• Home
  • »
  • News
  • »
  • astrology
  • »
  • Tulasi Plant | Vastu Tips: ತುಳಸಿ ಗಿಡ ನೆಡುವ ಮುನ್ನವೇ ಜ್ಯೋತಿಷ್ಯ ಶಾಸ್ತ್ರದಲ್ಲಿರುವ ನಿಯಮಗಳನ್ನು ತಿಳಿದುಕೊಳ್ಳಿ

Tulasi Plant | Vastu Tips: ತುಳಸಿ ಗಿಡ ನೆಡುವ ಮುನ್ನವೇ ಜ್ಯೋತಿಷ್ಯ ಶಾಸ್ತ್ರದಲ್ಲಿರುವ ನಿಯಮಗಳನ್ನು ತಿಳಿದುಕೊಳ್ಳಿ

ತುಳಸಿ

ತುಳಸಿ

ಕಾರ್ತಿಕ ಮಾಸದಲ್ಲಿ ತುಳಸಿ ಗಿಡವನ್ನು ನೆಡುವುದು ಲಕ್ಷ್ಮೀ ದೇವಿಯನ್ನೇ ಮನೆಗೆ ತಂದಂತೆ ಎಂಬ ನಂಬಿಕೆ ಇದೆ

  • Trending Desk
  • 4-MIN READ
  • Last Updated :
  • Share this:

Tulasi Plant: ಹಿಂದೂ ಧರ್ಮದಲ್ಲಿ ತುಳಸಿಯನ್ನು (Tulasi) ಸಂಪತ್ತಿನ ದೇವತೆ ಲಕ್ಷ್ಮೀಯ (Goddess Laxmi) ರೂಪದಲ್ಲಿ ಪೂಜಿಸುವುದರಿಂದ ಈ ಗಿಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಜೀವನದಲ್ಲಿ ಯಾವುದೇ ಹಣಕಾಸಿನ ತೊಂದರೆಗಳನ್ನು (Finance Crisis) ಅನುಭವಿಸುತ್ತಿದ್ದರೆ ತುಳಸಿ ಗಿಡವನ್ನು ಲಕ್ಷ್ಮೀ ದೇವಿಯ ಪ್ರತಿರೂಪವಾಗಿ ಪೂಜಿಸುವುದರಿಂದ ಸಂಕಷ್ಟಗಳು ನಿವಾರಣೆಯಾಗುತ್ತವೆ ಎಂಬುದಾಗಿ ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ವಾಸ್ತು (Vastu) ಹಾಗೂ ಜ್ಯೋತಿಷ್ಯಶಾಸ್ತ್ರದಲ್ಲಿ (Astrology) ತುಳಸಿಯ ಕುರಿತು ಕೆಲವೊಂದು ನಿಯಮಗಳು ಹಾಗೂ ನಿರ್ದೇಶನಗಳನ್ನು ತಿಳಿಸಲಾಗಿದ್ದು ಪ್ರತಿಯೊಬ್ಬರೂ ಅದನ್ನು ಅನುಸರಿಸಲೇಬೇಕು.


ತುಳಸಿ ಗಿಡವನ್ನು ಮನೆಯಲ್ಲಿ ನೆಡುವ ಸಿದ್ಧತೆ ನೀವು ಮಾಡಿಕೊಂಡಿದ್ದರೆ ಅದನ್ನು ಕಾರ್ತಿಕ ಮಾಸದಲ್ಲಿ ನೆಡಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಕಾರ್ತಿಕ ಮಾಸದಲ್ಲಿ ತುಳಸಿ ಗಿಡವನ್ನು ನೆಡುವುದು ಲಕ್ಷ್ಮೀ ದೇವಿಯನ್ನೇ ಮನೆಗೆ ತಂದಂತೆ ಎಂಬ ನಂಬಿಕೆ ಇದೆ.


ಶಾಸ್ತ್ರಗಳ ಪ್ರಕಾರ ಕಾರ್ತಿಕ ಮಾಸದ ಯಾವುದೇ ಗುರುವಾರದಂದು ತುಳಸಿ ಗಿಡವನ್ನು ಮನೆಗೆ ತರಬಹುದು. ಗುರುವಾರ ವಿಷ್ಣುವಿನ ದಿನವಾಗಿದ್ದು, ವಿಷ್ಣುವಿನ ರೂಪದಲ್ಲಿರುವ ತುಳಸಿಯು ಶ್ರೀಕೃಷ್ಣನಿಗೆ ತುಂಬಾ ಪ್ರಿಯವಾದುದು.


ಈ ದಿಕ್ಕಿನಲ್ಲಿ ತುಳಸಿ ಗಿಡ ಹಚ್ಚಬೇಕು


ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡವನ್ನು ಯಾವಾಗಲೂ ಮನೆಯ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ನೆಡಬೇಕು. ಈ ದಿಕ್ಕಿನಲ್ಲಿ ದೇವತೆಗಳು ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ.


ತುಳಸಿ ಗಿಡಗಳನ್ನು ಮನೆಯ ಬಾಲ್ಕನಿ ಅಥವಾ ಕಿಟಕಿಯ ಪಕ್ಕ ನೆಡಬಹುದು. ಆದರೆ ವಾಸ್ತು ಶಾಸ್ತ್ರದಲ್ಲಿ ನೀಡಿರುವ ನಿರ್ದೇಶನವನ್ನು ಗಮನಿಸಿಕೊಂಡು ನೆಡಬೇಕು.


ಅಪ್ಪಿತಪ್ಪಿಯೂ ಈ ದಿಕ್ಕಿನಲ್ಲಿ ಬೇಡ


ತುಳಸಿ ಗಿಡಗಳನ್ನು ಅಪ್ಪಿತಪ್ಪಿಯೂ ಮನೆಯ ದಕ್ಷಿಣ ದಿಕ್ಕಿನಲ್ಲಿ ನೆಡಬಾರದು. ಈ ದಿಕ್ಕು ಪಿತೃವಿಗೆ ಸೇರಿದ್ದು ಇಲ್ಲಿ ತುಳಸಿ ಗಿಡವನ್ನು ಇಟ್ಟರೆ ಭಾರೀ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ವಾಸ್ತು ಶಾಸ್ತ್ರ ತಿಳಿಸಿದೆ.


ಈಶಾನ್ಯ ದಿಕ್ಕಿನಲ್ಲಿ ತುಳಸಿ ಗಿಡವನ್ನೂ ನೆಡಬಹುದು.


ತುಳಸಿ ಗಿಡಗಳನ್ನು ಮನೆಯ ಪ್ರವೇಶ ದ್ವಾರದಲ್ಲಿ ಅಥವಾ ಕಸವನ್ನು ಇಡುವ ಅಥವಾ ಚಪ್ಪಲಿ ಇರಿಸುವ ಯಾವುದೇ ಸ್ಥಳದಲ್ಲಿ ಎಂದಿಗೂ ನೆಡಬಾರದು.


ತುಳಸಿ ಗಿಡಕ್ಕೆ ಸಿಂಧೂರ ಇಡಿ


ತುಳಸಿಗೆ ಕುಂಕುಮವನ್ನು ಅರ್ಪಿಸುವ ಬಗ್ಗೆ ಸಾಕಷ್ಟು ಗೊಂದಲಗಳಿವೆ, ಆದರೆ ವಾಸ್ತು ಶಾಸ್ತ್ರದ ಪ್ರಕಾರ, ತುಳಸಿ ಗಿಡಕ್ಕೆ ಸಿಂಧೂರವನ್ನು ಅರ್ಪಿಸಬಹುದು.


ತುಳಸಿ ಗಿಡವನ್ನು ಯಾವಾಗಲೂ ಮಣ್ಣಿನ ಪಾತ್ರೆಯಲ್ಲಿ ನೆಡಬೇಕು. ಪ್ಲಾಸ್ಟಿಕ್ ಪಾತ್ರೆಗಳನ್ನು ಎಂದಿಗೂ ಬಳಸಬೇಡಿ. ಸಾಧ್ಯವಾದರೆ, ತುಳಸಿ ಪಾತ್ರೆಯಲ್ಲಿ ಸುಣ್ಣ ಅಥವಾ ಅರಿಶಿನದೊಂದಿಗೆ 'ಶ್ರೀ ಕೃಷ್ಣ' ಎಂದು ಬರೆಯಿರಿ.


ತುಳಸಿ ಸಸ್ಯವು ಬುಧ ಗ್ರಹವನ್ನು ಪ್ರತಿನಿಧಿಸುತ್ತದೆ ಮತ್ತು ಈ ಗ್ರಹವನ್ನು ಕೃಷ್ಣನ ರೂಪವೆಂದು ಪರಿಗಣಿಸಲಾಗಿದೆ.


ಇದನ್ನೂ ಓದಿ: Vastu Tips: ವಾಸ್ತು ಶಾಸ್ತ್ರದ ಪ್ರಕಾರ ಈ ವಸ್ತುಗಳನ್ನು ಗಿಫ್ಟ್ ಆಗಿ ಕೊಡಬಾರದಂತೆ


ತುಳಸಿಯನ್ನು ನಿಯಮಿತವಾಗಿ ಪೂಜಿಸಬಹುದು ಆದರೆ ಸಂಜೆ ಇದನ್ನು ಸ್ಪರ್ಶಿಸಬಾರದು ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ. ಇದಲ್ಲದೆ, ಏಕಾದಶಿ, ಭಾನುವಾರ, ಚಂದ್ರ ಮತ್ತು ಸೂರ್ಯಗ್ರಹಣದ ದಿನಗಳಲ್ಲಿ ತುಳಸಿಯನ್ನು ಸ್ಪರ್ಶಿಸಬಾರದು. ಭಾನುವಾರವೂ ತುಳಸಿಗೆ ನೀರು ಹಾಕಬಾರದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.


ಅಡುಗೆ ಕೋಣೆ, ಬಚ್ಚಲು ಬಳಿ ಇರಿಸಬೇಡಿ


ತುಳಸಿಗೆ ನೀರು ಹಾಕುವುದಲ್ಲದೆ ಹಸಿ ಹಾಲನ್ನು ಅರ್ಪಿಸಬಹುದು ಹಾಗೂ ತುಳಸಿಗೆ ಹಾಲು ಎರೆಯುವುದು ದುರಾದೃಷ್ಟವನ್ನು ದೂರಮಾಡುತ್ತದೆ ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ.


Vastu Rules for Tulsi plant stg mrq
ತುಳಸಿ


ತುಳಸಿ ಗಿಡಗಳನ್ನು ಅಡುಗೆ ಕೋಣೆ ಅಥವಾ ಬಚ್ಚಲು ಕೋಣೆಯ ಬಳಿ ಇಡಬಾರದು. ಪೂಜಾ ಕೋಣೆಯ ಕಿಟಕಿಯ ಬಳಿ ತುಳಸಿ ಗಿಡವನ್ನು ಇಡಬಹುದು.


ಪ್ರತಿದಿನ ತುಳಸಿಗೆ ಪ್ರದಕ್ಷಿಣೆ ಹಾಕಲು ಬಯಸಿದರೆ, ನೀರನ್ನು ಅರ್ಪಿಸುವಾಗ, ತುಳಸಿ ಗಿಡಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಬೇಕು. ಮೊದಲು ಸೂರ್ಯನಿಗೆ ನೀರನ್ನು ಅರ್ಪಿಸಬೇಕು ಮತ್ತು ನಂತರ ತುಳಸಿಗೆ ನೀರನ್ನು ಅರ್ಪಿಸಬೇಕು.


ಇದನ್ನೂ ಓದಿ: Vastu Tips: ಈ ವಾಸ್ತು ಸಲಹೆಗಳು ನಿಮ್ಮ ವೈವಾಹಿಕ ಜೀವನವನ್ನು ಸಿಹಿಯಾಗಿಡುತ್ತವೆ!


ತುಳಸಿ ಎಲೆಗಳು ಒಣಗದಂತೆ ನೋಡಿಕೊಳ್ಳಿ


ತುಳಸಿ ಎಲೆಗಳನ್ನು 15 ದಿನಗಳ ಕಾಲ ಭಗವಾನ್ ಕೃಷ್ಣನ ವಿಗ್ರಹ ಇಲ್ಲವೇ ಫೋಟೋದ ಬಳಿ ಇಡಬಹುದು ಮತ್ತು ತುಳಸಿ ಎಲೆಗಳು ಒಣಗಿದಾಗ ಅವುಗಳನ್ನು ಪ್ರಸಾದವಾಗಿ ತೆಗೆದುಕೊಳ್ಳಬಹುದು ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ.


ತುಳಸಿ ಗಿಡಗಳನ್ನು ಅಶುಚಿಯಾದ ಕೈಗಳಿಂದ ಅಥವಾ ಕೊಳಕು ಕೈಗಳಿಂದ ಮುಟ್ಟಬಾರದು. ಹೀಗೆ ಮಾಡುವುದರಿಂದ ಲಕ್ಷ್ಮಿಯು ನಿಮ್ಮ ಮೇಲೆ ತುಂಬಾ ಕೋಪಗೊಳ್ಳುತ್ತಾಳೆ ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ

Published by:Mahmadrafik K
First published: