ನಾವು ವಾಸಿಸುವ ಸ್ಥಳದ ವಾಸ್ತುವು(Vastu) ನಮ್ಮ ಜೀವನದ ಮೇಲೆ ಅನೇಕ ರೀತಿಯ ಪರಿಣಾಮಗಳನ್ನು(Effects) ಬೀರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ವಾಸ್ತುಶಾಸ್ತ್ರವನ್ನು(Vastu Shastra) ಅನೇಕ ಜನರು ಬಲವಾಗಿ ನಂಬುತ್ತಾರೆ ಅಂತ ಹೇಳಬಹುದು. ವಾಸ್ತುಶಾಸ್ತ್ರದ ಪ್ರಕಾರ, ನೀವು ಸಕಾರಾತ್ಮಕ(Positive) ಶಕ್ತಿಯನ್ನು ಸೆಳೆಯುವ ಸ್ಥಳವನ್ನು ಸೃಷ್ಟಿಸಬಹುದು(Create) ಮತ್ತು ಇದು ನಿಮ್ಮ ಜೀವನದಲ್ಲಿ ಸ್ಥಿರತೆ ಮತ್ತು ಸಕಾರಾತ್ಮಕತೆಯನ್ನು ಸಕ್ರಿಯಗೊಳಿಸುತ್ತದೆ. ಈ ಧನಾತ್ಮಕ ಶಕ್ತಿಯು(Negative Strength) ಸಂಬಂಧಗಳನ್ನು ಬೆಳೆಸಲು ಮತ್ತು ಹೊಂದಾಣಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ನಾವು ಅನೇಕ ಬಾರಿ ಇದನ್ನು ಅರ್ಥ ಮಾಡಿಕೊಳ್ಳಲು ಹೋಗುವುದಿಲ್ಲ. ನಿಮ್ಮ ಮನೆ ಮತ್ತು ಸುತ್ತಮುತ್ತಲಿನ ಶಕ್ತಿಯು ನಿಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನೀವು ಅನುಸರಿಸುವ ವಾಸ್ತುಶಾಸ್ತ್ರವು ನಿಮ್ಮನ್ನು ಜೀವನದಲ್ಲಿ ಸಂತೋಷವಾಗಿ ಅಥವಾ ದುಃಖದಿಂದ ಇರಿಸುತ್ತದೆ ಅಂತ ಬಲವಾದ ನಂಬಿಕೆಯಿರುವುದು ಸುಳ್ಳಲ್ಲ. ಒಟ್ಟಿನಲ್ಲಿ ಹೇಳುವುದಾದರೆ ನಮ್ಮ ಸ್ಥಳದ ವಾಸ್ತುಶಾಸ್ತ್ರವು ನಮ್ಮ ಜೀವನದಲ್ಲಿ ಅದೃಷ್ಟ ಅಥವಾ ದುರಾದೃಷ್ಟ ಎರಡನ್ನೂ ಸಹ ತರಬಲ್ಲದು ಅಂತ ಹೇಳಬಹುದು.
ನೀವು ನಿಮ್ಮ ಮನೆಯಲ್ಲಿ ವಾಸ್ತುಶಾಸ್ತ್ರವನ್ನು ಸರಿಯಾಗಿ ಅನುಷ್ಠಾನಗೊಳಿಸಿದಾಗ, ಅದು ನಿಮಗೆ ಮತ್ತು ನಿಮ್ಮ ಸಂಬಂಧಕ್ಕೆ ಅಪಾರ ಪ್ರಯೋಜನವನ್ನು ನೀಡುತ್ತದೆ. ವೈವಾಹಿಕ ಸಂಬಂಧಗಳ ವಿಷಯದಲ್ಲೂ ಇದೇ ರೀತಿ ಇರುತ್ತದೆ. ಮನೆ ಅಥವಾ ನಿಮ್ಮ ಸುತ್ತಮುತ್ತಲಿನ ಸ್ಥಳದಲ್ಲಿನ ಶಕ್ತಿಗಳ ಸಮತೋಲನದಿಂದಾಗಿ ಇದು ಸಂಭವಿಸುತ್ತದೆ. ವೈವಾಹಿಕ ಸಾಮರಸ್ಯವನ್ನು ಪುನಃಸ್ಥಾಪಿಸಲು ಸಹಾಯ ಮಾಡುವ ಕೆಲವು ವಾಸ್ತು ಸಲಹೆಗಳು ಇಲ್ಲಿವೆ ನೋಡಿ.
ಇದನ್ನೂ ಓದಿ: Vastu Tips: ಮಕ್ಕಳು ಚೆನ್ನಾಗಿ ಓದೋಕೆ ಮನೆ ಹೀಗಿರಲಿ, ಇಲ್ಲಿದೆ ವಾಸ್ತು ಸಲಹೆ
1. ಈಶಾನ್ಯ ದಿಕ್ಕು ನೀಲಿ ಅಥವಾ ನೇರಳೆ ಬಣ್ಣದೊಂದಿಗೆ ತೆರೆದ ಮತ್ತು ಹಗುರವಾದ ಸ್ಥಳವನ್ನು ಹೊಂದಿರಬೇಕು. ಇದು ಸಂಗಾತಿಗಳಲ್ಲಿ ಆಲೋಚನೆಗಳ ಸ್ಪಷ್ಟತೆಯನ್ನು ತರಲು ಸಹಾಯ ಮಾಡುತ್ತದೆ, ಇದು ಸಂಬಂಧದ ಪ್ರಮುಖ ಅಂಶವಾಗಿದೆ ಅಂತ ಹೇಳಬಹುದು.
2. ಮಕ್ಕಳ ಅಥವಾ ಅತಿಥಿ ಮಲಗುವ ಕೋಣೆಯಲ್ಲಿ ಸಮತೋಲಿತ ಗಾಳಿಯ ಅಂಶವು ಸಂಗಾತಿಗಳ ನಡುವಿನ ಸಮನ್ವಯ ಮತ್ತು ಸಾಮರಸ್ಯವನ್ನು ಸುಧಾರಿಸುತ್ತದೆ. ಸಕಾರಾತ್ಮಕ ಪರಿಣಾಮವನ್ನು ಸೇರಿಸಲು ನೀವು ಈ ಕೋಣೆಗಳಲ್ಲಿ ಬೂದು ಅಥವಾ ಗಾಢ ನೀಲಿ ಛಾಯೆಯನ್ನು ಸಹ ಬಳಸಬಹುದು.
3. ನಿಮ್ಮ ಮಲಗುವ ಕೋಣೆಯಲ್ಲಿ ಲೋಹದ ಮಂಚಗಳನ್ನು ಬಳಸುವುದನ್ನು ತಪ್ಪಿಸಿ. ಏಕೆಂದರೆ ಇದು ನಿಮ್ಮ ನಿದ್ರೆಗೆ ಭಂಗ ತರಬಹುದು ಮತ್ತು ಸಂಗಾತಿಗಳಲ್ಲಿ ಉದ್ವಿಗ್ನತೆಯನ್ನು ಉಂಟು ಮಾಡಬಹುದು.
ನೀವು ಕೇವಲ ಒಂದೇ ಒಂದು ಹಾಸಿಗೆಯಲ್ಲಿ ಮಲಗಬೇಕು. ಒಟ್ಟಿಗೆ ಜೋಡಿಸಲಾದ ಎರಡು ಹಾಸಿಗೆಗಳು ಮತ್ತು ಎರಡು ಹಾಸಿಗೆಗಳನ್ನು ಒಟ್ಟಿಗೆ ಸೇರಿಸುವುದನ್ನು ತಪ್ಪಿಸಿರಿ.
4. ಮಾಸ್ಟರ್ ಬೆಡ್ ರೂಮ್ ನೈಋತ್ಯ ದಿಕ್ಕಿನಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿ. ಇದು ಸಂಗಾತಿಗಳ ನಡುವೆ ಉತ್ತಮ ಕೆಮಿಸ್ಟ್ರಿಯನ್ನು ಹುಟ್ಟುಹಾಕಲು ಸಹಾಯ ಮಾಡುತ್ತದೆ. ಅಲ್ಲದೆ, ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಹೆಚ್ಚಿನ ಸ್ಥಿರತೆಯನ್ನು ಇದು ಒದಗಿಸುತ್ತದೆ.
5. ಮಲಗುವ ಕೋಣೆಯಲ್ಲಿ ಕನ್ನಡಿಗಳನ್ನು ಇಟ್ಟುಕೊಳ್ಳುವುದನ್ನು ತಪ್ಪಿಸಬೇಕು. ವಿಶೇಷವಾಗಿ ಹಾಸಿಗೆಗೆ ನೇರವಾಗಿ ಅಭಿಮುಖವಾಗಿರುವ ಕನ್ನಡಿಯನ್ನು ತಪ್ಪಿಸಬೇಕು. ಇದು ಆರೋಗ್ಯ ಸಮಸ್ಯೆಗಳು, ಮಂಪರು ಮತ್ತು ಶಕ್ತಿಯ ಕೊರತೆಗೆ ಕಾರಣವಾಗಬಹುದು.
6. ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿಯನ್ನು ನೋಡಬೇಡಿ. ಅಲ್ಲದೆ, ದೊಡ್ಡ ಕನ್ನಡಿಗಳು ವೈವಾಹಿಕ ಸಂಬಂಧಕ್ಕೆ ಒತ್ತಡವನ್ನು ಸೇರಿಸಲು ಹೆಚ್ಚಿನ ಅವಕಾಶವನ್ನು ಹೊಂದಿರುವುದರಿಂದ ನಿಮ್ಮ ಮಲಗುವ ಕೋಣೆಯಲ್ಲಿ ಸಣ್ಣ ಕನ್ನಡಿಗಳನ್ನು ಇಡಲು ಪ್ರಯತ್ನಿಸಿ.
ಇದನ್ನೂ ಓದಿ: Money Mantra: ಯಾರೇ ಬಂದ್ರೂ ನಿಮ್ಮ ಖದರ್ ಚೇಂಜ್ ಆಗಲ್ಲ, ಈ 4 ರಾಶಿಯವರಿಂದು ಇದೊಂದು ಸಣ್ಣ ಕೆಲ್ಸ ಮಾಡಿ!
7. ಈಶಾನ್ಯ ಮೂಲೆಯ ಕೋಣೆಯು ಅಸ್ತವ್ಯಸ್ತವಾಗಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಉತ್ತರ ದಿಕ್ಕಿನಲ್ಲಿ ಬಿಳಿ ಹೂವುಗಳು ಮತ್ತು ನೈಋತ್ಯ ದಿಕ್ಕಿನಲ್ಲಿ ಕೆಂಪು ಅಥವಾ ನೇರಳೆ ಗುಲಾಬಿಗಳನ್ನು ಹೊಂದಿರುವ ಒಳಾಂಗಣ ಸಸ್ಯಗಳನ್ನು ಸೇರಿಸಲು ಪ್ರಯತ್ನಿಸಿ. ಇದು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಸಂಬಂಧವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ