Vastu Tips: ನಿಮ್ಮ ದಾಂಪತ್ಯ ಜೀವನದ ಮಧುರತೆ ಹೆಚ್ಚಿಸಬೇಕಾ; ಈ 10 ವಾಸ್ತು ತಪ್ಪದೇ ಪಾಲಿಸಿ

ವಾಸ್ತು ದೋಷವು ತಿಳಿದು ತಿಳಿದಯೇ ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಈ ಸರಳ ವಾಸ್ತುಗಳನ್ನು ಅನುಸರಿಸುವ ಮೂಲಕ ನಿಮ್ಮ ಸಂಬಂಧದಲ್ಲಿನ ಮಾಧುರ್ಯತೆಯನ್ನು ಹೆಚ್ಚಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಗಂಡ- ಹೆಂಡತಿಯ ನಡುವೆ ಅನ್ಯೋನ್ಯತೆಯಲ್ಲಿ ಕೊರತೆ ಉಂಟಾದರೆ ಸಂಬಂಧ ಹಾಳಾಗುತ್ತದೆ. ದಂಪತಿಗಳ (Couple Relationship) ನಡುವಿನ ಭಿನ್ನಾಭಿಪ್ರಾಯ ದೀರ್ಘಕಾಲ ಉಳಿದರೆ, ಅದರಿಂದ ಹಾನಿಯೇ ಹೆಚ್ಚು. ಕೆಲವೊಮ್ಮೆ ಈ ವೈಮನಸ್ಸುಗಳು ಭಿನ್ನಾಭಿಪ್ರಾಯಗಳಿಗೆ ಕೆಲವೊಮ್ಮೆ ವಾಸ್ತು ದೋಷ (Vastu Problem) ಕೂಡ ಕಾರಣ ಆಗುತ್ತವೆ. ವಾಸ್ತು ದೋಷವು ತಿಳಿದು ತಿಳಿದಯೇ ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಈ ಸರಳ ವಾಸ್ತುಗಳನ್ನು ಅನುಸರಿಸುವ ಮೂಲಕ ನಿಮ್ಮ ಸಂಬಂಧದಲ್ಲಿನ ಮಾಧುರ್ಯತೆಯನ್ನು ಹೆಚ್ಚಿಸಬಹುದು.

    ಈ ವಾಸ್ತುಗಳ ಪಾಲನೆಯಿಂದ ಸಂಬಂಧದಲ್ಲಿನ ಅನ್ಯೋನ್ಯತೆ ಹೆಚ್ಚಲಿದೆಯಂತೆ

    ಮದುವೆ ಆದ ದಂಪತಿಗಳ ಕೋಣೆ ಆಗ್ನೇಯ ದಿಕ್ಕಿನಲ್ಲಿ ಇರಬಾರದು. ಇದರಿಂದ ನಿಮ್ಮ ಸಂಬಂಧಕ್ಕೆ ಹಾನಿ ಹೆಚ್ಚು. ಈ ದಿಕ್ಕಿನಲ್ಲಿ ಕೋಣೆಯಲ್ಲಿ ವಾಸಿಸುವುದರಿಂದ ನಿಮ್ಮ ಸಂಬಂಧಗಳಲ್ಲಿ ಉದ್ವಿಗ್ನತೆಯನ್ನು ಉಂಟುಮಾಡುತ್ತದೆ

    ಮಲಗುವ ಕೋಣೆಯಲ್ಲಿ ತಿಳಿ ಬಣ್ಣಗಳನ್ನು ಬಳಸಿ. ಇದರಿಂದ ಮನಸಿಗೆ ಶಾಂತಿ ಮೂಡುತ್ತದೆ.  ಕೋಣೆಯನ್ನ ಅನಗತ್ಯ ವಸ್ತುಗಳಿಂದ ಕೊಠಡಿಯನ್ನು ತುಂಬಬೇಡಿ. ಎಲ್ಲೆಂದರಲ್ಲಿ ವಸ್ತುಗಳು ಬಿದ್ದಿರುವುದರಿಂದ ಮನಸ್ಸಿಗೆ ಕಿರಿಕಿರಿ ಹೆಚ್ಚುತ್ತದೆ. ಇದರಿಂದ ಆ ಕೋಣೆಯಲ್ಲಿ ವಾಸಿಸುವ ಮಂದಿಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

    ಮದುವೆಯಾದ ದಂಪತಿಗಳು ತಮ್ಮ ಕೋಣೆಯಲ್ಲಿ ನೈಋತ್ಯ ದಿಕ್ಕಿನಲ್ಲಿ ತಮ್ಮ ಜೋಡಿ ಫೋಟೋವನ್ನು ಹಾಕಬೇಕು. ತಮ್ಮ ಖುಷಿ ಘಟನೆಯನ್ನು ಮೆಲುಕು ಹಾಕುವಂತಹ ಫೋಟೋಗಳು ಇದ್ದಾಗ ಅನ್ಯೋನ್ಯತೆ ಹೆಚ್ಚುತ್ತದೆ. ಹೀಗೆ ಮಾಡುವುದರಿಂದ ಸಂಬಂಧವು ಮಧುರವಾಗಿ ಉಳಿಯುತ್ತದೆ.

    ಮನೆಯ ಮುಖ್ಯಸ್ಥನ ಕೋಣೆ ನೈಋತ್ಯ ದಿಕ್ಕಿನಲ್ಲಿರಬೇಕು. ಅಂತಹ ಕೋಣೆಯಲ್ಲಿ ದಂಪತಿಗಳು ವಾಸಿಸುವುದರಿಂದ ಅವರ ಸಂಬಂಧ ಇನ್ನಷ್ಟು ಉತ್ತಮ ಗೊಳ್ಳುತ್ತದೆ.

    ದಂಪತಿಗಳು ಮಲಗುವ ಹಾಸಿಗೆ ಮರದಿಂದ ಕೂಡಿರಬೇಕು. ಅಲಂಕಾರಿಕವಂತೆ ವಿಭಿನ್ನ ಆಕಾರದ ಬದಲು ಅದು ಚೌಕವಾಗಿರಬೇಕು. ಜೊತೆಗೆ ಮಲಗುವಾಗ ದಂಪತಿಗಳು ತಲೆಯು ದಕ್ಷಿಣ ದಿಕ್ಕಿಗೆ ಮತ್ತು ಪಾದಗಳನ್ನು ಉತ್ತರ ದಿಕ್ಕಿಗೆ ಇರುವಂತೆ ನೋಡಿಕೊಳ್ಳಬೇಕು. ಇಂತಹ ವಾಸ್ತು ಸಂಬಂಧ ವೃದ್ಧಿಗೆ ಒಳ್ಳೆಯದು. ಕೆಟ್ಟ ವಿನ್ಯಾಸದ ಹಾಸಿಗೆಗಳು ಒತ್ತಡವನ್ನು ಉಂಟುಮಾಡುತ್ತವೆ.

    ಇದನ್ನು ಓದಿ: ದೇವರ ಪೂಜೆ ಸಂದರ್ಭದಲ್ಲಿ ಮಾಡುವ ಈ ತಪ್ಪಿನಿಂದಲೇ ಕಷ್ಟ!

    ದಂಪತಿಗಳಿ ಮಲಗುವ ಕೋಣೆಯಲ್ಲಿ ಕನ್ನಡಿ ಇರದಂತೆ ನೋಡಿಕೊಳ್ಳಬೇಕು. ರಾತ್ರಿ ಸಮಯದಲ್ಲಿ ದಂಪತಿಗಳು ಕನ್ನಡ ಮುಖವನ್ನು ನೋಡಿ ಅದು ನಿಮ್ಮ ಸಂಬಂಧಕ್ಕೆ ಒಳ್ಳೆಯದಲ್ಲ ಎನ್ನುತ್ತದೆ ವಾಸ್ತು.

    ದಂಪತಿಗಳು ಮಲಗುವ ಕೋಣೆಯಲ್ಲಿ ಅಲಂಕಾರಿಕ ವಸ್ತುಗಳನ್ನು ಇಟ್ಟಿದ್ದರೆ, ಅವು ಜೋಡಿಯಂತಹ ವಸ್ತುಗಳನ್ನು ಇಡಬೇಕು. ಜೋಡಿ ಹಂಸ, ಜೋಡಿ ಫೋಟೋ  ಹೀಗೆ ಯಾವುದೇ ವಸ್ತು ಇಟ್ಟರೂ ಎರಡು ಇರಬೇಕು.  ಜೊತೆಗೆ ಮಲಗುವ ಕೋಣೆಯಲ್ಲಿ ಟಿವಿ ಅಥವಾ ಕಂಪ್ಯೂಟರ್ ಹಾಕಬೇಡಿ, ಇದರಿಂದ ಮಾನಸಿಕ ಕಿರಿಕಿರಿ ಹೆಚ್ಚುತ್ತದೆ.

    ಇದನ್ನು ಓದಿ: ದಾನದಲ್ಲಿ ಯಾವುದು ಶ್ರೇಷ್ಠ? ಯಾವ ದಾನದಿಂದ ಯಾವ ಫಲ; Chanakya Niti ಹೇಳುವುದೇನು?

    ದಂಪತಿಗಳು ಹಾಸಿಗೆಯನ್ನು ದಕ್ಷಿಣ ಅಥವಾ ನೈಋತ್ಯದಲ್ಲಿ ಇರಿಸಬೇಕು. ಹಾಸಿಗೆ ಎರಡು ಪ್ರತ್ಯೇಕ ಭಾಗಗಳನ್ನು ಜೋಡಿಸಿ ಇರಬಾರದು. ಇದು ಸಂಬಂಧದಲ್ಲಿನ ಬಿರುಕು ಹೆಚ್ಚಿಸಲು ದಾರಿಯಾಗುತ್ತದೆ.

    ವಾಸ್ತು ಪ್ರಕಾರ, ಹೆಂಡತಿ ಯಾವಾಗಲೂ ಗಂಡನ ಎಡಭಾಗದಲ್ಲಿ ಮಲಗಬೇಕು. ಇದರಿಂದಾಗಿ ಪತಿ-ಪತ್ನಿಯರ ಬಾಂಧವ್ಯ ಉತ್ತಮವಾಗಿರುತ್ತದೆ.

    ನಿಮ್ಮ ಮಲಗುವ ಕೋಣೆಯಲ್ಲಿ ಯಾವುದೇ ದೇವರು ಮತ್ತು ದೇವತೆಗಳ ಚಿತ್ರಗಳನ್ನು ಹಾಕಬಾರದು. ಜೊತೆಗೆ ಸತ್ತವರ ಚಿತ್ರಗಳನ್ನು ಕೂಡ ನೆನಪಿಗೆ ಹಾಕುವುದರಿಂದ ಸಂಬಂಧದ ಮಾಧುರ್ಯತೆ ಹಾಳಾಗುವ ಸಾಧ್ಯತೆ ಇರುತ್ತದೆ.

    (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್​ 18 ಕನ್ನಡ ಖಚಿತಪಡಿಸುವುದಿಲ್ಲ)
    Published by:Seema R
    First published: