Vastu Tips: ಹಾಸಿಗೆ ಮೇಲೆ ಊಟ ಮಾಡುವ ಅಭ್ಯಾಸ ಇದೆಯಾ; ಮೊದಲು ತಪ್ಪಿಸಿ!

ಸಾಮಾನ್ಯವಾಗಿ ನಮ್ಮ ದಿನನಿತ್ಯದ ಜೀವನದಲ್ಲಿ ಮಾಡುವ ಸಣ್ಣ ತಪ್ಪುಗಳು ದು ವಾಸ್ತು-ದೋಷಕ್ಕೆ ಕಾರಣವಾಗುತ್ತದೆ. ವಾಸ್ತುದೋಷದಿಂದಾಗಿ ಯಶಸ್ಸು ಮತ್ತು ಸಮೃದ್ಧಿಗೆ ಅಡ್ಡಿಯಾಗಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ವಾಸ್ತುಶಾಸ್ತ್ರ (Vastu Shastra) ಮನೆಯಲ್ಲಿ ಸುಖ ಶಾಂತಿ ನೆಲೆಸುವಂತೆ ಮಾಡುವುದರ ಜೊತೆಗೆ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಇದೇ ಕಾರಣಕ್ಕೆ ಇಂದು ವಾಸ್ತು ಜೀವನದಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದರೆ ತಪ್ಪಾಗಲಾರದು. ಮನೆ, ಕಚೇರಿಗಳಲ್ಲಿ ಇಂದು ವಾಸ್ತುವಿಗೆ ಹೆಚ್ಚು ಪ್ರದಾನ್ಯತೆ ಬರಲು ಕಾರಣದ ಅನೇಕ ಸಮಸ್ಯೆಗಳಿಗೆ ಸಿಗುತ್ತಿರುವ ಪರಿಹಾರವಾಗಿ. ಮನೆಯ ಕೆಲವು ಬದಲಾವಣೆಗಳಿಂದ ಸಿಗುವ ಧನಾತ್ಮಕತೆಗೆ ಈ ವಾಸ್ತು ಅನುಕರಣೆ ಹೆಚ್ಚಿನ ಹಣವಿನಿಯೋಗ ಆಗುವುದಿಲ್ಲ. ವಾಸ್ತು-ಶಾಸ್ತ್ರದಲ್ಲಿ ಅನುಸರಿಸುವ ಕೆಲವು ಮಾರ್ಪಡುಗಳ ಆಯ್ಕೆಗಳ ಆಧಾರದ ಮೇಲೆ ಧನಾತ್ಮಕವಾಗಿ ಅಥವಾ ಋಣಾತ್ಮಕವಾಗಿ ಪರಿಣಾಮ ಬೀರಬಹುದು ಎಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ. 

    1. ಸಾಮಾನ್ಯವಾಗಿ ನಮ್ಮ ದಿನನಿತ್ಯದ ಜೀವನದಲ್ಲಿ ಮಾಡುವ ಸಣ್ಣ ತಪ್ಪುಗಳು ದು ವಾಸ್ತು-ದೋಷಕ್ಕೆ ಕಾರಣವಾಗುತ್ತದೆ. ವಾಸ್ತುದೋಷದಿಂದಾಗಿ ಯಶಸ್ಸು ಮತ್ತು ಸಮೃದ್ಧಿಗೆ ಅಡ್ಡಿಯಾಗಬಹುದು. ವಾಸ್ತುದೋಷಕ್ಕೆ ಕಾರಣವಾಗುವ ದಿನನಿತ್ಯದ ತಪ್ಪುಗಳು ಯಾವುದು ಎಂಬುದಕ್ಕೆ ಇಲ್ಲಿದೆ ಮಾಹಿತಿ.

    2. ಸಾಮಾನ್ಯವಾಗಿ ನಮ್ಮ ದಿನನಿತ್ಯದ ಜೀವನದಲ್ಲಿ ಮಾಡುವ ಸಣ್ಣ ತಪ್ಪುಗಳು ದು ವಾಸ್ತು-ದೋಷಕ್ಕೆ ಕಾರಣವಾಗುತ್ತದೆ. ವಾಸ್ತುದೋಷದಿಂದಾಗಿ ಯಶಸ್ಸು ಮತ್ತು ಸಮೃದ್ಧಿಗೆ ಅಡ್ಡಿಯಾಗಬಹುದು. ವಾಸ್ತುದೋಷಕ್ಕೆ ಕಾರಣವಾಗುವ ದಿನನಿತ್ಯದ ತಪ್ಪುಗಳು ಯಾವುದು ಎಂಬುದಕ್ಕೆ ಇಲ್ಲಿದೆ ಮಾಹಿತಿಹಾಸಿಗೆಯ ಮೇಲೆ ಊಟ ಮಾಡುವುದನ್ನು ವಾಸ್ತುವಿನಲ್ಲಿ ನ್ನು ಕೆಟ್ಟ ಅಭ್ಯಾಸ ಎಂದು ಪರಿಗಣಿಸಲಾಗುತ್ತದೆ. ಹಾಸಿಗೆಯ ಮೇಲೆ ತಿನ್ನುವುದರಿಂದ ಜನರು ಏಳಿಗೆ ಸಾಧ್ಯವಿಲ್ಲ ಎಂದು ನಂಬಲಾಗಿದೆ. ಹಾಸಿಗೆಯ ಮೇಲೆ ತಿನ್ನುವ ಅಭ್ಯಾಸವು ಯಶಸ್ಸಿನ ಹಾದಿಯಲ್ಲಿ ತೊಂದರೆಗಳನ್ನು ಉಂಟುಮಾಡುತ್ತದೆ. ಅಂತಹವರು ಸುಲಭವಾಗಿ ಸಾಲದ ಸುಳಿಯಲ್ಲಿ ಸಿಲುಕುತ್ತಾರೆ.

    3. ವಾಸ್ತು ಪ್ರಕಾರ, ಊಟದ ನಂತರ ಅಡುಗೆಮನೆಯಲ್ಲಿ ಅಶುಚಿಯಾದ ಪಾತ್ರೆಗಳನ್ನು ಇಡುವುದು ಕೂಡ ಒಳ್ಳೆಯ ಲಕ್ಷಣವಲ್ಲ.  ಅಶುಚಿಯಾದ ಪಾತ್ರೆಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಹೆಚ್ಚುತ್ತದೆ.  ಆದ್ದರಿಂದ, ರಾತ್ರಿ ಮಲಗುವ ಮುನ್ನ ಪಾತ್ರೆಗಳನ್ನು ಯಾವಾಗಲೂ ತೊಳೆಯಬೇಕು. ಇದರಿಂದ ನಕಾರಾತ್ಮಕತೆ ಹೋಗುತ್ತದೆ.

    ಇದನ್ನು ಓದಿ: ಈ ಐದು ವಿಚಾರಗಳಲ್ಲಿ ಇರಲಿ ಎಚ್ಚರಿಕೆ; ಇಲ್ಲವಾದಲ್ಲಿ ಪ್ರಾಣಕ್ಕೆ ಕುತ್ತು

    4. ನೈಋತ್ಯ ದಿಕ್ಕಿನಲ್ಲಿ ಹಣ, ಆಭರಣಗಳು ಮತ್ತು ದುಬಾರಿ ವಸ್ತುಗಳನ್ನು ಯಾವಾಗಲೂ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿರುವ ಕಬೋರ್ಡ್‌ನಲ್ಲಿ ಇರಿಸಬೇಕು. ಇದು ಆದಾಯದ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮನೆಯ ಪ್ರವೇಶ ದ್ವಾರದ ಬಳಿ ತುಳಸಿ ಗಿಡವನ್ನು ಇಡಿ. ತುಳಸಿ  ಔಷಧೀಯ ಗುಣಗಳನ್ನು ಹೊಂದಿರುವ ಜೊತೆಗೆ ಪೂಜೆಗೆ ಒಳಪಡುವ ಗಿಡವಾಗಿದೆ. ಇದು ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಜೊತೆಗೆ ಸುತ್ತಮುತ್ತಲಿನ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ಪೂರ್ವ ದಿಕ್ಕಿನಲ್ಲಿ ಇರಿಸಬೇಕು.

    ಇದನ್ನು ಓದಿ: ಜ್ಯೋತಿಷ್ಯ ಶಾಸ್ತ್ರದ ಈ ನಿಯಮ ಅನುಸರಿಸಿದರೆ ದಾಂಪತ್ಯದಲ್ಲಿ ಜಗಳ ಅಲ್ಲ, ಪ್ರೀತಿ ಹೆಚ್ಚಂತೆ

    5. ಸಾಧ್ಯವಾಗದಿದ್ದರೆ ಉತ್ತರ ಅಥವಾ ಈಶಾನ್ಯದಲ್ಲಿ ಕಿಟಕಿಯ ಬಳಿ ಇಡಬಹುದು.ಮನೆಯ ಮುಂದೆಯೇ ಶೂ ಅಥವಾ ಚಪ್ಪಲಿ ಸ್ಟಾಂಡ್​ ಇಡಬೇಡಿ. ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಇದರ ಪರಿಣಾಮವಾಗಿ ಮನೆಯಲ್ಲಿ ಸಾಮರಸ್ಯ ಕೊರತೆ ಉಂಟಾಗುತ್ತದೆ. ಒಂದು ವೇಳೆ ಶೂಗಳನ್ನು ಇಟ್ಟರು ಪಶ್ಚಿಮ ಅಥವಾ ನೈಋತ್ಯ ಮೂಲೆಯಲ್ಲಿ ಇಡಬೇಕು. ಉತ್ತರ, ಆಗ್ನೇಯ ಮತ್ತು ಪೂರ್ವ ದಿಕ್ಕುಗಳಲ್ಲಿ ಇರಿಸಬೇಡಿ.

    6. ಗಡಿಯಾರವನ್ನು ಪೂರ್ವ, ಪಶ್ಚಿಮ ಮತ್ತು ಉತ್ತರ ಗೋಡೆಗಳಲ್ಲಿ ಹಾಕಬೇಕು. ಗೋಡೆಯ ಗಡಿಯಾರವನ್ನು ಈ ದಿಕ್ಕಿನಲ್ಲಿ ಇಡುವುದರಿಂದ ಹೊಸ ಅವಕಾಶಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಹಸಿರು ಗೋಡೆಯ ಗಡಿಯಾರಗಳನ್ನು ತಪ್ಪಿಸಿ, ಅವು ಅವಕಾಶಗಳನ್ನು ಕಸಿದುಕೊಳ್ಳಬಹುದು.
    Published by:Seema R
    First published: