್ತು

Vastu For Breakup: ಸಂಗಾತಿ ದೂರವಾದ್ದನ್ನು ಅರಗಿಸಿಕೊಳ್ಳಲು ಇರುವ ಮಾರ್ಗಗಳು ಕೇವಲ ಮದ್ಯಪಾನ, ಧೂಮಪಾನವಲ್ಲ. ಇರದಾಚೆಯೂ ನಾವು ನಮ್ಮ ಮನಸ್ಸನ್ನು ನಿಶ್ಚಲ ಮಾಡಿಕೊಂಡು ಜೀವನವನ್ನು ಸಾಗಿಸಬೇಕು. ವಾಸ್ತು ಪ್ರಕಾರ ಬ್ರೇಕಪ್​ನಿಂದ ಹೊರಬರಲು ಏನು ಮಾಡಬೇಕು ಎಂಬುದು ಇಲ್ಲಿದೆ.

  • Share this:

ಪ್ರೀತಿಯಲ್ಲಿ (Love) ಪ್ರೇಮಿಗಳು (Lovers) ದೂರವಾಗುವುದು ಸಹಜ. ಹಾಗಂತ ಮಾತ್ರಕ್ಕೆ ಜೀವನ (Life) ಇಲ್ಲಿಗೆ ಮುಗಿಯುವುದಿಲ್ಲ. ಪ್ರೀತಿಯ ಹೊರತಾಗಿಯೂ ಕೂಡ ಜೀವನದಲ್ಲಿ ಹಲವಾರು ಸುಂದರ ಕ್ಷಣಗಳು ಇವೆ. ಅವುಗಳಿಗಾದರೂ ನಾವು ಆ ನೋವಿನಿಂದ (Pain)  ಹೊರಬಂದು ಬದುಕಬೇಕು. ಬ್ರೇಕಪ್​ (Breakup) ಆದ ನಂತರ ಹಲವರು ಮದ್ಯಪಾನ, ಧೂಮಪಾನದಂತಹ ಚಟಗಳಿಗೆ ಮೊರೆ ಹೋಗುತ್ತಾರೆ.


ಸಂಗಾತಿ ದೂರವಾದ್ದನ್ನು ಅರಗಿಸಿಕೊಳ್ಳಲು ಇರುವ ಮಾರ್ಗಗಳು ಕೇವಲ ಮದ್ಯಪಾನ, ಧೂಮಪಾನವಲ್ಲ. ಇರದಾಚೆಯೂ ನಾವು ನಮ್ಮ ಮನಸ್ಸನ್ನು ನಿಶ್ಚಲ ಮಾಡಿಕೊಂಡು ಜೀವನವನ್ನು ಸಾಗಿಸಬೇಕು.


ಬ್ರೇಕಪ್​ ಆದ ನಂತರ ಚೇತರಿಸಿಕೊಳ್ಳಲು ನಾವು ಮಾನಸಿಕವಾಗಿ ಗಟ್ಟಿಯಾಗಿರಬೇಕು. ಇದಕ್ಕೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು, ಸಂಗೀತ ಕೇಳುವುದು, ಹವ್ಯಾಸಗಳಿಗೆ ಸಮಯ ಕೊಡುವಂತಹ ಕೆಲಸ ಮಾಡಬೇಕು. ಇವುಗಳ ಜೊತೆಗೆ ಬ್ರೇಕ್‌ಅಪ್‌ನಿಂದ ಹೊರಬರಲು ನಾವು ವಾಸ್ತು ಟಿಪ್ಸ್‌ಗಳನ್ನು ಸಹ ಅನುಸರಿಸಬಹುದು.


ಬ್ರೇಕಪ್ ಆಗಿರುವವರಿಗೆ, ಸಂಬಂಧಗಳಲ್ಲಿ ಬಿರುಕು ಅನುಭವಿಸುತ್ತಿರುವವರಿಗೆ ಒಳ್ಳೆಯ ಪಾಸಿಟಿವಿಟಿಯನ್ನು ಸೆಳೆಯುವಂತಹ ಟಿಪ್ಸ್‌ ಇವಾಗಿದ್ದು, ನಿಮ್ಮನ್ನು ಜೀವನದಲ್ಲಿ ಮತ್ತೆ ಪುಟಿದೇಳಲು ಸಹಕರಿಸುತ್ತವೆ.


* ಹೂವುಗಳು
ಸಂಬಂಧ ಹದಗೆಟ್ಟಿದೆ ಅಥವಾ ಬ್ರೇಕ್‌ಅಪ್‌ ಆಗಿರುವವರು ಪಾಸಿಟಿವಿಟಿ ಎನರ್ಜಿಯನ್ನು ಸೆಳೆಯಲು ಹೂವುಗಳನ್ನು ಮನೆಯಲ್ಲಿ ಅಥವಾ ನೀವು ಮಲಗುವ ಕೋಣೆಯಲ್ಲಿ ಹೂದಾನಿಯಲ್ಲಿ ಹಾಕಿ ಇರಿಸಿಕೊಳ್ಳಿ.


ಫೆಂಗ್ ಶೂಯಿ ಮತ್ತು ವಾಸ್ತು ಎರಡೂ ಹಳದಿ ಕ್ರೈಸಾಂಥೆಮಮ್ ಅಥವಾ ಹಂದಿ ಸೇವಂತಿಗೆ ಹೂಗಳನ್ನು ಇಡಲು ಶಿಫಾರಸ್ಸು ಮಾಡುತ್ತದೆ. ಈ ಹೂವುಗಳು ಸಂತೋಷವನ್ನು ಸಂಕೇತಿಸುತ್ತವೆ. ಆದ್ದರಿಂದ ಇವುಗಳನ್ನು ನೈಋತ್ಯದಲ್ಲಿ ಟೆರಾಕೋಟಾ ಅಥವಾ ಪಿಂಗಾಣಿ ಹೂವಿನ ಹೂದಾನಿಗಳಲ್ಲಿ ಇರಿಸಿದರೆ ಉತ್ತಮ.


ಇದನ್ನೂ ಓದಿ: ಯಾವುದೇ ಕಾರಣಕ್ಕೂ ಬೇರೆಯವರಿಂದ ಈ ವಸ್ತುಗಳನ್ನು ಕೇಳಲೇಬೇಡಿ


* ಪ್ರೀತಿ ಸಂಕೇತದ ಫೋಟೋ ಇರಿಸಿ
ಮುಂಬೈ ಮೂಲದ ವಾಸ್ತುಕರ್ ಮಾನಸಿ ಠಾಕೂರ್ ಲಿವಿಂಗ್ ರೂಮಿನಲ್ಲಿ ಪ್ರೀತಿಯ ಸಂಕೇತ ಎಂದೇ ಭಾವಿಸಲಾಗಿರುವ ರಾಧಾ ಕೃಷ್ಣನ ಫೋಟೋಗಳನ್ನು, ಚಿತ್ರಕಲೆಯನ್ನು ಗೋಡೆ ಮೇಲೆ ಇರಿಸಲು ಸಲಹೆ ನೀಡಿದ್ದಾರೆ.


* ಪ್ರೀತಿಯ ದಿಕ್ಕನ್ನು ಗೌರವಿಸಿ
ನೈಋತ್ಯ ದಿಕ್ಕನ್ನು ವಾಸ್ತು ಶಾಸ್ತ್ರದಲ್ಲಿ ಪ್ರೀತಿಯ ಮೂಲೆ ಎಂದು ಕರೆಯಲಾಗುತ್ತದೆ. ಹೀಗಾಗಿ ನೈಋತ್ಯ ದಿಕ್ಕಿಗೆ ಹೆಚ್ಚು ಆದ್ಯತೆಯನ್ನು ನೀಡಬೇಕು. ಹೊಸ ಪ್ರೀತಿಯನ್ನು ಆಕರ್ಷಿಸಲು, ಲವ್ ಬರ್ಡ್ಸ್ ಅಥವಾ ಹಂಸಗಳಂತಹ ಏಕಪತ್ನಿ ಜೋಡಿ-ಬಂಧದ ಪಕ್ಷಿಗಳ ಪ್ರತಿಮೆಯನ್ನು ಇಲ್ಲಿ ಇರಿಸಬಹುದು. ಈ ಮೂಲೆಯಲ್ಲಿ ಕೆಲವು ಶ್ರೀಗಂಧದ ಚಕ್ಕೆ ಅಥವಾ ಗುಲಾಬಿ ಸಾರಭೂತ ತೈಲಗಳನ್ನು ಹಚ್ಚಿಡುವಂತೆ ವಾಸ್ತು ಸಲಹೆ ನೀಡುತ್ತದೆ.


ಬ್ರೇಕಪ್ ನೋವು ಮರೆತು ಮುಂದೆ ಸಾಗಲು ವಾಸ್ತು ಸಲಹೆ


ಬ್ರೇಕಪ್ ಆದ ನಂತರ ಎಲ್ಲವನ್ನೂ ಮರೆತು ಮುಂದೆ ಸಾಗುವುದನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲ. ಈ ನೋವಿನಿಂದ ಹೊರಬರಬೇಕಾದರೆ ಎಲ್ಲಾ ಹಳೆಯ ನೆನಪುಗಳನ್ನು ಬಿಟ್ಟುಬಿಡಬೇಕು.




ಸಾಮಾನ್ಯವಾಗಿ ಜನ ಸಂಗಾತಿಯ ಪ್ರೀತಿ ಮರೆಯಲು ಸಾಮಾನ್ಯವಾಗಿ ಅವರು ಕೊಟ್ಟ ಉಡುಗೊರೆ, ಬಟ್ಟೆ, ಕಾರ್ಡ್‌ ಎಲ್ಲವನ್ನೂ ಮನೆಯಿಂದ ಹೊರಹಾಕುತ್ತಾರೆ. ವಾಸ್ತು ಶಾಸ್ತ್ರ ಕೂಡ ಇದನ್ನೇ ಹೇಳುತ್ತದೆ.


ಆದಾಗ್ಯೂ ವಿಲೇವರಿ ಮಾಡಲು ಅಸಾಧ್ಯವಾದ ವಸ್ತುಗಳನ್ನು ಪೆಟ್ಟಿಗೆಯಲ್ಲಿ ಕಾಣದಂತೇ ಇಡಲು ಸಲಹೆ ನೀಡಲಾಗುತ್ತದೆ. ಮಾಜಿ ಸಂಗಾತಿಗೆ ಸೇರಿದ ಎಲ್ಲಾ ವಸ್ತುಗಳಿಂದ, ನೆನಪುಗಳಿಂದ ದೂರವಿರಿ.


ಇಬ್ಬರೂ ಸುತ್ತಾಡಿದ ಜಾಗಗಳಿಗೆ ಭೇಟಿ ನೀಡದಿರಲು ವಾಸ್ತು ಶಿಫಾರಸ್ಸು ಮಾಡುತ್ತದೆ. ಹಾಗೆಯೇ ಮನೆಯಲ್ಲಿ ಕರ್ಪೂರ ಅಥವಾ ಲವಂಗದ ಎಣ್ಣೆಯಿಂದ ದೀಪ ಹಚ್ಚಲು ಸಲಹೆ ನೀಡಲಾಗಿದೆ.


ನೀವು ಮಾಜಿ ವ್ಯಕ್ತಿಯೊಂದಿಗೆ ಹಂಚಿಕೊಂಡಿರುವ ಯಾವುದೇ ಕೊಠಡಿಗಳಿಗೆ ನೀಲಿಬಣ್ಣವನ್ನು ಬಳಿಯಿರಿ. ಇದು ಯಾವುದೇ ಹಳೆಯ ಶಕ್ತಿಯನ್ನು ತೆರವುಗೊಳಿಸುತ್ತದೆ ಮತ್ತು ಸಂಭಾವ್ಯ ಪ್ರಣಯಗಳನ್ನು ಸಕ್ರಿಯಗೊಳಿಸುತ್ತದೆ.


ಇದನ್ನೂ ಓದಿ: ನಿಮ್ಮ ಗಾಡಿ ಕೀಗಳನ್ನು ಅಪ್ಪಿ-ತಪ್ಪಿ ಈ ಜಾಗದಲ್ಲಿ ಇಡ್ಬೇಡಿ


ನೀವು ಹೆಚ್ಚಾಗಿ ಓಡಾಡುವ ಮನೆಯ ಸ್ಥಳದಲ್ಲಿ ಸೇವಂತಿಗೆ, ಮಾರಿಗೋಲ್ಡ್, ಮಲ್ಲಿಗೆ ಮತ್ತು ದಾಸವಾಳದಂತಹ ಹೂಗಳನ್ನು ಇಡಲು ಹೇಳಲಾಗುತ್ತದೆ.


ಈ ವಾಸ್ತು ಸಲಹೆಗಳು ಪ್ರೀತಿಯನ್ನು ಸಹ ಆಕರ್ಷಿಸುವುದರಿಂದ ನಿಮ್ಮ ಜೀವನದಲ್ಲಿ ಹೊಸ ಪ್ರೀತಿ ಸಿಗಬಹುದು ಇಲ್ಲಾ ಇದ್ದ ಸಂಬಂಧಗಳೇ ಸರಿ ಹೋಗಲೂಬಹುದು.

Published by:Sandhya M
First published: