ಈಗಂತೂ ಒಂದು ಪುಟ್ಟ ಮನೆಯನ್ನು(home) ಕಟ್ಟಿಸಿಕೊಂಡರೂ, ಅದಕ್ಕೆ ವಾಸ್ತು ನೋಡಿ, ಅದರ ಮುಖ್ಯವಾದ ಬಾಗಿಲು ಒಳ್ಳೆಯ ದಿಕ್ಕಿನಲ್ಲಿ ಇದೆಯೇ ಮತ್ತು ಮನೆಯಲ್ಲಿರುವ ಕೋಣೆಗಳೆಲ್ಲವೂ (Room) ಸರಿಯಾದ ದಿಕ್ಕಿನಲ್ಲಿವೆಯೇ ಅಂತ ವಾಸ್ತು ತಜ್ಞರನ್ನು ಕೆಳುವುದು ಅಭ್ಯಾಸವಾಗಿದೆ. ಹೌದು, ಮನೆಯ ಜೊತೆಯಲ್ಲಿ ಮನೆಯಲ್ಲಿ ಶಾಂತಿ, ನೆಮ್ಮದಿ, ಸಂಪತ್ತು ಮತ್ತು ಮನೆಯಲ್ಲಿ ವಾಸವಿರುವವರ ಆರೋಗ್ಯ ಚೆನ್ನಾಗಿರುವುದು ಬೇಡವೇ? ಅದಕ್ಕೆ ಜನರು ಈಗ ವಾಸ್ತುಶಾಸ್ತ್ರವನ್ನು (Vastu) ಹೆಚ್ಚಾಗಿ ನಂಬುತ್ತಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಎಷ್ಟೋ ದುಡ್ಡು ಖರ್ಚು ಮಾಡಿ ಒಂದು ಸುಂದರವಾದ ಮನೆಯನ್ನು ಕಟ್ಟಿಸಿಕೊಂಡಿರುತ್ತೇವೆ, ಅದಕ್ಕೆ ವಾಸ್ತು ಸಹ ಸರಿಯಾಗಿ ಇದ್ದರೆ ಮನೆಯಲ್ಲಿ ಶಾಂತಿ ಮತ್ತು ಸಂಪತ್ತು ನೆಲೆಸುವುದು ಎಂಬ ನಂಬಿಕೆ ಮೇಲೆ ವಾಸ್ತು ನೋಡುವುದರಲ್ಲಿ ತಪ್ಪೇನೂ ಇಲ್ಲ ಅಂತಾರೆ ಅನೇಕರು.
ವಾಸ್ತುಶಾಸ್ತ್ರ ಎಂದರೆ ವಾಸ್ತುಶಿಲ್ಪದ ವಿಜ್ಞಾನ ಎಂದರ್ಥ
ಈ ವಾಸ್ತುಶಾಸ್ತ್ರವು ವಿಜ್ಞಾನ, ಕಲೆ, ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯವನ್ನು ಒಂದುಗೂಡಿಸುತ್ತದೆ. ಸಂಸ್ಕೃತದಲ್ಲಿ ವಾಸ್ತುಶಾಸ್ತ್ರ ಎಂದರೆ ವಾಸ್ತುಶಿಲ್ಪದ ವಿಜ್ಞಾನ ಎಂದರ್ಥ. ವಾಸ್ತುಶಾಸ್ತ್ರವು ನಮ್ಮ ಮನೆಗಳು ಮತ್ತು ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳನ್ನು ದೂರವಿರಿಸುತ್ತದೆ ಎಂದು ನಂಬಲಾಗಿದೆ.
ಬ್ರಹ್ಮಾಂಡವು ಭೂಮಿ, ಗಾಳಿ, ಬಾಹ್ಯಾಕಾಶ, ಬೆಂಕಿ ಮತ್ತು ನೀರು ಎಂಬ ಐದು ಅಂಶಗಳನ್ನು ಒಳಗೊಂಡಿದೆ ಎಂದು ವಾಸ್ತು ಹೇಳುತ್ತದೆ. ಬ್ರಹ್ಮಾಂಡದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಈ ಅಂಶಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ.
ನಿಮ್ಮ ಮನೆ ಮತ್ತು ಜೀವನವನ್ನು ಸಕಾರಾತ್ಮಕತೆ ಮತ್ತು ಸಂತೋಷದ ವಾಸಸ್ಥಾನವನ್ನಾಗಿ ಮಾಡಲು ಇಲ್ಲಿವೆ ನೋಡಿ 5 ಸಲಹೆಗಳು..
1. ಮುಖ್ಯ ದ್ವಾರ ಈ ದಿಕ್ಕಿನಲ್ಲಿರಲಿ: ವಾಸ್ತು ನಿಯಮಗಳ ಪ್ರಕಾರ ಮನೆಯ ಮುಖ್ಯ ದ್ವಾರವು ಉತ್ತರ, ಪೂರ್ವ ಅಥವಾ ಈಶಾನ್ಯಕ್ಕೆ ಅಭಿಮುಖವಾಗಿರಬೇಕು. ಇದು ಮುಖ್ಯವಾಗಿದೆ, ಏಕೆಂದರೆ ಮನೆಯ ಮುಖ್ಯ ಪ್ರವೇಶದ್ವಾರವು ಎಲ್ಲಾ ಶಕ್ತಿಗಳು ಮನೆಯೊಳಗೆ ಹರಿಯುವ ಮುಖ್ಯ ಮೂಲವಾಗಿದೆ. ಆದ್ದರಿಂದ, ನಾವು ಸರಿಯಾದ ದಿಕ್ಕಿನಲ್ಲಿ ಮುಖ್ಯ ದ್ವಾರವನ್ನು ಹೊಂದಿದ್ದರೆ ನಾವು ಸರಿಯಾದ ರೀತಿಯ ಶಕ್ತಿಗಳನ್ನು ಆಕರ್ಷಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ಶುಕ್ರನ ಸ್ಥಾನ ಪಲ್ಲಟ - ಈ ರಾಶಿಯವರಿಗೆ ಬಂಪರ್, ಹಣೆಬರಹವೇ ಬದಲು
2. ಸಂಪತ್ತು ಗಳಿಸಲು ನಿಮ್ಮ ವಾರ್ಡ್ರೋಬ್ ಹೀಗಿರಲಿ: ನಾವೆಲ್ಲರೂ ಐಷಾರಾಮಿ ಜೀವನವನ್ನು ನಡೆಸಲು ಸಾಕಷ್ಟು ಹಣವನ್ನು ಹೊಂದಲು ಬಯಸುತ್ತೇವೆ. ಆದಾಗ್ಯೂ, ಕೆಲವೊಮ್ಮೆ ನಾವು ಎಷ್ಟೇ ಪ್ರಯತ್ನಿಸಿದರೂ ನಮಗೆ ಆ ಸಂಪತ್ತನ್ನು ಮತ್ತು ಸಮೃದ್ಧಿಯನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಕಷ್ಟಪಟ್ಟು ಕೆಲಸ ಮಾಡುವುದರ ಹೊರತಾಗಿ ಇದಕ್ಕೆ ಸರಳ ಪರಿಹಾರವೆಂದರೆ ನಿಮ್ಮ ವಾರ್ಡ್ರೋಬ್ ಅನ್ನು ಮನೆಯ ದಕ್ಷಿಣ ಅಥವಾ ನೈಋತ್ಯ ದಿಕ್ಕಿನಲ್ಲಿ ಇರಿಸುವುದು. ಅದೇ ಸಮಯದಲ್ಲಿ ವಾರ್ಡ್ರೋಬ್ ನ ಬಾಗಿಲು ಮನೆಯ ಉತ್ತರ ದಿಕ್ಕಿನಲ್ಲಿ ತೆರೆಯುತ್ತದೆ ಎಂದು ಖಚಿತಪಡಿಸಿಕೊಳ್ಳಿ.
3. ಸಂತೋಷವಾಗಿರಲು ಮನೆಯಲ್ಲಿ ಅಕ್ವೇರಿಯಂ ಇರಿಸಿ: ಯಾರಿಗೆ ತಾನೇ ತಾವು ಸಂತೋಷವಾಗಿ ಇರಬಾರದು ಅಂತ ಅನ್ನಿಸುತ್ತದೆ ಹೇಳಿ? ಎಲ್ಲರೂ ಜೀವನದಲ್ಲಿ ಸಂತೋಷವಾಗಿರಬೇಕೆಂದೆ ಬಯಸುತ್ತಾರೆ. ಆದರೆ ಈ ಸಂತೋಷ ಎಂಬುದು ತುಂಬಾನೇ ಕಡಿಮೆ ಜನರಿಗೆ ಸಿಗುತ್ತದೆ ಅಂತ ಹೇಳಬಹುದು. ನಿಮ್ಮ ಮನೆಯಲ್ಲಿ ಅಕ್ವೇರಿಯಂ ಅನ್ನು ಇಡಬೇಕು, ಏಕೆಂದರೆ ಹರಿಯುವ ನೀರು ಮನೆಯೊಳಗೆ ಸಕಾರಾತ್ಮಕ ಶಕ್ತಿಯ ಹರಿವಿಗೆ ಅನುವು ಮಾಡಿಕೊಡುತ್ತದೆ, ಇದು ನಿಮ್ಮ ಸಮೃದ್ಧಿ ಮತ್ತು ಸಂಪತ್ತನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
4. ಉತ್ತಮ ಆರೋಗ್ಯಕ್ಕಾಗಿ ಹೀಗೆ ಮಾಡಿ: ಉತ್ತಮ ಆರೋಗ್ಯ ಈಗ ತುಂಬಾನೇ ಮುಖ್ಯವಾಗಿದೆ ಅಂತ ಹೇಳಬಹುದು. ನಿಮ್ಮ ಜೀವನದಲ್ಲಿ ಕೆಲವು ಮೂಲಭೂತ ಬದಲಾವಣೆಗಳೊಂದಿಗೆ ನೀವು ನಿಮಗಾಗಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಉದಾಹರಣೆಗೆ, ಮಲಗುವಾಗ ನಿಮ್ಮ ತಲೆ ದಕ್ಷಿಣಕ್ಕೆ ಮತ್ತು ನಿಮ್ಮ ಮುಖ ಈಶಾನ್ಯ ದಿಕ್ಕಿನಡೆ ನೋಡುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಎರಡನೆಯದಾಗಿ, ನಿಮ್ಮ ಹಾಸಿಗೆಯ ಮುಂದೆ ಕನ್ನಡಿಗಳನ್ನು ಇಡಬೇಡಿ, ಏಕೆಂದರೆ ಅದು ನಿಮ್ಮ ಶಕ್ತಿಯನ್ನು ಹೊರಹಾಕುತ್ತದೆ ಮತ್ತು ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ: 12 ವರ್ಷದ ನಂತರ ಗುರು-ಶುಕ್ರ ಸಂಯೋಗ, ಈ ರಾಶಿಯವರಿಗೆ ಲಾಟರಿ ಹೊಡೆಯೋದು ಪಕ್ಕಾ
5. ವೃತ್ತಿಯಲ್ಲಿ ಯಶಸ್ಸು ಕಾಣಲು ಕೊಳಲನ್ನು ನೇತುಹಾಕಿ: ವಾಸ್ತು ಪ್ರಕಾರ ನೀವು ಏಳಿಗೆ ಹೊಂದಲು ಮತ್ತು ನಿಮ್ಮ ಜೀವನದಲ್ಲಿ ಪ್ರಗತಿ ಸಾಧಿಸಲು ಬಯಸಿದರೆ ನೀವು ಮನೆಯಲ್ಲಿ ಕೊಳಲನ್ನು ಇಡಬೇಕು, ಅದು ನಿಮ್ಮ ಮನೆಗೆ ಹಣವನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ. ನಿಮ್ಮ ಮನೆಯಲ್ಲಿ ನೀವು ಎರಡು ಕೊಳಲುಗಳನ್ನು ನೇತು ಹಾಕಿದರೆ ಅದು ನಿಮ್ಮ ವೃತ್ತಿಜೀವನದಲ್ಲಿ ನಿಮಗೆ ಸಹಾಯ ಮಾಡುತ್ತದೆ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ