Vastu Plants: ಈ ಗಿಡಗಳು ಮನೆಯಲ್ಲಿದ್ರೆ ಸಮಸ್ಯೆಗಳು ಹತ್ತಿರವೂ ಸುಳಿಯಲ್ಲ

ವಾಸ್ತು

ವಾಸ್ತು

Vastu Tips: ಮನಸ್ಸಿದ್ದಲ್ಲಿ ಮಾರ್ಗ ಅನ್ನೋ ಹಾಗೆ ನೀವು ಮನಸ್ಸು ಮಾಡಿದರೆ ಇರುವ ಸ್ವಲ್ಪ ಜಾಗಗಳಲ್ಲಿಯೇ ಗಿಡಗಳನ್ನು ಬೆಳೆಯಬಹುದು. ಈಗಂತೂ ಸ್ವತಂತ್ರ ಮನೆಗಳಾಗಲಿ ಅಥವಾ ಅಪಾರ್ಟ್‌ಮೆಂಟ್‌ ಆಗಲಿ, ಮನೆ ಎಂದ ಮೇಲೆ ಬಾಲ್ಕನಿ ಸೇರಿದಂತೆ ಒಂದಷ್ಟು ಜಾಗ ಇದ್ದೇ ಇರುತ್ತದೆ. ಇಂಥ ಜಾಗದಲ್ಲಿ ಸ್ವಲ್ಪ ಗಾಳಿ-ಬೆಳಕು, ಸ್ವಲ್ಪ ಆರೈಕೆ ಮಾಡುವ ಮನಸ್ಸಿದ್ದರೆ ಸುಲಭವಾಗಿ ಗಿಡಗಳನ್ನು ಬೆಳೆಸಬಹುದು.

ಮುಂದೆ ಓದಿ ...
  • Trending Desk
  • 4-MIN READ
  • Last Updated :
  • Share this:

ಗಿಡಗಳನ್ನು(Plants)  ಬೆಳೆಸಬೇಕು, ಮನೆಯ ಸುತ್ತಲೂ ಹೂವಿನ (Flower) ಗಿಡಗಳನ್ನು ನೆಡಬೇಕು ಅಂತ ತುಂಬ ಜನರು ಅಂದುಕೊಳ್ಳುತ್ತಾರೆ. ಆದರೆ ಸ್ಥಳದ ಕೊರತೆಯಿಂದಾಗಿ ಅದು ಸಾಧ್ಯವಾಗೋದಿಲ್ಲ. ಆದರೆ ಮನಸ್ಸಿದ್ದಲ್ಲಿ ಮಾರ್ಗ ಅನ್ನೋ ಹಾಗೆ ನೀವು ಮನಸ್ಸು ಮಾಡಿದರೆ ಇರುವ ಸ್ವಲ್ಪ ಜಾಗಗಳಲ್ಲಿಯೇ ಗಿಡಗಳನ್ನು ಬೆಳೆಯಬಹುದು. ಈಗಂತೂ ಸ್ವತಂತ್ರ ಮನೆಗಳಾಗಲಿ (Home) ಅಥವಾ ಅಪಾರ್ಟ್‌ಮೆಂಟ್‌ ಆಗಲಿ, ಮನೆ ಎಂದ ಮೇಲೆ ಬಾಲ್ಕನಿ ಸೇರಿದಂತೆ ಒಂದಷ್ಟು ಜಾಗ ಇದ್ದೇ ಇರುತ್ತದೆ. ಇಂಥ ಜಾಗದಲ್ಲಿ ಸ್ವಲ್ಪ ಗಾಳಿ-ಬೆಳಕು, ಸ್ವಲ್ಪ ಆರೈಕೆ ಮಾಡುವ ಮನಸ್ಸಿದ್ದರೆ ಸುಲಭವಾಗಿ ಗಿಡಗಳನ್ನು ಬೆಳೆಸಬಹುದು. ಬರೀ ಸುಂದರವಾಗಿ ಕಾಣುವುದು ಮಾತ್ರವಲ್ಲ, ವಾಸ್ತು (Vastu) ಪ್ರಕಾರ ನೀವು ಈ ಸಸ್ಯಗಳನ್ನು ಬೆಳೆಸಿದಲ್ಲಿ ಸಾಕಷ್ಟು ಉಪಯೋಗಗಳ್ನು ಪಡೆಯಬಹುದಾಗಿದೆ. ಹಾಗಿದ್ರೆ ಯಾವ ಸಸ್ಯಗಳನ್ನು ಬೆಳೆಸಿದರೆ ಏನು ಲಾಭಗಳಿವೆ ಅನ್ನೋದನ್ನು ನೋಡೋಣ.


1.ಚಂಪಾ ಗಿಡ : ವಾಸ್ತು ಪ್ರಕಾರ, ನಿಮ್ಮ ಮನೆಗೆ ಪ್ರಾಣ ಶಕ್ತಿಯನ್ನು ತರಲು ಚಂಪಾ ಅತ್ಯುತ್ತಮ ಸಸ್ಯವಾಗಿದೆ. ನಿಮ್ಮ ಜೀವನಕ್ಕೆ ಮಂಗಳಕರ ಶಕ್ತಿಯನ್ನು ಆಹ್ವಾನಿಸಲು ನೀವು ಅದನ್ನು ಬಾಲ್ಕನಿಯಲ್ಲಿ, ಮುಖ್ಯ ಬಾಗಿಲುಗಳ ಬಳಿ ಅಥವಾ ವರಾಂಡಾದ ಬಳಿ ಇರಿಸಬಹುದು. ಈ ಸಸ್ಯಗಳು ಸಕಾರಾತ್ಮಕತೆ ಮತ್ತು ಹೊಸ ಆರಂಭವನ್ನು ಸಂಕೇತಿಸುತ್ತವೆ. ಜೊತೆಗೆ ಇವು ಅದೃಷ್ಟದ ಸಂಕೇತ ಎಂಬುದಾಗಿಯೂ ಹೇಳಲಾಗುತ್ತದೆ.


2.ಮನಿ ಪ್ಲಾಂಟ್: ಈ ಸಸ್ಯವು ಒಬ್ಬರ ವೃತ್ತಿ ಮತ್ತು ವ್ಯವಹಾರದಲ್ಲಿನ ಬೆಳವಣಿಗೆಯನ್ನು ಸೂಚಿಸುತ್ತದೆ. ಮನಿ ಪ್ಲಾಂಟ್‌ ಅನ್ನು ಉತ್ತರ ದಿಕ್ಕಿನಲ್ಲಿಟ್ಟರೆ ಹೊಸ ಅವಕಾಶಗಳು ಒಲಿದು ಬರುತ್ತದೆ ಎಂಬುದಾಗಿ ಹೇಳಲಾಗುತ್ತದೆ. ಅಲ್ಲದೇ ಉತ್ತಮ ಫಲಿತಾಂಶಕ್ಕಾಗಿ, ನೀವು ಅದನ್ನು ನೀಲಿ ಬಣ್ಣದ ಬಾಟಲಿಯಲ್ಲಿ ಇರಿಸಬಹುದು. ಅಲ್ಲದೇ ಇದನ್ನು ಒಳಾಂಗಣದಲ್ಲಿ ಇರಿಸಬಹುದು.


3.ತುಳಸಿ: ನಮ್ಮಲ್ಲಿ ತುಳಸಿಗೆ ವಿಶೇಷ ಪ್ರಾಮುಖ್ಯತೆ ಇದೆ. ನೀವು ಅದನ್ನು ನಿಮ್ಮ ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬಹುದು. ಇದು ಮನೆಯವರ ಮನಸ್ಸಿಗೆ ಶಾಂತಿ ತರುವುದರ ಜೊತೆಗೆ ಕುಟುಂಬದಲ್ಲಿ ಸಾಮರಸ್ಯ ಇರುವಂತೆ ನೋಡಿಕೊಳ್ಳುತ್ತದೆ. ತುಳಸಿಯು ನಕಾರಾತ್ಮಕತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದರೆ ಇದಕ್ಕೆ ಪ್ರತಿದಿನ ಕೆಲವು ಗಂಟೆಗಳ ಕಾಲ ಸೂರ್ಯನ ಬೆಳಕು ಬೇಕಾಗುತ್ತದೆ. ಆದ್ದರಿಂದ ಇದನ್ನು ಬಾಲ್ಕನಿಗಳಲ್ಲಿ ಇರಿಸಬೇಕಲ್ಲದೇ ಬೆಳಕು ತಾಕುವಂತಿಡಬೇಕು.


ಇದನ್ನೂ ಓದಿ: ಅಪ್ಪಿ-ತಪ್ಪಿ ರಾಹುಕಾಲದಲ್ಲಿ ಈ ಕೆಲಸಗಳನ್ನು ಮಾಡ್ಬೇಡಿ


4.ಸ್ನೇಕ್‌ ಪ್ಲಾಂಟ್‌ : ಈ ಸಸ್ಯವು ಗಾಳಿಯನ್ನು ಶುದ್ಧೀಕರಿಸುವುದರಿಂದ ಇದು ಕಲುಷಿತ ಗಾಳಿ ಹೊಂದಿರುವ ನಗರಗಳಲ್ಲಿ ಸೂಕ್ತವಾದ ಆಯ್ಕೆಯಾಗಿದೆ. ಇದು ನಿಮ್ಮಲ್ಲಿಯ ಆತಂಕ ಮತ್ತು ಒತ್ತಡವನ್ನು ಸಹ ಕಡಿಮೆ ಮಾಡುತ್ತದೆ. ಮನೆಯ ಪೂರ್ವ ಮತ್ತು ಆಗ್ನೇಯ ದಿಕ್ಕಿನ ನಡುವೆ ಹಾವಿನ ಗಿಡವನ್ನು ಇಡುವುದು ಉತ್ತಮ. ಆದರೆ ಇದನ್ನು ಮಲಗುವ ಕೋಣೆಯಲ್ಲಿ ಇಡುವುದನ್ನು ತಪ್ಪಿಸಿ.


5.ಮಲ್ಲಿಗೆ: ಇದು ಉತ್ತಮ ನಿದ್ರೆಗೆ ಸಹಕಾರಿ. ಅಲ್ಲದೇ ಇದು ಮನಸ್ಸಿನ ಉದ್ವೇಗ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಮನೆಯೊಳಗೆ ಉತ್ತಮ ಶಕ್ತಿಯನ್ನು ಸೆಳೆಯಲು, ನರಗಳನ್ನು ಶಾಂತಗೊಳಿಸಲು ಮತ್ತು ಕುಟುಂಬ ಸದಸ್ಯರ ನಡುವೆ ಸಾಮರಸ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನು ಪೂರ್ವ ಬಾಲ್ಕನಿಯಲ್ಲಿ ಅಥವಾ ಮುಖ್ಯ ಬಾಗಿಲಿನ ಮುಂದೆ ಇಡಬೇಕು. ಅಲ್ಲದೇ ಇದಕ್ಕೆ ಸಾಕಷ್ಟು ಸೂರ್ಯನ ಬೆಳಕು ಮತ್ತು ಆರೈಕೆಯ ಅಗತ್ಯವಿರುತ್ತದೆ.




6. ಜೇಡ್‌ ಸಸ್ಯ: ವಾಸ್ತು ಶಾಸ್ತ್ರದ ಪ್ರಕಾರ ಈ ಸಸ್ಯವು ಧನಾತ್ಮಕ ಶಕ್ತಿ, ಬೆಳವಣಿಗೆ ಮತ್ತು ಸಮೃದ್ಧಿಗೆ ಸಂಬಂಧಿಸಿದೆ. ನೀವು ಅವುಗಳನ್ನು ಪೂರ್ವ, ಉತ್ತರ ಮತ್ತು ಪೂರ್ವ ಮತ್ತು ಆಗ್ನೇಯ ದಿಕ್ಕಿನ ನಡುವೆ ಇರಿಸಬಹುದು. ಅಲ್ಲದೇ ನೀವಿದನ್ನು ಡೈನಿಂಗ್‌ ಟೇಬಲ್‌ ಮಧ್ಯದಲ್ಲಿಯೂ ಇರಿಸಬಹುದು. ಯಶಸ್ಸು ಮತ್ತು ಅನುಗ್ರಹಕ್ಕಾಗಿ ನೀವು ಅವುಗಳನ್ನು ಮುಖ್ಯ ಬಾಗಿಲಿನ ಬಳಿ ಇರಿಸಬಹುದು. ಆದರೆ ಬಾತ್‌ರೂಂ ಹಾಗೂ ಬೆಡ್‌ರೂಂಗಳಲ್ಲಿ ಇರಿಡಬೇಡಿ.


ಇದನ್ನೂ ಓದಿ: ಮನೆಯಲ್ಲಿ ಕಾಣಿಸುವ ಈ ಲಕ್ಷಣ ನೆಗೆಟಿವ್ ಎನರ್ಜಿಯ ಸೂಚನೆಯಂತೆ


7.ಸೇವಂತಿಗೆ: ಸೇವಂತಿಗೆ ಗಿಡವು ಸಂತೋಷ, ಆಶಾವಾದ, ಧನಾತ್ಮಕ ಶಕ್ತಿ ಮತ್ತು ಅದೃಷ್ಟದ ಸಂಕೇತ ಎಂದು ಹೇಳಲಾಗುತ್ತದೆ. ಇದು ಜೀವನದ ಶಾಂತಿಗೆ ಸಹಕಾರಿ. ಇದನ್ನು ನೀವು ಲಿವಿಂಗ್ ರೂಮಿನಲ್ಲಿ ಇಡಬೇಕು. ಅಲ್ಲದೇ ಮುಖ್ಯವಾಗಿ ಮುಳ್ಳಿನ ಗಿಡಗಳು ಮತ್ತು ಸತ್ತ ಸಸ್ಯಗಳನ್ನು ಮನೆಯೊಳಗೆ ಇಡುವುದನ್ನು ಆದಷ್ಟೂ ತಪ್ಪಿಸಿ.

Published by:Sandhya M
First published: