Vastu Tips: ನಿಮ್ಮ ಮನೆ ಗೋಡೆ ಗಡಿಯಾರ ಯಾವ ದಿಕ್ಕಿನಲ್ಲಿದೆ? ಗಡಿಯಾರದ ವಿಚಾರದಲ್ಲಿ ಎಂದಿಗೂ ಈ ತಪ್ಪುಗಳು ಆಗದಂತೆ ಎಚ್ಚರ ವಹಿಸಿ

Wall Clock Vastu Tips: ಯಾವ ವಸ್ತು, ಯಾವ ದಿಕ್ಕಿನಲ್ಲಿ ಇಡಬೇಕೆಂಬ ವಾಸ್ತು ಇದೆ. ಆದರೆ ವಾಲ್ ಕ್ಲಾಕ್ ಅಥವಾ ಗೋಡೆ ಗಡಿಯಾರದ ವಾಸ್ತು ಬಗ್ಗೆ ಯಾರೂ ಗಮನ ಹರಿಸುವುದೇ ಇಲ್ಲ. ನಿಮ್ಮ ಮನೆಯ ಗೋಡೆ ಗಡಿಯಾರ ಯಾವ ದಿಕ್ಕಿನಲ್ಲಿದೆ? ಯಾವ ರೀತಿಯ ಗೋಡೆ ಗಡಿಯಾರ ಹಾಕಿದ್ದೀರಾ? ಯಾವ ದಿಕ್ಕಿನಲ್ಲಿ ಹಾಕಿದರೆ ಒಳ್ಳೆಯದು? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    Where to place the Wall Clock: ಸೈಟ್​(Site) ಖರೀದಿಸುವಾಗ ವಾಸ್ತು(Vastu), ಮನೆ ಕಟ್ಟುವಾಗ ವಾಸ್ತು, ಮನೆ ಕಟ್ಟಿದ ಮೇಲೆ ವಾಸ್ತು. ಹೌದು , ಇತ್ತೀಚಿನ ದಿನಗಳಲ್ಲಿ ಎಲ್ಲದರಲ್ಲೂ ವಾಸ್ತು ನೋಡುವ ಸಂಸ್ಕೃತಿ ಹೆಚ್ಚುತ್ತಿದೆ. ಯಾವ ದಿಕ್ಕಿ(Direction)ನಲ್ಲಿ ಅಡುಗೆ ಮನೆ(Kitchen), ಬಾತ್​ರೂಮ್(Bathroom), ಬೆಡ್​ರೂಂ(Bedroom), ಹಾಲ್(Hall)​ ಬರಬೇಕೆಂದು ವಾಸ್ತು ಕೇಳಿಯೇ ಮನೆಕಟ್ಟಲಾಗುತ್ತೆ. ನಮ್ಮಲ್ಲಿ ಹೆಚ್ಚಿನವರು ಮನೆ(House) , ಕಚೇರಿ(Office) ಕಟ್ಟುವಾಗ ವಾಸ್ತುವಿಗೆ ತುಂಬಾ ಪ್ರಾಮುಖ್ಯತೆ ನೀಡುತ್ತಾರೆ. ಎಲ್ಲಾ ವಾಸ್ತು ಪ್ರಕಾರವಾಗಿಯೇ ನಿರ್ಮಿಸುತ್ತಾರೆ. ಆದರೆ ಮನೆ , ಕಚೇರಿ ಕಟ್ಟಿದ ಮೇಲೆ ಅದರೊಳಗೆ ಇಡುವ ವಸ್ತುಗಳು ಎಲ್ಲಿ ಇಡಬೇಕೆಂಬ ವಾಸ್ತು ಇದೆ. ಹೌದು, ಯಾವ ವಸ್ತು, ಯಾವ ದಿಕ್ಕಿನಲ್ಲಿ ಇಡಬೇಕೆಂಬ ವಾಸ್ತು ಇದೆ. ಆದರೆ ವಾಲ್ ಕ್ಲಾಕ್ ಅಥವಾ ಗೋಡೆ ಗಡಿಯಾರ(Wall Clock)ದ ವಾಸ್ತು ಬಗ್ಗೆ ಯಾರೂ ಗಮನ ಹರಿಸುವುದೇ ಇಲ್ಲ. ನಿಮ್ಮ ಮನೆಯ ಗೋಡೆ ಗಡಿಯಾರ ಯಾವ ದಿಕ್ಕಿನಲ್ಲಿದೆ? ಯಾವ ರೀತಿಯ ಗೋಡೆ ಗಡಿಯಾರ ಹಾಕಿದ್ದೀರಾ? ಯಾವ ದಿಕ್ಕಿನಲ್ಲಿ ಹಾಕಿದರೆ ಒಳ್ಳೆಯದು? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

    ತಪ್ಪಾದ ದಿಕ್ಕಿನಲ್ಲಿ ಗಡಿಯಾರ ಹಾಕಬೇಡಿ

    ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಅಥವಾ ಕಚೇರಿಯಲ್ಲಿ ತಪ್ಪಾದ ಸ್ಥಳ ಅಥವಾ ತಪ್ಪಾದ ದಿಕ್ಕಿನಲ್ಲಿಗೋಡೆ ಗಡಿಯಾರಗಳನ್ನ ಹಾಕಬಾರದು. ಇದರಿಂದ ಗಡಿಯಾರವು ದುಷ್ಟಪರಿಣಾಮಗಳನ್ನ ತರುತ್ತಂತೆ. ಸರಿಯಾದ ಸ್ಥಳ ಹಾಗೂ ಸರಿಯಾದ ದಿಕ್ಕಿನಲ್ಲಿ ಗೋಡೆ ಗಡಿಯಾರ ಹಾಕಿದರೆ ಮಾತ್ರ ಸಮೃದ್ದಿಯನ್ನು ಆಕರ್ಷಿಸುತ್ತದೆ. ಹಾಗಿದ್ರೆ ಗೋಡೆ ಗಡಿಯಾರ ಸಂಬಂಧಿಸಿದ ವಾಸ್ತು ಸಲಹೆಗಳು ಯಾವುವು? ಯಾವುದನ್ನ ಮಾಡಬೇಕು? ಯಾವುದೆಲ್ಲ ಮಾಡಬಾರದು? ನಿಜಕ್ಕೂ ಗೋಡೆ ಗಡಿಯಾರ ಹಾಕುವುದರಲ್ಲೂ ವಾಸ್ತು ಇದೆಯಾ? ವಿವರ ಇಲ್ಲಿದೆ.

    ಈ ವಾಸ್ತು ಸಲಹೆಗಳನ್ನು ಅನುಸರಿಸಿ

    - ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಗಡಿಯಾರಗಳನ್ನು ಇರಿಸಿ
    - ಉತ್ತರ ದಿಕ್ಕಿನಲ್ಲಿ ಗಡಿಯಾರ ಹಾಕುವುದು ಸಂಪತ್ತನ್ನು ಆಕರ್ಷಿಸುತ್ತದೆ.
    - ಉತ್ತರ ದಿಕ್ಕಿನಲ್ಲಿ ಗಡಿಯಾರ ಹಾಕಲು ಸಾಧ್ಯವಾಗದಿದ್ದಾಗ ಪಶ್ವಿಮ ದಿಕ್ಕಿನಲ್ಲಿ ನೇತುಹಾಕಿ
    - ಲೋಲಕ ಗಡಿಯಾರಗಳನ್ನು ಪೂರ್ವ ಭಾಗದಲ್ಲಿ ಇರಿಸಿ
    - ಬೆಡ್​ ರೂಂನಲ್ಲಿ ಗಡಿಯಾರ ಇಡುವಾಗ, ಎದ್ದ ಕೂಡಲೇ ಗಡಿಯಾರ ಕಾಣಿಸುವಂತೆ ಇರಿಸಿ

    ಇದನ್ನೂ ಓದಿ: Vaastu Tips : ಮನೆಯೊಳಗೆ ಪೊರಕೆಯನ್ನು ಹೀಗೆ ಇಟ್ಟರೆ ಹಣ ನಷ್ಟವಾಗುತ್ತದೆ ! ಇದು ವಾಸ್ತು ಪ್ರಕಾರ !

    - ಯಾವಾಗಲೂ ಮನೆಯೊಳಗೆ ಮರೆಯದೇ ಗಡಿಯಾರಗಳನ್ನು ಇರಿಸಿ
    - ಕೆಲಸ ಮಾಡದ ಗಡಿಯಾರಗಳನ್ನು ಸರಿ ಪಡಿಸಿ ಅಥವಾ ಬದಲಾಯಿಸಿ
    - ಎಲ್ಲಾ ಗಡಿಯಾರಗಳಲ್ಲಿ ಸರಿಯಾದ ಸಮಯವನ್ನೇ ಸೆಟ್​ ಮಾಡಿ
    - ಸರಿಯಾದ ಸಮಯಕ್ಕಿಂತ 2 ನಿಮಿಷ ಮುಂಚಿತವಾಗಿರಬೇಕು
    - ಎಂದಿಗೂ ಗಡಿಯಾರಗಳಲ್ಲಿ ಕಡಿಮೆ ಸಮಯ ಸೆಟ್​ ಮಾಡಬೇಡಿ
    - ಎಲ್ಲಾ ಗೋಡೆಯ ಗಡಿಯಾರಗಳನ್ನು ಧೂಳು ಹಿಡಿಯದಂತೆ ಆಗ್ಗಾಗೆ ಸ್ವಚ್ಛಗೊಳಿಸಬೇಕು.

    ಇದನ್ನೂ ಓದಿ: Vaastu Tips: ಮಲಗುವಾಗ ನಿಮ್ಮ ತಲೆಯನ್ನು ಯಾವ ದಿಕ್ಕಿಗೆ ಇರಿಸಿದರೆ ಆರೋಗ್ಯ ಮತ್ತು ಸಂಪತ್ತು ಒಲಿಯುತ್ತದೆ?

    ಎಂದಿಗೂ ಈ ತಪ್ಪುಗಳನ್ನ ಮಾಡಬೇಡಿ

    - ದಕ್ಷಿಣ ದಿಕ್ಕಿನ ಗೋಡೆಯಲ್ಲಿ ಗಡಿಯಾರಗಳನ್ನು ಹಾಕಬೇಡಿ
    - ಯಾವುದೇ ಬಾಗಿಲಿನ ಮೇಲೆ ಗಡಿಯಾರ ಹಾಕಬೇಡಿ
    - ಮಲಗುವ ಕೋಣೆ ಬಾಗಿಲಿನ ಎದುರು ಗಡಿಯಾರ ಕಾಣಿಸಿಬಾರದು
    - ಮನೆಯಿಂದ ಆಚೆ ಗೋಡೆ ಗಡಿಯಾರಗಳನ್ನ ಹಾಕಬೇಡಿ
    - ನಿಂತ, ಮುರಿದ ಹಾಗೂ ಹಾಳಾದ ಗಡಿಯಾರಗಳನ್ನು ಇಡಬೇಡಿ
    - ಋಣಾತ್ಮಕ ಶಕ್ತಿ ಚಿತ್ರಗಳಿರುವ ಗಡಿಯಾರಗಳನ್ನ ತರಲೇಬೇಡಿ
    - ಗಾಜಿನ ಗಡಿಯಾರವಾಗಿದ್ದರೆ ಗಾಜು ಒಡೆಯದಂತೆ ಜೋಪಾನ ಮಾಡಿ

    (ವರದಿ - ವಾಸುದೇವ್​.ಎಂ)
    Published by:Soumya KN
    First published: