ಮನೆಯೆಂದರೆ ಅಲ್ಲಿ ಸಂತೋಷ – ಉಲ್ಲಾಸದ ವಾತಾವರಣ ಇರುವುದು ಮುಖ್ಯ. ಆದರೆ ಕೆಲವೊಮ್ಮೆ ಇದಕ್ಕೆ ಬದಲಾಗಿ ಮನೆಯಲ್ಲಿ ಕಿರಿಕಿರಿಯೇ ಹೆಚ್ಚಾಗುತ್ತದೆ. ಕೆಲವೊಮ್ಮೆ ಮನೆಯ ಸದಸ್ಯರು ನಿರಂತರವಾಗಿ ಅಹಿತಕರ ಭಾವನೆಯನ್ನು ಅನುಭವಿಸುತ್ತಾರೆ. ಜೊತೆಗೆ ಆಲಸ್ಯ, ದಣಿವು ಅಥವಾ ಖಿನ್ನತೆಗೆ ಒಳಗಾಗುತ್ತಾರೆ. ಇದಕ್ಕೆ ಕಾರಣ ನಿಮ್ಮ ಮನೆಯಲ್ಲಿರುವ ಋಣಾತ್ಮಕ ಶಕ್ತಿಯಾಗಿರಬಹುದು. ಋಣಾತ್ಮಕ ಶಕ್ತಿಯು ಬೇರೆ ಬೇರೆ ರೂಪದಲ್ಲಿರಬಹುದು. ಇವುಗಳು ನಕಾರಾತ್ಮಕ ಆಲೋಚನೆಗಳು, ಕಂಪನಗಳು ಅಥವಾ ಭಾವನೆಗಳ ರೂಪದಲ್ಲಿರಬಹುದು. ಮನೆಯ ಸದಸ್ಯರ ಮಧ್ಯೆ ನಿರಂತರ ಜಗಳ, ವಾದ, ಮಾನಸಿಕ ಆತಂಕ, ಪ್ಯಾನಿಕ್ ಅಟ್ಯಾಕ್, ದುಃಖಗಳಿಗೆ ಕಾರಣವಾಗಬಹುದು.
ಹಾಗಾಗಿ ನೀವು ಶಾಂತಿಯುತ, ಒತ್ತಡ-ಮುಕ್ತ ಜೀವನವನ್ನು ನಡೆಸಲು ಈ ನಕಾರಾತ್ಮಕ ಶಕ್ತಿಯ ಕಾರಣವನ್ನು ತಿಳಿದುಕೊಳ್ಳುವುದು ಹಾಗೂ ಅದನ್ನು ತೊಡೆದುಹಾಕುವುದು ಬಹಳ ಮುಖ್ಯ. ಹಾಗಾಗಿದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಹಲವಾರು ಅಂಶಗಳಿರುತ್ತವೆ. ಅವುಗಳಲ್ಲಿ ಮುಖ್ಯವಾದವುಗಳು ಈ ಕೆಳಗಿನಂತಿವೆ.
ಮನೆಯಲ್ಲಿ ನಕಾರಾತ್ಮಕ ಶಕ್ತಿ:
*ಅಹಿತಕರ ಹಿಂದಿನ ಅನುಭವಗಳು ಮತ್ತು ಘಟನೆಗಳು
*ಬಗೆಹರಿಯದ ಸಂಘರ್ಷಗಳು
*ಅಸ್ತವ್ಯಸ್ತವಾದ ವಾಸಸ್ಥಳ
*ಶಕ್ತಿಯ ಹರಿವಿನಲ್ಲಿ ಅಸಮತೋಲನ
ಇದನ್ನೂ ಓದಿ: Puja Vidhi: ದೇವರಿಗೆ ಯಾವ ದೀಪ ಹಚ್ಚಿದ್ರೆ ಒಳ್ಳೆಯದು? ಇಲ್ಲಿದೆ ನೋಡಿ ಗೊಂದಲಕ್ಕೆ ಪರಿಹಾರ
ಹಾಗಿದ್ದರೆ ಇವುಗಳನ್ನು ಹೇಗೆ ಸರಿಪಡಿಸಿಕೊಳ್ಳುವುದು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಆಕಲ್ಟ್ ಸೈನ್ಸ್‌ನ ಟ್ಯಾರೋ ಕಾರ್ಡ್ ರೀಡರ್ ಆರತಿ ಪ್ರಭು ಅವರು ಈ ಬಗ್ಗೆ ಕೆಲವಷ್ಟು ಸಲಹೆಗಳನ್ನು ನೀಡುತ್ತಾರೆ.
ಅವರು ಹೇಳುವಂಥ ಕೆಲವು ತಂತ್ರಗಳನ್ನು ಅನುಸರಿಸುವುದು ಮತ್ತು ಜೀವನಶೈಲಿಯ ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನಾವು ನಮ್ಮ ಸುತ್ತಲಿನ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಬಹುದು. ಹಾಗಿದ್ರೆ ಅವುಗಳು ಯಾವವು ಅನ್ನೋದನ್ನು ತಿಳಿಯೋಣ.
ನಕಾರಾತ್ಮಕ ಶಕ್ತಿ ಕಡಿಮೆ ಮಾಡಲು ಹೀಗೆ ಮಾಡಿ
1. ಮನೆಯನ್ನು ಅಚ್ಚುಕಟ್ಟಾಗಿಡಿ: ಅಸ್ತವ್ಯಸ್ತವಾಗಿರುವುದು ನಿಮ್ಮ ನಿದ್ರೆಗೆ ಭಂಗವನ್ನುಂಟು ಮಾಡುತ್ತದೆ. ಅಲ್ಲದೇ ಅದು ನಿಮಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ.
ನಿಮ್ಮ ಸುತ್ತಲೂ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಆದ್ದರಿಂದ ನಿಮ್ಮ ಸುತ್ತಲಿನ ಎಲ್ಲಾ ಅನಗತ್ಯ ವಸ್ತುಗಳನ್ನು ತೆರವುಗೊಳಿಸಿ. ಮನೆಯನ್ನು ಅಚ್ಚುಕಟ್ಟಾಗಿಡಿ. ಇದು ನಿಮ್ಮ ಮನೆಗೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.
2. ಧನಾತ್ಮಕ ಸಸ್ಯಗಳು: ಮನೆಯಲ್ಲಿ ಧನಾತ್ಮಕತೆಯನ್ನು ತರಲು ನೀವು ಸ್ನೇಕ್ ಪ್ಲಾಂಟ್, ಜೇಡ್, ತುಳಸಿ, ಮನಿ ಪ್ಲಾಂಟ್, ಪೀಸ್ ಲಿಲಿ, ಲಕ್ಕಿ ಬಿದಿರು, ಅಲೋವೆರಾ ಮುಂತಾದ ಸಸ್ಯಗಳನ್ನು ಬೆಳೆಸಬಹುದು.
3. ಹೀಲಿಂಗ್ ಕ್ರಿಸ್ಟಲ್‌ಗಳು: ಧನಾತ್ಮಕತೆ, ಆರೋಗ್ಯ, ಸಂಪತ್ತು, ಸಮೃದ್ಧಿ, ಅದೃಷ್ಟ, ಪ್ರೀತಿ, ಆಧ್ಯಾತ್ಮಿಕತೆ ಹೀಗೆ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಸಮೃದ್ಧಿಯನ್ನು ಪಡೆಯಲು ಹೀಲಿಂಗ್ ಕ್ರಿಸ್ಟಲ್‌ಗಳನ್ನು ನಿಮ್ಮ ಮನೆಯಲ್ಲಿ ಇರಿಸಬಹುದು.
ಅಮೆಥಿಸ್ಟ್, ಬ್ಲ್ಯಾಕ್ ಟೂರ್‌ಮ್ಯಾಲಿನ್, ಟೈಗರ್ಸ್ ಐ, ಸಿಟ್ರಿನ್, ಪೈರೈಟ್, ಕ್ಲಿಯರ್ ಸ್ಫಟಿಕ ಶಿಲೆ, ಅಂಬರ್, ಮೂನ್‌ಸ್ಟೋನ್ ಮುಂತಾದ ಹರಳುಗಳನ್ನು ನೀವು ಮನೆಯಲ್ಲಿರಿಸಬಹುದು. ಆದರೆ ಈ ಹರಳುಗಳ ಲಾಭವನ್ನು ಪಡೆಯಲು ನೀವು ಅವುಗಳನ್ನು ನಂಬಬೇಕು.
4. ಸಾಲ್ಟ್ ವಾಟರ್ ಥೆರಪಿ: ನಿಮ್ಮ ಮನೆಯ ಎಲ್ಲಾ ಮೂಲೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಉಪ್ಪನ್ನು ಇಡುವುದು ಅಥವಾ ಉಪ್ಪುನೀರಿನಿಂದ ನಿಮ್ಮ ಮನೆಯನ್ನು ಸ್ವಚ್ಛಗೊಳಿಸಲು ಧನಾತ್ಮಕ ಶಕ್ತಿಯ ಹರಿವಿಗೆ ಸಹಾಯ ಮಾಡುತ್ತದೆ.
ಒಟ್ಟಾರೆ, ಮನೆಯು ಧನಾತ್ಮಕ ಶಕ್ತಿಯಿಂದ ಕೂಡಿದ್ದರೆ ಸುಖ - ಶಾಂತಿ - ನೆಮ್ಮದಿ ನೆಲೆಸುತ್ತದೆ. ಆದರೆ ಈ ವಿಧಾನಗಳನ್ನು ನೀವು ಧನಾತ್ಮಕ ಭಾವನೆಯಿಂದಲೇ ಮಾಡಬೇಕು.
ನೀವು ಜೀವನದಲ್ಲಿ ಕೃತಜ್ಞತೆಯನ್ನು ಅಭ್ಯಾಸ ಮಾಡಿ, ದಯೆ ಮತ್ತು ಸಹಾನುಭೂತಿಯನ್ನು ಅಳವಡಿಸಿಕೊಳ್ಳಿ. ಅದು ನಿಮ್ಮೊಳಗೆ ಸಂತೋಷವನ್ನು ತರುತ್ತದೆ. ನಿಮ್ಮ ಆಲೋಚನೆ ಪ್ರಕ್ರಿಯೆಯನ್ನು ಬದಲಾಯಿಸುತ್ತದೆ.
ನಿಮ್ಮ ದೈನಂದಿನ ಜೀವನದಲ್ಲಿ ಹೆಚ್ಚು ಹೆಚ್ಚು ಸಕಾರಾತ್ಮಕತೆಯನ್ನು ತರುತ್ತದೆ. ಈ ಸಕಾರಾತ್ಮಕತೆಯು ನಿಮ್ಮ ಬದುಕಿನಲ್ಲಿ ಸಂತೋಷವನ್ನು ಉಂಟುಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ