ಆರ್ಥಿಕ ಭದ್ರತೆ (Financial Security)ಎಂಬುದು ಎಲ್ಲರ ಕನಸು. ಆರ್ಥಿಕವಾಗಿ ಸಬಲರಾಗಲು ಜನರು ತಮ್ಮದೇ ಹಾದಿಯಲ್ಲಿ ಶ್ರಮವಹಿಸುತ್ತಿರುತ್ತಾರೆ. ಆದರೆ ಕೆಲವರು ಎಷ್ಟೇ ಕಷ್ಟಪಟ್ಟರೂ ದುಡ್ಡು ಕೈ ಹತ್ತುವುದಿಲ್ಲ. ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಲೇ ಇರುತ್ತಾರೆ. ಇದಕ್ಕೆಲ್ಲಾ ವಾಸ್ತು ದೋಷ (Vastu Dosha) ಎಂದು ಕೆಲವರು ನಂಬುತ್ತಾರೆ. ಹಾಗಾಗಿ ಮನೆಯಲ್ಲಿ ವಾಸ್ತು ದೋಷ ಇದ್ದರೆ ಮೊದಲು ಸರಿಪಡಿಸಿಕೊಳ್ಳಬೇಕು ಎಂದು ವಾಸ್ತು ಶಾಸ್ತ್ರಜ್ಞರು ಹೇಳುತ್ತಾರೆ. ವಾಸ್ತು ಸರಿಯಾಗಿದ್ದರೆ ಮನೆಯಲ್ಲಿ ಎಲ್ಲವೂ ಉತ್ತಮವಾಗಿರುತ್ತದೆ ಎಂದು ಕೂಡ ಸಲಹೆ ನೀಡುತ್ತಾರೆ. ನಮ್ಮ ಮತ್ತು ಕುಟುಂಬದ ಆರ್ಥಿಕವಾಗಿ ಬಲವಾಗಿರಲು ಹಣ ಎಂಬುದು ಮುಖ್ಯವಾಗುತ್ತದೆ. ನಾವು ಮಾಡುವ ಯೋಜನೆಗಳು, ಉಳಿತಾಯಗಳು, ಹೂಡಿಕೆಗಳು ಕೇವಲ ಬದುಕುವುದಕ್ಕಲ್ಲ. ಭವಿಷ್ಯದ ಸುಭದ್ರತೆಗಾಗಿ.
ಹಾಗಾಗಿ ಹಣದ ವಿಚಾರದಲ್ಲಿ ಸಕಲ ಐಶ್ವರ್ಯ, ಸಂಪತ್ತು ಪ್ರಾಪ್ತಿಯಾಗಲೆಂದು ಭಗವಂತನಲ್ಲಿ ಪ್ರಾರ್ಥಿಸಿಕೊಳ್ಳಲಾಗುತ್ತದೆ. ಆದರೆ ಕೆಲವೊಮ್ಮೆ ನಮ್ಮ ಪರಿಶ್ರಮ ನಾವು ಅಂದುಕೊಂಡಂತೆ ಬದುಕನ್ನು ನಡೆಸಲು ಸಾಕಾಗುವುದಿಲ್ಲ. ಇದಕ್ಕೆಲ್ಲಾ ಮುಖ್ಯ ಕಾರಣ ವಾಸ್ತು ತೊಂದರೆ. ಹಾಗಾಗಿ ಕೆಲವು ವಸ್ತುಗಳು ಮನೆಯಲ್ಲಿ ಇರಬೇಕು ಎಂದು ವಾಸ್ತು ಶಾಸ್ತ್ರಜ್ಞರು ಹೇಳುತ್ತಾರೆ.
ವಾಸ್ತು ಶಾಸ್ತ್ರವು ಯಾವ ವಸ್ತುಗಳು ಮನೆಯಲ್ಲಿದ್ದರೆ ಒಳಿತು ಎಂಬುದನ್ನು ವಿವರಿಸುತ್ತದೆ. ಇದರಿಂದ ಆರ್ಥಿಕ ಸಬಲತೆ ಸಿಗುತ್ತದೆ. ಈ ಕೆಳಗಿನ ಕೆಲವು ವಸ್ತುಗಳನ್ನು ಮನೆಯಲ್ಲಿ ಇರಿಸಿದರೆ ಯಾವುದೇ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ ಎಂದು ವಾಸ್ತು ಶಾಸ್ತ್ರಜ್ಞರು ಹೇಳುತ್ತಾರೆ. ಹಾಗಾದರೆ ಆ ವಸ್ತುಗಳು ಯಾವುವು ಎಂಬುದನ್ನು ತಿಳಿಯೋಣ.
ಅಡಕೆ
ಅಡಕೆಯು ಯಾವುದೇ ಶುಭ ಸಮಾರಂಭಗಳಲ್ಲಿ ಅಡಕೆಗೆ ಪ್ರಾಶಸ್ತ್ಯದ ಸ್ಥಾನವಿದೆ. ಇದನ್ನು ಕಮಾನುಗಳಲ್ಲಿ ಇರಿಸಿದರೆ ಆರ್ಥಿಕ ತೊಂದರೆ ಕಡಿಮೆಯಾಗುತ್ತದೆ. ಇದರಿಂದ ಮನೆಯಲ್ಲಿ ಹಣದ ಕೊರತೆ ಹಾಗೂ ಧಾನ್ಯಗಳ ಕೊರತೆ ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ.
ಏಳು ನಾಣ್ಯಗಳಿರಲಿ
ಆರ್ಥಿಕ ಸಬಲತೆಯಿಲ್ಲದೇ ಬಳಲುತ್ತಿರುವವರು ಏಳು ನಾಣ್ಯಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಶುಕ್ರವಾರ ಮನೆಯ ಕಮಾನಿನ ಮೇಲೆ ಇರಿಸಬೇಕು. ಈ ರೀತಿ ಮಾಡುವುದರಿಂದ ಆರ್ಥಿಕ ಸಂಕಷ್ಟ ಕಡಿಮೆಯಾಗುತ್ತದೆ.
ಇದನ್ನೂ ಓದಿ: ಮುತ್ತು ಕೊಡುವ ವಿಷಯದಲ್ಲಿ ಈ ರಾಶಿಯವರೇ ಮೇಲುಗೈ! ಬೆಸ್ಟ್ ಕಿಸ್ಸರ್ ಇವರೇ
ಇದರಿಂದ ದೇವಿ ಲಕ್ಷ್ಮೀಯಿಂದ ಆಶೀರ್ವಾದ ದೊರೆತು ಅದೃಷ್ಟ ಖುಲಾಯಿಸುತ್ತದೆ. ಇದರಿಂದ ಹಣ ಶಾಶ್ವತವಾಗಿ ಮನೆಯಲ್ಲಿ ಇರುತ್ತದೆ ಎಂದು ಧರ್ಮಶಾಸ್ತ್ರಜ್ಞರು ಹೇಳುತ್ತಾರೆ.
ತುಳಸಿ ಎಲೆಗಳು
ಎಲ್ಲರ ಮನೆಯ ಮುಂದೆ ತುಳಸಿ ಕಟ್ಟೆ ಇದ್ದೇ ಇರುತ್ತದೆ. ಇದನ್ನು ಮುಂಜಾನೆ ಎಲ್ಲರೂ ಪೂಜಿಸುತ್ತಾರೆ. ದೇವತೆ ನೆಲೆಸಿರುವ ಈ ಗಿಡವು ಸರ್ವರೋಗ ನಿವಾರಕವೂ ಹೌದು.
ಆದರೆ ಇದೇ ತುಳಸಿ ಮನೆಯ ಆರ್ಥಿಕ ಸಬಲತೆಗೆ ಮುಖ್ಯ ಎಂಬುದನ್ನು ನಂಬಲೇ ಬೇಕು. ಹೌದು ತುಳಸಿ ಎಲೆಗಳನ್ನು ದೇವರಾದ ವಿಷ್ಣು ಮತ್ತು ದೇವತೆಯಾದ ಲಕ್ಷ್ಮೀಗೆ ಹೋಲಿಸಲಾಗುತ್ತದೆ. ತುಳಸಿ ಎಲೆಗಳನ್ನು ಕಮಾನಿನ ಮೇಲೆ ಇರಿಸಿದರೆ ಲಕ್ಷ್ಮೀಯು ಮನೆಯಲ್ಲಿ ನೆಲೆಸಿ ಬೊಕ್ಕಸ ತುಂಬಿರುತ್ತದೆ ಎಂದು ವಾಸ್ತು ಶಾಸ್ತ್ರಜ್ಞರು ಹೇಳುತ್ತಾರೆ.
ಮನೆಯಲ್ಲಿ ಕುಬೇರನ ವಿಗ್ರಹವಿರಲಿ
ಕುಬೇರ ಸಮೃದ್ಧಿಯ ಪ್ರತೀಕ. ಹಾಗಾಗಿ ಮನೆಯಲ್ಲಿ ಕುಬೇರನ ಮೂಲೆಯಲ್ಲಿಯೇ ಹಣ, ಒಡವೆಗಳನ್ನು ಇರಿಸಲಾಗುತ್ತದೆ. ಯಾರ ಮನೆಯಲ್ಲಿ ಹಣ ನಿಲ್ಲುತ್ತಿಲ್ಲವೋ, ಸುಖಾ ಸುಮ್ಮನೆ ಪೋಲಾಗಿ ಆರ್ಥಿಕವಾಗಿ ಗಟ್ಟಿಯಾಗಲು ಸಾಧ್ಯವಾಗುತ್ತಿಲ್ಲವೋ ಅಂತಹವರು ಮನೆಯಲ್ಲಿ ಕುಬೇರನ ಮೂರ್ತಿಯನ್ನು ಇರಿಸಿದರೆ ಸಂಪತ್ತು ಮತ್ತು ಸಮೃದ್ಧಿ ತುಂಬಿ ತುಳುಕುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿರುವವರ ಭವಿಷ್ಯ ಉತ್ತಮಗೊಳ್ಳುವುದಲ್ಲದೇ ಮನೆಯಲ್ಲಿ ಹಣದ ಕೊರತೆ ಎದುರಾಗುವುದಿಲ್ಲ.
ಅರಿಶಿಣ
ಸಾಮಾನ್ಯವಾಗಿ ಅರಿಶಿಣ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಔಷಧಿ ಗುಣಗಳನ್ನು ಹೊಂದಿರುವ ಇದು ಪೂಜೆ ಪುನಸ್ಕಾರದಲ್ಲೂಇದಕ್ಕೆ ಪ್ರಮುಖ ಸ್ಥಾನ.
ಅಂದರೆ ಪೂಜೆಯ ಅವಿಭಾಜ್ಯ ಅಂಗ ಎಂದೇ ಹೇಳಬಹುದು. ಹಾಗಾಗಿ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ಲಕ್ಷ್ಮೀ ನೆಲೆಸಬೇಕೆಂದರೆ ಕಮಾನಿನ ಮೇಲೆ ಒಂದು ಉಂಡೆ ಅರಿಶಿಣವನ್ನು ಒಂದು ಬಟ್ಟೆಯಲ್ಲಿ ಇರಿಸಲು ಮರೆಯಬೇಡಿ. ಹೀಗೆ ಮಾಡುವುದರಿಂದ ಲಕ್ಷ್ಮೀ ಮನೆಯಲ್ಲಿ ಸದಾ ನೆಲೆಸುತ್ತಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ