ಸಾಮಾನ್ಯವಾಗಿ ಪೋಷಕರು ತಮ್ಮ ಮಕ್ಕಳು ಚೆನ್ನಾಗಿ ಓದಲಿ, ಒಳ್ಳೆಯ ಅಂಕಗಳನ್ನು ಗಳಿಸುವುದರೊಂದಿಗೆ ಪರೀಕ್ಷೆಗಳನ್ನು ಪಾಸು ಮಾಡಿ ಪದವಿಯನ್ನು ಪಡೆಯಬೇಕು ಅಂತೆಲ್ಲಾ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಪೋಷಕರ ನಿರೀಕ್ಷೆಯಂತೆಯೇ ಕೆಲವು ಮಕ್ಕಳು ಶೈಕ್ಷಣಿಕವಾಗಿ ಉತ್ತಮ ಸಾಧನೆಯನ್ನು ಮಾಡಿದರೆ, ಇನ್ನೂ ಕೆಲವರು ಅನೇಕ ಕಾರಣಗಳಿಂದ ಶೈಕ್ಷಣಿಕವಾಗಿ ಇತರರಿಗಿಂತ ಸ್ವಲ್ಪ ಹಿಂದೆ ಬೀಳುವುದನ್ನು ಸಹ ನಾವು ನೋಡಿರುತ್ತೇವೆ. ಆದರೆ ಕೆಲ ವಾಸ್ತುವಿನ ಸಲಹೆಗಳನ್ನು (Vastu Tips) ಪಾಲಿಸುವುದರ ಮೂಲಕ ಮಕ್ಕಳ ಶೈಕ್ಷಣಿಕ ಕ್ಷಮತೆಯನ್ನು (Study) ಸುಧಾರಿಸಬಹುದಾಗಿದೆ ಎಂದು ಹೇಳಲಾಗುತ್ತದೆ. ಹಾಗಾದರೆ ಬನ್ನಿ ನಮ್ಮ ಮಕ್ಕಳ (Children Future) ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಸುಧಾರಿಸಲು ವಿವಿಧ ಮಾರ್ಗಗಳನ್ನು ತಿಳಿದುಕೊಳ್ಳೋಣ.
ಸಾಮರ್ಥ್ಯದ ಹುಡುಕಾಟಕ್ಕೆ ಸಹಕಾರಿ
ವಾಸ್ತುವಿನ ಸಹಾಯವನ್ನು ತೆಗೆದುಕೊಂಡಾಗ ಈ ಕಷ್ಟಪಟ್ಟು ಓದುವ ವಿದ್ಯಾರ್ಥಿಗಳನ್ನು ಇನ್ನೂ ಹೆಚ್ಚಿನ ಉನ್ನತ ಸಾಧಕರನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ ಎನ್ನಬಹುದು. ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸಬಹುದು. ಸರಳ ವಾಸ್ತು ಸಲಹೆಗಳೊಂದಿಗೆ ತಮ್ಮಲ್ಲಿರುವ ಸಾಮರ್ಥ್ಯಗಳನ್ನು ಅನ್ವೇಷಿಸಬಹುದು.
ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ
ಹೆಚ್ಚಿನ ಪೋಷಕರಿಗೆ, ಮಕ್ಕಳನ್ನು ಉತ್ತಮ ಶಾಲೆಗೆ ಕಳುಹಿಸುವುದು ಸುಲಭ. ಆದರೆ ಅದು ಸಾಕಾಗುವುದಿಲ್ಲ ಎಂದು ಆಗಾಗ ಮರೆತು ಬಿಡುತ್ತಾರೆ. ನೆನಪಿಡಿ, ಇದು ಕಠಿಣ ಪರಿಶ್ರಮಕ್ಕೆ ಬದಲಿಯಲ್ಲ ಆದರೆ ನಿಮ್ಮ ಸುತ್ತಲಿನ ಶಕ್ತಿಯನ್ನು ಸಮ್ಮಿಳಿತಗೊಳಿಸಲು ಸಹಾಯ ಮಾಡುತ್ತದೆ, ಇದು ನಿಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಮಕ್ಕಳು ಅಧ್ಯಯನ ಮಾಡುವ ಕೋಣೆಯು ಅವರ ಶೈಕ್ಷಣಿಕ ಸಾಧನೆಯಲ್ಲಿ ಉತ್ಕೃಷ್ಟತೆಯನ್ನು ಸಾಧಿಸಲು ಅನುಕೂಲಕರವಾಗಿರಬೇಕು. ಅವರ ಮೇಜಿನ ದಿಕ್ಕು, ಕೋಣೆಯಲ್ಲಿನ ಗೋಡೆಗಳ ಬಣ್ಣ, ಪ್ರದರ್ಶನದಲ್ಲಿರುವ ಕಲಾಕೃತಿಗಳು, ಮಲಗುವ ಸ್ಥಳ, ಇತ್ಯಾದಿಗಳು ಮಕ್ಕಳು ಏಕಾಗ್ರತೆ ಮತ್ತು ಸಂತೋಷವನ್ನು ಅನುಭವಿಸಲು ಪ್ರಮುಖ ಸ್ಥಳಗಳಾಗಿವೆ.
ಮಕ್ಕಳ ಕೋಣೆಯಲ್ಲಿ ಧನಾತ್ಮಕ ವಾಸ್ತು ವ್ಯವಸ್ಥೆಯ ಪ್ರಯೋಜನಗಳು
ಸಾಮಾಜಿಕ ಮಾಧ್ಯಮದ ಬಗ್ಗೆ ಸಾಕಷ್ಟು ಒಳ್ಳೆಯ ವಿಷಯಗಳಿವೆ. ಆದರೆ ಅದೇ ರೀತಿಯಲ್ಲಿ ಅನೇಕ ಅಪಾಯಗಳು ಸಹ ಇವೆ. ಮಕ್ಕಳು ಮತ್ತು ಹದಿಹರೆಯದವರು ಆಕರ್ಷಿತರಾಗುವ ವಿಷಯಗಳು ಇದರಲ್ಲಿ ತುಂಬಾನೇ ಇರುತ್ತವೆ. ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಮಯವನ್ನು ಕಳೆಯುವುದು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಸಾಮಾಜಿಕ ಜಾಲತಾಣದ ಬಗ್ಗೆ ಗಮನವಿರಲಿ
ಮಕ್ಕಳು ಯಾವಾಗಲೂ ಸಾಮಾಜಿಕ ತಾಣಕ್ಕೆ ಏನನ್ನಾದರೂ ಪೋಸ್ಟ್ ಮಾಡುವಾಗ ಉತ್ತಮ ಆಯ್ಕೆಗಳನ್ನು ಮಾಡುವ ಪ್ರಜ್ಞೆಯನ್ನು ಹೊಂದಿರುವುದಿಲ್ಲ, ಮತ್ತು ಇದು ಅವರ ಅಧ್ಯಯನ ಮತ್ತು ದೈನಂದಿನ ಜೀವನದಲ್ಲಿ ಸಮಸ್ಯೆಗಳು ಮತ್ತು ಚಂಚಲತೆಗಳಿಗೆ ಕಾರಣವಾಗಬಹುದು.
ಆದ್ದರಿಂದ ಪೋಷಕರು ಸಾಮಾಜಿಕ ಮಾಧ್ಯಮದ ಬದಲು ತಮ್ಮ ಮಕ್ಕಳಿಗೆ ಅವರ ಅಧ್ಯಯನದ ಮೇಲೆ ಗಮನವನ್ನು ಕೇಂದ್ರೀಕರಿಸಲು ವಾಸ್ತು ಶಿಫಾರಸುಗಳ ಪ್ರಕಾರ ತಮ್ಮ ಅಧ್ಯಯನ ಕೊಠಡಿಯನ್ನು ಉತ್ತಮವಾಗಿ ಸಂಘಟಿಸುವುದು ಅಗತ್ಯವಾಗಿದೆ.
ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಲು ಸಹಾಯ ಮಾಡುತ್ತವೆ ಈ ವಾಸ್ತು ಶಾಸ್ತ್ರದ ಸಲಹೆಗಳು:
ಅಧ್ಯಯನ ಕೊಠಡಿಯ ಸ್ಥಳ
* ಅಧ್ಯಯನ ಕೊಠಡಿಯು ಮನೆಯ ಪೂರ್ವ, ಈಶಾನ್ಯ ಅಥವಾ ಉತ್ತರ ದಿಕ್ಕಿನಲ್ಲಿ ಇರಬೇಕು. ಈ ದಿಕ್ಕುಗಳು ಅತ್ಯಂತ ಮಂಗಳಕರ ಮತ್ತು ಪ್ರಯೋಜನಕಾರಿ ಅಂತ ಹೇಳಲಾಗುತ್ತದೆ.
ಇದು ಅವರ ಅಧ್ಯಯನದ ಮೇಲೆ ಉತ್ತಮ ಗಮನವನ್ನು ಕೇಂದ್ರೀಕರಿಸಲು ಮತ್ತು ಅವರ ಶಿಕ್ಷಣ ಕೌಶಲ್ಯಗಳನ್ನು ಸುಧಾರಿಸಲು ಅವರಿಗೆ ಸಹಾಯ ಮಾಡುತ್ತದೆ. ವಿದ್ಯಾರ್ಥಿಗೆ ಈಶಾನ್ಯ ದಿಕ್ಕಿನಲ್ಲಿರುವ ಕೊಠಡಿಯನ್ನು ನೀಡುವುದರಿಂದ ಒಳ್ಳೆಯ ಫಲಿತಾಂಶವನ್ನು ಅವರಿಂದ ನಿರೀಕ್ಷಿಸಬಹುದು.
* ಕುಳಿತು ಅಧ್ಯಯನ ಮಾಡುವ ಟೇಬಲ್ ಸ್ಥಾನವು ಸಹ ಮುಖ್ಯವಾಗಿದೆ. ಮಗುವು ಅಧ್ಯಯನ ಮಾಡುವಾಗ ಈ ಎರಡೂ ದಿಕ್ಕುಗಳಿಗೆ ಮುಖ ಮಾಡಿದೆ ಎಂದು ಖಚಿತಪಡಿಸಿಕೊಳ್ಳಲು ನೀವು ಅಧ್ಯಯನ ಮಾಡಲು ಕುಳಿತುಕೊಳ್ಳುವ ಟೇಬಲ್ ಪೂರ್ವ ಅಥವಾ ಉತ್ತರಕ್ಕೆ ಅಭಿಮುಖವಾಗಿ ಇರಿಸಬೇಕು.
ಮಗುವಿನ ಮುಂದೆ ಮುಕ್ತ ಸ್ಥಳವಿರಬೇಕು, ಇದು ಹೊಸ ಆಲೋಚನೆಗಳು ಮತ್ತು ವಿಧಾನಗಳನ್ನು ಉತ್ತೇಜಿಸುತ್ತದೆ.
* ಬೆಳಕಿನ ಕಿರಣಗಳ ಕೆಳಗೆ ಅಧ್ಯಯನ ಮಾಡುವುದನ್ನು ಆದಷ್ಟು ತಪ್ಪಿಸಿ. ಬೆಳಕಿನ ಕಿರಣವು ಬಹುತೇಕ ಏಕಾಗ್ರತೆಯ ಕೊರತೆಯನ್ನು ಉಂಟು ಮಾಡುತ್ತದೆ. ವಿದ್ಯಾರ್ಥಿಗಳಿಗೆ ಅಡೆತಡೆಯಿಲ್ಲದ ಮತ್ತು ಜಾಗರೂಕತೆಯಿಂದ ನಿರ್ದೇಶಿಸಲಾದ ಏಕಾಗ್ರತೆ ಬೇಕಾಗುತ್ತವೆ.
* ಮೇಲಿನ ಮಹಡಿಯಲ್ಲಿರುವ ಶೌಚಾಲಯದ ಕೆಳಗೆ ನಿಮ್ಮ ಅಧ್ಯಯನದ ಟೇಬಲ್ ಅನ್ನು ಹಾಕಿಕೊಳ್ಳುವುದನ್ನು ತಪ್ಪಿಸಿ. ಇದು ರೋಗಗ್ರಸ್ತ ಶಕ್ತಿಯನ್ನು ಸೃಷ್ಟಿಸುತ್ತದೆ.
* ಮಕ್ಕಳ ಅಧ್ಯಯನ ಕೊಠಡಿಯು ಉಲ್ಲಾಸಭರಿತವಾಗಿರಬೇಕು. ಹಳದಿ, ಕಿತ್ತಳೆ, ಹಸಿರು ಮುಂತಾದ ಬಣ್ಣಗಳ ಬಳಕೆಯನ್ನು ವಾಸ್ತು ತಜ್ಞರು ಹೆಚ್ಚು ಶಿಫಾರಸು ಮಾಡುತ್ತಾರೆ. ಅಧ್ಯಯನ ಕೊಠಡಿಗಳಲ್ಲಿ ಕಪ್ಪು ಮತ್ತು ಇತರ ಗಾಢ ಬಣ್ಣಗಳನ್ನು ಬಳಸುವುದನ್ನು ತಪ್ಪಿಸಿ.
* ಪುಸ್ತಕಗಳನ್ನು ಸ್ಟಡಿ ಟೇಬಲ್ ಮೇಲೆ ಇಡುವ ಬದಲು ಪುಸ್ತಕದ ಕಪಾಟಿನಲ್ಲಿ ಇಡಬೇಕು.
* ಡೆಸ್ಕ್ ಮೇಲೆ ಚದುರಿದ ಪುಸ್ತಕಗಳು ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟು ಮಾಡುತ್ತವೆ ಮತ್ತು ಅನಗತ್ಯ ಒತ್ತಡವನ್ನು ಸಹ ಸೃಷ್ಟಿಸುತ್ತವೆ.
* ಸ್ಟೇಷನರಿ ಬಳಸಲು ಸಿದ್ಧ ಸ್ಥಿತಿಯಲ್ಲಿರಬೇಕು. ಕೆಲಸ ಮಾಡದ ಪೆನ್ನುಗಳು, ಕತ್ತರಿಸದ ಪೆನ್ಸಿಲ್ ಗಳು, ಹರಿದ ಪುಸ್ತಕಗಳು, ಇತ್ಯಾದಿಗಳು ನಕಾರಾತ್ಮಕ ಕಂಪನವನ್ನು ಸೃಷ್ಟಿಸುತ್ತವೆ.
* ವಿದ್ಯಾರ್ಥಿಗಳ ಸ್ಟಡಿ ಟೇಬಲ್ ಅಥವಾ ಡೆಸ್ಕ್ ತುಂಬಾನೇ ಸ್ವಚ್ಛವಾಗಿರಬೇಕು.
* ಮಕ್ಕಳ ಕೋಣೆಗಳಲ್ಲಿ ಬೆಳಕು ಪ್ರಕಾಶಮಾನವಾಗಿರಬೇಕು. ಏಕೆಂದರೆ ಇದು ಅವರ ಕಣ್ಣುಗಳ ಆರೋಗ್ಯವನ್ನು ಕಾಪಾಡುತ್ತದೆ.
* ಸ್ಟಡಿ ರೂಮ್ ನಲ್ಲಿ ಸಾಕಷ್ಟು ಪ್ರಮಾಣದ ನೈಸರ್ಗಿಕ ಬೆಳಕು ಮತ್ತು ಗಾಳಿ ಅತ್ಯಗತ್ಯ.
* ಅಧ್ಯಯನ ಮಾಡುವಾಗ ಮಗುವಿನ ನೆರಳು ಅಧ್ಯಯನ ಮೇಜಿನ ಮೇಲೆ ಬೀಳಬಾರದು.
ಇದನ್ನೂ ಓದಿ: Viral News: 5 ರೂಪಾಯಿಗೆ 500 ಲಾಭ! ಇದು ಕುರ್ಕುರೆ ಕರಾಮತ್ತಿನ ಗುಟ್ಟು
* ಪೀಠೋಪಕರಣಗಳ ಚೂಪಾದ ಮೊನಚಾದ ಅಂಚುಗಳು ಮತ್ತು ತೆರೆದ ಕಪಾಟುಗಳು ಅಡೆತಡೆಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಏಕಾಗ್ರತೆಯನ್ನು ವಿಚಲಿತಗೊಳಿಸುತ್ತವೆ.
* ಅಧ್ಯಯನ ಮಾಡುವಾಗ ಎಂದಿಗೂ ಶೌಚಾಲಯಕ್ಕೆ ಹೋಗುವುದನ್ನು ತಡೆದುಕೊಂಡು ಕೂರಬೇಡಿ. ಇದು ಮಕ್ಕಳು ಏಕಾಗ್ರತೆಯನ್ನು ಕಳೆದುಕೊಳ್ಳಲು ಕಾರಣವಾಗಬಹುದು.
* ಸ್ಟಡಿ ಟೇಬಲ್ ಚೌಕಾಕಾರದಲ್ಲಿ ಅಥವಾ ಆಯತಾಕಾರದಲ್ಲಿರಬೇಕು.
* ನಿಮ್ಮ ಸ್ಟಡಿ ಟೇಬಲ್ ಕೆಳಗೆ ಶೂಗಳನ್ನು ಇಡಬೇಡಿ.
ನಿಮ್ಮ ಏಕಾಗ್ರತೆಯ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ
* ಹರಳುಗಳಲ್ಲಿ ವಿಶ್ವಾಸವಿರುವವರು ಅದರ ಕಂಪನ ಅನುಭವವಾಗುವಂತೆ ಹತ್ತಿರದ ಸ್ಥಳದಲ್ಲಿ ಇರಿಸಬಹುದು. ಅಮೆಥಿಸ್ಟ್ ಸ್ಫಟಿಕವನ್ನು ಸ್ಟಡಿ ಡೆಸ್ಕ್ ಬಳಿ ಇರಿಸಿ.
ಸ್ಫಟಿಕ ಗುಚ್ಛಗಳನ್ನು ಗಾಳಿ ಶುದ್ಧಿಕರಿಸಲು ಮತ್ತು ಚೈತನ್ಯ ಹೊರಹೊಮ್ಮಲು ಅನುಕೂಲಕರವಾಗಿರುವಂತೆ ಬಳಸಲಾಗುತ್ತದೆ. ವಿದ್ಯಾರ್ಥಿಗಳಿಗೆ, ವಿದ್ವಾಂಸರಿಗೆ ಮತ್ತು ಬರಹಗಾರರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.
* ಸ್ಟಡಿ ರೂಮ್ನಲ್ಲಿ ಫೋಟೋಗಳು ಮತ್ತು ಪೇಂಟಿಂಗ್ ಗಳನ್ನು ಜಾಗರೂಕತೆಯಿಂದ ಬಳಸಬೇಕು. ಹಾರುವ ಕುದುರೆ, ಉದಯಿಸುವ ಸೂರ್ಯ, ಓಡುವ ಕಾರು ಇತ್ಯಾದಿಗಳನ್ನು ಮಕ್ಕಳ ಕೋಣೆಯಲ್ಲಿ ಹಾಕಬಹುದು.
ಇದನ್ನೂ ಓದಿ: Vastu Plants: ಮನೆಯಲ್ಲಿ ಈ ಗಿಡಗಳಿದ್ರೆ ಹಣದ ಸಮಸ್ಯೆ ಬರಲ್ವಂತೆ
ಅಂತಹ ಫೋಟೋಗಳು ಮಕ್ಕಳ ಅಧ್ಯಯನಗಳಲ್ಲಿ ಉತ್ತಮ ಕಾರ್ಯಕ್ಷಮತೆಗಾಗಿ ಶಕ್ತಿ ವರ್ಧಕವಾಗಿ ಕೆಲಸ ಮಾಡುತ್ತವೆ. ದುಃಖದ ಮನಸ್ಥಿತಿಯ ಚಿತ್ರಗಳು, ಯುದ್ಧದ ಚಿತ್ರಗಳು, ಇತ್ಯಾದಿಗಳನ್ನು ಅಧ್ಯಯನ ಕೊಠಡಿಯಲ್ಲಿ ಹಾಕಬೇಡಿ.
* ಮಗು ಗೆದ್ದ ಕ್ರೀಡೆ ಮತ್ತು ಅಧ್ಯಯನ ಪ್ರಮಾಣಪತ್ರಗಳು ಮತ್ತು ಟ್ರೋಫಿ ದಕ್ಷಿಣ ಗೋಡೆಯ ಮೇಲೆ ಇರಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ