• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Astro Tips: ಮನೆಯ ಮುಖ್ಯ ಬಾಗಿಲ ಮೇಲೆ ಈ 4 ಚಿಹ್ನೆಗಳನ್ನು ಹಾಕಿದ್ರೆ ಸಾಕು, ದುಡ್ಡು ತುಂಬಿ ತುಳುಕಾಡುತ್ತದೆ!

Astro Tips: ಮನೆಯ ಮುಖ್ಯ ಬಾಗಿಲ ಮೇಲೆ ಈ 4 ಚಿಹ್ನೆಗಳನ್ನು ಹಾಕಿದ್ರೆ ಸಾಕು, ದುಡ್ಡು ತುಂಬಿ ತುಳುಕಾಡುತ್ತದೆ!

ವಾಸ್ತು ಸಲಹೆಗಳು

ವಾಸ್ತು ಸಲಹೆಗಳು

ವಾಸ್ತು ಶಾಸ್ತ್ರದ ಪ್ರಕಾರ, ಬಾಗಿಲುಗಳು ಈ ದಿಕ್ಕಿನಲ್ಲಿ ಮುಖ ಮಾಡಿರಬೇಕು ಅಂತ ಸಹ ಇದೆ. ಭಾರತದಲ್ಲಿ, ಮನೆಯ ಮುಖ್ಯ ದ್ವಾರದ ತಪ್ಪು ದಿಕ್ಕಿನಿಂದಾಗಿ ವಾಸ್ತು ದೋಷವನ್ನು ಹೇಗೆ ಸರಿದೂಗಿಸುವುದು ಎಂದು ನಿಮಗೆ ಅನೇಕ ವಾಸ್ತುಶಾಸ್ತ್ರ ತಜ್ಞರು ಹೇಳುತ್ತಾರೆ.

  • Share this:

ಸಾಮಾನ್ಯವಾಗಿ ಮನೆಯ ಮುಖ್ಯ ದ್ವಾರ ಎಂದರೆ ಮುಖ್ಯ ಬಾಗಿಲು ಬರೀ ನಿಮಗೆ ಮನೆಯೊಳಗೆ ಪ್ರವೇಶಿಸಲು ಅವಕಾಶ ಮಾಡಿಕೊಡದೆ, ಇನ್ನೂ ಅನೇಕ ರೀತಿಯ ಅಂಶಗಳನ್ನು ಇದು ಮನೆಯೊಳಗೆ ಪ್ರವೇಶಿಸಲು ಸಹಾಯ ಮಾಡುತ್ತದೆ. ನಿಮ್ಮ ಮನೆಯ ಮುಖ್ಯ ದ್ವಾರವು ಸಕಾರಾತ್ಮಕ ಶಕ್ತಿ ಮತ್ತು ಸಮೃದ್ಧಿಗೆ ಪ್ರವೇಶ ದ್ವಾರವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಬಾಗಿಲುಗಳು ಈ ದಿಕ್ಕಿನಲ್ಲಿ ಮುಖ ಮಾಡಿರಬೇಕು ಅಂತ ಸಹ ಇದೆ. ಭಾರತದಲ್ಲಿ, ಮನೆಯ ಮುಖ್ಯ ದ್ವಾರದ ತಪ್ಪು ದಿಕ್ಕಿನಿಂದಾಗಿ ವಾಸ್ತು ದೋಷವನ್ನು ಹೇಗೆ ಸರಿದೂಗಿಸುವುದು ಎಂದು ನಿಮಗೆ ಅನೇಕ ವಾಸ್ತುಶಾಸ್ತ್ರ ತಜ್ಞರು ಹೇಳುತ್ತಾರೆ. ಆದರೆ ವಿದೇಶದಲ್ಲಿ ವಾಸಿಸುತ್ತಿರುವಾಗ ಇದು ಸ್ವಲ್ಪ ಕಷ್ಟದ ಕೆಲಸವಾಗಬಹುದು.


ಆದರೆ ನೀವು ಎಲ್ಲಿ ವಾಸಿಸುತ್ತಿದ್ದರೂ, ನಿಮ್ಮ ಮನೆಯ ಮುಖ್ಯ ದ್ವಾರದ ಮೇಲೆ ಈ ನಾಲ್ಕು ಸಕಾರಾತ್ಮಕ ಚಿಹ್ನೆಗಳು ನಿಮ್ಮ ಮನೆಗೆ ಸಮೃದ್ಧಿಯನ್ನು ಆಕರ್ಷಿಸಲು ಸಹಾಯ ಮಾಡುತ್ತದೆ ಎಂದು ವಾಸ್ತುಶಾಸ್ತ್ರಜ್ಞರು ಹೇಳುತ್ತಾರೆ. ನಮ್ಮ ಭಾರತದಲ್ಲಿ, ನೀವು ಈ ಚಿಹ್ನೆಗಳನ್ನು ಆಗಾಗ್ಗೆ ಪ್ರತಿ ಮನೆಯ ಮುಖ್ಯ ದ್ವಾರದ ಮೇಲೆ ಕಾಣಬಹುದು. ನೀವು ವಿದೇಶದಲ್ಲಿ ವಾಸಿಸುತ್ತಿದ್ದರೆ, ಈ ಶುಭ ಚಿಹ್ನೆಗಳನ್ನು ನಿಮ್ಮ ಮುಖ್ಯ ಪ್ರವೇಶದ್ವಾರದ ಮೇಲೆ ಬಿಡಿಸುವುದರಿಂದ ನಿಮ್ಮ ಮನೆಗೆ ಅದೃಷ್ಟ, ಸಂಪತ್ತು, ಯಶಸ್ಸು ಮತ್ತು ಸಮೃದ್ಧಿಯನ್ನು ಆಹ್ವಾನಿಸಬಹುದು.


ಓಂ ಚಿಹ್ನೆ


ಓಂ ಚಿಹ್ನೆ ಎಂಬುದು ಒಂದು ಚಿಹ್ನೆ ಅಷ್ಟೇ ಅಲ್ಲ, ಇದು ಒಂದು ಮಂತ್ರದ ಪದವಾಗಿದ್ದು, ಇದನ್ನು ಪ್ರತಿ ಶುಭ ಕೂಟದ ಸಮಯದಲ್ಲಿ ಪಠಿಸಲಾಗುತ್ತದೆ ಮತ್ತು ಬರೆಯಲಾಗುತ್ತದೆ. ಇದು ದೈವಿಕತೆಯ ಸೋನಿಕ್ ಪ್ರಾತಿನಿಧ್ಯ ಎಂದು ಹೇಳಲಾಗುತ್ತದೆ. ಇದು ಸರ್ವೋಚ್ಚ, ಬ್ರಹ್ಮಾಂಡ ಜಗತ್ತು ಮತ್ತು ಪ್ರಜ್ಞೆಯ ಸಾರವನ್ನು ಸೂಚಿಸುತ್ತದೆ.


ಇದನ್ನೂ ಓದಿ: ಸ್ವಲ್ಪ ತಾಳ್ಮೆಯಿಂದ ಇದ್ದರೆ ಕೆಲಸ ಆಗುತ್ತೆ, 2 ರಾಶಿಗೆ ಲಕ್

ನೀವು ಅದನ್ನು ನಿಮ್ಮ ಬಾಗಿಲ ಮೇಲೆ ಬರೆದರೆ, ಅದು ಮನೆಯ ವಾತಾವರಣವನ್ನು ಸುಧಾರಿಸುವುದಲ್ಲದೆ, ನಿಮ್ಮ ಪ್ರೀತಿಪಾತ್ರರು ಆರೋಗ್ಯಕರವಾಗಿರುವುದನ್ನು ಖಚಿತಪಡಿಸುತ್ತದೆ. ಇದು ವಾಸ್ತು ದೋಷವನ್ನು ತೆಗೆದು ಹಾಕುತ್ತದೆ ಮತ್ತು ಮನೆಗೆ ಸಂಪತ್ತನ್ನು ತಂದು ಕೊಡುತ್ತದೆ.


ನಿಮಗೆ ಈ ಪದದ ಚಿಹ್ನೆಯನ್ನು ಕಂಡುಕೊಳ್ಳಲು ಸಾಧ್ಯವಾಗದಿದ್ದರೆ, ನೀವು ಅರಿಶಿನ ಮತ್ತು ಕುಂಕುಮ ಬಳಸಿ ಅದನ್ನು ಬರೆಯಬಹುದು ಮತ್ತು ನೀವು ಅದನ್ನು ಶಾಶ್ವತವಾಗಿರಿಸಿಕೊಳ್ಳಲು ಬಣ್ಣವನ್ನು ಸಹ ಬಳಸಬಹುದು.


ಶುಭ-ಲಾಭ ಚಿಹ್ನೆ


ಹೆಚ್ಚಿನ ಭಾರತೀಯ ಮನೆಗಳ ಮುಖ್ಯ ದ್ವಾರದ ಹೊರಗೆ ಶುಭ-ಲಾಭ ಅಂತ ಬರೆದಿರುತ್ತಾರೆ. ಈ ಚಿಹ್ನೆಗಳನ್ನು ಹೆಚ್ಚಾಗಿ ಸಂತೋಷದ ಸಂದರ್ಭದಲ್ಲಿ ಎಂದರೆ ಈ ಹಬ್ಬಗಳ ಮತ್ತು ಮದುವೆ ಸಮಯದಲ್ಲಿ ಬರೆಯುತ್ತಾರೆ. ಜನರು ಹೆಚ್ಚಾಗಿ ಈ ಚಿಹ್ನೆಗಳನ್ನು ದೀಪಾವಳಿ ಅಥವಾ ನವರಾತ್ರಿಯ ಸಮಯದಲ್ಲಿ ಬರೆಯುತ್ತಾರೆ.


ಶುಭ ಮತ್ತು ಲಾಭ ಗಣೇಶನ ಮಕ್ಕಳು ಎಂದು ನಂಬಲಾಗಿದೆ. ಶುಭವು ಪವಿತ್ರ ಮತ್ತು ಮಂಗಳಕರವಾದದ್ದನ್ನು ಸೂಚಿಸುತ್ತದೆ, ಲಾಭವು ಸಂಪತ್ತು ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ. ನೀವು ಮನೆಯ ಹೊರಗೆ ಇದರ ಸ್ಟಿಕ್ಕರ್ ಗಳನ್ನು ಸಹ ಅಂಟಿಸಬಹುದು ಅಥವಾ ಕುಂಕುಮದ ಸಹಾಯದಿಂದ ಬರೆಯಬಹುದು. ನೀವು ಅದನ್ನು ಮನೆಯಲ್ಲಿರುವ ದೇವರ ಕೋಣೆಯ ಬಾಗಿಲ ಮೇಲೂ ಸಹ ಬರೆಯಬಹುದು.


ಸ್ವಸ್ತಿಕ್ ಚಿಹ್ನೆ


ಹಿಂದೂ ಧರ್ಮದ ಅನುಯಾಯಿಗಳು ಸ್ವಸ್ತಿಕ್ ಅನ್ನು ಪವಿತ್ರ ಸಂಕೇತವೆಂದು ಪರಿಗಣಿಸುತ್ತಾರೆ. ಇದು ಮನೆಯುದ್ದಕ್ಕೂ ಧನಾತ್ಮಕ ಶಕ್ತಿಯ ಹರಿವನ್ನು ಸೂಚಿಸುತ್ತದೆ. ಮುಖ್ಯ ದ್ವಾರದ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಇಡುವುದರಿಂದ ಯಶಸ್ಸು ಮತ್ತು ಸಮೃದ್ಧಿಯ ಹಾದಿಯಲ್ಲಿನ ಅಡೆತಡೆಗಳನ್ನು ತೆಗೆದು ಹಾಕಬಹುದು ಎಂದು ನಾವು ನಂಬುತ್ತೇವೆ.


ಇದನ್ನೂ ಓದಿ: ಇದು ನೈಸರ್ಗಿಕ ವಯಾಗ್ರ ಕೃಷಿ, ಐದು ತಿಂಗಳಲ್ಲಿ ಒಂದೂವರೆ ಲಕ್ಷ ಆದಾಯ ಫಿಕ್ಸ್!

ಹಿಂದೂ ಧರ್ಮದಲ್ಲಿ, ಈ ಚಿಹ್ನೆಯನ್ನು ಗಡಿಯಾರದ ದಿಕ್ಕಿನಲ್ಲಿ ಚಿತ್ರಿಸಲಾಗಿದೆ ಮತ್ತು ಸೂರ್ಯನನ್ನು ಸಂಕೇತಿಸುತ್ತದೆ. ಇದು ಸಿಂಧೂ ಕಣಿವೆ ನಾಗರೀಕತೆಯ ಅವಶೇಷಗಳಲ್ಲಿ ಮತ್ತು ಗ್ರೀಕ್, ರೋಮನ್ ಮತ್ತು ಇಂಡೋ-ಯುರೋಪಿಯನ್ ಸೇರಿದಂತೆ ಸಂಸ್ಕೃತಿಗಳಲ್ಲಿ ಕಂಡು ಬಂದಿದೆ. ನಿಮಗೆ ಘನ ಚಿಹ್ನೆ ಅಥವಾ ಸ್ಟಿಕ್ಕರ್ ಗಳು ಸಿಗದಿದ್ದರೆ ಅದನ್ನು ಕೆಂಪು ಕುಂಕುಮ ಬಳಸಿ ಚಿತ್ರಿಸಬಹುದು.


ಭಗವಾನ್ ಗಣೇಶನ ಚಿಹ್ನೆ


ಹಿಂದೂಗಳು ಗಣೇಶನನ್ನು ಅಡೆತಡೆಗಳನ್ನು ನಿವಾರಿಸುವವನು ಎಂದು ನಂಬುತ್ತಾರೆ, ಅದಕ್ಕಾಗಿಯೇ ಅವನನ್ನು ವಿಘ್ನಹರ್ತ ಎಂದು ಸಂಬೋಧಿಸಲಾಗುತ್ತದೆ. ಅವನು ತನ್ನ ಭಕ್ತರಿಗೆ ಅದೃಷ್ಟ ಮತ್ತು ಬುದ್ಧಿವಂತಿಕೆಯನ್ನು ಆಶೀರ್ವದಿಸುತ್ತಾನೆ ಎಂದು ನಂಬಲಾಗಿದೆ. ಪ್ರತಿಯೊಂದು ಪೂಜೆಯ ಆರಂಭದಲ್ಲಿ ಗಣೇಶನನ್ನು ಆರಾಧಿಸಲಾಗುತ್ತದೆ.ನಿಮ್ಮ ಮನೆಯ ಮುಖ್ಯ ದ್ವಾರದ ಮೇಲೆ ಗಣೇಶನ ಮುಖವನ್ನು ಮಾತ್ರ ಚಿತ್ರಿಸಲು ಸಾಧ್ಯವಾದರೆ, ಅದು ನಿಮ್ಮ ಮನೆಗೆ ಸಮೃದ್ಧಿ ಮತ್ತು ಸಂಪತ್ತನ್ನು ಆಕರ್ಷಿಸುವ ಶುಭ ಸಂಕೇತವಾಗಿರುತ್ತದೆ. ನೀವು ಕುಂಕುಮ ಅಥವಾ ಅರಿಶಿನ, ಹೋಳಿ ಬಣ್ಣ, ಕುಂಕುಮ ಮತ್ತು ಸ್ವಲ್ಪ ಅಕ್ಕಿ ಮಿಶ್ರಣ ಮಾಡಿ ಇದನ್ನು ಚಿತ್ರಿಸಬಹುದು.


top videos
    First published: