Vastu Tip: ಮನೆಯಲ್ಲಿ ಪದೇ ಪದೇ ಸಮಸ್ಯೆ ಕಾಡುತ್ತಿದ್ರೆ, ಈ ಪಕ್ಷಿ ಚಿತ್ರ ಇಡಬೇಕಂತೆ!

ಈ  ಪಕ್ಷಿಯು ಯಶಸ್ಸು, ಶಕ್ತಿ, ಖ್ಯಾತಿ ಮತ್ತು ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ. ಈ ಪಕ್ಷಿಯ ಚಿತ್ರ ಅಥವಾ ವಿಗ್ರಹವನ್ನು ಮನೆಯಲ್ಲಿ ದಕ್ಷಿಣ ಭಾಗದಲ್ಲಿ ಇರಿಸಿದರೆ ತುಂಬಾ ಒಳ್ಳೆಯದು ಎಂದು ವಾಸ್ತು ಶಾಸ್ರ್ತದ ಪಂಡಿತರು ಸಲಹೆ ನೀಡುತ್ತಾರೆ.

ಪಕ್ಷಿ

ಪಕ್ಷಿ

  • Share this:
ನಿಮ್ಮ ಮನೆಯಲ್ಲಿ ತುಂಬಾ ಸಮಸ್ಯೆಗಳಿವೆಯೇ?, ನಿಮಗೆ ಶತ್ರು ಕಾಟದ ತೊಂದರೆ ಇದೆಯೇ?, ಏನೇ ಕೆಲಸ ಮಾಡಿದರೂ ನಿಮಗೆ ಯಶಸ್ಸು (Success) ಸಿಗುತ್ತಿಲ್ಲವೇ? ಈ ತರದ ಮಾತುಗಳನ್ನು ಜೀವನದಲ್ಲಿ ಒಂದಲ್ಲ ಒಂದು ಸಲ ನಾವೆಲ್ಲರೂ ಕೇಳಿಯೇ ಇರ್ತಿವಿ. ಅದರಲ್ಲೂ ಕಷ್ಟಗಳ ಮೇಲೆ ಕಷ್ಟಗಳು ಬಂದರೆ ಮುಗಿತು... ಆ ವಾಸ್ತು ಸಲಹೆಯನ್ನು ಒಂದು ಸಲ ಟ್ರೈ ಮಾಡಿ ನೋಡೋಣ ಎಂದುಕೊಂಡಿರುತ್ತೆವೆ. ಟಿವಿ- ದಿನಪತ್ರಿಕೆ ಎಲ್ಲ ಕಡೆ ಹೇಳೋ ವಾಸ್ತು ಸಲಹೆಗಳನ್ನು (Vastu Tips)  ಕಷ್ಟ ಬಂದಾಗ ಒಂದು ಬಿಡದೇ ಫಾಲೋ ಮಾಡೋಣ ಅಂದುಕೊಂಡಿರ್ತಿವಿ. ಹಾಗಿದ್ದರೆ, ಈ ವಾಸ್ತು ಸಲಹೆಯನ್ನು ಒಂದು ಸಲ ಟ್ರೈ ಮಾಡಿ.

ಹಾಗಿದ್ದರೆ ಆ ವಾಸ್ತು ಸಲಹೆ ಯಾವುದು?

ಆ ವಾಸ್ತು ಸಲಹೆಯು ತುಂಬಾ ಸಿಂಪಲ್‌ ಆಗಿದೆ. ಅದು ಏನೆಂದರೆ, ಫಿನಿಕ್ಸ್‌ ಪಕ್ಷಿಯ ಚಿತ್ರವನ್ನು ಇರಿಸಿಕೊಳ್ಳುವುದರಿಂದ ಮನೆಯೂ ಸಕಾರಾತ್ಮಕತೆಯಿಂದ ತುಂಬಿ ನಿಮ್ಮ ಕುಟುಂಬವನ್ನು ಯಶಸ್ಸಿನ ಶಿಖರಕ್ಕೆ ಕರೆದುಕೊಂಡು ಹೋಗುತ್ತದೆ ಎಂಬ ನಂಬಿಕೆ ಇದೆ. ಈ ಫಿನಿಕ್ಸ್ ಪಕ್ಷಿಯು ಯಶಸ್ಸು, ಶಕ್ತಿ, ಖ್ಯಾತಿ ಮತ್ತು ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ. ಈ ಪಕ್ಷಿಯ ಚಿತ್ರ ಅಥವಾ ವಿಗ್ರಹವನ್ನು ಮನೆಯಲ್ಲಿ ದಕ್ಷಿಣ ಭಾಗದಲ್ಲಿ ಇರಿಸಿದರೆ ತುಂಬಾ ಒಳ್ಳೆಯದು ಎಂದು ವಾಸ್ತು ಶಾಸ್ರ್ತದ ಪಂಡಿತರು ಸಲಹೆ ನೀಡುತ್ತಾರೆ.

ಈ ದಿಕ್ಕಿನಲ್ಲಿರಬೇಕು ಫೋಟೋ

ಪ್ರತಿಯೊಬ್ಬರ ಜೀವನದಲ್ಲಿ ವಾಸ್ತು ಶಾಸ್ತ್ರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಫಿನಿಕ್ಸ್ ಪಕ್ಷಿಯ ಚಿತ್ರವನ್ನು ಮನೆಯಲ್ಲಿ ಏಕೆ ಮತ್ತು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದನ್ನು ವಾಸ್ತು ಪಂಡಿತರಾದ ಇಂದು ಪ್ರಕಾಶ್ ಅವರು ಈ ಫಿನಿಕ್ಸ್‌ ಪಕ್ಷಿಯ ಚಿತ್ರ ವಾಸ್ತು ಸಮಸ್ಯೆಗಳಿಗೆ ಎಷ್ಟು ಪರಿಣಾಮಕಾರಿ ಎಂಬುದನ್ನು ಇಲ್ಲಿ ತಿಳಿಸಿದ್ದಾರೆ. ಫಿನಿಕ್ಸ್‌ ಪಕ್ಷಿಯ ಚಿತ್ರವನ್ನು ಹೀಗೆ ಮನೆಯಲ್ಲಿ ಇರಿಸುವುದರಿಂದ ಆಗುವ ಲಾಭಗಳೇನು? ಸಾಮಾನ್ಯವಾಗಿ ಪಕ್ಷಿಗಳನ್ನು ಸ್ವಾತಂತ್ರ್ಯದ ಸಂಕೇತವೆಂದು ಹೇಳಲಾಗುತ್ತದೆ. ಆದರೆ ಇಂದು ಬೆಳೆದು ನಿಂತ ನಗರಗಳಲ್ಲಿ ಪರಿಸರ ನಾಶವಾಗಿ ಪಕ್ಷಿಗಳ ಚಿಲಿಪಿಲಿ ನಮಗೆಲ್ಲೂ ಕೇಳಿಸದಂತೆ ಆಗಿರುವುದು ನಿಜಕ್ಕೂ ದುರದೃಷ್ಟ ಸಂಗತಿ ಆಗಿದೆ ಎಂದು ವಿಷಾದ ವ್ಯಕ್ತಪಡಿಸಬಹುದು.

ಇದನ್ನು ಓದಿ: ಈ ಬಾರಿ ದೇವಶಯನಿ ಏಕಾದಶಿ ದಿನ ರೂಪುಗೊಳ್ಳುತ್ತಿದೆ ವಿಶೇಷ ಯೋಗ

ಈ ಕಾರಣದಿಂದಾಗಿ ವಾಸ್ತು ಸಲಹೆಗಳನ್ನು ಫಾಲೋ ಮಾಡುವವರು ತಮ್ಮ-ತಮ್ಮ ಮನೆಗಳಲ್ಲಿ ಫಿನಿಕ್ಸ್‌ ಪಕ್ಷಿ ಅಥವಾ ಬೇರೆ ಪಕ್ಷಿಯ ಚಿತ್ರವನ್ನು ಇರಿಸಿಕೊಳ್ಳುತ್ತಾರೆ. ಹಿಂದಿನ ಕಾಲದಲ್ಲಿ ಮನೆಯಲ್ಲಿ ಪಕ್ಷಿಗಳಿದ್ದರೆ ಅವುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತಿತ್ತು. ಈಗ ಮತ್ತೆ ಆ ಸಲಹೆ ಎಲ್ಲೆಡೆ ಖ್ಯಾತಿ ಪಡೆಯುತ್ತಿದೆ. ಆದರೆ ಮನೆಯಲ್ಲಿ ಯಾವುದೋ ಪಕ್ಷಿಯ ಚಿತ್ರ ಇರಿಸುವುದಕ್ಕಿಂತ ಈ ಫಿನಿಕ್ಸ್‌ ಪಕ್ಷಿಯ ಚಿತ್ರ ಇರಿಸುವುದು ಅತಿ ಉತ್ತಮ ಎಂದು ವಾಸ್ತು ಪಂಡಿತರು ವಾಸ್ತು ಸಲಹೆ ನೀಡುತ್ತಾರೆ.

ಈ ಫಿನಿಕ್ಸ್‌ ಪಕ್ಷಿ ಚಿತ್ರವನ್ನೇ ಏಕೆ ಮನೆಯಲ್ಲಿ ಇರಿಸಬೇಕು?

ಮನೆಯಲ್ಲಿ ಈ ಫಿನಿಕ್ಸ್‌ ಪಕ್ಷಿಯ ಚಿತ್ರವನ್ನೆ ಏಕೆ ಇರಿಸಬೇಕು ಎಂಬುದು ಎಲ್ಲರಿಗೂ ಸಾಮಾನ್ಯವಾಗಿ ಬರುವ ಪ್ರಶ್ನೆ ಆಗಿದೆ. ಅದಕ್ಕೆ ಉತ್ತರ ಇಲ್ಲಿದೆ. ಫಿನಿಕ್ಸ್‌ ಪಕ್ಷಿಯು ಯಶಸ್ಸು, ಶಕ್ತಿ, ಖ್ಯಾತಿ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ. ಈ ಪಕ್ಷಿಯ ಚಿತ್ರ ಅಥವಾ ವಿಗ್ರಹವನ್ನು ಮನೆಯ ದಕ್ಷಿಣ ಭಾಗದಲ್ಲಿ ಇರಿಸುವುದರಿಂದ ಉತ್ತಮ ಲಾಭಗಳನ್ನು ಗಳಿಸಬಹುದು. ವಾಸ್ತು ಶಾಸ್ತ್ರದ ಪ್ರಕಾರ ಹೀಗೆ ಮಾಡುವುದರಿಂದ ಯಶಸ್ಸಿನ ಹಾದಿಯಲ್ಲಿ ಬರುವ ಕಷ್ಟಗಳಿಂದ ಹೊರಬರುವುದು ಸುಲಭವಾಗುತ್ತದೆ. ಇದು ವ್ಯಕ್ತಿಗೆ ತನ್ನ ಗುರಿಯನ್ನು ಸಾಧಿಸಲು ಸಕಾರಾತ್ಮಕ ಶಕ್ತಿಯನ್ನು ಒದಗಿಸುತ್ತದೆ, ಇದು ಕೆಲಸದ ಕಡೆಗೆ ವ್ಯಕ್ತಿಯಲ್ಲಿ ಹೊಸ ಉತ್ಸಾಹವನ್ನು, ಹೊಸ ಭರವಸೆಯನ್ನು ಸೃಷ್ಟಿಸುತ್ತದೆ. ಆದರೆ ಪಕ್ಷಿಗೆ ಸಂಬಂಧಿಸಿದ ಇನ್ನೊಂದು ಅಂಶವು ವಾಸ್ತವದಲ್ಲಿ ಫೀನಿಕ್ಸ್‌ ಪಕ್ಷಿಯೇ ಅಲ್ಲ ಅದು ಕೇವಲ ಒಂದು ಫ್ಯಾಂಟಸಿ ಎಂದು ಹೇಳಲಾಗುತ್ತದೆ. ಇದನ್ನು ಯಶಸ್ಸಿನ ಮತ್ತೊಂದು ರೂಪವೆಂದು ಪರಿಗಣಿಸಲಾಗುತ್ತದೆ.

ಇದನ್ನು ಓದಿ: ಜುಲೈ 12ರಿಂದ ಶನಿ ಹಿಮ್ಮುಖ ಚಲನೆ; ಈ ರಾಶಿಯವರ ಮೇಲಿರಲಿದೆ ಸಾಡೇ ಸಾತಿ ಪರಿಣಾಮ

ಹಾಗಿದ್ದರೆ, ನೀವು ಒಂದು ಫಿನಿಕ್ಸ್‌ ಪಕ್ಷಿ ಚಿತ್ರವನ್ನು ಮನೆಯಲ್ಲಿ ಇರಿಸಿಕೊಳ್ಳಬಹುದಲ್ವಾ. ನಿಮಗೆ ವಾಸ್ತು ಮೇಲೆ ನಂಬಿಕೆಯಿರದಿದ್ದರೂ, ಪಕ್ಷಿ ಚಿತ್ರ ಮನೆಯಲ್ಲಿ ಇರಿಸಿದರೆ ನೋಡಲು ಸುಂದರವಾಗಿಯೂ ಕೂಡ ಇರುತ್ತದೆ. ನಿಮಗೆ ಇಷ್ಟವಿದ್ದರೆ ಒಂದು ಟ್ರೈ ಮಾಡಿ.
Published by:Seema R
First published: